For Quick Alerts
ALLOW NOTIFICATIONS  
For Daily Alerts

ನೆನಪಿಡಿ ಇದೇ ಕಾರಣಕ್ಕೆ ಹೊಟ್ಟೆಯ ಬೊಜ್ಜು ಕರಗದಿರುವುದು!

By Arshad
|

ಇಂದು ಸೊಂಟದ ಕೊಬ್ಬು ಕರಗಿಸಬಯಸುವ ಭಾರತೀಯ ವಯಸ್ಕರ ಸಂಖ್ಯೆ ದೊಡ್ಡದೇ ಇದೆ, ಇದಕ್ಕಾಗಿ ಇವರೆಲ್ಲಾ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಕಠಿಣ ವ್ಯಾಯಾಮವನ್ನು ಆಯ್ದುಕೊಂಡರೆ ಕೆಲವರು ಆಹಾರಕ್ರಮದಲ್ಲಿ ಕಟ್ಟುನಿಟ್ಟು ಪಾಲಿಸುವ ಮೂಲಕ ಇದನ್ನು ಸಾಧ್ಯವಾಗಿಸಲು ಯತ್ನಿಸುತ್ತಿದ್ದಾರೆ. ಆದರೆ ಉದ್ಭವವಾಗುವ ದೊಡ್ಡ ಪ್ರಶ್ನೆ ಎಂದರೆ ಈ ಪ್ರಯತ್ನಗಳು ಫಲನೀಡುತ್ತಿವೆಯೇ? ಇಂದಿನ ಲೇಖನ ಈ ಪ್ರಶ್ನೆಗೆ ಉತ್ತರ ನೀಡುವ ನಿಟ್ಟಿನಲ್ಲಿ ಈ ಪ್ರಯತ್ನದಲ್ಲಿ ಈ ವ್ಯಕ್ತಿಗಳು ಎಲ್ಲಿ ಎಡವುತ್ತಿದ್ದಾರೆ ಎಂಬ ಅಂಶವನ್ನು ಬೆಳಕಿಗೆ ತರಲಿದೆ. ವಾಸ್ತವವಾಗಿ ಸೊಂಟದ ಕೊಬ್ಬು ಎಲ್ಲರಲ್ಲಿಯೂ ಏಕಪ್ರಕಾರವಾಗಿರುವುದಿಲ್ಲ, ಬದಲಿಗೆ ವೈದ್ಯವಿಜ್ಞಾನ ಇದನ್ನು ಆರು ಬಗೆಗಳಾಗಿ ವಿಂಗಡಿಸಿದೆ.

ಇದರಲ್ಲಿ ಅತಿ ಸಾಮಾನ್ಯವಾದುವೆಂದರೆ ಚರ್ಮದ ಅಡಿಭಾಗದಲ್ಲಿ ಸಂಗ್ರಹಗೊಳ್ಳುವ ಕೊಬ್ಬು (subcutaneous fat)-ಇದು ಕೊಬ್ಬಿನ ಅಂಗಾಂಶದಿಂದ ನಿರ್ಮಿಸಲ್ಪಟ್ಟಿರುತ್ತದೆ ಹಾಗೂ ತ್ವಚೆ ಮತ್ತು ಚರ್ಮದ ಕೆಳಪದರಲ್ಲಿರುವ ಸೂಕ್ಷ್ಮರಕ್ತನಾಳಗಳಿಗೆ ಆಮ್ಲಜನಕ ಒದಗಿಸುತ್ತದೆ ಹಾಗೂ ಹೊಟ್ಟೆಯ ಭಾಗದಲ್ಲಿರುವ ಪ್ರಮುಖ ಅಂಗಗಳನ್ನು ಸುತ್ತುವರೆದಿರುವ ಕೊಬ್ಬು (visceral fat),ಇದು ಸಾಮಾನ್ಯವಾಗಿ ದೇಹ ಹೆಚ್ಚುವರಿ ಆಹಾರವನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯಾಗಿದೆ. ಯಕೃತ್, ಮೇದೋಜೀರಕ ಗ್ರಂಥಿ ಹಾಗೂ ಸಣ್ಣ ಮತ್ತು ದೊಡ್ಡ ಕರುಳುಗಳನ್ನು ಈ ಕೊಬ್ಬು ಸುತ್ತುವರೆದಿರುತ್ತದೆ. ಇವೆರಡೂ ಕೊಬ್ಬುಗಳು ನಮ್ಮ ದೇಹದಲ್ಲಿ ಮೊದಲಾಗಿ ಸಂಗ್ರಹಗೊಂಡು ಕಟ್ಟ ಕಡೆಯದಾಗಿ ಬಳಕೆಯಾಗುವುದೇ ಇವುಗಳನ್ನು ಕರಗಿಸಲು ಅತಿ ಹೆಚ್ಚು ಕಷ್ಟಪಡಬೇಕಾಗಿ ಬರುತ್ತದೆ.

ಅಲ್ಲದೇ ಸೊಂಟದ ಕೊಬ್ಬು ಹೆಚ್ಚಿದಷ್ಟೂ ಇದು ಹೃದಯ ಸಂಬಂಧಿ ಕಾಯಿಲೆ, ಟೈಪ್ 2 ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್ ಹಾಗೂ ಇನ್ಸುಲಿನ್ ಪ್ರತಿರೋಧ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ವೇಳೆ ನೀವು ಸೊಂಟದ ಕೊಬ್ಬನ್ನು ಕರಗಿಸುವ ಯತ್ನಗಳನ್ನು ನಡೆಸುತ್ತಿದ್ದು ಇದು ನಿರ್ಗಮಿಸದ ಅತಿಥಿಯಂತೆ ನಿಮ್ಮ ಹೊಟ್ಟೆಯನ್ನು ಹಾಗೇ ಇರಿಸಿದ್ದರೆ ಕೆಳಗೆ ವಿವರಿಸಿದ ಮಾಹಿತಿಗಳು ನೀವೆಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ತೋರಿಸಿಕೊಡಲಿವೆ:

1. ಅಗತ್ಯವಿಲ್ಲದ ವ್ಯಾಯಾಮಗಳನ್ನು ಮಾಡುವುದು

1. ಅಗತ್ಯವಿಲ್ಲದ ವ್ಯಾಯಾಮಗಳನ್ನು ಮಾಡುವುದು

ಒಂದು ವೇಳೆ ನೀವು ಕೇವಲ ಚಲನೆಗೆ ಅಗತ್ಯವಿರುವ ಸ್ನಾಯುಗಳ ವ್ಯಾಯಾಮವನ್ನು ಮಾಡುತ್ತಿದ್ದರೆ (cardio workouts) ಉದಾಹರಣೆಗೆ ಓಡುವುದು, ಬಗ್ಗುವುದು, ಸೈಕ್ಲಿಂಗ್ ಇತ್ಯಾದಿ, ಇದರಿಂದ ಸೊಂಟದ ಕೊಬ್ಬು ಕರಗದು. ಹಾಗಾಗಿ ನೀವು ಈ ವ್ಯಾಯಾಮಗಳನ್ನು ಮೈಬಿಸಿ ಏರಿಸಲು ಮಾತ್ರವೇ ಬಳಸಿಕೊಂಡು ಮುಖ್ಯ ವ್ಯಾಯಾಮದ ರೂಪದಲ್ಲಿ ತೂಕವನ್ನು ಎತ್ತುವ ಹಾಗೂ ಸೊಂಟ ಮತ್ತು ಬೆನ್ನಿನ ಸ್ನಾಯುಗಳಿಗೆ ಹೆಚ್ಚಿನ ಬಲ ಬೀಳುವ ವ್ಯಾಯಾಮಗಳನ್ನೇ ಆಯ್ದುಕೊಳ್ಳಬೇಕು. ಇದರಿಂದ ಇಡಿಯ ದಿನದಲ್ಲಿ ಹೆಚ್ಚಿನ ಕ್ಯಾಲೋರಿಗಳು ವ್ಯಯವಾಗುತ್ತವೆ. ನಿಮ್ಮ ಒಂದು ವಾರದ ಒಟ್ಟು ವ್ಯಾಯಾಮದಲ್ಲಿ ಇನ್ನೂರೈವತ್ತು ನಿಮಿಷಗಳಷ್ಟು ಸಾಮಾನ್ಯ ವ್ಯಾಯಾಮಗಳೂ ಮತ್ತು ನೂರಿಪ್ಪತ್ತೈದು ನಿಮಿಷ ಹೆಚ್ಚಿನ ಬಲದ ಅಗತ್ಯವಿರುವ ವ್ಯಾಯಾಮಗಳನ್ನು ಸಂಯೋಜಿಸಿಕೊಳ್ಳಬೇಕು.

2. ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ವ್ಯಾಯಾಮ ಮಾಡದೇ ಇರುವುದು

2. ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ವ್ಯಾಯಾಮ ಮಾಡದೇ ಇರುವುದು

ಸೊಂಟದ ಕೊಬ್ಬು ಅತಿ ಕಷ್ಟದಲ್ಲಿ ಕರಗುವ ಕೊಬ್ಬಾಗಿದ್ದು ಇದನ್ನು ಕರಗಿಸಲು ಅತಿ ಹೆಚ್ಚಿನ ಶ್ರಮದ ಅಗತ್ಯವಿದೆ. Medicine and Science in Sports and Exercise ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಹೆಚ್ಚಿನ ಶ್ರಮದ ವ್ಯಾಯಾಮವನ್ನು ನಿರ್ವಹಿಸುವ ವ್ಯಕ್ತಿಗಳು ಕಡಿಮೆ ಶ್ರಮದ ವ್ಯಾಯಾಮವನ್ನು ಮಾಡುವ ವ್ಯಕ್ತಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕೊಬ್ಬನ್ನು ಕರಗಿಸಿಕೊಂಡಿದ್ದಾರೆ. ಏಕೆಂದರೆ ಹೆಚ್ಚಿನ ಶ್ರಮದ ವ್ಯಾಯಾಮಗಳ ಮೂಲಕ ಹೆಚ್ಚಿನ ಕ್ಯಾಲೋರಿಗಳು ದಹಿಸಲ್ಪಡುತ್ತವೆ ಹಾಗೂ ಈ ಮೂಲಕ ದೇಹ ಅನಿವಾರ್ಯವಾಗಿ ಹೆಚ್ಚುವರಿ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಷ್ಟೇ ಅಲ್ಲ, ಈ ವ್ಯಾಯಾಯಗಳು ಸತತವಾಗಿಯೂ ಇರುವುದರಿಂದ ಮಾತ್ರವೇ ದೇಹ ದಹಿಸಲ್ಪಟ್ಟ ಕೊಬ್ಬನ್ನು ಮರುತುಂಬಿಸಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ.

3. ಅತಿಯಾದ ಮದ್ಯಪಾನ

3. ಅತಿಯಾದ ಮದ್ಯಪಾನ

ಮದ್ಯದಲ್ಲಿ ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳಿವೆ. ಹನ್ನೆರಡು ಔನ್ಸ್ ಅಥವಾ 354ಮಿಲೀ ಬಿಯರ್ ಮದ್ಯದಲ್ಲಿ 153 ಕ್ಯಾಲೋರಿಗಳಿವೆ ಹಾಗೂ ಕೇವಲ ಐದು ಔನ್ಸ್ ಕೆಂಪು ವೈನ್ (147ಮಿಲೀ) ನಲ್ಲಿ 125 ಕ್ಯಾಲೋರಿಗಳಿವೆ. ಹಾಗಾಗಿ ಸೊಂಟದ ಕೊಬ್ಬನ್ನು ಕರಗಿಸುವವರು ಒಂದು ಘಂಟೆಯ ಕಠಿಣ ವ್ಯಾಯಾಮದ ಮೂಲಕ ಕೇವಲ ಇನ್ನೂರೈವತ್ತು ಕ್ಯಾಲೋರಿಗಳನ್ನು ದಹಿಸುತ್ತಾರೆ. ಹಾಗಾಗಿ ಈ ಕಾರ್ಯವನ್ನು ನಿರ್ವಹಿಸಲು ನಿಮಗೆ ಕುಂಬಾರನ ವರ್ಷ ತಗಲಿರುತ್ತದೆ. ಆದರೆ ಮದ್ಯ ಎಂಬ ದೊಣ್ಣೆಗೆ ನಿಮಿಷ ಸಾಕು! ಹಾಗಾಗಿ ಗಾದೆಯನ್ನು ಸುಳ್ಳಾಗಿಸಲು ಹೋಗದಿರಿ.

4. ಹೆಚ್ಚಿನ ಪ್ರಮಾಣದ ಸಂಸ್ಕರಿತ ಆಹಾರಗಳ ಸೇವನೆ

4. ಹೆಚ್ಚಿನ ಪ್ರಮಾಣದ ಸಂಸ್ಕರಿತ ಆಹಾರಗಳ ಸೇವನೆ

ಸಂಸ್ಕರಿತ ಆಹಾರಗಳು, ಉದಾಹರಣೆಗೆ ಬಿಳಿ ಬ್ರೆಡ್, ಕುರುಕು ತಿಂಡಿಗಳು, ಚಿಪ್ಸ್, ಬುರುಗು ಬರುವ ಮತ್ತು ಅತಿ ಹೆಚ್ಚಿನ ಸಕ್ಕರೆ ಇರುವ ಪಾನೀಯಗಳು, ಸಿಹಿತಿಂಡಿ ಮೊದಲಾದವುವಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಸಂತುಲಿತ ಕೊಬ್ಬು ಇರುತ್ತವೆ. ಹಾಗಾಗಿ ಈ ಆಹಾರಗಳನ್ನು ಹೆಚ್ಚು ಸೇವಿಸಿದಷ್ಟೂ ದೇಹ ಕೊಬ್ಬನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತಾ ಬರುತ್ತದೆ. ಹಾಗಾಗಿ ಸುಂದರವಾದ ಈ ಆಹಾರಗಳನ್ನು ಕಡೆಗಣಿಸಿ ಹೆಚ್ಚು ಹೆಚ್ಚಾಗಿ ಹಸಿ ತರಕಾರಿಗಳು, ಇಡಿಯ ಧಾನ್ಯಗಳು ಮತ್ತು ಹಣ್ಣುಗಳನ್ನು ಸೇವಿಸಿ. ಈ ಆಹಾರಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು ಮತ್ತು ಉರಿಯೂತ ನಿವಾರಕ ಗುಣಗಳಿದ್ದು ಇವು ಸೊಂಟದ ಕೊಬ್ಬು ಹೆಚ್ಚುವುದರಿಂದ ತಡೆಯುತ್ತವೆ.

5. ತಪ್ಪಾದ ಕೊಬ್ಬಿನ ಸೇವನೆ

5. ತಪ್ಪಾದ ಕೊಬ್ಬಿನ ಸೇವನೆ

ಎಲ್ಲಾ ಆಹಾರಗಳಲ್ಲಿರುವ ಕೊಬ್ಬು ಏಕಪ್ರಕಾರವಾಗಿರುವುದಿಲ್ಲ ಹಾಗೂ ಇವುಗಳ ಸೇವನೆಯಿಂದ ದೇಹ ಎಲ್ಲಾ ಬಗೆಯ ಕೊಬ್ಬುಗಳಿಗೆ ಏಕ ಪ್ರಕಾರವಾದ ಪ್ರತಿಕ್ರಿಯೆಯನ್ನೂ ತೋರುವುದಿಲ್ಲ. ಹಾಗಾಗಿ ನಿಮ್ಮ ಆಹಾರದಲ್ಲಿರುವ ಕೊಬ್ಬುಗಳನ್ನು ಅರಿತಿರುವುದೂ ಅಗತ್ಯ. ಉದಾಹಾರಣೆಗೆ ಬೆಣ್ಣೆಹಣ್ಣು, ಆಲಿವ್ ಎಣ್ಣೆ ಮೊದಲಾದವುಗಳಲ್ಲಿರುವ ಏಕ ಅಪರ್ಯಾಪ್ತ ಕೊಬ್ಬು (monounsaturated fat) ಹಾಗೂ ಸೂರ್ಯಕಾಂತಿ ಬೀಜ, ಅಕ್ರೋಟು ಹಾಗೂ ಮೀನಿನಲ್ಲಿರುವ ಬಹುಪರ್ಯಾಪ್ತ ಕೊಬ್ಬು (polyunsaturated fat) ಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಆದರೂ ಇವುಗಳ ಪ್ರಮಾಣ ಹೆಚ್ಚಾಗಬಾರದು. ಮಿತಪ್ರಮಾಣದಲ್ಲಿ ನಿಯಮಿತವಾಗಿ ಈ ಆಹಾರಗಳನ್ನು ಸೇವಿಸುವುದರಿಂದ ಮಾತ್ರವೇ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಕೊಬ್ಬು ಕರಗಿಸುವ ನಿಮ್ಮ ಪ್ರಯತ್ನಗಳು ಹೆಚ್ಚು ಫಲ ನೀಡಲಿವೆ.

6. ವಯಸ್ಸಿನ ಮಹಿಮೆ

6. ವಯಸ್ಸಿನ ಮಹಿಮೆ

ಪುರುಷರೇ ಆಗಲಿ, ಮಹಿಳೆಯರೇ ಆಗಲಿ, ವಯಸ್ಸಾಗುತ್ತಾ ಹೋದಂತೆ ಜೀವರಾಸಾಯನಿಕ ಕ್ರಿಯೆಯಲ್ಲಿ ಕುಂಠಿತತೆ ಎದುರಿಸುವುದು ಅನಿವಾರ್ಯವಾಗಿದೆ. ಅದರಲ್ಲೂ ಮಹಿಳೆಯರಲ್ಲಿ ರಜೋನಿವೃತ್ತಿಯ ಬಳಿಕ ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ರಸದೂತಗಳು ಉತ್ಪತ್ತಿಯಾಗುವ ಪ್ರಮಾಣ ಇಳಿಯುತ್ತಾ ಹೋಗುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ರಸದೂತದ ಪ್ರಮಾಣವೂ ಇಳಿಯುತ್ತಾ ಹೋಗುತ್ತದೆ ಹಾಗೂ ಈ ಬದಲಾವಣೆಗಳೂ ಸೊಂಟದ ಕೊಬ್ಬು ಹೆಚ್ಚಲು ಕಾರಣವಾಗುತ್ತವೆ.

7. ಅತಿ ಹೆಚ್ಚು ಮಾನಸಿಕ ಒತ್ತಡ

7. ಅತಿ ಹೆಚ್ಚು ಮಾನಸಿಕ ಒತ್ತಡ

ಸ್ಥೂಲಕಾಯವನ್ನು ನಿವಾರಿಸ ಬಯಸುವವರಿಗೆ ಮಾನಸಿಕ ಒತ್ತಡ ದೊಡ್ಡ ಅಡ್ಡಿಯಾಗಿದೆ. ಏಕೆಂದರೆ ಮಾನಸಿಕ ಒತ್ತಡದ ಸಮಯದಲ್ಲಿ ಸ್ರವಿಸುವ ರಸದೂತವಾದ ಕಾರ್ಟಿಸೋಲ್ ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಲು ನೆರವಾಗುವ ರಸದೂತವೂ ಆಗಿದೆ. ದೇಹದಲ್ಲಿ ಈ ಕಾರ್ಟಿಸೋಲ್ ಸಂಗ್ರಹ ಹೆಚ್ಚಿದಷ್ಟೂ ಇದು ಜೀವರಾಸಾಯನಿಕ ಕ್ರಿಯೆಗಳ ಸರಣಿ ಕ್ರಿಯೆಗಳಿಗೆ ಕಾರಣವಾಗಿ ಸ್ನಾಯುಗಳು ಹೆಚ್ಚು ತುಂಡಾಗಲು ಮತ್ತು ಕೊಬ್ಬಿನ ಸಂಗ್ರಹ ಹೆಚ್ಚಲು ಕಾರಣವಾಗುತ್ತದೆ.

8. ಸಾಕಷ್ಟು ಪ್ರಮಾಣದ ನಿದ್ದೆ ಲಭಿಸದಿರುವುದು

8. ಸಾಕಷ್ಟು ಪ್ರಮಾಣದ ನಿದ್ದೆ ಲಭಿಸದಿರುವುದು

ಎಲ್ಲಾ ಪ್ರಯತ್ನಗಳಿಗೂ ಹೊರತಾಗಿಯೂ ಕೊಬ್ಬು ಕರಗುತ್ತಿಲ್ಲವೆಂದರೆ ನಿಮ್ಮ ನಿದ್ದೆಯ ಪ್ರಮಾಣವನ್ನು ಗಮನಿಸಿ. ದಿನಕ್ಕೆ ಕೇವಲ ಐದರಿಂದ ಆರು ಗಂಟೆ ಕಾಲ ನಿದ್ರಿಸುವವರು ಎಷ್ಟೇ ಕಷ್ಟಪಟ್ಟರೂ ತೂಕ ಇಳಿಸಿಕೊಳ್ಳುವುದಿರಲಿ, ತೂಕ ಏರುವುದನ್ನು ತಡೆಯಲೂ ಅಸಮರ್ಥರಾಗಿರುತ್ತಾರೆ. ಹಾಗಾಗಿ ದಿನಕ್ಕೆ ಎಂಟು ಗಂಟೆಗಳ ಕಾಲ ಸತತವಾದ (ಇದರಲ್ಲಿ ಸುಮಾರು ಏಳು ಗಂಟೆಗಳಾದರೂ ಗಾಢ ನಿದ್ದೆ ಇರಬೇಕು) ನಿದ್ದೆ ಪಡೆಯುವ ವ್ಯಕ್ತಿಗಳು ಮಾತ್ರವೇ ಸೊಂಟದ ಕೊಬ್ಬನ್ನು ಕರಗಿಸಿಕೊಳ್ಳುವ ಅರ್ಹತೆ ಪಡೆಯುತ್ತಾರೆ ಎಂಬುದನ್ನು National Institutes of Health ಎಂಬ ಸಂಸ್ಥೆ ದೃಢೀಕರಿಸಿದೆ.

English summary

Why Belly Fat Is So Hard To Lose In Adults?

A large section of the Indian population is struggling to lose belly fat and we see them trying some form of extensive workouts and crash dieting to lose it. But the big question is, do these efforts count? This article will tell you why is belly fat so hard to lose in adults. There are six types of belly fat out of which subcutaneous fat and visceral fat are the most common. Subcutaneous fat is found under the skin and is made up of fatty tissues. Its function is to supply oxygen to the skin and blood vessels.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more