ಮದ್ಯದ ಅಮಲು ಪುರುಷರಿಗಿಂತ ಮಹಿಳೆಯರಿಗೆಯೇ ಹೆಚ್ಚು ಕಿಕ್ ನೀಡುತ್ತದೆಯಂತೆ!

Posted By: Arshad
Subscribe to Boldsky

ಒಂದು ವೇಳೆ ನೀವು ಮದ್ಯವನ್ನು ಇಷ್ಟಪಡುವ ಮಹಿಳೆಯಾಗಿದ್ದರೆ ನಾವು ಈಗ ಹೇಳಲಿರುವ ವಿಷಯ ನಿಮಗೆ ಇಷ್ಟವಾಗದೇ ಹೋಗಬಹುದು. ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಕೊಂಚ ಪ್ರಮಾಣದ ಮದ್ಯದ ಪ್ರಭಾವದಿಂದ ಎದುರಾಗುವ ತೊಂದರೆಗಳು ಪುರುಷರಿಗಿಂತ ಮಹಿಳೆಯರಿಗೆ ಕಡಿಮೆ ಇರುತ್ತದೆ.

ಮದ್ಯದ ಅಮಲು ಪುರುಷರಿಗೆ ಮಹಿಳೆಯರಿಗಿಂತ ಭಿನ್ನವಾಗಿರಲು ಕಾರಣವೇನೆಂದರೆ ಸೇವನೆಯ ಬಳಿಕ ಇದು ಇಬ್ಬರ ಶರೀರದ ಜೀವ ರಾಸಾಯನಿಕ ಕ್ರಿಯೆ ಭಿನ್ನವಾಗಿ ಪ್ರತಿಕ್ರಿಯಿಸುವುದೇ ಆಗಿದೆ. ಆದ್ದರಿಂದ ಮಹಿಳೆಯರೇ, ನಿಮ್ಮ ಆರೋಗ್ಯ ಮುಂದಿನ ದಿನಗಳಲ್ಲಿ ಚೆನ್ನಾಗಿಯೇ ಇರಬೇಕೆಂದರೆ ಮದ್ಯದ ಪ್ರಮಾಣ ಕಡಿಮೆ ಇದ್ದಷ್ಟೂ ನಿಮಗೆ ಒಳ್ಳೆಯದು. ಮದ್ಯದ ಪ್ರಭಾವ ಮಹಿಳೆಯರ ಮೇಲೆ ಹೇಗೆ ಆಗುತ್ತದೆ ಎಂಬುದನ್ನು ನೋಡೋಣ... 

ಮದ್ಯದ ದುಷ್ಪರಿಣಾಮಗಳು ಅತಿ ಹೆಚ್ಚಾಗುವುದು...

ಮದ್ಯದ ದುಷ್ಪರಿಣಾಮಗಳು ಅತಿ ಹೆಚ್ಚಾಗುವುದು...

ಮದ್ಯದ ಸೇವನೆಯ ಬಳಿಕ ಪುರುಷರ ದೇಹಕ್ಕಿಂತಲೂ ಮಹಿಳೆಯರ ದೇಹದಲ್ಲಿ ಹೆಚ್ಚಿನ ಪ್ರಮಾಣ ರಕ್ತದಲ್ಲಿ ಕಂಡುಬರುತ್ತದೆ. ಇದು ಮದ್ಯದ ಪರಿಣಾಮದಿಂದ ಎದುರಾಗುವ ಆರೋಗ್ಯದ ತೊಂದರೆಯ ಪ್ರಮಾಣ ಪುರುಷರಿಗಿಂತಲೂ ಹೆಚ್ಚಾಗಲು ಕಾರಣವಾಗಿದೆ.

ಈಸ್ಟ್ರೋಜೆನ್ ಮಟ್ಟ ಏರುವುದು

ಈಸ್ಟ್ರೋಜೆನ್ ಮಟ್ಟ ಏರುವುದು

ಮದ್ಯದ ಪ್ರಮಾಣ ಹೆಚ್ಚುತ್ತಾ ಹೋದಂತೆ ಮಹಿಳೆಯರಿಗೇ ಮೀಸಲಾದ ರಸದೂತವಾದ ಈಸ್ಟ್ರೋಜೆನ್ ಪ್ರಮಾಣವೂ ಏರುತ್ತಾ ಹೋಗುತ್ತದೆ. ಈಸ್ಟ್ರೋಜೆನ್ ಪ್ರಮಾಣ ಹೆಚ್ಚಾದರೆ ಇದು ಹಲವು ರೀತಿಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಮೊಡವೆಗಳು, ತಲೆಸುತ್ತುವಿಕೆ, ಸ್ಥೂಲಕಾಯ ಮೊದಲಾದ ತೊಂದರೆಗಳ ಸಹಿತ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅತಿಯಾಗಿ ಹೆಚ್ಚುತ್ತದೆ.

ಹೃದಯಸ್ತಂಭನದ ಸಾಧ್ಯತೆ ಹೆಚ್ಚುತ್ತದೆ

ಹೃದಯಸ್ತಂಭನದ ಸಾಧ್ಯತೆ ಹೆಚ್ಚುತ್ತದೆ

ಪ್ರತಿದಿನ ನಾಲ್ಕು ಪ್ರಮಾಣದಷ್ಟು ಮದ್ಯ ಸೇವಿಸುವ ಮಹಿಳೆಯರಿಗೆ ಹೃದಯ ಸ್ತಂಭನದ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಅದರಲ್ಲೂ ಯುವತಿಯರಿಗೆ ರಕ್ತಕೊರತೆಯ ಹೃದಯ ರೋಗ ಅಥವಾ ischemic stroke ಎಂಬ ಮಾರಕ ರೋಗ ಆವರಿಸುವ ಸಾಧ್ಯತೆ ಅತಿ ಹೆಚ್ಚುತ್ತದೆ. 1.2ರಷ್ಟು ಪ್ರಮಾಣದ ಸೇವನೆ ಮೆದುಳಿನ ಸ್ರಾವದ ಒಂದು ತೊಂದರೆಯಾದ subarachnoid haemorrhage ಎಂಬ ರೋಗ ಆವರಿಸುವ ಸಾಧ್ಯತೆ ಅಪಾರವಾಗಿರುತ್ತದೆ. ಮದ್ಯ ಸೇವಿಸುವ ಮಹಿಳೆ ತನ್ನ ನಿತ್ಯದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಸಫಲಳಾಗುತ್ತಾಳೆ. ಆದರೆ ಅಮಲಿನಲ್ಲಿ ಗಾಯಗೊಳ್ಳುವ ಸಾದ್ಯತೆ ಮಾತ್ರ ಪುರುಷರಷ್ಟೇ ಮಹಿಳೆಯರಿಗೂ ಇರುತ್ತದೆ. ಆದರೆ ಈ ಗಾಯಗಳಿಂದಾಗುವ ಪರಿಣಾಮಗಳು ಮಾತ್ರ ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ.

 ಹೆಚ್ಚಿನ ಅಮಲು

ಹೆಚ್ಚಿನ ಅಮಲು

ಸಮಪ್ರಮಾಣದ ಮದ್ಯವನ್ನು ಸೇವಿಸಿದ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಅಮಲಿಗೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ ಎದುರಾಗುವ ಪರೋಕ್ಷ ತೊಂದರೆಗಳು, ಉದಾಹರಣೆಗೆ ಟ್ರಾಫಿಕ್ ಉಲ್ಲಂಘನೆ, ಅಪಘಾತ ಮೊದಲಾದವು ಹೆಚ್ಚು ಸಂಭವಿಸುತ್ತವೆ.ಹೃದಯಸಂಬಂಧಿ ರೋಗಗಳಿಂದ ಸಾವು: ಒಂದು ವೇಳೆ ಅನುವಂಶಿಕವಾಗಿ ಹೃದಯ ಸಂಬಂಧಿತ ರೋಗದ ಸಾಧ್ಯತೆ ಇದ್ದರೆ ಇದು ಆವರಿಸುವ ವಯಸ್ಸು ಶೀಘ್ರವಾಗಿ ಹತ್ತಿರಾಗುತ್ತದೆ ಹಾಗೂ ಸಾವು ಸಹಾ ಬೇಗನೇ ಬರುತ್ತದೆ.

ಸಾವಿನ ಸಾಧ್ಯತೆ ಹೆಚ್ಚುತ್ತದೆ

ಸಾವಿನ ಸಾಧ್ಯತೆ ಹೆಚ್ಚುತ್ತದೆ

ಮದ್ಯಸೇವನೆಯ ಮೂಲಕ ಎದುರಾಗುವ ತೊಂದರೆಗಳಾದ ಸಿರ್ರೋಸಿಸ್, ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಈ ಸಾಧ್ಯತೆ ದಿನಕ್ಕೆ ಎರಡರಿಂದ ಮೂರು ಪ್ರಮಾಣಕ್ಕೂ ಹೆಚ್ಚು ಮದ್ಯ ಸೇವಿಸುವ ಮಹಿಳೆಯರಿಗೆ ಅತಿ ಹೆಚ್ಚಾಗಿರುತ್ತದೆ.

English summary

Why Alcohol Affects Women Differently Than Men

If you are a girl who loves her drink, you won't like what we are about to tell you! Studies say that women develop alcohol-related problems at lower levels of consumption compared to men. Alcohol affects them differently because women because it is metabolised differently in the female body. That's why studies suggest that women limit their alcohol consumption if they don't want health complications in the future. Here are some ways in which alcohol affects women.