March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 21 (March 21 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಅನುಕೂಲಕರ ದಿನವಿದು, ನಿಮ್ಮ ಹಣಕಾಸು ವಿಚಾರವಾಗಿ ನೀವು ಅನುಭವಿಸಿದ್ದ ಕಷ್ಟಗಳು ಪರಿಹಾರವಾಗುವ ಸಮಯ. ನಿಮ್ಮ ಎಲ್ಲಾ ಕೌಟುಂಬಿಕ ಸಮಸ್ಯೆಗಳ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ವಾಹನ ವಿಚಾರದಲ್ಲಿ ನಷ್ಟ ಎದುರಿಸಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಮಿಶ್ರಫಲವಿದೆ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಈ ದಿನ ಹಲವರಿಗೆ ಖರ್ಚುಗಳು ಹೆಚ್ಚಾಗುವ ದಿನ. ಪ್ರಯಾಣಗಳ ಮಾಡುವಾಗ ಎಚ್ಚರಿಕೆಯಿಂದಿರಿ. ಮನೆಯ ವಾತಾವರಣವು ಸಂತೋಷದಿಂದ ಕೂಡಿರಲಿದೆ.

March-21-2026-daily-horoscope

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಈ ದಿನವು ಪ್ರಯಾಣಗಳಲ್ಲಿ ತೊಡಗಿಸಿಕೊಳ್ಳಬೇಕಾದ ದಿನವಾಗುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಬಹುದು. ಪ್ರಾಮಾಣಿಕ ಪ್ರಯತ್ನಗಳಲ್ಲಿ ಶುಭ ಫಲ ನಿರೀಕ್ಷಿಸಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ಉಳಿತಾಯ ಹೆಚ್ಚಾಗಬಹುದು. ಬಹಳ ದಿನದಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಯಾರಿಗೂ ಹಣ ನೀಡುವ ಮಾತು ನೀಡಬೇಡಿ. ಸಂಬಂಧಿಕರ ಭೇಟಿಯಾಗುವುದು ಚರ್ಚೆಗಳಲ್ಲಿ ತೊಡಗಲು ಕಾರಣವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನ ಉತ್ತಮ ಫಲ ತರಲಿದೆ. ಉದ್ಯೋಗದ ಸ್ಥಳದಲ್ಲಿನ ನಿಮ್ಮ ಸಮಸ್ಯೆಯೊಂದು ಬಗೆಹರಿಯಲಿದೆ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ಈ ದಿನ ಮರಳಿ ನೀಡುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಈ ದಿನ ಸಮಸ್ಯೆಗಳು ಬರಬಹುದು. ನೀವು ನಿರೀಕ್ಷಿಸಿದ್ದ ಬದಲಾವಣೆಗಳಲ್ಲಿ ಅಡ್ಡಿಗಳು ಎದುರಾಗಬಹುದು. ಹಣಕಾಸಿನ ಒತ್ತಡ, ಉದ್ಯೋಗ ಕುರಿತಾದ ಒತ್ತಡಗಳಿಂದ ನೀವು ಚಿಂತಿಸಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.

ತುಲಾ ರಾಶಿ

ತುಲಾ ರಾಶಿಯವರು ಹಣದ ವಿಚಾರವಾಗಿ ಇಂದು ಎಚ್ಚರಿಕೆಯಿಂದಿರಿ. ವ್ಯಾಪಾರಿಗಳು ಲಾಭ ನೋಡುವ ದಿನ. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿದೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಶುಭವಾಗುವ ದಿನ. ಮಾರುಕಟ್ಟೆ ಸಂಬಂಧಿತ ವಿಚಾರದಲ್ಲಿ ತೊಡಗಿರುವ ಮಂದಿಗೆ ಲಾಭದ ದಿನವಾಗಿರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿವೆ. ನೀವು ಮಾಡಬೇಕಿದ್ದ ಅಗತ್ಯ ಕೆಲಸಗಳಿಗೆ ಅಡ್ಡಿಗಳವೆ, ಅದ್ರಲ್ಲೂ ಹಣಕಾಸಿನ ಅಡ್ಡಿ ನೋಡಬಹುದು. ಉಳಿತಾಯದ ಹಣವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಬಹುದು.

ಧನು ರಾಶಿ

ಧನು ರಾಶಿಯ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಹೊಸ ಆರಂಭಗಳಲ್ಲಿ ನಿಧಾನಗತಿ ನೋಡಬಹುದು. ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿವೆ. ಗೃಹಿಣಿಯರಿಗೆ ಅನಾರೋಗ್ಯ ಕಾಡಬಹುದು. ಮನೆಯ ವಾತಾವರಣದಲ್ಲಿ ಹೊಸ ಆತಂಕ ನೋಡಬಹುದು.

ಮಕರ ರಾಶಿ

ಮಕರ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಸಮಯದೊಳಗೆ ಮುಗಿಸುವಿರಿ. ಪೂರ್ವ ನಿಗದಿತ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ದಾಂಪತ್ಯ ವಿಚಾರದಲ್ಲಿ ಇಂದು ಸಾಮಾನ್ಯವಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಿಶ್ರಫಲದ ದಿನ. ನಿಮ್ಮ ಕೆಲಸಗಳಲ್ಲಿ ಶ್ರಮ ಹಾಕಬೇಕಾಗುತ್ತದೆ. ಕೃಷಿ ಸಂಬಂಧಿತ ವಿಚಾರವಾಗಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮನೆಗಾಗಿ ನೀವು ಹೆಚ್ಚು ಖರ್ಚು ಮಾಡುವಿರಿ. ಅವಿವಾಹಿತರಲ್ಲಿ ಉದ್ಯೋಗ ಸಂಬಂಧಿತ ವಿಚಾರವಾಗಿ ಚಿಂತೆಯೊಂದು ಮೂಡಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಈ ದಿನ ಪ್ರಯಾಣಗಳಲ್ಲಿ ತೊಡಗಬೇಕಾದ ದಿನವಾಗಲಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಆಪ್ತರ ಸಲಹೆ ಪಾಲಿಸುವುದು ಬಹಳ ಉತ್ತಮ. ಸಮಸ್ಯೆಗಳಿಂದ ಪಾರಾಗುವ ಮಾರ್ಗ ಸಿಗಲಿದೆ.

English summary

March-21-2026-daily-horoscope-prediction-for-12-zodiac-signs-in-kannada

Here is Horoscope Today, 21 March Horoscope: Daily Horoscope Prediction For 12 Zodiac signs In Kannada
Story first published: Saturday, March 21, 2026, 5:52 [IST]
X
Desktop Bottom Promotion