Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಮಳೆಗಾಲದಲ್ಲಿ ರುಚಿ ರುಚಿಯಾಗಿ ಸವಿಯೋಕೆ ಹಲವು ರೀತಿಯ ಖಾದ್ಯಗಳ ಮಾಡುವುದು ನೋಡಿರುತ್ತೇವೆ. ಹಾಗೆ ಈ ಸಮಯದಲ್ಲಿ ಊಟದೊಂದಿಗೆ ಕರಿದ ತಿಂಡಿಗಳು, ಸ್ನ್ಯಾಕ್ಸ್ ಸಮಯಕ್ಕೂ ತಿಂಡಿಗಳ ಸವಿಯೋದು ನೋಡಬಹುದು. ಹಾಗೆ ಮಳೆಗಾಲದಲ್ಲಿ ಊಟದೊಂದಿಗೆ ಹಪ್ಪಳ, ಸಂಡಿಗೆ ಸವಿಯೋದು ನೋಡಬಹುದು. ಹಾಗೆ ಸಂಡಿಗೆಯನ್ನು ಬೇಸಿಗೆಯ ಸಮಯದಲ್ಲಿಯೇ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗೆ ಮಾಡಿಟ್ಟ ಸಂಡಿಗೆಯನ್ನು ಮಳೆಗಾಲದ ಸಮಯದಲ್ಲಿ ಸವಿಯಲು ಬಳಸಬಹುದು.
ನೀವು ಅಂಗಡಿಗಳಲ್ಲಿ ಈಗ ಹಲವು ಬಗೆಯ ವಿಭಿನ್ನ ರುಚಿಯ ಸಂಡಿಗೆಗಳ ನೋಡಿರಬಹುದು. ಒಂದಕ್ಕಿಂತ ಒಂದು ರುಚಿಯಲ್ಲಿ ಅದ್ಭುತವಾಗಿರಲಿದೆ. ಹಾಗೆ ಇದನ್ನು ಮಾಡಿಕೊಳ್ಳುವುದು ಸಹ ಬಹಳ ಸುಲಭ. ನಾವಿಂದು ವಿಶೇಷ ಬಗೆಯ ಸಂಡಿಗೆ ರವೆಯಿಂದ ಮಾಡಲಾಗುತ್ತೆ. 1 ಕಪ್ ರವೆ ಇದ್ದರೆ ಸಾಕು ಹಲವು ದಿನಗಳ ಕಾಲ ಇಟ್ಟು ಸವಿಯಬಹುದಾದ ಸಂಡಿಗೆ ಮಾಡಬಹುದು.
ರವೆ ಸಂಡಿಗೆ ಊಟದೊಂದಿಗೆ ಬಹಳ ರುಚಿ ನೀಡಲಿದೆ. ಮಳೆಗಾಲದ ಸಮಯದಲ್ಲಿ ಈ ಸಂಡಿಗೆ ಊಟಕ್ಕೆ ಬಹಳ ರುಚಿ ತರಲಿದೆ. ಹಾಗಾದ್ರೆ ಈ ರವೆ ಸಂಡಿಗೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ರವೆ ಸಂಡಿಗೆ ಮಾಡಲು ಬೇಕಾಗುವ ವಸ್ತುಗಳು
- ರವೆ
- ಜೀರಿಗೆ ಅಥವಾ ಅಜ್ವೈನಾ
- ಉಪ್ಪು
- ಎಣ್ಣೆ
ರವೆ ಸಂಡಿಗೆ ಮಾಡುವ ವಿಧಾನವೇನು?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಅಳತೆಯ ಕಪ್ನಲ್ಲಿ 15 ಕಪ್ ನೀರು ಹಾಕಿ. 2 ಕಪ್ಗೆ ರವೆಗೆ ಇಷ್ಟು ನೀರು ಬೇಕಾಗುತ್ತದೆ. ಅನಂತರ ನೀರು ಕುದಿಯಲು ಬಿಡಬೇಕು ಇದಕ್ಕೆ ಉಪ್ಪು ಹಾಕಿ ಬಳಿಕ ಅಳತೆ ಕಪ್ನಲ್ಲಿ 2 ಕಪ್ ರವೆಯನ್ನು ಸಹ ಇದಕ್ಕೆ ಹಾಕಿಕಂಡು ಮಿಕ್ಸ್ ಮಾಡಿಕೊಳ್ಳಬೇಕು. 5 ನಿಮಿಷ ಮಿಕ್ಸ್ ಮಾಡುತ್ತಾ ಇರಬೇಕು. ಇದು ನಿಧಾನವಾಗಿ ಗಟ್ಟಿಯಾಗಲು ಆರಂಭಿಸಲಿದೆ. ಹಾಗೆ ಇದಕ್ಕೆ ಅಜ್ವೈನಾ ಹಾಕಿ ಮಿಕ್ಸ್ ಮಾಡಿ. 10 ನಿಮಿಷದೊಳಗೆ ಜೀರಿಗೆ ಸಹ ಹಾಕಿಕೊಳ್ಳಬಹುದು.
ಒಟ್ಟು 10 ನಿಮಿಷ ಒಲೆ ಮೇಲೆ ಇಟ್ಟು ಇದನ್ನು ಗಟ್ಟಿಯಾಗಲು ಬಿಡಬೇಕು. ನಂತರ ಒಲೆ ಆಫ್ ಮಾಡಿ ಮತ್ತೆ 10 ನಿಮಿಷ ತಣ್ಣಗಾಗಲು ಬಿಡಿ. ಈಗ ಸಂಡಿಗೆ ಹಾಕಲು ಪ್ಲಾಸ್ಟಿಕ್ ಕವರ್ ಅಥವಾ ಹಾಲಿನ ಪ್ಲಾಸ್ಟಿಕ್ ತೆಗೆದುಕೊಂಡು ಅದರ ಒಂದು ತುದಿಯಲ್ಲಿ ಸಣ್ಣ ತೂತು ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಅದರೊಳಗೆ ತುಂಬಿಕೊಂಡು ನಿಮಗೆ ಯಾವ ಗಾತ್ರಕ್ಕೆ ಯಾವ ಆಕಾರದಲ್ಲಿ ಸಂಡಿಗೆ ಬೇಕೋ ಆ ರೀತಿಯಾಗಿ ಹಾಕಿಕೊಳ್ಳಿ.
ಪ್ಲಾಸ್ಟಿಕ್ ಮೇಲೆ ಇಲ್ಲವೆ ಕಾಟನ್ ಬಟ್ಟೆಯ ಮೇಲೆ ಸಂಡಿಗೆ ಹಾಕಿಕೊಳ್ಳಿ. ಕೈಯಲ್ಲೂ ಸಹ ಸಂಡಿಗೆಯನ್ನು ಹಾಕಬಹುದು. ನಂತರ ಈ ಸಂಡಿಯನ್ನು ಒಂದು ದಿನ ಬಿಸಿಲಿನಲ್ಲಿ ಇಡಬೇಕು. ಅನಂತರ 2 ದಿನ ನೆರಳಿನಲ್ಲಿ ಒಣಗಿಸಬೇಕು. ಚೆನ್ನಾಗಿ ಒಣಗಿದಷ್ಟು ಉತ್ತಮ. ಅದನ್ನು ಎರಡೂ ಬದಿಯಲ್ಲೂ ಒಣಗುವಂತೆ ಮಾಡಿಕೊಳ್ಳಬೇಕು. ಇದನ್ನು ನಂತರ ಎಣ್ಣೆಯಲ್ಲಿ ಕರಿದುಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ರವೆ ಸಂಡಿಗೆ ಸಿದ್ದವಾಗುತ್ತೆ.



Click it and Unblock the Notifications
