Latest Updates
-
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ!
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ!
ವೈದಿಕ ಶಾಸ್ತ್ರದಲ್ಲಿ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ಕೆಲವು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುವುದು ಸಹ ನೋಡಬಹುದು. ಬಹಳಷ್ಟು ಗ್ರಹಗಳ ಚಲನೆಯು ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅದ್ರಲ್ಲೂ ಕೆಲವೊಂದು ಗ್ರಹಗಳ ಚಲನೆಯಿಂದ ದೊಡ್ಡ ಪರಿಣಾಮಗಳ ಎದುರಿಸಬೇಕಾಗುತ್ತದೆ.
ಅದ್ರಲ್ಲೂ ಬಹಳಷ್ಟು ಮಂದಿ ಶನಿ ಗ್ರಹ ಚಲನೆಯ ಪರಿಣಾಮವನ್ನು ಎದುರಿಸುವುದು ನೋಡಬಹುದು. ಶನಿಯ ಚಲನೆಯಿಂದಾಗಿ ಎಲ್ಲಾ ರಾಶಿಗಳ ಮೇಲೆಯೂ ಧನಾತ್ಮಕ ಪರಿಣಾಮ ಎದುರಿಸಿದರೂ ಮತ್ತೊಂದಿಷ್ಟು ರಾಶಿಗಳು ನಕಾರಾತ್ಮಕ ಪರಿಣಾಮ ಎದುರಿಸುವುದು ನೋಡಬಹುದು. ಶನಿ ನೀತಿವಂತ, ಕರ್ಮ ಫಲ ನೀಡುವ ಗ್ರಹವೆಂದು ಕರೆಯಲಾಗಿದೆ.

ಶನಿ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಚಲಿಸುವುದರಿಂದ ಹಲವು ಗ್ರಹಗಳೊಂದಿಗೆ ಸಂಯೋಗಕ್ಕೆ ಒಳಗಾಗುತ್ತಾನೆ. ಈಗ ಶನಿ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 30 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಚಲಿಸುತ್ತಿದ್ದು, ಇದೇ ಸಮಯದಲ್ಲಿ ಮಂಗಳ ಕೂಡ ಮೀನ ರಾಶಿಗೆ ಚಲಿಸುವುದು ಎರಡು ಗ್ರಹಗಳ ಸಂಯೋಗಕ್ಕೆ ಕಾರಣವಾಗುತ್ತಿದೆ. ಏಪ್ರಿಲ್ ಆರಂಭದಲ್ಲಿ ಮಂಗಳವು ಗುರುವಿನ ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಈ ಮಂಗಳ ಸಂಚಾರದಿಂದಾಗಿ ಶನಿ ಮತ್ತು ಮಂಗಳವು ಮೀನ ರಾಶಿಯಲ್ಲಿ ಸೇರುತ್ತವೆ. ಇದು 30 ವರ್ಷಗಳಿಗೊಮ್ಮೆ ಹಾಗೆ ಮಂಗಳ 18 ತಿಂಗಳ ಬಳಿಕ ಮೀನ ರಾಶಿ ಪ್ರವೇಶಿಸುತ್ತಿದೆ.
ಈ ಅಪರೂಪದ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಯೋಗವು ಕೆಲವು ರಾಶಿಗಳಿಗೆ ಅನಾನುಕೂಲಗಳ ತರಬಹುದು. ಈಗ ಮೀನ ರಾಶಿಯಲ್ಲಿ ಶನಿ ಮತ್ತು ಮಂಗಳ ಸಂಯೋಗ ಇರುವುದರಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯ 12 ನೇ ಮನೆಯಲ್ಲಿ ಶನಿ ಮಂಗಳ ಸಂಯೋಗ ಸಂಭವಿಸುತ್ತದೆ. ಇದರಿಂದಾಗಿ ಈ ರಾಶಿಯವರಲ್ಲಿ ಒತ್ತಡ ಹೆಚ್ಚಾಗುತ್ತದೆ. ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗುತ್ತವೆ. ಆರ್ಥಿಕ ಸ್ಥಿತಿ ಮತ್ತಷ್ಟು ಸಮಸ್ಯೆಗಳ ತರಬಹುದು. ಆತುರದ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ಹಲವು ವಿಚಾರಗಳಲ್ಲಿ ನೋವು ಅಥವಾ ನಷ್ಟಗಳು ಸಂಭವಿಸಬಹುದು. ಕೌಟುಂಬಿಕ ವಿಚಾರದಲ್ಲಿ ಸಮಸ್ಯೆಗಳಿವೆ, ಸಂಬಂಧಿಕರಿಂದ ಹಣಕಾಸು ಕುರಿತ ಸಮಸ್ಯೆ ಎದುರಿಸಬಹುದು. ಪ್ರಾಮಾಣಿಕ ಕೆಲಸದಿಂದಲೂ ನಿಮಗೆ ನಿರೀಕ್ಷಿತ ಪ್ರತಿಫಲ ಸಿಗದೆ ಇರಬಹುದು. ಪ್ರವಾಸಗಳಲ್ಲಿ ನಿಮಗೆ ಸಂತಸ ಇಲ್ಲದೆ ಇರುವ ಸ್ಥಿತಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ 7 ನೇ ಮನೆಯಲ್ಲಿ ಶನಿ ಮಂಗಳ ಸಂಯೋಗ ಸಂಭವಿಸುತ್ತದೆ. ಈ ಕಾರಣದಿಂದಾಗಿ, ಈ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಸಡ್ಡೆ ತೋರುವುದನ್ನು ತಪ್ಪಿಸಿ. ಉದ್ಯೋಗ ಸಂಬಂಧಿತ ದೊಡ್ಡ ಸಮಸ್ಯೆಯೊಂದನ್ನು ಎದುರಿಸುವಿರಿ. ನಿಮ್ಮ ಒತ್ತಡದಲ್ಲಿ ಹೆಚ್ಚಳವಾಗುವುದು. ಹೊಸ ಆದಾಯ ಹುಡುಕುವ ನಿಮ್ಮ ಪ್ರಯತ್ನಗಳು ಫಲ ನೀಡದೆ ಇರಬಹುದು. ವಾಹನ ಮಾರಾಟ, ಖರೀದಿಯಲ್ಲಿ ನಷ್ಟ ಅನುಭವಿಸಬಹುದು. ಅತಿಯಾದ ಖರ್ಚುಗಳಿಂದಾಗಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು.
ಮೀನ ರಾಶಿ
ಮೀನ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಮಂಗಳ ಸಂಯೋಗ ಉಂಟಾಗಲಿದೆ. ಇದರಿಂದಾಗಿ ನೀವು ಹೆಚ್ಚಿನ ಒತ್ತಡವನ್ನು ಎದುರಿಸಬಹುದು. ನೀವು ಯಾವುದೇ ಹೊಸ ಪ್ರಯತ್ನಗಳನ್ನು ಮಾಡುವಾಗ ಎಚ್ಚರಿಕೆಯಿಂದರಬೇಕು. ದೊಡ್ಡ ವ್ಯಾಪಾರಿಗಳು ಒಪ್ಪಂದಗಳ ಮಾಡುವುದು, ಹೊಸ ವ್ಯಾಪಾರ ವಿಸ್ತರಣೆಯಲ್ಲಿ ಅಡ್ಡಿಗಳ ಎದುರಿಸಬಹುದು. ಕೆಲಸಗಳಲ್ಲಿ ಅಡ್ಡಿಗಳನ್ನು ನೋಡಬಹುದು. ನಿರುದ್ಯೋಗಿಗಳು ಮತ್ತಷ್ಟು ಶ್ರಮ ಹಾಕಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯವನ್ನು ಮುಂದೂಡಬೇಕಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











