Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!

ಮಾರ್ಚ್ 22ರಿಂದ ಮಾರ್ಚ್ 29ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಅನುಕೂಲಕರ ವಾರವಾಗಿರಲಿದೆ. ಈ ವಾರದ ಆರಂಭದಲ್ಲಿ ನಿಮಗೆ ಹಣಕಾಸಿನ ವಿಚಾರದಲ್ಲಿ ಶುಭವಾಗುವಂತಹ ಸಮಯ ಆಗಿರಲಿದೆ. ಸಾರ್ವಜನಿಕವಾಗಿ ನಿಮಗೆ ಖ್ಯಾತಿಗಳು ಬರಲಿದೆ. ನಿಮ್ಮ ಆಪ್ತರ ಸಹಕಾರದಿಂದ ವಾರದ ಆರಂಭದಲ್ಲಿ ದೊಡ್ಡ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ವಾರದ ಮಧ್ಯದಿಂದ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಚಾರವಾಗಿ ಪ್ರಯಾಣಗಳ ಮಾಡುವಿರಿ. ಇದು ಅನೇಕರಲ್ಲಿ ಹಣಕಾಸಿನ ವಿಚಾರವಾಗಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಕಡಿಮೆ ಲಾಭ ಮತ್ತು ಯಶಸ್ಸನ್ನು ಅನುಭವಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ಉದ್ಯಮಿಗಳು ಮಾರುಕಟ್ಟೆಯ ನಿಧಾನಗತಿಯನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿರುವವರು ವಾರದ ಮಧ್ಯದಲ್ಲಿ ಕೆಲಸದಲ್ಲಿ ಹಿರಿಯರು ಮತ್ತು ಕಿರಿಯರೊಂದಿಗೆ ವಾದಗಳನ್ನು ತಪ್ಪಿಸುವುದು ಉತ್ತಮ. ಪ್ರಣಯ ಸಂಬಂಧಗಳಲ್ಲಿ ತಪ್ಪುಗ್ರಹಿಕೆಯನ್ನು ತಪ್ಪಿಸಿ ಮತ್ತು ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ವಾರದ ಅಂತ್ಯದಲ್ಲಿ ದೇವಾಲಯ ಪ್ರಯಾಣಗಳಿವೆ.

ವೃಷಭ ರಾಶಿ

ಈ ವಾರ ವೃಷಭ ರಾಶಿಯವರಿಗೆ ಅದೃಷ್ಟಕರ. ಈ ವಾರ ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ನಿಮ್ಮ ಹಣಕಾಸು ವಿವಾರವಾಗಿ ವಾರದ ಆರಂಭದಲ್ಲಿನ ಅಡೆತಡೆಗಳು ಎದುರಗಬಹುದು. ನಿಮ್ಮ ಕಠಿಣ ಪರಿಶ್ರಮದ ಮೂಲಕ ನೀವು ಮಹತ್ವದ ಕೆಲಸವನ್ನು ಸಾಧಿಸುವಿರಿ, ಇದು ಕೆಲಸದಲ್ಲಿ ನಿಮ್ಮ ಗೌರವ ಹೆಚ್ಚಿಸುತ್ತದೆ. ಈ ವಾರ ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ವಾರದ ಉತ್ತರಾರ್ಧದಲ್ಲಿ ದೂರದ ವ್ಯಾಪಾರ ಪ್ರಯಾಣ ಸಾಧ್ಯ. ಈ ಸಮಯದಲ್ಲಿ ನೀವು ಸಾರ್ವಜನಿಕ ಸಂಪರ್ಕದಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ಆರೋಗ್ಯ ದೃಷ್ಟಿಕೋನದಿಂದ ಈ ವಾರ ನಿಮಗೆ ಸಾಮಾನ್ಯವಾಗಿರುತ್ತದೆ. ದಾಂಪತ್ಯ ವಿಚಾರವಾಗಿ ಈ ಈ ವಾರ ತಾಳ್ಮೆಯಿಂದ ನಿರ್ವಹಿಸುವುದು ಉತ್ತಮ.

Weekly Horoscope From March 22 To March 29
Photo Credit: ಸಂಗ್ರಹ ಚಿತ್ರ

ಮಿಥುನ ರಾಶಿ

ಈ ವಾರ ಮಿಥುನ ರಾಶಿಯವರಿಗೆ ಮಿಶ್ರಫಲವಿದೆ. ವಾರದ ಆರಂಭದಲ್ಲಿ ಪ್ರಮುಖ ವಿಚಾರವೊಂದಕ್ಕೆ ನೀವು ತಯಾರಿ ನಡೆಸುವಿರಿ. ಕಠಿಣ ಪರಿಶ್ರಮಗಳಿಗೆ ನಿಮಗೆ ಉತ್ತಮ ಪ್ರತಿಫಲ ಸಿಗಲಿದೆ. ಅನೇಕರಿಗೆ ಈ ವಾರವು ಅದೃಷ್ಟಕರ ಸಮಯ. ವಾಹನ ಖರೀದಿಯಲ್ಲಿ ಈ ವಾರ ನಿಮಗೆ ಶುಭವಿದೆ, ವಾರ ಮಧ್ಯಾಂತರದಿಂದ ನಿಮ್ಮ ಹಣ‍ಕಾಸಿನ ಸ್ಥಿತಿ ಸುಧಾರಿಸಲಿದೆ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಸಂಬಂಧವಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ವಾರವಿದು. ವಾರದ ಮಧ್ಯದಲ್ಲಿ ನೀವು ಬಹುನಿರೀಕ್ಷಿತ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಈ ಸಮಯದಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ನಿರ್ಧಾರಗಳು ನಿಮ್ಮ ಪರವಾಗಿ ಬರಬಹುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಅಡೆತಡೆಗಳು ದೂರವಾಗುತ್ತವೆ. ಉದ್ಯೋಗದಲ್ಲಿರುವ ಮಂದಿಗೆ ಈ ವಾರ ಶುಭವಿದೆ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗುವ ಅವಕಾಶಗಳಿವೆ.

ಕರ್ಕಾಟಕ ರಾಶಿ

ಈ ವಾರ ಕರ್ಕಾಟಕ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರಲಿದೆ. ಮನೆಯ ವಿಚಾರವಾಗಿ ನೀವು ಮಾಡುವ ಖರ್ಚುಗಳಿಂದ ನೆಮ್ಮದಿ ಹಾಗೂ ಸಂತಸದ ಸಮಯವನ್ನು ಅನುಭವಿಸಲಿದ್ದೀರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವಾರದ ದೀರ್ಘ ಪ್ರಯಾಣಗಳಲ್ಲಿ ನಿಮಗೆ ಶುಭವಿದೆ. ವಾಹನ ಸಂಬಂಧಿತ ವಿಚಾರವಾಗಿ ಧನಾತ್ಮಕ ಪರಿಣಾಮಗಳ ನೋಡುವಿರಿ. ಉದ್ಯೋಗವನ್ನು ಹುಡುಕುತ್ತಿರುವವರು ಬಯಸಿದ ಉದ್ಯೋಗವನ್ನು ಪಡೆಯಬಹುದು. ಈಗಾಗಲೇ ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಸ್ಥಾನಮಾನ ಅಥವಾ ಬಡ್ತಿಯಂತಹ ವಿಚಾರದಲ್ಲಿ ಶುಭ ನೋಡುವಿರಿ. ಅನೇಕರಿಗೆ ಈ ಸಮಯವು ಲಾಭಕರವಾಗಿದೆ.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯ ಜನರಿಗೆ ಉತ್ತಮ ದಿನಗಳ ತರಲಿದೆ. ನಿಮ್ಮ ಆರೋಗ್ಯ, ಸಂಬಂಧಗಳು ಅಥವಾ ಕೆಲಸದ ಬಗ್ಗೆ ಯಾವುದೇ ಅಜಾಗರೂಕತೆಯನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಈ ವಾರ ಆರ್ಥಿಕ, ಮಾನಸಿಕ ಮತ್ತು ಕೌಟುಂಬಿಕ ತೊಂದರೆಗಳನ್ನು ಎದುರಿಸಬಹುದು. ಸಿಂಹ ರಾಶಿಯವರಿಗೆ ವಾರದ ಆರಂಭವು ಸಾಕಷ್ಟು ಕಾರ್ಯನಿರತವಾಗಿರುತ್ತದೆ. ಈ ಸಮಯದಲ್ಲಿ, ಉದ್ಯೋಗದಲ್ಲಿರುವವರು ಇದ್ದಕ್ಕಿದ್ದಂತೆ ಹೆಚ್ಚುವರಿ ಕೆಲಸದ ಹೊರೆಗಳನ್ನು ಎದುರಿಸಬಹುದು. ವಾರದ ಮಧ್ಯದಲ್ಲಿ ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳು ಉದ್ಭವಿಸಬಹುದು. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸುವಿರಿ. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮಧ್ಯಸ್ಥಿಕೆಗಾಗಿ ಮೂರನೇ ವ್ಯಕ್ತಿಯನ್ನು ಅವಲಂಬಿಸುವುದನ್ನು ಕಡಿಮೆ ಮಾಡುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಸರಾಸರಿ ಎಂದು ಸಾಬೀತುಪಡಿಸುತ್ತದೆ. ಈ ವಾರದಲ್ಲಿ ನಿಮ್ಮ ಹಣಕಾಸಿನ ವಿಚಾರವಾಗಿ ಹಲವು ರೀತಿಯ ಅಡ್ಡಿಗಳ ನೋಡಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಸಿಗಬಹುದು. ಆದ್ರೆ ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಮತ್ತಷ್ಟು ಜವಾಬ್ದಾರಿಗಳು, ಒತ್ತಡಗಳ ಎದುರಿಸಬಹುದು. ಮನೆಯಲ್ಲಿ ಅಥವಾ ಹೊರಗೆ ಎಲ್ಲೆಡೆ ಹೆಚ್ಚು ಅನಗತ್ಯ ಮಾತುಕತೆಗಳಿಂದ ದೂರವಿರಿ. ನಿಮ್ಮ ಕೆಲಸಗಳಲ್ಲಿ ಹೆಚ್ಚು ಶ್ರಮ ಹಾಕುವುದು ಉತ್ತಮ. ನಿಮ್ಮ ಪ್ರೇಮ ಸಂಬಂಧವನ್ನು ಬಲವಾಗಿಡಲು, ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ.

ಇನ್ನುಳಿದ 6 ರಾಶಿಗಳ ವಾರ ಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿಇನ್ನುಳಿದ 6 ರಾಶಿಗಳ ವಾರ ಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

English summary

Weekly Horoscope From March 22 To March 29: These Are Lucky Zodiac Signs In Kannada

Weekly Horoscope From March 22 To March 29: These zodiac get more benefits during this 7 days, read on...
X
Desktop Bottom Promotion