Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಮಾರ್ಚ್ 22ರಿಂದ ಮಾರ್ಚ್ 29ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ಈ ವಾರ ತುಲಾ ರಾಶಿಯವರಿಗೆ ಅತ್ಯಂತ ಶುಭವೆಂದು ಸಾಬೀತುಪಡಿಸುತ್ತದೆ. ಈ ವಾರವು ಕೆಲವು ಬಹುನಿರೀಕ್ಷಿತ ಶುಭ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ, ಇದು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಮತ್ತು ಲಾಭದ ಸಾಧ್ಯತೆಗಳಿವೆ. ನಿಮಗೆ ಒಂದು ಪ್ರಮುಖ ಸ್ಥಾನ ಅಥವಾ ಜವಾಬ್ದಾರಿಯನ್ನು ನೀಡಬಹುದು. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ವಾರದ ಮೊದಲಾರ್ಧವು ನಿಮ್ಮ ವ್ಯವಹಾರಕ್ಕೆ ಅತ್ಯಂತ ಶುಭ ಮತ್ತು ಅನುಕೂಲಕರವಾಗಿರುತ್ತದೆ. ಅಧಿಕಾರ ಮತ್ತು ಸರ್ಕಾರದಲ್ಲಿರುವವರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಆಸ್ತಿ, ನ್ಯಾಯಾಲಯ, ದಾಖಲೆ ವಿಚಾರವಾಗಿ ನೀವು ಓಡಾಟಗಳ ಮಾಡುವಿರಿ. ಆರೋಗ್ಯ ಸುಧಾರಣೆ ನೋಡಬಹುದು.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಯವರಿಗೆ ಅದೃಷ್ಟವಿದೆ. ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಮೂಲಕ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ದೀರ್ಘ ಅಥವಾ ಕಡಿಮೆ ದೂರದ ಪ್ರಯಾಣದೊಂದಿಗೆ ವಾರ ಪ್ರಾರಂಭವಾಗುತ್ತದೆ. ಈ ವಾರದ ಮಧ್ಯದಿಂದ ನೀವು ಖರ್ಚುಗಳ ಮಾಡುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಕೆಲಸದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿ ಕುರಿತಾದ ವಿಚಾರವಾಗಿ ನಿಮಗೆ ಶುಭವಿದೆ, ಮನೆ ಕಟ್ಟಿಸುವವರು ಅಥವಾ ಭೂಮಿ ವಿಸ್ತರಣೆ ಕುರಿತಾದ ವಿಚಾರದಲ್ಲಿ ಧನಾತ್ಮಕ ವಿಚಾರ ನೋಡಬಹುದು. ವಾರಾಂತ್ಯದಲ್ಲಿ ಧಾರ್ಮಿಕ ವಿಚಾರಗಳಲ್ಲಿ ನೀವು ತೊಡಗಬಹುದು.

ಧನು ರಾಶಿ
ಧನು ರಾಶಿ ರಾಶಿಯವರಿಗೆ ಈ ವಾರ ಅತ್ಯಂತ ಶುಭವಾಗಿರುತ್ತದೆ. ನೀವು ಕೆಲ ಸಮಯದಿಂದ ಆರ್ಥಿಕ ವಿಚಾರವಾಗಿ ಅಡ್ಡಿಗಳ ಎದುರಿಸಿದ್ದರೆ ಈ ವಾರದಲ್ಲಿ ಪರಿಹಾರ ಪಡೆಯಬಹುದು. ಈ ವಾರ ಉದ್ಯೋಗ ವಿಚಾರವಾಗಿ ನೀವು ಪ್ರಭಾವಿ ವ್ಯಕ್ತಿಯ ಭೇಟಿಯಾಗಬಹುದು. ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಮಂದಿಗೆ ಈ ಸಮಯದಲ್ಲಿ ಗೌರವ ಒಲಿದು ಬರಲಿದೆ. ಕೆಲವು ವರ್ಷದಿಂದ ಪ್ರತ್ಯೇಕ ಆದಾಯ ಅಥವಾ ಹೊಸ ಆರ್ಥಿಕ ಮೂಲ ಹುಡುಕುತ್ತಿದ್ದರೆ ವಾರ ಆ ವಿಚಾರದಲ್ಲಿ ಶುಭ ನೋಡಬಹುದು. ಕೆಲಸದ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ದಾಂಪತ್ಯ ವಿಚಾರದಲ್ಲಿ ಬಹು ಸಮಯದಿಂದ ಇದ್ದಂತಹ ಮುನಿಸುಗಳು ಶಮನವಾಗಲಿದೆ.
ಮಕರ ರಾಶಿ
ಈ ವಾರ ಮಕರ ರಾಶಿಯವರಿಗೆ ಅತ್ಯಂತ ಶುಭವಾಗಿರುತ್ತದೆ. ನಿಮ್ಮ ಜೀವನದಲ್ಲಿ ದೊಡ್ಡ ಲಾಭಕರ ವಿಚಾರವೊಂದು ಈ ವಾರ ನಡೆಯಲಿದೆ. ದೇವಾಲಯ ಭೇಟಿಯಂತಹ ವಿಚಾರದಿಂದ ಹಿಂದೆ ಸರಿಯಬೇಡಿ. ನೀವು ದೀರ್ಘಕಾಲದವರೆಗೆ ವೃತ್ತಿ ಅಥವಾ ವ್ಯವಹಾರವನ್ನು ವಿಸ್ತರಿಸಬಹುದು. ವಿದೇಶ ಪ್ರವಾಸದಂತಹ ವಿಚಾರದಲ್ಲೂ ಸಹ ನಿಮಗೆ ಶುಭವಾಗುವುದು ನೋಡಬಹುದು. ವಾರದ ಮಧ್ಯಂತರದಲ್ಲಿ ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಆರೋಗ್ಯದಲ್ಲಿನ ಅಡೆತಡೆ ನಿವಾರಣೆಯಾಗುವುದು ನಿಮ್ಮ ದೈನಂದಿನ ಕೆಲಸದಲ್ಲಿ ಪೂರ್ಣ ಪ್ರಮಾಣವಾಗಿ ತೊಡಗಲು ಸಹಾಯವಾಗಲಿದೆ. ಸಂಬಂಧದ ದೃಷ್ಟಿಕೋನದಿಂದ ಇಡೀ ವಾರ ನಿಮಗೆ ಶುಭವಾಗಿರುತ್ತದೆ. ಕುಟುಂಬದ ವಿಚಾರದಲ್ಲಿ ಶುಭವಾಗುವುದು ನೋಡಬಹುದು.
ಕುಂಭ ರಾಶಿ
ಈ ವಾರ ಕುಂಭ ರಾಶಿಯವರಿಗೆ ಸರಾಸರಿ ಫಲ ತರುವುದು ನೋಡಬಹುದು. ವಾರದ ಮೊದಲಾರ್ಧವು ವೃತ್ತಿಪರರಿಗೆ ಶುಭವಾಗಲಿದೆ. ನಿಮ್ಮ ಸಣ್ಣಪುಟ್ಟ ಕೆಲಸಗಳಲ್ಲಿಯೂ ಲಾಭ ನೋಡಬಹುದು. ವ್ಯಾಪಾರಿಗಳಿಗೆ ಲಾಭದಾಯಕ ವಾರವಿದು. ಹೊಸ ಆರಂಭಗಳಲ್ಲಿ ಲಾಭ ನೋಡುವಿರಿ. ಅನೇಕರಲ್ಲಿ ಈ ವಾರ ಶುಭ ಸಮಾಚಾರ ಪಡೆಯಬಹುದು. ಅವಿವಾಹಿತರು ಈ ವಾರ ಶುಭ ಸಂಬಂಧ ಪಡೆಯಬಹುದು. ಭೂಮಿ, ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ವಿವಾದಗಳು ಉದ್ಭವಿಸಬಹುದು. ನ್ಯಾಯಾಲಯ ಸಂಬಂಧಿತ ವಿಚಾರವಾಗಿ ನೀವು ಹಲವು ಸಮಯದಿಂದ ಓಡಾಟಗಳಿದ್ದರೆ ಈ ವಾರ ಪರಿಹಾರ ಸಿಗಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ವಾರವು ಅನುಕೂಲಕರವಾಗಿರಲಿದೆ. ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಈ ವಾರ ಮಾಡಿ ಮುಗಿಸುವಿರಿ. ಆಪ್ತರಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಹಣ, ಸಮಯ ಮತ್ತು ಶಕ್ತಿಯನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಉತ್ತಮ. ಋತುಮಾನದ ಕಾಯಿಲೆಗಳು ದೈಹಿಕ ನೋವನ್ನು ಉಂಟುಮಾಡಬಹುದು. ನಿರುದ್ಯೋಗಿಗಳು ಉತ್ತಮ ಅವಕಾಶ ಪಡೆಯಬಹುದು. ವಾಹನ ಖರೀದಿಯ ಲಾಭವಿದೆ. ಕುಟುಂಬ ಸದಸ್ಯರಲ್ಲಿ ಉತ್ತಮ ಸಮನ್ವಯ ಕಾಪಾಡಿಕೊಳ್ಳುವುದು ಉತ್ತಮ.



Click it and Unblock the Notifications
