For Quick Alerts
ALLOW NOTIFICATIONS  
For Daily Alerts

ಮೂಗಿನಿಂದ ರಕ್ತ ಬರುತ್ತಿದ್ದರೆ- ಇದೆಲ್ಲಾ ಇಂತಹ ಕಾಯಿಲೆಗಳ ಲಕ್ಷಣವಿರಬಹುದು!

|

ದೇಹದ ಕೆಲವು ಅಂಗಗಳು ತುಂಬಾ ಸೂಕ್ಷ್ಮವಾಗಿರುವುದು. ಅದರಲ್ಲೂ ಮುಖದಲ್ಲಿರುವಂತಹ ಹೆಚ್ಚಿನ ಅಂಗಗಳು ಸೂಕ್ಷ್ಮವೆಂದೇ ಹೇಳಬಹುದು. ನಾವು ಗಾಳಿ ಉಸಿರಾಡುವಂತಹ ಮೂಗಿನಲ್ಲಿ ಹಲವಾರು ಸಣ್ಣ ರಕ್ತನಾಳಗಳು ಇವೆ. ಈ ರಕ್ತನಾಳಗಳು ಮೇಲ್ಭಾಗದಲ್ಲೇ ಇರುವ ಕಾರಣದಿಂದಾಗಿ ಬೇಗನೆ ಹಾನಿಗೀಡಾಗುವುದು. ಸಣ್ಣ ಗಾಯವಾದರೂ ನಿಮ್ಮ ಮೂಗಿನಲ್ಲಿ ರಕ್ತ ಒಸರಿ ಬರಬಹುದು. ಅದಾಗ್ಯೂ, ಪದೇ ಪದೇ ರಕ್ತಸ್ರಾವವಾಗುತ್ತಲಿದ್ದರೆ ಆಗ ಇದನ್ನು ಕಡೆಗಣಿಸಬಾರದು. ಯಾಕೆಂದರೆ ಇದು ಕೆಲವೊಂದು ಆರೋಗ್ಯ ಸಮಸ್ಯೆಯ ಕಾರಣವಾಗಿರಬಹುದು. ಈ ಲೇಖನದಲ್ಲಿ ಮೂಗಿನಿಂದ ರಕ್ತಸ್ರಾವವಾಗಲು ಕಾರಣವಾಗುವಂತಹ ಕಾಯಿಲೆಗಳ ಬಗ್ಗೆ ನೀವು ತಿಳಿಯಿರಿ.

ತೀವ್ರ ಸೈನಟಿಸ್

ತೀವ್ರ ಸೈನಟಿಸ್

ಇದರಿಂದ ನಿಮ್ಮ ಮೂಗಿನ ನಾಳದ ಸಮೀಪ ಕುಳಿ ಉಂಟಾಗಬಹುದು. ಸೈನಸ್, ಊದಿದ ಮತ್ತು ಉರಿಯೂತದ ಮೂಗು ಎಂದು ಕರೆಯಬಹುದು. ಇಲ್ಲಿ ತಡೆಯಾಗಿರುವ ಕಾರಣದಿಂದ ಕಫ ಜಮೆಯಾಗುವುದು. ಸೈನಟಿಸ್ ತೀವ್ರವಾಗಿದ್ದರೆ ಆಗ ಉಸಿರಾಡಲು ತುಂಬಾ ಕಷ್ಟಪಡಬೇಕಾಗಬಹುದು. ಕಣ್ಣುಗಳು ಮತ್ತು ಮೂಖ ಊದಿಕೊಳ್ಳಬಹುದು. ಮುಖ ಮತ್ತು ತಲೆಯಲ್ಲಿ ತೀವ್ರವಾಗಿ ನೋವು ಕಾಣಿಸಬಹುದು. ಇದಕ್ಕೆ ಮೂಲ ಕಾರಣ ಶೀತ. ಮೂಗು ಕಟ್ಟುವಿಕೆಯಿಂದಾಗಿ ರಕ್ತಸ್ರಾವವಾಗಬಹುದು. ಯಾಕೆಂದರೆ ಅತಿಯಾಗಿ ಮೂಗಿನಿಂದ ಕಫ ಹೊರಗೆ ಬರುತ್ತಲಿದ್ದರೆ ಆಗ ತೆಳುವಾದ ರಕ್ತನಾಳಗಳು ಒಡೆದುಹೋಗಬಹುದು.

ಮೂಗು ಸೋರುವಿಕೆ

ಮೂಗು ಸೋರುವಿಕೆ

ಕೆಲವೊಂದು ಅಲರ್ಜಿಯಿಂದಾಗಿ ತೀವ್ರ ಜ್ವರ ಅಥವಾ ಅಲರ್ಜಿಯಿಂದ ಮೂಗು ಸೋರುವಿಕೆ ಉಂಟಾಗಬಹುದು. ಇದಕ್ಕೆ ಮುಖ್ಯ ಕಾರಣ ಪರಾಗ. ಮೂಗು ಸೋರುವಿಕೆಯು ಅಲರ್ಜಿ ಅಥವಾ ಅಲರ್ಜಿಯಿಲ್ಲದೆ ಆದರೂ ಮೂಗಿನ ಪದರದ ಮೇಲೆ ಉರಿಯೂತ ಉಂಟಾಗಿ ರಕ್ತಸ್ರಾವವಾಗಬಹುದು. ಅಲರ್ಜಿಯಿಂದ ಮೂಗು ಸೋರುವಿಕೆ ಉಂಟಾಗುವುದು ಸಣ್ಣ ಮಕ್ಕಳಲ್ಲಿ ಸಾಮಾನ್ಯವೆಂದು ತಜ್ಞರು ಹೇಳುತ್ತಾರೆ. ಅಲರ್ಜಿಯು ತೀವ್ರವಾಗಿದ್ದರೆ ಆಗ ಅದು ಉಸಿರಾಟದ ಪದರಕ್ಕೆ ಹಾನಿಯುಂಟು ಮಾಡಬಹುದು. ಅತಿಯಾದ ಕಿರಿಕಿರಿಯಿಂದ ಮೂಗಿನಲ್ಲಿ ರಕ್ತಸ್ರಾವ ಕಾಣಿಸಬಹುದು.

Most Read: ಈ ಗ್ರಾಮದಲ್ಲಿ ಮನುಷ್ಯರು ಮತ್ತು ಪಕ್ಷಿಗಳಿಗೆ ಕಣ್ಣುಗಳೇ ಕಾಣಿಸುವುದಿಲ್ಲವಂತೆ!

ಮೂಗಿನ ಗಡ್ಡೆಗಳು

ಮೂಗಿನ ಗಡ್ಡೆಗಳು

ತೀವ್ರವಾಗಿರುವ ರಕ್ತಸ್ರಾವದೊಂದಿಗೆ ಮೂಗಿನಿಂದ ರಕ್ತಬೆರೆತ ಕಫವು ಬರುತ್ತಲಿದ್ದರೆ ಇದು ಮೂಗಿನ ಗಡ್ಡೆಯ ಸಂಕೇತವಾಗಿರಬಹುದು. ಮೂಗಿನ ಗಡ್ಡೆಯಿದ್ದಾಗ ಮೂಗು ಕಟ್ಟುವಿಕೆ, ವಾಸನೆ ಬರದೇ ಇರುವುದು, ಹಲ್ಲಿನ ಭಾಗದಲ್ಲಿ ಮರಗಟ್ಟುವಿಕೆ, ಒಂದು ಬದಿಯ ಮೂಗು ಕಟ್ಟುವಿಕೆ, ರಕ್ತಸ್ರಾವದ ಜತೆಗೆ ಮೂಗಿನಿಂದ ಲೋಳೆ ಹೊರಬಹುದು. ಇದು ಕೆಲವೊಂದು ಸಾಮಾನ್ಯ ಲಕ್ಷಣಗಳು. ಇದರೊಂದಿಗೆ ಕಣ್ಣಿನಿಂದ ನೀರು ಬರುವುದು, ಕಿವಿ ಕೇಳದಿರುವುದು, ತಲೆನೋವು, ಒಂದು ಕಣ್ಣು ಮಂಜಾಗುವುದು, ಬಾಯಿ ತೆರೆಯಲು ಕಷ್ಟವಾಗುವುದು, ಒಂದು ಕಿವಿಯಲ್ಲಿ ನೋವು ಇತ್ಯಾದಿ. ಸಮಸ್ಯೆಗಳು ತೀವ್ರವಾಗುವ ಮೊದಲು ಇದಕ್ಕೆ ಚಿಕಿತ್ಸೆ ಅಗತ್ಯ.

ನಸಲ್ ಪಾಲಿಪ್ಸ್(ಮೂಗಿನ ಸಂಯುಕ್ತಗಳು)

ನಸಲ್ ಪಾಲಿಪ್ಸ್(ಮೂಗಿನ ಸಂಯುಕ್ತಗಳು)

ಮೂಗಿನ ಪದರದಲ್ಲಿ ಕ್ಯಾನ್ಸರ್ ಅಲ್ಲದೆ ಇರುವ, ಮೃಧುವಾಗಿ ಬೆಳೆದಿರುವುದನ್ನು ಮೂಗಿನ ಸಂಯುಕ್ತಗಳು ಎಂದು ಕರೆಯಲಾಗುವುದು. ಅಸ್ತಮಾ, ಔಷಧಿಯ ಸೂಕ್ಷ್ಮತೆ ಅಥವಾ ಅಲರ್ಜಿಯಿಂದಾಗಿರುವ ಉರಿಯೂತದಿಂದ ಹೀಗೆ ಆಗುವುದು. ಇದು ಬೆಳೆದು ದೊಡ್ಡದಾದಾಗ ಕೆಲವೊಂದು ಲಕ್ಷಣಗಳನ್ನು ತೋರಿಸುವುದು. ಇದರಲ್ಲಿ ಪ್ರಮುಖವಾಗಿ ರಕ್ತಸ್ರಾವ. ಇದನ್ನು ಕುಗ್ಗಿಸಲು ಅಥವಾ ತೆಗೆಯಲು ಔಷಧಿ ಸಾಕಾಗಬಹುದು. ಮೂಗಿಗೆ ಕಿರಿಕಿರಿ ತಪ್ಪಿಸುವುದು ಮತ್ತು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮೂಗಿನ ಸಂಯುಕ್ತ ಬೆಳೆಯುವುದು ತಪ್ಪುತ್ತದೆ.

Most Read: ಗುರುವಾರ ಮಾಡುವ ಉಪವಾಸದ ಫಲವೇನು?

ಹೆಮೊಫಿಲಿಯಾ

ಹೆಮೊಫಿಲಿಯಾ

ಈ ಪರಿಸ್ಥಿತಿ ಉಂಟಾದಾಗ ರಕ್ತ ಹೆಪ್ಪುಗಟ್ಟುವಿಕೆ ಸಾಮರ್ಥ್ಯವು ತುಂಬಾ ಕಡಿಮೆಯಾಗುವುದು. ಸಣ್ಣ ಗಾಯವಾದರೂ ಅತಿಯಾಗಿ ರಕ್ತಸ್ರಾವವಾಗಬಹುದು. ಇದನ್ನು ಒಂದು ರೀತಿಯ ಅನವಂಶೀಯ ರಕ್ತದ ಕಾಯಿಲೆಯೆಂದು ಕರೆಯಲಾಗುತ್ತದೆ. ಹೆಮೊಫಿಲಿಯಾ ಇರುವಂತಹ ಜನರಲ್ಲಿ ಮೂಗಿನಲ್ಲಿ ರಕ್ತಸ್ರಾವ ಕಾಣಿಸುವುದು. ಇದಕ್ಕೆ ನೀವು ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳಬಹುದು. ಮೂಗಿನ ರಕ್ತನಾಳಗಳಿಗೆ ಹಾನಿಯಾದ ಸಂದರ್ಭ(ಮೂಗು ಕಟ್ಟಿದಾಗ ಬಿಗಿಯಾಗಿ ಕಫ ಹೊರಹಾಕಲು ಪ್ರಯತ್ನಿಸಿದಾಗ) ರಕ್ತಸ್ರಾವವಾಗುವುದು. ಹೆಮೊಫಿಲಿಯಾ ಇರುವಂತಹ ವ್ಯಕ್ತಿಯ ಮೂಗಿನಲ್ಲಿ ರಕ್ತಸ್ರಾವವಾಗುತ್ತಲಿದ್ದರೆ ಆಗ ಇದು ತೀವ್ರವಾಗಿರಬಹುದು ಮತ್ತು ರಕ್ತ ಸ್ರಾವ ನಿಲ್ಲಲು ತುಂಬಾ ಕಠಿಣ ಮತ್ತು ವಿಳಂಬವಾಗಬಹುದು.

Most Read: ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!

ಲ್ಯುಕೇಮಿಯಾ(ರಕ್ತದ ಕ್ಯಾನ್ಸರ್)

ಲ್ಯುಕೇಮಿಯಾ(ರಕ್ತದ ಕ್ಯಾನ್ಸರ್)

ರಕ್ತದ ಕ್ಯಾನ್ಸರ್ ಇರುವಂತಹ ಜನರಲ್ಲಿ ಮೂಗಿನಲ್ಲಿ ಸಣ್ಣ ಗಾಯದಿಂದ ರಕ್ತಸ್ರಾವವಾದರೂ ದೀರ್ಘವಾಗಿ ರಕ್ತ ಸೋರಬಹುದು. ಇದು ನಿಲ್ಲಲು ತುಂಬಾ ಸಮಯ ಬೇಕಾಗಬಹುದು. ಲ್ಯುಕೇಮಿಯಾದಿಂದಾಗಿ ರಕ್ತ ಹೆಪ್ಪುಗಟ್ಟುವಿಕೆಗೆ ತಡೆಯಾಗುವುದು. ಲ್ಯುಕೇಮಿಯಾ ರೋಗಿಯಾಗಿದ್ದರೆ ಆಗ ಒಂದು ಹನಿ ರಕ್ತ ಸೋರುವಿಕೆಯು ತೀವ್ರವಾಗುವಂತಹ ಸಾಧ್ಯತೆಯಿದೆ.

ಅನುವಂಶಿಕ ಹೆಮರಾಜಿಕ್ ತೆಲಂಜಿಟೆಕ್ಯಾಟಿಯಾ

ಅನುವಂಶಿಕ ಹೆಮರಾಜಿಕ್ ತೆಲಂಜಿಟೆಕ್ಯಾಟಿಯಾ

ಇದು ಅನುವಂಶೀಯವಾಗಿ ಬರುವಂತಹ ಕಾಯಿಲೆಯಾಗಿದೆ. ರಕ್ತನಾಳಗಳು ಅಸಾಮಾನ್ಯವಾಗಿದ್ದರೆ ಇಂತಹ ಪರಿಸ್ಥಿತಿಯು ಉಂಟಾಗುವುದು. ಇಂತಹ ಸಮಸ್ಯೆ ಇರುವಂತಹ ಜನರಲ್ಲಿ ಮೂಗಿನಿಂದ ರಕ್ತಸ್ರಾವವು ಪದೇ ಪದೇ ಆಗುವುದು. ಅತಿಯಾದ ರಕ್ತಸ್ರಾವವು ಇದರ ಪ್ರಮುಖ ಲಕ್ಷಣವಾಗಿದೆ. ರಕ್ತಸ್ರಾವವು ದಿನದಲ್ಲಿ ಹಲವಾರು ಸಲ ಮತ್ತು ಕೆಲವು ನಿಮಿಷದಿಂದ ಗಂಟೆಗಳ ಕಾಲ ಇರಬಹುದು.

Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!

ಇಡಿಯೋಪಥಿಕ್ ಥ್ರಾಂಬೋಸೈಟೋಪೆನಿಕ್ ಪುರ್ಪುರಾ

ಇಡಿಯೋಪಥಿಕ್ ಥ್ರಾಂಬೋಸೈಟೋಪೆನಿಕ್ ಪುರ್ಪುರಾ

ಈ ಸಮಸ್ಯೆಯಿದ್ದರೆ ರಕ್ತನಾಳಕ್ಕೆ ಬೇಗನೆ ಹಾನಿಯಾಗಬಹುದು ಮತ್ತು ರಕ್ತಸ್ರಾವವಾಗಬಹುದು. ರಕ್ತಹೆಪ್ಪುಗಟ್ಟಲು ನೆರವಾಗುವ ಕಿರುಬಿಲ್ಲೆಗಳು ಕಡಿಮೆ ಇರುವುದು ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗಿದೆ. ಇದನ್ನು ಇಡಿಯೋಪಥಿಕ್ ಥ್ರಾಂಬೋಸೈಟೋಪೆನಿಕ್ ಪುರ್ಪುರಾ ಎಂದು ಕರೆಯಲಾಗುವುದು. ಈ ಸಮಸ್ಯೆ ಇರುವವರಲ್ಲಿ ಮೂಗಿನಲ್ಲಿ ರಕ್ತಸ್ರಾವ ಮತ್ತು ಒಸಡಿನಲ್ಲಿ ರಕ್ತ ಸೋರುವಿಕೆ ಸಾಮಾನ್ಯವಾಗಿರುವುದು.

English summary

What Can Nosebleeds Indicate?

A minor hurt can cause the nose to bleed but there are other health issues that can be the underlying cause. A nasal congestion can make your nose to bleed especially when you blow your nose. Frequent blowing of the nose can cause the tiny blood vessels to break. Certain allergies, tumours, polyps, etc. can also cause nosebleeds.
X
Desktop Bottom Promotion