For Quick Alerts
ALLOW NOTIFICATIONS  
For Daily Alerts

ಶೀತ ಹಾಗೂ ಕೆಮ್ಮಿಗೆ 'ಇಂಗಿನ ಔಷಧಿ'-ಒಂದೆರಡು ದಿನಗಳಲ್ಲಿಯೇ ಪರಿಹಾರ

|

ಮಳೆಗಾಲ ಕಳೆದು ಚಳಿಗಾಲ ಬರುತ್ತಿರುವಂತೆ ಕೆಮ್ಮು, ಶೀತ ಸಮಸ್ಯೆಯು ಸಾಮಾನ್ಯವಾಗಿರುವುದು. ಈ ಸಮಯದಲ್ಲಿ ನೀವು ಎಲ್ಲಿಗೆ ಹೋದರೂ ಹೆಚ್ಚಿನ ಜನರು ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿರುವುದನ್ನು ಕಾಣಬಹುದು. ಇದಕ್ಕಾಗಿ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಕೆಲವೊಂದು ಮನೆಮದ್ದುಗಳಿಂದ ಕೆಮ್ಮು ಹಾಗೂ ಶೀತ ನಿವಾರಣೆ ಮಾಡಬಹದು. ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ಅಡುಗೆಗೆ ಬಳಸುವಂತಹ ಹಿಂಗು.

ಆಯುರ್ವೇದದ ಪ್ರಕಾರ ಹಿಂಗು ತುಂಬಾ ವಿಶೇಷವಾಗಿರುವಂತದ್ದಾಗಿದೆ ಮತ್ತು ಇದರಿಂದ ಹಲವಾರು ರೀತಿಯ ಅನಾರೋಗ್ಯಗಳನ್ನು ನಿವಾರಣೆ ಮಾಡಬಹುದು. ಹಿಂಗು ಬಳಸಿಕೊಂಡು ಶ್ವಾಸಕೋಶದ ಸೋಂಕು, ಹೊಟ್ಟೆಯ ಸಮಸ್ಯೆ, ಚರ್ಮದ ಸಮಸ್ಯೆ, ಋತುಚಕ್ರದ ಸಮಸ್ಯೆ ಮತ್ತು ಕೆಲವೊಂದು ಮಾನಸಿಕ ಸಮಸ್ಯೆಗಳಿಂದಲೂ ಪರಿಹಾರ ನೀಡುವುದು.

ಶ್ವಾಸಕೋಶದ ಸೋಂಕಿಗೆ ಹಿಂದಿನಿಂದಲೂ ಹಿಂಗನ್ನು ಬಳಸಿಕೊಂಡು ಬರಲಾಗುತ್ತಾ ಇದೆ. ಹಿಂಗು ಉಸಿರಾಟವನ್ನು ಉತ್ತೇಜಿಸುವುದು, ಕಫದಿಂದ ಪರಿಹಾರ ನೀಡಿ, ಎದೆಯಲ್ಲಿ ಕಫಗಟ್ಟಿರುವುದು ನಿವಾರಣೆ ಮಾಡುವುದು. ಹಿಂಗು ಪ್ರಬಲ ಉರಿಯೂತ ಶಮನಕಾರಿ ಮತ್ತು ಆ್ಯಂಟಿಬಯೋಟಿಕ್ ಗುಣ ಹೊಂದಿದೆ. ದೀರ್ಘಕಾಳದ ಕೆಮ್ಮು, ನಾಯಿಕೆಮ್ಮು, ಬ್ರಾಂಕೈಟಿಸ್ ಮತ್ತು ಅಸ್ತಮಾದ ಸಮಸ್ಯೆ ನಿವಾರಣೆ ಮಾಡುವುದು.

ಹಿಂಗಿನ ಗಿಡದ ಬೇರುಗಳಿಂದ ಮಾಡಿರುವಂತಹ ವೈರಲ್ ವಿರೋಧಿ ಔಷಧಿಗಳು ಎಚ್ 1ಎನ್1 ನಿವಾರಣೆ ಮಾಡುವುದು ಮತ್ತು ವೈರಸ್ ವಿರುದ್ಧ ಹೊಸ ಔಷಧಿ ತಯಾರಿಸಲು ಸಂಶೋಧನೆಗಳು ಕೂಡ ನಡೆಯುತ್ತಿದೆ. ಯಾವ ರೀತಿಯ ಕೆಮ್ಮು ಇದೆ ಎನ್ನುವುದನ್ನು ಅನುಸರಿಸಿಕೊಂಡು ಹಿಂಗನ್ನು ಔಷಧಿಯಾಗಿ ಬಳಸಬಹುದು. ಹಿಂಗನ್ನು ಬಳಸಿಕೊಂಡು ಕೆಮ್ಮು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯಿರಿ...

ಕೆಮ್ಮು

ಕೆಮ್ಮು

ನಿಮಗೆ ಕೆಮ್ಮು ಇದ್ದರೆ ಆಗ ನೀವು ಅರ್ಧ ಚಮಚ ಹಿಂಗಿನ ಹುಡಿಯೊಂದಿಗೆ ಅರ್ಧ ಚಮಚ ಒಣಶುಂಠಿ ಹುಡಿ ಮತ್ತು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿಕೊಳ್ಳಿ. ಇದನ್ನು ಬೆರೆಸಿಕೊಂಡು ಒಂದು ಸಣ್ಣ ಉಂಡೆ ಮಾಡಿ. ಇದನ್ನು ಬಾಯಿಗೆ ಹಾಕಿಕೊಂಡು ನಿಧಾನವಾಗಿ ಅದು ಬಾಯಿಯಲ್ಲಿ ಕರಗಲಿ. ಇದು ಕಫವನ್ನು ಸಡಿಲಗೊಳಿಸುವುದು ಮತ್ತು ಶ್ವಾಸಕೋಶದಲ್ಲಿ ಕಟ್ಟಿರುವಂತಹ ಕಫವು ನಿವಾರಣೆಯಾಗುವುದು. ಕೆಮ್ಮಿಗೆ ಪರಿಹಾರ ಸಿಗಬೇಕಾದರೆ ನೀವು ದಿನದಲ್ಲಿ ಮೂರು ಸಲ ಈ ಮಾತ್ರೆ ಸೇವಿಸಿ.

ಒಣ ಕೆಮ್ಮಿಗೆ

ಒಣ ಕೆಮ್ಮಿಗೆ

ಒಣ ಕೆಮ್ಮಿನ ಸಮಸ್ಯೆಯಿದ್ದರೆ ಆಗ ನೀವು ಅರ್ಧ ಚಮಚ ಹಿಂಗಿನ ಹುಡಿ, ಅರ್ಧ ಚಮಚ ತಾಜಾ ಶುಂಠಿ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಈ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನಕ್ಕೆ ಒಂದು ಚಮಚ ಇದನ್ನು ಬಳಸಿಕೊಳ್ಳಿ. ಈ ಮಿಶ್ರಣವನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ ಮತ್ತು ಇದು ನಿಧಾನವಾಗಿ ಗಂಟಲಿನ ಕೆಳಗೆ ಇಳಿಯಲಿ. ಇದು ಕಿರಿಕಿರಿ ತಪ್ಪಿಸುವುದು ಮತ್ತು ಕೆಮ್ಮು ನಿವಾರಣೆ ಮಾಡುವುದು. ಹೀಗೆ ಒಣ ಕೆಮ್ಮಿನಿಂದ ನಿಮಗೆ ಪರಿಹಾರ ಸಿಗುವುದು.

Most Read: ಚಿಕ್ಕವರು ಹಾಗೂ ದೊಡ್ಡವರಿಗೆ ಕಾಡುವ ಕಿವಿ ನೋವಿಗೆ ಮನೆಮದ್ದುಗಳು

ಶೀತ

ಶೀತ

ಶೀತ ನಿವಾರಣೆ ಮಾಡಲು ಕೆಲವು ಹನಿ ಹಿಂಗಿನ ಎಣ್ಣೆ ತೆಗೆದುಕೊಳ್ಳಿ. ಎರಡು ಹನಿ ಎಣ್ಣೆಯನ್ನು ಬಿಸಿ ನೀರಿನ ಪಾತ್ರೆಗೆ ಹಾಕಿ ಮತ್ತು ಈ ನೀರಿನ ಹಬೆಯನ್ನು ಉಸಿರಾಡಿ. ಈ ಎಣ್ಣೆಯನ್ನು ಎದೆ, ಕುತ್ತಿಗೆ ಮತ್ತು ಬೆನ್ನಿಗೆ ಉಜ್ಜಿಕೊಳ್ಳಿ(ಎಣ್ಣೆ ಉಜ್ಜಿಕೊಳ್ಳೂವಾಗ ಅದು ಚರ್ಮದಲ್ಲಿ ಬಿಸಿ ಉಂಟು ಮಾಡಲಿ) ಇದರಿಂದ ಎದೆ ಭಾಗದಲ್ಲಿ ಕಫ ಕಟ್ಟಿರುವುದು ನಿವಾರಣೆಯಾಗುವುದು. ಇನ್ನು ಹಿಂಗಿನಲ್ಲಿರುವ ಇನ್ನಷ್ಟು ಪ್ರಯೋಜನಗಳನ್ನು ನೋಡೋಣ..

ನರವ್ಯವಸ್ಥೆಯ ಏರುಪೇರು

ನರವ್ಯವಸ್ಥೆಯ ಏರುಪೇರು

ಇಂಗು ಉತ್ತಮವಾದ ಉಪಶಮನಕಾರಿ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಸೆಳೆತಕ್ಕೆ ಒಳಗಾಗಿರುವ ನರಗಳನ್ನು ಶಮನಗೊಳಿಸುತ್ತದೆ ಹಾಗೂ ಸಡಿಲಿಸಿ ನಿರಾಳವಾಗಿಸುತ್ತದೆ. ಇದು ಇಂಗಿನ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ. ವಿಶೇಷವಾಗಿ ಖಿನ್ನತೆ, ಮನೋಭಾವನೆಯಲ್ಲಿ ಬದಲಾವಣೆ, ಚಿತ್ತಕ್ಷೋಭೆ, ಅರಳುಮರಳು ಮೊದಲಾದ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳಿಗೆ ಉತ್ತಮ ಪರಿಹಾರ ಒದಗುತ್ತದೆ. ಒಂದರ್ಥದಲ್ಲಿ ಮಾದಕ ಪದಾರ್ಥವಾದ ಓಪಿಯಂ ಸೇವನೆಯ ಪರಿಣಾಮಗಳಿಗೆ ವಿರುದ್ದ ಪರಿಣಾಮ ನೀಡುವ ಮೂಲಕ ಇದರ ಹಿಡಿತದಿಂದ ಹೊರಬರಲು ನೆರವಾಗುತ್ತದೆ.

ಮುಟ್ಟಿನ ಸಮಸ್ಯೆ

ಮುಟ್ಟಿನ ಸಮಸ್ಯೆ

ಮಹಿಳೆಯರಲ್ಲಿ ಉಂಟಾಗುವ ಮುಟ್ಟಿನ ಸಮಸ್ಯೆಗಳಾದ ನೋವು, ಸೆಳೆತ ಅನಿರ್ಧಿಷ್ಟಾವಧಿಯ ಮುಟ್ಟು, ಮೊದಲಾದ ತೊಂದರೆಗಳಿಗೆ ಸೂಕ್ತವಾದ ಪರಿಹಾರ ಇಂಗು. ಕ್ಯಾಂಡಿಡಾ ಸೋಂಕು ಹಾಗೂ ಬಿಳಿ ಸೆರಗು ತೊಂದರೆಗಳಿಗೂ ಇಂಗಿನ ಸೇವನೆ ಪ್ರಯೋಜನಕಾರಿ ಚಿಕಿತ್ಸೆಯಾಗಬಲ್ಲದು.

ಅಜೀರ್ಣ

ಅಜೀರ್ಣ

ಇಂಗನ್ನು ಪ್ರಾಚೀನ ಕಾಲದಿಂದ ಅಜೀರ್ಣ ನಿವಾರಕ ಮನೆ ಮದ್ದಾಗಿ ಬಳಸಲಾಗುತ್ತಿದೆ. ಆದ್ದರಿಂದಲೇ ಇದನ್ನು ಭಾರತೀಯ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಉರಿಯೂತ , ಜಂತು ಹುಳಗಳು, ವಾಯು, ಇತ್ಯಾದಿ ಜೀರ್ಣಕ್ರಿಯೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅರ್ಧ ಲೋಟ ನೀರಿಗೆ ಚಿಟಿಕಿಯಷ್ಟು ಇಂಗನ್ನು ಹಾಕಿ ಕರಗಿಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ಅತ್ಯಂತ ವೇಗವಾಗಿ ಪರಿಹಾರವಾಗುತ್ತದೆ.

Most Read: ಶೌಚಾಲಯದಲ್ಲಿ ನೀವು ಸಹಾ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಾಗಾದರೆ ನಾವು ಎಚ್ಚರಿಸಿರಲಿಲ್ಲ ಎಂದು ಬಳಿಕ ಹೇಳದಿರಿ!

ಮಧುಮೇಹ

ಮಧುಮೇಹ

ಇಂಗು ಮಧುಮೇಹ ನಿವಾರಕವೂ ಆಗಿದೆ. ಇದು ಮೇದೋಜೀರಕ ಜೀವಕೋಶಗಳ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹೆಚ್ಚು ಇನ್ಸುಲಿನ್ ಸ್ರವಿಸುವಂತೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಬೇಯಿಸಲಾದ ಹಾಗಲಕಾಯಿಯ ಜೊತೆಗೆ ಇಂಗನ್ನು ಬೆರೆಸಿ ಸೇವಿಸಬಹುದು.

ಸೌಂದರ್ಯಕ್ಕೂ ಸಹಕಾರಿ

ಸೌಂದರ್ಯಕ್ಕೂ ಸಹಕಾರಿ

ನೈಸರ್ಗಿಕವಾಗಿ ತ್ವಚೆಗೆ ಬಣ್ಣ ನೀಡುವ ಗುಣ ಇಂಗಿನಲ್ಲಿದೆ. ಮುಖದ ಮೇಲೆ ವಯಸ್ಸಿನ ಛಾಯೆ ಹೋಗಿಸುವ ವಿಶೇಷ ಗುಣವೂ ಇದೆ. ತುಂಬಾ ಪರಿಣಾಮಕಾರಿಯಾದ ಮತ್ತು ಖರ್ಚಿಲ್ಲದೆ ತ್ವಚೆಯನ್ನು ಸರಿಪಡಿಸಿಕೊಳ್ಳುವ ಮಾರ್ಗವಿದು. ನೀರು ಅಥವಾ ಹಾಲಿನ ಕೆನೆಯೊಂದಿಗೆ ಇಂಗನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ಇಂಗು, ಪ್ರಬಲ ಆಕ್ಸಿಡೆಂಟ್ ವಿರೋಧಿ ಔಷಧವಾಗಿದೆ. ಇದು ದೇಹದ ಜೀವಕೋಶಗಳನ್ನು ರ್ಯಾಡಿಕಲ್ಸ್ (ರಾಡಿಕಲ್ಸ್) ನಿಂದ ರಕ್ಷಿಸುತ್ತದೆ. ಅಧ್ಯಯನಗಳ ಪ್ರಕಾರ, ಇಂಗು ಕ್ಯಾನ್ಸರ್ ವಿರೋಧಿ ವಸ್ತುವಾಗಿದ್ದು, ಪ್ರಾಣಾಂತಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

English summary

Try Hing for your cough and cold

The winters are here and with it, it brings cough and cold. Here is a simple home remedy that can help relief your cough and cold instantly. In Ayurveda hing is considered a unique compound that holds the remedy to a number of illnesses. It is popularly used to cure respiratory tract infections, stomach ailments, skin ailments, menstrual problems and is even believed to provide relief from mental illnesses.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more