For Quick Alerts
ALLOW NOTIFICATIONS  
For Daily Alerts

ಸ್ವಲ್ಪ ಹಸಿ ಸಾಸಿವೆ ಜಗಿಯಬೇಕಂತೆ- ಆರೋಗ್ಯಕ್ಕೆ ಬಾರಿ ಒಳ್ಳೆಯದಂತೆ!

By Hemanth
|

ನಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಬಳಸುವಂತಹ ಸಾಸಿವೆಯು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ನೆರವಾಗುವುದು ಎಂದು ತಿಳಿದೇ ಇದೆ. ಒಗ್ಗರಣೆಯಿಂದ ಹಿಡಿದು, ಮಾಡುವಂತಹ ಖಾದ್ಯದ ತನಕ ಸಾಸಿವೆಯು ರುಚಿ ನೀಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಯಾವತ್ತಾದರೂ ಸಾಸಿವೆ ಕಾಳನ್ನು ನೀವು ಹಸಿಯಾಗಿ ಜಗಿದಿದ್ದೀರಾ? ಹಸಿ ಸಾಸಿವೆ ಜಗಿದರೆ ಬಾಯಿ ಉರಿದಂತೆ ಆಗುವುದು ಸಹಜ. ಆದರೆ ಈ ಲೇಖನದಲ್ಲಿ ಹಸಿ ಸಾಸಿವೆ ಜಗಿಯುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದುತ್ತಾ ಸಾಗಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ.

ಸಾಸಿವೆಯು ನಿಮ್ಮ ಆರೋಗ್ಯಕ್ಕೆ ಹೇಗೆ ಒಳ್ಳೆಯದು?
ಸಾಸಿವೆಯಲ್ಲಿ ನೈಸರ್ಗಿಕವಾಗಿರುವ ಗ್ಲುಕೋಸಿನೋಲೇಟ್ ಎನ್ನುವ ಅಂಶವಿದ್ದು, ಇದನ್ನು ಕಾಳಿನಲ್ಲಿರುವ ಕಿಣ್ವಗಳು ಐಸೋಥಿಯೋಸೈನೇಟ್ ಆಗಿ ವಿಘಟಿಸುವುದು. ಇದರಿಂದ ಸಾಸಿವೆಗೆ ಕಟು ಪರಿಮಳ ನೀಡುವುದು. ಈ ಅಂಶವು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ತಡೆಯುವುದು. ಅದರಲ್ಲೂ ಪ್ರಮುಖವಾಗಿ ಕರುಳಿನಲ್ಲಿ ಇದು ಪರಿಣಾಮಕಾರಿಯಾಗಿ ವರ್ತಿಸುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.
ಸಾಸಿವೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ಸೆಲೆನಿಯಂ, ಮೆಗ್ನಿಶಿಯಂ, ಮ್ಯಾಂಗನೀಸ್, ವಿಟಮಿನ್ ಬಿ1, ಫೋಸ್ಪರಸ್, ಕ್ಯಾಲ್ಸಿಯಂ, ಪ್ರೋಟೀನ್, ಆಹಾರದ ನಾರಿನಾಂಶ ಮತ್ತು ಸತು ಇದೆ. ಸಾಸಿವೆ ಕಾಳನ್ನು ಜಗಿಯುವುದರಿಂದ ಆಗುವ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ...

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಸಾಸಿವೆ ಕಾಳುಗಳು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ. ಯಾಕೆಂದರೆ ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಒಂದು ಚಮಚ ಸಾಸಿವೆಯಲ್ಲಿ ಕೇವಲ 32 ಕ್ಯಾಲರಿ ಮಾತ್ರ ಇದೆ. ಇತರ ಸಾಂಬಾರು ಪದಾರ್ಥಗಳಿಗೆ ಹೋಲಿಸಿದರೆ ಸಾಸಿವೆಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವುದು. ಇದರಲ್ಲಿ ಕಾರ್ಬ್ರೋಹೈಡ್ರೇಟ್ಸ್ ಕೂಡ ಇದ್ದು, ಒಂದು ಚಮಚ ಸಾಸಿವೆಯಲ್ಲಿ ಕೇವಲ 1.8 ಗ್ರಾಂ ಮಾತ್ರ ಇದೆ. ತೂಕ ಇಳಿಸುವವರಿಗೆ ಇದು ಸಹಕಾರಿ.

ಸೆಲೆನಿಯಂ ಮತ್ತು ಮೆಗ್ನಿಶಿಯಂನ ಉರಿಯೂತ ಶಮನಕಾರಿ ಪರಿಣಾಮ

ಸೆಲೆನಿಯಂ ಮತ್ತು ಮೆಗ್ನಿಶಿಯಂನ ಉರಿಯೂತ ಶಮನಕಾರಿ ಪರಿಣಾಮ

ಸಾಸಿವೆ ಕಾಳಿನಲ್ಲಿ ಉನ್ನತ ಮಟ್ಟದ ಸೆಲೆನಿಯಂ ಇದ್ದು, ಅಸ್ತಮಾ ಮತ್ತು ಸಂಧಿವಾತದ ತೀವ್ರತೆಯನ್ನು ಇದು ಕಡಿಮೆ ಮಾಡುವುದು. ಸಾಸಿವೆ ಕಾಳಿನಲ್ಲಿ ಇರುವಂತಹ ಮೆಗ್ನಿಶಿಯಂ ರಕ್ತದೊತ್ತಡ ಕಡಿಮೆ ಮಾಡುವುದು, ಋತುಚಕ್ರದ ವೇಳೆ ಮಹಿಳೆಯರಲ್ಲಿ ಸಾಮಾನ್ಯ ನಿದ್ರೆಗೆ ನೆರವಾಗುವುದು ಮತ್ತು ಮೈಗ್ರೇನ್ ಬರುವುದನ್ನು ತಡೆಯುವುದು.

ಸೋರಿಯಾಸಿಸ್ ಗೆ ಚಿಕಿತ್ಸೆ

ಸೋರಿಯಾಸಿಸ್ ಗೆ ಚಿಕಿತ್ಸೆ

ಸೋರಿಯಾಸಿಸ್ ತುಂಬಾ ತೀವ್ರವಾದ ಉರಿಯೂತಕಾರಿ ಸ್ವರಕ್ಷಿತ ರೋಗ. ಸಾಸಿವೆಯು ಉರಿಯೂತ ನಿವಾರಣೆ ಮಾಡುವುದು ಮತ್ತು ಸೋರಿಯಾಸಿಸ್ ನ ಗಾಯ ಶಮನ ಮಾಡುವುದು. ಸಾಸಿವೆಯು ಆರೋಗ್ಯಕರ ಕಿಣ್ವಗಳಾದ ಸೂಪರ್-ಆಕ್ಸೈಡ್ ಡಿಸ್ಮಟೇಸ್, ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ಮತ್ತು ಕ್ರಿಯಾವರ್ಧಕ ರಕ್ಷಣಾತ್ಮಕವಾಗಿ ವರ್ಧಿಸುವುದು ಮತ್ತು ಸೋರಿಯಾಸಿಸ್ ನಂತಹ ಯಾವುದೇ ರೀತಿಯ ಕಾಯಿಲೆಗಳಿಗೆ ಇದು ಚಿಕಿತ್ಸೆ ನೀಡುವುದು.

ಉಸಿರಾಟದ ಕಾಯಿಲೆಗಳಿಂದ ಪರಿಹಾರ

ಉಸಿರಾಟದ ಕಾಯಿಲೆಗಳಿಂದ ಪರಿಹಾರ

ಸಾಸಿವೆ ಕಾಳನ್ನು ಜಗಿಯುವುದರಿಂದ ಶೀತ ಹಾಗೂ ಜ್ವರದ ಸಮಸ್ಯೆಯು ನಿವಾರಣೆಯಾಗುವುದು. ಇದು ವಾಯುನಾಳದಲ್ಲಿ ಇರುವಂತಹ ಕಫವನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ನಿಮಗೆ ಉಸಿರಾಟದ ಸಮಸ್ಯೆಯಿದ್ದರೆ ಸ್ವಲ್ಪ ಸಾಸಿವೆ ಕಾಳನ್ನು ಜಗಿಯಿರಿ, ಇದರ ಘಾಟು ಬೇಗನೆ ಪರಿಣಾಮ ಬೀರುವುದು.

ಜೀರ್ಣಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು

ಜೀರ್ಣಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು

ಸಾಸಿವೆ ಕಾಳಿನಲ್ಲಿ ಉನ್ನತ ಪ್ರಮಾಣದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಇದರಲ್ಲಿ ಹೀರಿಕೊಳ್ಳುವ ನಾರಿನಾಂಶವಿದ್ದು, ಕರುಳಿನ ಕ್ರಿಯೆಗೆ ಸಹಕಾರಿ ಮತ್ತು ದೇಹದಲ್ಲಿ ಸಂಪೂರ್ಣ ಚಯಾಪಚಯ ಕ್ರಿಯೆಗೆ ಸಹಕಾರಿಯಾಗುವುದು.

ಋತುಬಂಧ ಲಕ್ಷಣಗಳಿಂದ ಪರಿಹಾರ

ಋತುಬಂಧ ಲಕ್ಷಣಗಳಿಂದ ಪರಿಹಾರ

ಋತುಬಂಧದ ಸಮಯದಲ್ಲಿ ಸಾಸಿವೆಯು ಮಹಿಳೆಯರಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಋತುಬಂಧದ ವೇಳೆ ಮೂಳೆಯು ಹಾನಿಗೀಡಾಗುವುದು ಸಾಮಾನ್ಯ ಮತ್ತು ಸಾಸಿವೆ ಕಾಳನ್ನು ಸೇವನೆ ಮಾಡಿದರೆ ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಈ ಸಮಸ್ಯೆ ತಡೆಯುವುದು. ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಮೂಳೆಯನ್ನು ಬಲ ಹಾಗೂ ದೃಢಗೊಳಿಸುವುದು.

ಜಠರಕರುಳಿನ ಕ್ಯಾನ್ಸರ್ ನಿಂದ ರಕ್ಷಣೆ

ಜಠರಕರುಳಿನ ಕ್ಯಾನ್ಸರ್ ನಿಂದ ರಕ್ಷಣೆ

ಸಾಸಿವೆ ಕಾಳಿನಲ್ಲಿ ಇರುವಂತಹ ಗ್ಲುಕೋಸಿನೊಲೇಟ್ ಮತ್ತು ಮೈರೋಸಿನೇಸ್ ಕಿಣ್ವಗಳು ಗ್ಲುಕೋಸಿನೊಲೇಟ್ ನ್ನು ಐಸೋಥಿಯೋಸೈನೇಟ್ ಆಗಿ ವಿಘಟಿಸುವುದು. ಜಠರಕರುಳಿನಲ್ಲಿ ಬರುವಂತಹ ಕರುಳಿನ ಕ್ಯಾನ್ಸರ್ ನ್ನು ಐಸೋಥಿಯೋಸೈನೇಟ್ ತಡೆಯುವುದು ಎಂದು ಅಧ್ಯಯನಗಳು ಹೇಳಿವೆ. ಐಸೋಥಿಯೋಸೈನೇಟ್ ಗಳು ಕ್ಯಾನ್ಸರ್ ನ ಕೋಶಗಳ ಬೆಳವಣಿಗೆಯನ್ನು ತಡೆಯುವುದು ಮತ್ತು ಹೊಸ ಕೋಶಗಳು ಬೆಳೆಯದಂತೆ ನೋಡಿಕೊಳ್ಳುವುದು.

ಬೆನ್ನು ನೋವಿಗೆ ಚಿಕಿತ್ಸೆ

ಬೆನ್ನು ನೋವಿಗೆ ಚಿಕಿತ್ಸೆ

ಬೆನ್ನು ನೋವು ಅಥವಾ ಸ್ನಾಯು ಸೆಳೆತವಿದ್ದರೆ ಆಗ ನೀವು ಸಾಸಿವೆ ಕಾಳನ್ನು ಜಗಿಯಿರಿ. ಇದರಿಂದ ಸೆಳೆತ ಮತ್ತು ಬೆನ್ನು ನೋವು ಕಡಿಮೆಯಾಗುವುದು. ಸ್ನಾಯುಗಳ ಬಿಗಿತ ಮತ್ತು ಊತ ಕೂಡ ಕಡಿಮೆ ಮಾಡಬಹುದು.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸಾಸಿವೆ ಪುಟ್ಟದಾದರೂ ಇದರಲ್ಲಿರುವ ಖನಿಜಗಳ ಸಂಖ್ಯೆ ದೊಡ್ಡರು, ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮೊದಲಾದ ಖನಿಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ತನ್ಮೂಲಕ ವಿವಿಧ ವ್ಯಾಧಿಗಳಿಂದ ದೇಹಕ್ಕೆ ರಕ್ಷಣೆ ನೀಡುತ್ತದೆ.

ವಿಶೇಷ ಸೂಚನೆ

ವಿಶೇಷ ಸೂಚನೆ

ಅತಿಯಾದರೆ ಅಮೃತವೂ ವಿಷ ಎಂಬಂತೆ ಸಾಸಿವೆಯಲ್ಲಿ ಇಷ್ಟೆಲ್ಲಾ ಉತ್ತಮ ಗುಣಗಳಿದ್ದರೂ ಪ್ರತಿದಿನ ಸೇವಿಸಬೇಕಾದ ಪ್ರಮಾಣ ಮಾತ್ರ ಅತ್ಯಂತ ಕಡಿಮೆ ಇರಬೇಕಾದುದು ಅವಶ್ಯವಾಗಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇದೇ ಉತ್ತಮ ಗುಣಗಳು ವಿರುದ್ಧವಾಗಿ ಕೆಲಸ ಮಾಡಬಲ್ಲವು. ಸಾಸಿವೆಯನ್ನು ಔಷಧಿಯಾಗಿ ಸೇವಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರ ಅಥವಾ ಆಯುರ್ವೇದ ಪರಿಣಿತರಲ್ಲಿ ಸಮಾಲೋಚಿಸಿ ಅವರ ಸಲಹೆಯನ್ನು ಅನುಸರಿಸಿ.

ಸಾಸಿವೆ ಕಾಳನ್ನು ಆಯ್ಕೆ ಮಾಡುವುದು ಹೇಗೆ?

ಸಾಸಿವೆ ಕಾಳನ್ನು ಆಯ್ಕೆ ಮಾಡುವುದು ಹೇಗೆ?

*ಸಾವಯವವಾಗಿ ಬೆಳೆಸಿರುವ ಸಾಸಿವೆ ಕಾಳು ಖರೀದಿಸಿ.

*ಇದನ್ನು ಖರೀದಿಸುವ ಮೊದಲು ಅದರ ತಯಾರಿ ಮತ್ತು ಮುಕ್ತಾಯ(ಎಕ್ಸ್ ಫೈರಿ) ದಿನಾಂಕ ನೋಡಿ.

ಸಾಸಿವೆ ಕಾಳನ್ನು ಸಂಗ್ರಹಿಸುವುದು ಹೇಗೆ?

*ಒಣ ಹಾಗೂ ತಣ್ಣಗಿನ ಪ್ರದೇಶದಲ್ಲಿ ಇದನ್ನು ಸಂಗ್ರಹಿಸಿಡಿ.

*ಮುಚ್ಚಳ ಬಿಗಿಯಾಗಿರುವ ಡಬ್ಬದಲ್ಲಿ ಹಾಕಿಡಿ.

*ಸಾಸಿವೆ ಕಾಳು ಸುಮಾರು ಒಂದು ವರ್ಷ ಕಾಲ ಬಾಳಿಕೆ ಬರುವುದು. ಅದೇ ಸಾಸಿವೆ ಹುಡಿಗೆ ಆರು ತಿಂಗಳ ಬಾಳಿಕೆ ಇದೆ.

ಸಾಸಿವೆ ಕಾಳನ್ನು ಬಳಸುವುದು ಹೇಗೆ?

*ಆಹಾರಕ್ಕೆ ಒಗ್ಗರಣೆ ಹಾಕಲು, ಉಪ್ಪಿನಕಾಯಿ ಮತ್ತು ಚಟ್ನಿಯಲ್ಲಿ ಇದನ್ನು ಬಳಸಿ.

*ಸಲಾಡ್ ಗೆ ಅಲಂಕಾರವಾಗಿ ಬಳಸಿ.

*ಸಾಸಿವೆ ಕಾಳನ್ನು ಅತಿಯಾಗಿ ಬೇಯಿಸಬೇಡಿ. ಇದರಿಂದ ಅದು ಕಹಿಯಾಗುವುದು.

English summary

Top Health Benefits of Chewing Mustard Seeds

Mustard seeds are widely used in Indian cooking; it's available in white, brown and black varieties. These seeds are an excellent source of omega-3 fatty acids, selenium, manganese, magnesium, vitamin B1, phosphorous, calcium, zinc. Mustard seeds protect against cancer, treat respiratory problems, treat cold and flu, etc.
X
Desktop Bottom Promotion