For Quick Alerts
ALLOW NOTIFICATIONS  
For Daily Alerts

ಮೂಳೆ ಮುರಿತ ಸರಿಪಡಿಸಲು ಕೆಲವು ಪವರ್ ಫುಲ್ ಆಹಾರಗಳು

By Hemanth
|

ಮಳೆಗಾಲದಲ್ಲಿ ಜಾರಿ ಬೀಳುವುದು, ಅಪಘಾತದಲ್ಲಿ ದೇಹದ ಮೂಳೆ ಮುರಿದುಕೊಳ್ಳುವುದು ಹೀಗೆ ಹಲವಾರು ರೀತಿಯಿಂದ ನಮ್ಮ ದೇಹದಲ್ಲಿರುವ ಮೂಳೆಗಳಿಗೆ ಹಾನಿಯಾಗಬಹುದು. ಮೂಳೆಗಳು ಮುರಿದಾಗ ಅದರ ನೋವು ತೀವ್ರವಾಗಿರುವುದು ಮತ್ತು ಇದರಿಂದ ಕೆಲವು ದೈನಂದಿನ ಚಟುವಟಿಕೆ ನಡೆಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಮೂಳೆಗಳು ನಮ್ಮ ದೇಹದ ಇತರ ಕೆಲವು ಅಂಗಗಳ ಚಟುವಟಿಕೆ ಮೇಲೂ ಪರಿಣಾಮ ಬಿರುವುದು. ಇದರಲ್ಲಿ ಸ್ನಾಯು, ಗಂಟು, ಅಂಗಾಂಗಗಳು ಇತ್ಯಾದಿ.

ಹೀಗೆ ಅಸ್ಥಿಪಂಜರದ ವ್ಯವಸ್ಥೆಯು ನಮ್ಮ ದೇಹಕ್ಕೆ ಒಂದು ರೀತಿಯ ವಿನ್ಯಾಸ ನೀಡುವುದು. ಮೂಳೆಗಳೇ ಇಲ್ಲದೆ ಇರುವಂತಹ ದೇಹವನ್ನು ಊಹಿಸಿದರೆ ತುಂಬಾ ತಮಾಷೆಯೆನಿಸಬಹುದು. ಇದಕ್ಕಾಗಿ ದೇಹದ ಪ್ರತಿಯೊಂದು ಚಟುವಟಿಕೆಗಳಿಗೆ ಮೂಳೆಗಳ ಅಗತ್ಯವಿರುವ ಕಾರಣ ಇವುಗಳನ್ನು ಆರೋಗ್ಯ, ಬಲಿಷ್ಠವಾಗಿಡುವುದು ಅತೀ ಅಗತ್ಯ.

ಆದರೆ ಕೆಲವೊಂದು ಸಂದರ್ಭಗಳಲ್ಲಿ ಮೂಳೆಗಳು ದುರ್ಬಲವಾಗಿ ಮುರಿತಕ್ಕೆ ಒಳಗಾಗುವುದು. ಮೂಳೆಗಳು ಮುರಿದಾಗ ಕೆಲವೊಂದು ಶಸ್ತಚಿಕಿತ್ಸೆಯಿಂದ ಅವುಗಳನ್ನು ಮರಳಿ ಜೋಡಿಸಬೇಕಾಗುತ್ತದೆ. ಮೂಳೆಗಳು ಮುರಿದಿರುವುದನ್ನು ಜೋಡಿಸಲು ಇರುವಂತಹ ಕೆಲವು ನೈಸರ್ಗಿಕ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆ ಕೂಡ ಮಾಡಬೇಕು....

ಮೂಳೆ ಮುರಿತಕ್ಕೆ ಒಳಗಾಗಲು ಕಾರಣಗಳು

ಮೂಳೆ ಮುರಿತಕ್ಕೆ ಒಳಗಾಗಲು ಕಾರಣಗಳು

ಮೂಳೆ ಮುರಿತಕ್ಕೆ ಹಲವಾರು ಕಾರಣಗಳಿವೆ ಮತ್ತು ವೈದ್ಯಕೀಯ ವಿಜ್ಞಾನದಲ್ಲೂ ಇದನ್ನು ಮೂಳೆ ಮುರಿತವೆಂದು ಕರೆಯಲಾಗುತ್ತದೆ. ರಸ್ತೆ ಅಪಘಾತದ ವೇಳೆ ಗಾಯಾಳುವಾಗುವುದು, ಆಟೋಟದ ವೇಳೆ ಗಾಯಾಳು, ಎತ್ತರದಿಂದ ಬೀಳುವುದು ಅಥವಾ ದೈಹಿಕವಾಗಿ ಹಲ್ಲೆಗೊಳಗಾದಾಗ, ಅಸ್ಥಿರಂಧ್ರತೆ ಸಮಸ್ಯೆಯು ಮೂಳೆಗಳನ್ನು ದುರ್ಬಲಗೊಳಿಸಿ ಮುರಿತಕ್ಕೆ ಒಳಗಾಗುವಂತೆ ಮಾಡಬಹುದು. ಆಸ್ಟಿಯೋಜೆನೆಸಿಸ್ ಇಂಪೆರ್ಫೆರಾ ಎನ್ನುವ ಮತ್ತೊಂದು ಕಾಯಿಲೆಯು ಮೂಳೆಗಳನ್ನು ದುರ್ಬಲಗೊಳಿಸುವುದು. ಮೂಳೆಯ ಕ್ಯಾನ್ಸರ್ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು ಮತ್ತು ಬೇಗನೆ ಮುರಿಯಬಹುದು. ಅನಾರೋಗ್ಯಕರ ಜೀವನಶೈಲಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಕೂಡ ಮೂಳೆ ದುರ್ಬಲಗೊಳ್ಳಲು ಕಾರಣಗಳು.

ಮುರಿದ ಮೂಳೆಗೆ ಚಿಕಿತ್ಸೆ ನೀಡದೆ ಇದ್ದರೆ ಏನಾಗುವುದು?

ಮುರಿದ ಮೂಳೆಗೆ ಚಿಕಿತ್ಸೆ ನೀಡದೆ ಇದ್ದರೆ ಏನಾಗುವುದು?

ವೈದ್ಯರಲ್ಲಿಗೆ ಹೋಗದೆ ಅಥವಾ ಯಾವುದೇ ರೀತಿಯ ನೈಸರ್ಗಿಕ ಮನೆಮದ್ದುಗಳನ್ನು ಬಳಸದೆ ಮುರಿದ ಮೂಳೆಗಳನ್ನು ಹಾಗೆ ಬಿಟ್ಟರೆ ಇದು ದೀರ್ಘಕಾಲಕ್ಕೆ ಗಂಭೀರ ಸಮಸ್ಯೆಯನ್ನು ಉಂಟು ಮಾಡಬಹುದು.

ಮುರಿದ ಮೂಳೆಗೆ ಚಿಕಿತ್ಸೆ ನೀಡದೆ ಇದ್ದರೆ…

ಮುರಿದ ಮೂಳೆಗೆ ಚಿಕಿತ್ಸೆ ನೀಡದೆ ಇದ್ದರೆ…

ಮುರಿದ ಮೂಳೆಗೆ ಚಿಕಿತ್ಸೆ ನೀಡದೆ ಇದ್ದರೆ ಆಗ ಸೋಂಕು ಬರಬಹುದು ಮತ್ತು ಅಸ್ಥಿರಜ್ಜು ನರಗಳ ನಡುವಿನ ಸಂವೇದನೆ ಕಳೆದುಕೊಂಡು ಗಾಯಗೊಂಡಿರುವ ಭಾಗವು ಸ್ಪರ್ಶಜ್ಞಾನವಿಲ್ಲದಂತೆ ಆಗಬಹುದು. ಮೂಳೆ ಮುರಿತಕ್ಕೆ ಒಳಗಾದ ಭಾಗದಲ್ಲಿನ ಸ್ನಾಯುಗಳು ಅಥವಾ ಗಂಟುಗಳಿಗೆ ಸರಿಯಾದ ರಕ್ತಸಂಚಾರವಿಲ್ಲದೆ ಹಾನಿಯಾಗಬಹುದು.

ಮುರಿದ ಮೂಳೆ ಸರಿಪಡಿಸಲು ನೈಸರ್ಗಿಕ ಮದ್ದಿನ ಪ್ರಾಮುಖ್ಯತೆಗಳು

ಮುರಿದ ಮೂಳೆ ಸರಿಪಡಿಸಲು ನೈಸರ್ಗಿಕ ಮದ್ದಿನ ಪ್ರಾಮುಖ್ಯತೆಗಳು

ನೈಸರ್ಗಿಕವಾಗಿರುವ ಸಾಮಗ್ರಿಗಳನ್ನು ಬಳಸಿಕೊಂಡು ಸರಿಯಾದ ವಿಧಾನದಲ್ಲಿ ಇದನ್ನು ಅನುಸರಿಸಿದರೆ ಆಗ ಪರಿಣಾಮಕಾರಿಯಾಗಿರುವುದು. ಮುರಿದ ಮೂಳೆ ಅಥವಾ ಮೂಳೆಗಳನ್ನು ಬಲಗೊಳಿಸಲು ಹಲವಾರು ರೀತಿಯ ಆಹಾರಗಳು ಇವೆ. ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ. ನೈಸರ್ಗಿಕವಾದ ಮನೆಮದ್ದುಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವ ಕಾರಣದಿಂದ ಇದು ತುಂಬಾ ಪರಿಣಾಮಕಾರಿ. ಮೂಳೆ ಮುರಿತವು ತುಂಬಾ ಗಂಭೀರವಾಗಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರೊಂದಿಗೆ ಈ ಆಹಾರಗಳನ್ನು ಕೂಡ ಸೇವಿಸಿ.

 ನೈಸರ್ಗಿಕವಾಗಿ ಮೂಳೆ ಮುರಿತ ಸರಿಪಡಿಸುವ ಆಹಾರಗಳು

ನೈಸರ್ಗಿಕವಾಗಿ ಮೂಳೆ ಮುರಿತ ಸರಿಪಡಿಸುವ ಆಹಾರಗಳು

ಹೈನೋತ್ಪನ್ನಗಳು

ಹೈನು ಉತ್ಪನ್ನಗಳಾಗಿರುವ ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು ಇದು ನೈಸರ್ಗಿಕವಾಗಿ ಮೂಳೆಗಳನ್ನು ಸರಿಪಡಿಸುವುದು. ಇದರಿಂದ ಹೈನು ಉತ್ಪನ್ನಗಳನ್ನು ಸೇವಿಸಿದರೆ ಮುರಿದ ಮೂಳೆಗಳು ವೇಗವಾಗಿ ಸರಿಯಾಗುವುದು.

ಮೀನು

ಮೀನು

ಟುನಾ ಮೀನಿನಲ್ಲಿ ಅತ್ಯಧಿಕ ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಇದೆ. ನೀವು ಸೇವಿಸುವಂತಹ ಕ್ಯಾಲ್ಸಿಯಂ ಪರಿಣಾಮಕಾರಿಯಾಗಿ ಕೆಲಸ ಮಾಡಲು ವಿಟಮಿನ್ ಡಿ ಅತ್ಯಗತ್ಯ. ಇದು ಕ್ಯಾಲ್ಸಿಯಂನ ಗುಣಗಳನ್ನು ವೃದ್ಧಿಸುವುದು. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೂಳೆಗಳನ್ನು ಬಲಗೊಳಿಸಿ, ವೇಗವಾಗಿ ಚೇತರಿಸುವಂತೆ ಮಾಡುವುದು.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಪ್ರತಿನಿತ್ಯ ನಿಮ್ಮ ಸಲಾಡ್ ಗೆ ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಂಡರೆ ಅದರಿಂದ ಮುರಿದ ಮೂಳೆಗಳು ನೈಸರ್ಗಿಕವಾಗಿ ಸರಿಯಾಗುವುದು. ಕುಂಬಳಕಾಯಿಯಲ್ಲಿ ಇರುವಂತಹ ಖನಿಜಾಂಶಗಳು ಮೂಳೆಗಳು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು.ಅಲ್ಲದೇ ಒಂದು ವೇಳೆ ನಿಮ್ಮ ದೇಹದಲ್ಲಿ ವಿಟಮಿನ್ ಬಿ ಕೊರತೆ ಇದ್ದರೆ ಕುಂಬಳ ಬೀಜಗಳನ್ನು ತಿನ್ನುವ ಮೂಲಕ ಈ ಕೊರತೆಯನ್ನು ನೀಗಿಸಬಹುದು. ಅಲ್ಲದೇ ಇದರಲ್ಲಿರುವ ನಿಯಾಸಿನ್, ರೈಬೋಫ್ಲೀವಿನ್, ಫೋಲೇಟ್ ಹಾಗೂ ಥಿಯಾಮಿನ ಗಳು ಆರೋಗ್ಯ ವರ್ಧಿಸುತ್ತವೆ.

ಕ್ಯಾಪ್ಸಿಕಂ(ದೊಣ್ಣೆ ಮೆಣಸು)

ಕ್ಯಾಪ್ಸಿಕಂ(ದೊಣ್ಣೆ ಮೆಣಸು)

ಕೆಂಪು ಬಣ್ಣದ ಕ್ಯಾಪ್ಸಿಕಂನಲ್ಲಿ ಅತ್ಯಧಿಕ ವಿಟಮಿನ್ ಸಿ ಇದೆ. ಇದು ಮೂಳೆಗಳಲ್ಲಿ ಕಾಲಜನ ಉತ್ಪತ್ತಿಗೆ ನೆರವಾಗುವುದು. ಮುರಿದ ಮೂಳೆ ಸರಿಪಡಿಸಲು ಕಾಲಜನ್ ಅತೀ ಅಗತ್ಯ ಮತ್ತು ಮುರಿದ ಮೂಳೆಗಳನ್ನು ಇದು ನೈಸರ್ಗಿಕವಾಗಿ ಜೋಡಿಸುವುದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಹೆಚ್ಚಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿರುವ ಹಲವಾರು ರೀತಿಯ ಆರೋಗ್ಯ ಲಾಭಗಳು ನಮ್ಮ ದೇಹಕ್ಕೆ ಸಿಗುವುದು. ಮೊಟ್ಟೆಯಲ್ಲಿರುವ ವಿಟಮಿನ್ ಡಿ ಮತ್ತು ಸಣ್ಣ ಪ್ರಮಾಣದ ಕ್ಯಾಲ್ಸಿಯಂ, ಉನ್ನತ ಮಟ್ಟದ ಪ್ರೋಟೀನ್ ಮತ್ತು ವಿಟಮಿನ್ ಬಿ ಇದೆ. ಇದೆಲ್ಲವೂ ಮೂಳೆಗಳನ್ನು ಬಲಪಡಿಸುವುದು ಮತ್ತು ನೈಸರ್ಗಿಕವಾಗಿ ಆರೋಗ್ಯ ನೀಡುವುದು.

ಕಪ್ಪು ಬೀನ್ಸ್

ಕಪ್ಪು ಬೀನ್ಸ್

ಕಪ್ಪು ಬೀನ್ಸ್ ಅನ್ನು ನೀವು ಖಾದ್ಯದ ರುಚಿ ಹೆಚ್ಚಿಸಲು, ಸಲಾಡ್ ಗೆ ಹಾಕಿ ಪ್ರತಿನಿತ್ಯವೂ ಸೇವನೆ ಮಾಡಬೇಕು. ಇದು ಮೂಳೆಗಳು ಮತ್ತು ಸ್ನಾಯುಗಳಿಗೆ ತುಂಬಾ ಆರೋಗ್ಯಕಾರಿ. ಕಪ್ಪು ಬೀನ್ಸ್ ನಲ್ಲಿ ಅಧಿಕ ಮಟ್ಟದ ಮೆಗ್ನಿಶಿಯಂ ಮತ್ತು ಪ್ರೋಟೀನ್ ಇದೆ. ಇದು ಮೂಳೆಗಳ ಕೋಶಗಳು ಬೇಗನೆ ಸರಿಯಾಗಲು ನೆರವಾಗುವುದು.

ಪಾರ್ಸ್ಲಿ

ಪಾರ್ಸ್ಲಿ

ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಮತ್ತೊಂದು ಹಸಿರೆಲೆ ತರಕಾರಿಯೆಂದರೆ ಅದು ಪಾರ್ಸ್ಲಿ. ಇದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಪಾರ್ಸ್ಲಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದರಿಂದ ಮುರಿದ ಮೂಳೆಗಳು ಬಲಗೊಳ್ಳುವುದು ಮತ್ತು ಬೇಗನೆ ಸರಿಯಾಗುವುದು.

English summary

These Foods Heal Broken Bones Naturally

The skeletal system consists of bones and these bones give shape to the body, protect organs and also give us support to carry out movement. So, it is very essential for us to ensure that we keep our bones, strong and healthy. Many times, due to various causes, the bones become weak or they may even break, leading to serious consequences. When the bones break, it takes a long time for them to heal and get fused back together. In some cases, the bones may never be able to be fused back together, and certain surgical procedures may be required to fix them. There are a number of natural ways that can help repair broken bones too and they involve certain healthy foods.
X
Desktop Bottom Promotion