For Quick Alerts
ALLOW NOTIFICATIONS  
For Daily Alerts

ಪುರುಷರು ಮಿಸ್ ಮಾಡದೇ ಸೇವಿಸಲೇಬೇಕಾದ ಎಂಟು ಆಹಾರಗಳು

|

ನಾವು ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಹಾರವನ್ನು ಮಿತವಾಗಿ ಸೇವನೆ ಮಾಡಬೇಕು ಎನ್ನುವ ಮಾತಿದೆ. ಆದರೆ ಇಂದಿನ ದಿನಗಳಲ್ಲಿ ಸಮಯದ ಅಭಾವ ಹಾಗೂ ವ್ಯಸ್ತ ಜೀವನದಿಂದಾಗಿ ಒಳ್ಳೆಯ ಆಹಾರವೆನ್ನುವುದು ನಮ್ಮಿಂದ ದೂರವಾಗುತ್ತಿದೆ. ಕೇವಲ ಹೊಟ್ಟೆಯ ಹಸಿವು ತಣಿಸುವ ಸಲುವಾಗಿ ಮಾತ್ರ ಆಹಾರ ಸೇವನೆ ಮಾಡುತ್ತೇವೆ.

ಆದರೆ ಈ ಲೇಖನದಲ್ಲಿ ಪುರುಷರು ಪ್ರತಿನಿತ್ಯವು ಸೇವಿಸಲೇಬೇಕಾದ ಎಂಟು ಆಹಾರಗಳ ಬಗ್ಗೆ ತಿಳಿಸಿಕೊಡಲಾಗಿದೆ. ಈ ಪಟ್ಟಿಯನ್ನು ಪುರುಷರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಆದರೆ ಮಹಿಳೆಯರು ಕೂಡ ಇದನ್ನು ಸೇವಿಸಬಹುದು. ಬೆಳಗ್ಗಿನ ಉಪಾಹಾರದಿಂದ ರಾತ್ರಿ ಊಟದ ತನಕ ಏನೇನು ಸೇವಿಸಬಹುದು ಎಂದು ನೀವು ತಿಳಿಯಿರಿ.

ಪಾಲಕ್ ಸೊಪ್ಪು ಹಾಗೂ ಬಸಲೆ

ಪಾಲಕ್ ಸೊಪ್ಪು ಹಾಗೂ ಬಸಲೆ

ಹಸಿರೆಲೆ ತರಕಾರಿಯಾಗಿರುವಂತಹ ಪಾಲಕ್ ಸೊಪ್ಪು ಹಾಗೂ ಬಸಲೆಯು ಪುರುಷರ ಆಹಾರವಾಗಿದೆ. ಈ ಉದ್ದಗಿನ ಹಸಿರೆಲೆ ತರಕಾರಿಯಲ್ಲಿ ಒಮೆಗಾ-3 ಮತ್ತು ಫಾಲಟ್ ಇದೆ. ಈ ಕಾರಣದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಸ್ಥಿರಂಧ್ರತೆ ತಡೆಯುವುದು. ಫಾಲಟೆಯಿಂದಾಗಿ ಶಿಶ್ನಕ್ಕೆ ರಕ್ತ ಸಂಚಾರವು ಹೆಚ್ಚಾಗುವುದು. ಇದರಲ್ಲಿ ಇರುವಂತಹ ಲುಟೇನ್ ಎನ್ನುವ ಅಂಶವು ವಯಸ್ಸಿಗೆ ಸಂಬಂಧಿಸಿದಂತಹ ಅಕ್ಷಿಪಟಲದ ಅವನತಿಯನ್ನು ತಡೆಯುವುದು.

ಮೊಸರು

ಮೊಸರು

ವಿಶ್ವದ ವಿವಿಧ ಭಾಗಗಳಲ್ಲಿ ಮೊಸರನ್ನು ಹಲವಾರು ರೀತಿಯಿಂದ ತಯಾರಿಸಿಕೊಳ್ಳುವರು. ಆದರೆ ಸುಮಾರು 2 ಸಾವಿರ ವರ್ಷಗಳ ಹಳೆಯ ಆರೋಗ್ಯಕಾರಿ ಆಹಾರವು ಹಲವಾರು ರೀತಿಯ ಲಾಭಗಳನ್ನು ನೀಡುವುದು. ಹುದುಗುವಿಕೆಯು ಪ್ರೋಬಯೋಟಿಕ್ ಜೀವಿಗಳು ನಿರ್ಮಾಣವಾಗಿ ಇದರಿಂದ ದೇಹದಕ್ಕೆ ಬೇಕಾಗುವ ತುಂಬಾ ಒಳ್ಳೆಯ ಬ್ಯಾಕ್ಟೀರಿಯಾಗಳು ನಿರ್ಮಾಣವಾಗುವುದು. ಇದರಿಂದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು ಮತ್ತು ಕ್ಯಾನ್ಸರ್ ನಿಂದಲೂ ರಕ್ಷಣೆ ನೀಡುವುದು. ಎಲ್ಲಾ ರೀತಿಯ ಮೊಸರು ಪ್ರೋಬಯೋಟಿಕ್ ಆಗಿರುವುದಿಲ್ಲ. ಆದರೆ ನೀವು ಸಾವಯವ ಮೊಸರನ್ನು ತಯಾರಿಸಿಕೊಳ್ಳಿ. ಇನ್ನು ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಆಮ್ಲವಾಗಿ ಪರಿವರ್ತಿತವಾಗುತ್ತದೆ. ಈ ಆಮ್ಲವೇ ಮೊಸರಿನ ಹುಳಿಯಾದ ರುಚಿಗೆ ಕಾರಣವಾಗಿದ್ದು ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

ಟೊಮೆಟೊ

ಟೊಮೆಟೊ

ಟೊಮೆಟೊ ಬಗ್ಗೆ ಎರಡು ವಿಷಯವನ್ನು ನೀವು ಅರಿಯಬೇಕಾಗಿದೆ. ಅದೇನೆಂದರೆ ಕೆಂಪು ಟೊಮೆಟೊಗಳು ಅತ್ಯುತ್ತಮವಾಗಿರುವಂತದ್ದಾಗಿದೆ. ಯಾಕೆಂದರೆ ಇದರಲ್ಲಿ ಲೈಕೋಪೆನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಅದೇ ರೀತಿ ಸಂಸ್ಕರಿತ ಟೊಮೆಟೊದಲ್ಲಿ ಕೂಡ ತಾಜಾ ಟೊಮೆಟೊದಷ್ಟೇ ಗುಣಗಳು ಇವೆ. ಯಾಕೆಂದರೆ ದೇಹವು ಲೈಕೋಪೆನ್ ನ್ನು ಬೇಗನೆ ಹೀರಿಕೊಳ್ಳುವುದು. ಲೈಕೋಪೆನ್ ನಿಂದ ಸಮೃದ್ಧವಾಗಿರುವಂತಹ ಆಹಾರವು ಮೂತ್ರಕೋಶ, ಶ್ವಾಸಕೋಶ, ಪ್ರೊಸ್ಟೇಟ್, ಚರ್ಮ ಮತ್ತು ಹೊಟ್ಟೆಯ ಕ್ಯಾನ್ಸರ್ ನ್ನು ತಡೆಯುವುದು ಎಂದು ಅಧ್ಯಯನಗಳು ಹೇಳಿವೆ. ಇಷ್ಟು ಮಾತ್ರವಲ್ಲದೆ ಇದು ಅಪಧಮನಿ ಕಾಯಿಲೆಗಳ ಅಪಾಯವನ್ನು ತಗ್ಗಿಸುವುದು.

Most Read: ಅವಾಗವಾಗ ಬಲ ಭಾಗದಲ್ಲಿ ಕಾಡುವ ತಲೆ ನೋವಿಗೆ ಕಾರಣವೇನು?

ಕ್ಯಾರೆಟ್

ಕ್ಯಾರೆಟ್

ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದ ತರಕಾರಿಗಳು ಹಾಗೂ ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ಕ್ಯಾರೋಟನಾಯ್ಡ್ ಅಂಶಗಳು ಇರುವುದು. ಕೊಬ್ಬನ್ನು ಹೀರಿಕೊಳ್ಳುವ ಅಂಶವಾಗಿರುವ ಕ್ಯಾರೋಟನಾಯ್ಡ್ ಹಲವಾರು ವಿಧದ ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಷ್ಟು ಮಾತ್ರವಲ್ಲದೆ ಉರಿಯೂತದಿಂದ ಉಂಟಾಗುವಂತಹ ಕೆಲವೊಂದು ಕಾಯಿಲೆಗಳಾಗಿರುವ ಅಸ್ತಮಾ ಮತ್ತು ಸಂಧಿವಾತ ಅಪಾಯ ಮತ್ತು ಪರಿಣಾಮ ಕಡಿಮೆ ಮಾಡುವುದು. ಇದರಿಂದಾಗಿ ಕ್ಯಾರೆಟ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಬೇರೆ ಯಾವುದೇ ಹಣ್ಣುಗಳಲ್ಲಿ ಇಲ್ಲದೆ ಇರುವಷ್ಟು ಆ್ಯಂಟಿಆಕ್ಸಿಡೆಂಟ್ ಗಳು ಈ ಹಣ್ಣಿನಲ್ಲಿದೆ. ಬ್ಲೂಬೆರ್ರಿಗಳು ಕ್ಯಾನ್ಸರ್, ಮಧುಮೇಹ ಮತ್ತು ವಯಸ್ಸಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಯುವುದು. ಬ್ಲೂಬೆರ್ರಿಯಲ್ಲಿ ನಾರಿನಾಂಶ, ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ ಮತ್ತು ಇದು ಅಪಧಮನಿ ಆರೋಗ್ಯವನ್ನು ಕಾಪಾಡುವುದು.

ಕಪ್ಪು ಹುರುಳಿ

ಕಪ್ಪು ಹುರುಳಿ

ಎಲ್ಲಾ ಧಾನ್ಯಗಳು ಹೃದಯಕ್ಕೆ ತುಂಬಾ ಒಳ್ಳೆಯದು. ಆದರೆ ಕಪ್ಪು ಹುರುಳಿಯಷ್ಟು ಮೆದುಳಿನ ಶಕ್ತಿಯನ್ನು ವೃದ್ಧಿಸುವಂತಹ ಧಾನ್ಯಗಳು ಬೇರೆ ಸಿಗದು. ಇದರಲ್ಲಿ ಆಂಥೋಸಿಯಾನ್ಸಿಸ್ ಸಮೃದ್ಧವಾಗಿದೆ. ಆ್ಯಂಟಿಆಕ್ಸಿಡೆಂಟ್ ಆಗಿರುವಂತಹ ಈ ಅಂಶವು ಮೆದುಳಿನ ಕಾರ್ಯವನ್ನು ಸುಧಾರಣೆ ಮಾಡುವುದು.

ವಾಲ್‌ನಟ್ಸ್

ವಾಲ್‌ನಟ್ಸ್

ಹೃದಯದ ಆರೋಗ್ಯವನ್ನು ಕಾಪಾಡುವಂತಹ ಒಮೆಗಾ-3 ಕೊಬ್ಬಿನಾಮ್ಲವು ವಾಲ್ ನಟ್ ನಲ್ಲಿ ಸಾಲ್ಮನ್ ಮೀನಿಗಿಂತಲೂ ಹೆಚ್ಚಾಗಿದೆ. ರೆಡ್ ವೈನ್ ಗಿಂತಲೂ ಹೆಚ್ಚಿನ ಫಾಲಿ ಫಿನಾಲ್ ಗಳು ಇವೆ. ಕೋಳಿಯಷ್ಟೇ ಪ್ರೋಟೀನ್ ಇದರಲ್ಲೂ ಇದೆ. ವಾಲ್ ನಟ್ ನ್ನು ಫ್ರಾಂಕೆನ್ ಫುಟ್ ಎನ್ನಬಹುದು. ಆದರೆ ಇದು ಮರದಲ್ಲಿ ಬೆಳೆಯುತ್ತದೆ. ಬೇರೆಲ್ಲಾ ಬೀಜಗಳಲ್ಲಿ ಇದರ ಒಂದೆರಡು ಗುಣಗಳು ಮಾತ್ರ ಇರಬಹುದು. ಆದರೆ ಇದರಲ್ಲಿ ಎಲ್ಲಾ ಗುಣಗಳು ಇವೆ.

Most Read: ಪುರುಷರು ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ಸರಳ ಸಲಹೆಗಳು

ಓಟ್ಸ್

ಓಟ್ಸ್

ಆರೋಗ್ಯಕಾರಿ ಆಹಾರವಾಗಿರುವಂತಹ ಓಟ್ಸ್ ಎಫ್ ಡಿಎಯಿಂದಲೂ ಅಂಗೀಕಾರ ಪಡೆದುಕೊಂಡಿದೆ. ಇದರಲ್ಲಿ ಹೀರಿಕೊಳ್ಳುವ ನಾರಿನಾಂಶವಿದೆ. ಇದು ದೇಹದಲ್ಲಿ ಹೃದಯದ ಕಾಯಿಲೆಯ ಅಪಾಯ ಕಡಿಮೆ ಮಾಡುವುದು. ಓಟ್ಸ್ ನಲ್ಲಿ ಕಾರ್ಬ್ಸ್ ಇದೆ. ಆದರೆ ಈ ಸಕ್ಕರೆಯ ಬಿಡುಗಡೆಯನ್ನು ನಾರಿನಾಂಶವನ್ನು ನಿಧಾನವಾಗಿಸುವುದು. ½ ಕಪ್ ಓಟ್ಸ್ ನಲ್ಲಿ ಸುಮಾರು 10 ಗ್ರಾಂನಷ್ಟು ಪ್ರೋಟೀನ್ ಇದೆ. ಹೀಗಾಗಿ ಇದು ನಿಧಾನವಾಗಿ ಸ್ನಾಯುಗಳ ಬೆಳವಣಿಗೆಯ ಶಕ್ತಿಯನ್ನು ಬಿಡುಗಡೆ ಮಾಡುವುದು.

English summary

These Eight Foods Men Should Eat Every Day

Here are the list of eight foods that men should be eating every day. I know this list is made with men in mind, but these are foods women may want to consider adding to their diets as well. So while you're throwing a few blueberries on top of his cereal in the morning, you may want to add a few to yours as well.
Story first published: Thursday, November 29, 2018, 20:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more