For Quick Alerts
ALLOW NOTIFICATIONS  
For Daily Alerts

  ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಹದಿನೈದು ದಿನಗಳಲ್ಲಿಯೇ ದೇಹದ ತೂಕ ಇಳಿಯುವುದು

  By Divya Pandit
  |

  ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವವನ್ನು ನೀಡುವ ಹಣ್ಣು ಇದು. ಇದನ್ನು ಕೇವಲ ಬೇಸಿಗೆ ಸಮಯದಲ್ಲಷ್ಟೇ ಅಲ್ಲಾ ಎಲ್ಲಾ ಕಾಲದಲ್ಲಿ ಲಭ್ಯವಿದ್ದರೂ ಜನರು ಬಹಳ ಪ್ರೀತಿಯಿಂದ ಸೇವಿಸುತ್ತಾರೆ. ಸಮೃದ್ಧವಾದ ನೀರಿನಂಶ ಹಾಗೂ ಉತ್ತಮ ರುಚಿಯಿಂದ ಕೂಡಿರುವ ಈ ಹಣ್ಣನ್ನು ತೂಕ ಇಳಿಸುವ ಉದ್ದೇಶಕ್ಕೂ ಸಹ ಸೇವಿಸಬಹುದು. ಅತಿಯಾದ ತೂಕ ಹೊಂದಿದವರು ಕೆಲವು ದಿನಗಳ ಕಾಲ ಕಲ್ಲಂಗಡಿಯನ್ನು ಗಣನೀಯವಾಗಿ ಸೇವಿಸಿದರೆ ಬಹುಬೇಗ ತೂಕ ಇಳಿಸಬಹುದು.

  Watermelon

  ಹೌದು, ಕೆಲವು ತಜ್ಞರ ಪ್ರಕಾರ ಕಲ್ಲಂಗಡಿ ಹಣ್ಣು ಅಧಿಕ ಫೋಷಕಾಂಶಗಳ ಗುಣವನ್ನು ಹೊಂದಿದೆ. ಇದನ್ನು ಸೂಕ್ತ ರೀತಿಯಲ್ಲಿ ಸೇವಿಸುವುದರ ಮೂಲಕ ಬಹುಬೇಗ ತೂಕವನ್ನು ಇಳಿಸಬಹುದು. ಹೆಚ್ಚು ನೀರಿನಂಶದೊಂದಿಗೆ ಕೂಡಿರುವ ಇದು ಕಡಿಮೆ ಮಟ್ಟದ ಕ್ಯಾಲೋರಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಅತ್ಯುತ್ತಮವಾಗಿರುತ್ತವೆ. ನಿಯಮಿತವಾಗಿ ಸೂಕ್ತ ಕ್ರಮದಲ್ಲಿ ನಿತ್ಯ ಸೇವಿಸಿದರೆ ಬೊಜ್ಜು ಕರಗುವುದು.

  ಅಲ್ಲದೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹವನ್ನು ಕಡಿಮೆ ಮಾಡುವುದು. ನೀವು ಅಥವಾ ನಿಮ್ಮವರು ಅಧಿಕ ತೂಕವನ್ನು ಹೊಂದಿದ್ದೀರಿ, ತೂಕ ಇಳಿಸುವ ಸುಲಭ ಹಾಗೂ ಸರಳ ವಿಧಾನದ ಹುಡುಕಾಟದಲ್ಲಿ ಇದ್ದರೆ ಈ ಲೇಖನ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡುವುದು. ಹಾಗಾದರೆ ಬನ್ನಿ ತೂಕ ಇಳಿಸುವ ಪರಿ ಹೇಗೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  Watermelon

  ತೂಕ ಇಳಿಸಲು ಉತ್ತಮವಾದದ್ದು

  ಸಮತೋಲಿತ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಪುನಃಸ್ಥಾಪಿಸಲು ಬಯಸುವವರಿಗೆ ಕಲ್ಲಂಗಡಿ ಹಣ್ಣು ಅತ್ಯುತ್ತಮವಾದ ಆಹಾರ. ತೂಕ ಇಳಿಸಲು ಅದ್ಭುತ ರೀತಿಯಲ್ಲಿ ಸಹಾಯ ಮಾಡುವುದು. ತೂಕ ಇಳಿಸಲು ಸಹಾಯ ಮಾಡುವ ಹಣ್ಣುಗಳಲ್ಲಿ ಇದೂ ಇಂದು. ಬಹಬೇಗ ತೂಕ ಇಳಿಸಲು ಬಯಸುವವರು ತಾವು ಆಹಾರ ಸೇವಿಸುವ ಅವಧಿಯಲ್ಲಿ ಅಂದರೆ ಉಪಹಾರ ಮತ್ತು ಊಟದ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಆಗ ದೇಹದಲ್ಲಿರುವ ಕಲ್ಮಶ, ಲವಣಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇದರ ಸೇವನೆಯ ಪ್ರಮಾಣದ ವಿಚಾರದಲ್ಲಿ ಕೊಂಚ ಕಾಳಜಿಯನ್ನು ವಹಿಸಬೇಕಾಗುವುದು.

  ಎಷ್ಟು ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಮಾಡಬೇಕು?

  ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸುವಾಗ ನಿಗದಿತ ಪ್ರಮಾಣದಲ್ಲಿ ಹಣ್ಣನ್ನು ಸೇವಿಸುವುದನ್ನು ಮರೆಯಬಾರದು. ಒಂದು ಪ್ರಮಾಣದ ಪ್ರಕಾರ ಹೇಳುವುದಾದರೆ 1:10 ಅನುಪಾತ ಎನ್ನಬಹುದು. ಅಂದರೆ 60 ಕೆ.ಜಿ ತೂಕ ಇರುವವರು 6 ಕೆ.ಜಿ ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಒಂದು ಪ್ರಮಾಣದಲ್ಲಿ ಅಂದರೆ 150 ಕ್ಯಾಲೋರಿ ಇರುವಷ್ಟು ಕಲ್ಲಂಗಡಿ ಹಣ್ಣನ್ನು ದಿನದಲ್ಲಿ 8 ಬಾರಿ ಸೇವಿಸಬೇಕು. ಈ ಹಣ್ಣುಗಳು ಶೇ.97ರಷ್ಟು ನೀರಿನಂಶದಿಂದ ಕೂಡಿರುತ್ತದೆ. ಇದನ್ನು ಸೇವಿಸಿದಾಗ ಹೆಚ್ಚು ನೀರನ್ನು ಕುಡಿಯುವ ಅವಶ್ಯಕತೆ ಇರುವುದಿಲ್ಲ.

  ತಜ್ಞರು ಏನು ಹೇಳುತ್ತಾರೆ?

  ಪೌಷ್ಟಿಕಾಂಶದ ಪ್ರಕಾರ ಈ ವಿಧದ ಆಹಾರವನ್ನೇ ಸೇವಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇವು ಬಹಳಷ್ಟು ರಚನೆಯನ್ನು ಹೊಂದಿರುತ್ತವೆ. ಕಲ್ಲಂಗಡಿ ಹಣ್ಣಿನ ನಿಯಮಿತ ಸೇವನೆಯು ನೈಜತೆಯನ್ನು ಸಾಧಿಸಲು ಸಹಾಯಮಾಡುವುದು. ಇದು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುವುದು. ಸಮೃದ್ಧವಾದ ನೀರಿನಂಶ ಹಾಗೂ ಕಡಿಮೆ ಕ್ಯಾಲರಿ ಹೊಂದಿರುವುದರಿಂದ ತೂಕ ಇಳಿಸುವವರಿಗಷ್ಟೇ ಅಲ್ಲದೆ ಸಾಮಾನ್ಯ ವ್ಯಕ್ತಿಗಳಿಗೂ ಇದು ಬೇಸಿಗೆಯಲ್ಲಿ ಅತ್ಯುತ್ತಮವಾದ ಆಹಾರ ಎಂದು ಹೇಳಲಾಗುವತ್ತದೆ.

  Watermelon

  ಆರೋಗ್ಯದ ವಿಚಾರದಲ್ಲಿ ಕಲ್ಲಂಗಡಿ ಹಣ್ಣು

  - ದೇಹದಲ್ಲಿನ ಅಮೈನೋ ಆಮ್ಲದ ಒಂದು ರೀತಿಯ ಅರ್ಜಿನೈನ್ ಪ್ರಮಾಣವನ್ನು ಹೆಚ್ಚಿಸಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ. ಉತ್ತಮ ರಕ್ತ ಸಂಚಾರಕ್ಕೆ ಅನುಕೂಲವನ್ನು ಕಲ್ಪಿಸಿ ಕೊಡುತ್ತದೆ. ಹೃದಯಘಾತದಂತಹ ಸಮಸ್ಯೆಗಳನ್ನು ಇದು ತಡೆಗಟ್ಟುವುದು.

  - ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ವೀರ್ಯಾಣು ಪ್ರಮಾಣ ಹೆಚ್ಚುವುದು. ಪುರುಷರಲ್ಲಿ ಫಲವತ್ತತೆಯು ಹೆಚ್ಚುವುದು. ಮೂತ್ರವರ್ಧಕ ಮತ್ತು ದ್ರವವನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುವುದು. ದೇಹದಲ್ಲಿನ ತ್ಯಾಜ್ಯವನ್ನು ಸುಲಭವಾಗಿ ಹೊರ ಹಾಕಲು ಸಹಾಯ ಮಾಡುವುದು.

  - 100 ಗ್ರಾಂ. ಅಷ್ಟು ಕಲ್ಲಂಗಡಿ ಹಣ್ಣು 7 ಗ್ರಾಂ. ಸಕ್ಕರೆ ಮತ್ತು 32 ಗ್ರಾಂ. ಕ್ಯಾಲೋರಿಯನ್ನು ಹೊಂದಿರುತ್ತದೆ.

  - ನಾರಿನಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಜೀರ್ಣಕ್ರಿಯೆಯೂ ಸುಲಭವಾಗಿ ನಡೆಯುವುದು. ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಉತ್ತಮವಾದ ಹಣ್ಣು.

  Watermelon

  ಕಲ್ಲಂಗಡಿ ಹಣ್ಣಿನ ಆಹಾರವನ್ನು ಹೇಗೆ ಅನುಸರಿಸುವುದು?

  ಕಲ್ಲಂಗಡಿ ಹಣ್ಣಿನಿಂದ ತೂಕವನ್ನು ಸುಲಭವಾಗಿ ಇಳಿಸಬಹುದು. ಆದರೆ ಅದನ್ನು ಅತಿರೇಕವಾಗಿ ಸೇವಿಸಬಾರದು. ವಾರದಲ್ಲಿ 5 ದಿನ ನಿಗದಿತ ಪ್ರಮಾಣದಲ್ಲಿ ಸೇವಿಸಬಹುದು. ಮಿತಿಮೀರಿ ತಿನ್ನುವುದರಿಂದ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುವುದು.

  ನೆನಪಿಡಿ

  ಗರ್ಭಿಣಿಯರು ಮತ್ತು ಮಕ್ಕಳು ಈ ರೀತಿಯ ತೂಕ ನಷ್ಟದ ಕ್ರಮವನ್ನು ಅನುಸರಿಸಬಾರದು. ಕಲ್ಲಂಗಡಿ ಹಣ್ಣಿನಿಂದ ತೂಕ ನಷ್ಟ ಮಾಡುತ್ತಿರುವಾಗ ಅತಿಯಾದ ವ್ಯಾಯಾಮಗಳನ್ನು ಮಾಡಬಾರದು. ಯಾರು ಉತ್ತಮ ಯಕೃತ್ ಮತ್ತು ಕಿಡ್ನಿಯ ಆರೋಗ್ಯ ಹೊಂದಿದ್ದಾರೋ ಅಂತಹವರಿಗೆ ಇದು ಅತ್ಯುತ್ತಮವಾದ ಆಯ್ಕೆ. ಇದನ್ನು ಸೇವಿಸುವಾಗ ಕೆಲವು ಕಂದು ಬೀಜ ಹಾಗೂ ಚಿಯಾ ಬೀಜಗಳನ್ನು ಸಲಾಡ್‍ನೊಂದಿಗೆ ಸೇರಿಸಿಕೋಳ್ಳಬೇಕು. ಇಲ್ಲವಾದರೆ ಒಂದು ಗ್ಲಾಸ್ ಕಲ್ಲಂಗಡಿ ರಸವನ್ನು ಸೇವಿಸಬಹುದು.

  English summary

  The Watermelon Diet For Weight Loss

  The watermelon diet is a superb way of losing weight and it naturally detoxifies the body, without leaving you hungry. A watermelon diet means, you consume a watermelon all day during breakfast and dinner for 5 days and not more than that. If you are weighing 60 kg, you need to eat 6 kg of watermelon during the diet.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more