ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಬಲು ಉಪಕಾರಿ

Posted By: Hemanth
Subscribe to Boldsky

ಸೇಬು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಸೇಬಿನಲ್ಲಿರುವ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ ಹಾಗೂ ಬೋಲ್ಡ್ ಸ್ಕೈ ಓದುಗರಿಗಂತೂ ಇದು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಯಾಕೆಂದರೆ ಸೇಬಿನಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ ಹಲವಾರು ಲೇಖನಗಳ ಮೂಲಕ ತಿಳಿಸಲಾಗಿದೆ.

ಆದರೆ ಈ ಲೇಖನವನ್ನು ಸೇಬಿನ ಸಿಪ್ಪೆಯನ್ನು ತೆಗೆದು ತಿನ್ನುವವವರು ಓದಲೇಬೇಕು. ಯಾಕೆಂದರೆ ಸೇಬಿನ ಸಿಪ್ಪೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಅಡಗಿವೆ. ಇದರಿಂದ ಮುಂದಿನ ಸಲ ಸೇಬು ತಿನ್ನುವಾಗ ಅದರ ಸಿಪ್ಪೆ ಸಹಿತವಾಗಿ ತಿನ್ನಿರಿ. ಸಿಪ್ಪೆ ತೆಗೆದು ತಿಂದರೆ ನಿಮಗೆ ಹೆಚ್ಚಿನ ಪೋಷಕಾಂಶಗಳು ಸಿಗದು.

ದಿನಕ್ಕೊಂದು ಸೇಬು ಬಿಪಿ -ಹೃದಯ ಕಾಯಿಲೆಗಳನ್ನು ದೂರವಿಡುವುದು

ಇಂದಿನ ದಿನಗಳಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಬಳಸುವ ಕಾರಣದಿಂದಾಗಿ ಹೆಚ್ಚಿನವರು ಸಿಪ್ಪೆ ತೆಗೆದು ಸೇವನೆ ಮಾಡುವರು. ಆದರೆ ಸರಿಯಾಗಿ ತೊಳೆದುಕೊಂಡ ಬಳಿಕ ಸೇಬನ್ನು ಸಿಪ್ಪೆ ಸಹಿತ ಸೇವಿಸಿ. ಸೇಬಿನ ಸಿಪ್ಪೆಯಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಿಕೊಡಲಿದೆ, ಮುಂದೆ ಓದಿ..

ನೆನಪಿನ ಶಕ್ತಿಯ ರಕ್ಷಣೆ

ನೆನಪಿನ ಶಕ್ತಿಯ ರಕ್ಷಣೆ

ಸೇಬಿನ ಸಿಪ್ಪೆಯಲ್ಲಿ ಇರುವಂತಹ ಕ್ವೆರ್ಸೆಟಿನ್ ಎನ್ನುವ ಅಂಶವು ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು ಮತ್ತು ನೆನಪಿನ ಶಕ್ತಿ ಕುಂದದಂತೆ ರಕ್ಷಿಸುವುದು. ಇದು ಏಕಾಗ್ರತೆ ಹೆಚ್ಚಿಸುವುದು ಮತ್ತು ಮರೆವು ಕಡಿಮೆ ಮಾಡುವುದು. ಇದು ಸೇಬಿನ ಸಿಪ್ಪೆಯಲ್ಲಿ ಅತ್ಯುತ್ತಮ ಲಾಭ.

ಮಧುಮೇಹಕ್ಕೆ ಒಳ್ಳೆಯದು

ಮಧುಮೇಹಕ್ಕೆ ಒಳ್ಳೆಯದು

ಸೇಬಿನ ಸಿಪ್ಪೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವುದು. ಸೇಬಿನ ಸಿಪ್ಪೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಪಿಷ್ಟವನ್ನು ವಿಘಟಿಸಿ ಸಕ್ಕರೆಯಾಗಿ ಪರಿವರ್ತಿಸುವ ಕಿಣ್ವಗಳ ಚಟುವಟಿಕೆಯನ್ನು ಕಡಿಮೆ ಮಾಡುವುದು. ಇದರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದು.

ಕಣ್ಣಿನ ಸಮಸ್ಯೆ

ಕಣ್ಣಿನ ಸಮಸ್ಯೆ

ಸೇಬಿನ ಸಿಪ್ಪೆಯು ಕಣ್ಣಿನ ಪೊರೆಯ ಸಮಸ್ಯೆ ನಿವಾರಣೆ ಮಾಡುವುದು. ನೀವು ನಿಯಮಿತವಾಗಿ ಸೇಬನ್ನು ಅದರ ಸಿಪ್ಪೆ ಜತೆಗೆ ತಿಂದರೆ ಕಣ್ಣಿನ ಆರೋಗ್ಯವು ಉತ್ತಮವಾಗಿರುವುದು. ಇದು ಸೇಬಿನ ಸಿಪ್ಪೆಯ ಅದ್ಭುತ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

ಪಿತ್ತಗಲ್ಲುಗಳ ಚಿಕಿತ್ಸೆ

ಪಿತ್ತಗಲ್ಲುಗಳ ಚಿಕಿತ್ಸೆ

ಸೇಬಿನ ಸಿಪ್ಪೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ಮೂತ್ರಕೋಶದಲ್ಲಿ ಕಲ್ಲು ನಿರ್ಮಾಣವಾಗುವುದನ್ನು ತಡೆಯುವುದು. ಅತಿಯಾದ ಕೊಲೆಸ್ಟ್ರಾಲ್‌ನಿಂದ ಕಲ್ಲುಗಳು ಉಂಟಾಗುವುದು. ನಾರಿನಾಂಶವು ಕೊಲೆಸ್ಟ್ರಾಲ್ ನ್ನು ತೆಗೆಯುವುದು.

ಹಲ್ಲಿನ ಆರೋಗ್ಯ

ಹಲ್ಲಿನ ಆರೋಗ್ಯ

ಸೇಬಿನ ಸಿಪ್ಪೆಯು ವಸಡಿಗೆ ಹಾನಿಯಾಗುವುದು ಮತ್ತು ಹಲ್ಲುಗಳ ಕೆಡುವುದನ್ನು ತಪ್ಪಿಸುವುದು. ಸೇಬನ್ನು ಜಗಿಯುವುದರಿಂದ ಹಲ್ಲುಗಳು ಬಿಳಿಯಾಗುವುದು ಮತ್ತು ಬಾಯಿಯಲ್ಲಿ ಈ ಪ್ರಕ್ರಿಯೆ ವೇಳೆ ಉತ್ಪತ್ತಿಯಾಗುವ ಜೊಲ್ಲು ತುಂಬಾ ಆರೋಗ್ಯಕಾರಿ.

ರಕ್ತಹೀನತೆ ಸಮಸ್ಯೆ ಇರುವವರು

ರಕ್ತಹೀನತೆ ಸಮಸ್ಯೆ ಇರುವವರು

ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಗರ್ಭಿಣಿಯರಿಗೂ ಹೆಚ್ಚಿನ ರಕ್ತದ ಅವಶ್ಯಕತೆ ಇದೆ. ಸೇಬುಹಣ್ಣನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಸಿಪ್ಪೆಯಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಲಭ್ಯವಾಗುತ್ತದೆ. ಜೊತೆಗೇ ಕ್ಯಾಲ್ಸಿಯಂ, ಫಾಸ್ಪರಸ್, ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಸತು ಮೊದಲಾದ ಖನಿಜಗಳೂ ಲಭ್ಯವಾಗುತ್ತವೆ. ಈ ಎಲ್ಲವೂ ಹೊಸ ರಕ್ತಕಣಗಳ ಬೆಳವಣಿಗೆಗೆ ಪೂರಕವಾಗಿದ್ದು ರಕ್ತಹೀನತೆಯನ್ನು ಕಡಿಮೆಗೊಳಿಸುತ್ತವೆ.

ಮೂಳೆ ಮತ್ತು ಹಲ್ಲುಗಳ ದೃಢತೆಗೆ

ಮೂಳೆ ಮತ್ತು ಹಲ್ಲುಗಳ ದೃಢತೆಗೆ

ಸೇಬಿನ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಗೆ ಉತ್ತಮ ಸಹಕಾರ ನೀಡುತ್ತದೆ. ಅದರಲ್ಲೂ ಹಸಿರು ಸೇಬುಗಳ ಸಿಪ್ಪೆಯಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಟೊಳ್ಳಾಗಿದ್ದು ಗಾಳಿಗುಳ್ಳೆಗಳು ಮೂಡಿ ಮೂಳೆಗಳ ದೃಢತೆ ಕಡಿಮೆಯಾಗುವ ಓಸ್ಟಿಯೋಪೋರೋಸಿಸ್ (osteoporosis) ಎಂಬ ಕಾಯಿಲೆಯಿಂದ ಕಾಪಾಡುತ್ತದೆ.

ಅರ್ಸೋಲಿಕ್ ಆಮ್ಲ

ಅರ್ಸೋಲಿಕ್ ಆಮ್ಲ

ಸೇಬಿನ ಸಿಪ್ಪೆಯಲ್ಲಿರುವ ಅರ್ಸೋಲಿಕ್ ಆಮ್ಲ (ursolic acid) ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬೇಡುವುದರಿಂದ ಸಂಗ್ರಹವಾಗಿದ್ದ ಕೊಬ್ಬು ಶೀಘ್ರವಾಗಿ ಕರಗುತ್ತದೆ. ಪರಿಣಾಮವಾಗಿ ತೂಕ ಇಳಿಯಲು ನೆರವಾಗುತ್ತದೆ. ದಿನಕ್ಕೊಂದು ಸೇಬನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಆರೋಗ್ಯಕರವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು

ಸೇಬಿನ ಸಿಪ್ಪೆಯಲ್ಲಿರುವ ಫ್ಲೇವನಾಯ್ಡ್, ಫೈಟೋಕೆಮಿಕಲ್ಸ್ ಮತ್ತು ಆಂಡಿ ಆಕ್ಸಿಡೆಂಟುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದರಿಂದ ದೇಹ ಸೋಂಕು, ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಂದ ರಕ್ಷಣೆ ಪಡೆಯಲು ಹೆಚ್ಚು ಸಕ್ಷಮವಾಗುತ್ತದೆ.

ಕ್ಯಾನ್ಸರ್‌ಗಳಿಗೆ ರಾಮಬಾಣ

ಕ್ಯಾನ್ಸರ್‌ಗಳಿಗೆ ರಾಮಬಾಣ

ಸೇಬಿನ ಸಿಪ್ಪೆಯಲ್ಲಿ ಟ್ರೈಟರ್ಪೆನೋಯ್ಡ್ (triterpenoid) ಎಂಬ ಪೋಷಕಾಂಶವಿದೆ. ಇವು ಕ್ಯಾನ್ಸರ್‌ಗಳಿಗೆ ಕಾರಣವಾಗುವ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ತನ್ಮೂಲಕ ಯಕೃತ್, ಸ್ತನ ಮತ್ತು ಕರುಳಿನ ಕ್ಯಾನ್ಸರ್ ಬರುವುದನ್ನು ತಪ್ಪಿಸುತ್ತದೆ.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ಸೇಬಿನ ಸಿಪ್ಪೆಯಲ್ಲಿ ಕರಗದ ನಾರು ಮತ್ತು ಕರಗುವ ನಾರು ಎರಡೂ ಇವೆ. ವಾಸ್ತವವಾಗಿ ಇಡಿಯ ಸೇಬಿನ ಬಹುತೇಕ ನಾಕು ಅದರ ಸಿಪ್ಪೆಯಲ್ಲಿಯೇ ಇದೆ. ಈ ನಾರುಗಳು ಕರುಳುಗಳಲ್ಲಿ ಸುಲಭವಾಗಿ ಕರಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಜೊತೆಗೇ ರಕ್ತಸಂಚಾರ ಸುಗಮಗೊಳಿಸಲು ನೆರವಾಗಿ ಹೃದಯ ಆರೋಗ್ಯಕರ ಒತ್ತಡದಲ್ಲಿ ರಕ್ತವನ್ನು ದೂಡಲು ಕಾರಣವಾಗುತ್ತದೆ. ಈ ಕಾರಣದಿಂದ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ.

English summary

Surprising health Benefits of Apple peels

We all know that apple has many health benefits as it is rightly said that "apple a day keeps your doctor away". Do you know how important it is to eat apple along with it's peel? Most of the health benefits of apple are derived from it's peel. Are apple peels healthy? There are many health benefits of apple peel that we will share with you today. Today, Boldsky will share with you some health benefits of apple pees. Have a look at some apple peel uses for health.