For Quick Alerts
ALLOW NOTIFICATIONS  
For Daily Alerts

ಇಂತಹ ಪವರ್ ಫುಲ್ ಆಹಾರಗಳು ಪುರುಷರ ವೀರ್ಯ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತೆ

|

ಪುರುಷರಲ್ಲಿ ಬಂಜೆತನಕ್ಕೆ ವೀರ್ಯದ ಆರೋಗ್ಯವು ಅತೀ ಮುಖ್ಯವಾಗಿರುವುದು. ಇದರಲ್ಲಿ ವೀರ್ಯದ ಗಣತಿಯನ್ನು ಕೂಡ ಪರಿಗಣಿಸಲಾಗುತ್ತದೆ. ವೀರ್ಯದ ಗಣತಿಯು ಕಡಿಮೆ ಇದ್ದರೆ ಆಗ ಸಂತಾನಭಾಗ್ಯವು ಸಿಗದು. ವೀರ್ಯದ ಗಣತಿ ಇಂದಿನ ಜೀವನ ಶೈಲಿ, ಸತುವಿನ ಕೊರತೆ ಅಥವಾ ವಿಟಮಿನ್ ಕೊರತೆಯಿಂದ ಬರಬಹುದು.

ಇದರಿಂದ ವೀರ್ಯಗಣತಿಯನ್ನು ಹೆಚ್ಚಿಸಲು ಕೆಲವೊಂದು ಔಷಧಿಗಳು ಲಭ್ಯವಿದ್ದರೂ ಆಹಾರವನ್ನು ಬಳಸಿಕೊಂಡು ವೀರ್ಯದ ಗಣತಿ ಹೆಚ್ಚಿಸಬಹುದು. ವೀರ್ಯದ ಗಣತಿ ಹೆಚ್ಚಿಸುವಂತಹ ಅದ್ಭುತವಾದ ಆಹಾರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

ಮೊಟ್ಟೆ

ಮೊಟ್ಟೆ

ದಿನಕ್ಕೊಂದು ಮೊಟ್ಟೆ ತಿಂದರೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ಮೊಟ್ಟೆ ತಿಂದರೆ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ. ಇನ್ನು ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ6, ಬಿ12 ಥೈಮೆನ್, ರಿಬೊಫ್ಲಾವಿನ್ ಫೊಲಾಟೆ, ಕಬ್ಬಿಣ, ಫ್ರೋಸ್ಪರಸ್, ಮೆಗ್ನಿಶಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ, ಎಂದು ಹಲವಾರು ಅಧ್ಯಾಯನದಿಂದ ತಿಳಿದುಬಂದಿದೆ. ಅಲ್ಲದೆ ಮೊಟ್ಟೆಯು ಚತುರತೆ ಹೆಚ್ಚಿಸುವ ಕಾರಣದಿಂದಾಗಿ ಇದು ವೀರ್ಯಗಣತಿ ಹೆಚ್ಚಿಸಲು ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ವಿಟಮಿನ್ ಇ, ಪ್ರೋಟೀನ್ ಗಳನ್ನು ಹೊಂದಿರುವಂತಹ ಮೊಟ್ಟೆಯು, ವೀರ್ಯದ ಗಣತಿ ತಗ್ಗಿಸುವ ಫ್ರೀ ರ್ಯಾಡಿಕಲ್ ನಿಂದ ವೀರ್ಯದ ಕೋಶಗಳನ್ನು ಕಾಪಾಡುವುದು. ಇದರಲ್ಲಿರುವ ಪೋಷಕಾಂಶಗಳು ಬಲಿಷ್ಠ ಮತ್ತು ಆರೋಗ್ಯಕಾರಿ ವೀರ್ಯವನ್ನು ಉಂಟು ಮಾಡುವುದು. ಇದು ಫಲವತ್ತತೆಗೆ ಅತೀ ಅಗತ್ಯ.

ವೀರ್ಯಾಣುಗಳ ಸಂಖ್ಯೆ ವೃದ್ಧಿಸುವ ವಿಧಾನಗಳು

ಪಾಲಕ್

ಪಾಲಕ್

ಆರೋಗ್ಯಕಾರಿ ವೀರ್ಯವನ್ನು ಅಭಿವೃದ್ಧಿ ಪಡಿಸಲು ಫಾಲಿಕ್ ಆಮ್ಲವು ಅತೀ ಅಗತ್ಯವಾಗಿದೆ. ಪಾಲಕ್ ಮತ್ತು ಇತರ ಕೆಲವೊಂದು ಹಸಿರೆಲೆ ತರಕಾರಿಗಳು ಈ ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಫಾಲಟ್ ಮಟ್ಟವು ಕಡಿಮೆಯಾದಾಗ ಆರೋಗ್ಯಕಾರಿ ವೀರ್ಯದ ಉತ್ಪಾದನೆ ಕಡಿಮೆಯಾಗಬಹುದು. ಇದರಿಂದ ವೀರ್ಯವು ಅಂಡಾಣುಗಳನ್ನು ಮುಟ್ಟಲು ವಿಫಲವಾಗಬಹುದು. ವೀರ್ಯವು ಸರಿಯಾಗಿರದೆ ಇದ್ದರೆ ಆಗ ಮಗುವಿನಲ್ಲಿ ವಿಕಲಾಂಗತೆ ಬರುವ ಸಾಧ್ಯತೆಯು ಇದೆ.

ಬಾಳೆಹಣ್ಣು

ಬಾಳೆಹಣ್ಣು

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ. ಸೇಬಿಗಿಂತಲೂ ಬಾಳೆಹಣ್ಣನ್ನು ಆಯ್ದುಕೊಳ್ಳಲು ಇನ್ನೂ ಹಲವು ಕಾರಣಗಳಿವೆ. ಸುಲಭದರದಲ್ಲಿ ವರ್ಷಪೂರ್ತಿ ಎಲ್ಲೆಡೆ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಒಂದು ವೇಳೆ ಊಟ ಸಿಗದಿದ್ದ ಪಕ್ಷದಲ್ಲಿ ಎರಡು ಬಾಳೆಹಣ್ಣು ತಿಂದು ಒಂದು ಲೋಟ ನೀರು ಕುಡಿದರೂ ಊಟದಿಂದ ಸಿಗುವಷ್ಟೇ ಶಕ್ತಿ ಸಿಗುವ ಕಾರಣ ಇದೊಂದು ಪರಿಪೂರ್ಣ ಫಲವಾಗಿದೆ. ಇನ್ನು ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ1 ಮತ್ತು ಸಿ ಇದೆ. ಇದರಿಂದ ಆರೋಗ್ಯಕಾರಿ ವೀರ್ಯ ಮತ್ತು ವೀರ್ಯದ ಉತ್ಪತ್ತಿಯು ಹೆಚ್ಚಾಗುವುದು. ಈ ಉಷ್ಣವಲಯದ ಹಣ್ಣು ಬ್ರಾಮೆಲೈನ್ ಎನ್ನುವ ಅಪರೂಪದ ಕಿಣ್ವವನ್ನು ಹೊಂದಿದೆ. ಇದು ನೈಸರ್ಗಿಕವಾಗಿ ಉರಿಯೂತ ಶಮನಕಾರಿ ಕಿಣ್ವವಾಗಿದ್ದು, ಇದು ವೀರ್ಯಗಣತಿ ಮತ್ತು ಚತುರತೆ ಹೆಚ್ಚಿಸುವುದು.

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ಚಾಕಲೇಟ್ ಎಂದರೆ ಎಲ್ಲರಿಗೂ ಇಷ್ಟ ಆದರೆ ಚಾಕಲೇಟ್ ತಿನ್ನುವುದರಿಂದ ಹಲ್ಲು ಹುಳುಕಾಗುತ್ತದೆ ಅರೋಗ್ಯ ಕೆಡುತ್ತದೆ ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿಯೂ ಇರುತ್ತದೆ.ಆದರೆ ಡಾರ್ಕ್ ಚಾಕಲೇಟ್ ತಿನ್ನುವುದರಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆಗಳು ಕಂಡು ಹಿಡಿದಿವೆ. ಅದರಲ್ಲಿಯೂ ಡಾರ್ಕ್ ಚಾಕಲೇಟ್ ಯಾವಾಗಲೂ ಲೈಂಗಿಕಾಸಕ್ತಿ ಹೆಚ್ಚು ಮಾಡುವುದು. ಸ್ಟಾರ್ ಹೋಟೆಲ್ ಗಳಲ್ಲಿ ಹನಿಮೂನ್ ಗೆ ಹೋದರೆ ಅಲ್ಲಿ ಹಾಸಿಗೆ ಸಮೀಪದ ಟೇಬಲ್ ನಲ್ಲಿ ಡಾರ್ಕ್ ಚಾಕಲೇಟ್ ನಲ್ಲಿ ಅದ್ದಿರುವಂತಹ ಸ್ಟ್ರಾಬೆರಿಯನ್ನು ಇರಿಸಿರುವರು. ಇದು ವೀರ್ಯದ ಗಣತಿ ಕೂಡ ಹೆಚ್ಚು ಮಾಡುವುದು. ಇದರಲ್ಲಿ ಅಮಿನೋ ಆಮ್ಲವಾದ ಎಲ್-ಅರ್ಜಿನೈನ್ ಇದೆ. ಎಚ್ ಸಿಎಲ್ ವೀರ್ಯದ ಪ್ರಮಾಣ ಮತ್ತು ಗಣತಿ ಹೆಚ್ಚಿಸುವುದು. ಇದು ಉದ್ರೇಕದ ತೀವ್ರತೆಯನ್ನು ಕೂಡ ಹೆಚ್ಚು ಮಾಡುವುದು ಎನ್ನಲಾಗುತ್ತದೆ.

ಬ್ರಾಕೋಲಿ

ಬ್ರಾಕೋಲಿ

ಶತಾವರಿಯನ್ನು ಹೊರತುಪಡಿಸಿ ಸಂಪೂರ್ಣವಾಗಿ ಫಾಲಿಕ್ ಆಮ್ಲವಿರುವಂತಹ ಮತ್ತೊಂದು ಹಸಿರುವ ತರಕಾರಿಯೆಂದರೆ ಅದು ಬ್ರಾಕೋಲಿ. ವಿಟಮಿನ್ ಬಿ9ಎಂದು ಕರೆಯಲ್ಪಡುವಂತಹ ಫಾಲಿಕ್ ಆಮ್ಲವು ಮಹಿಳೆಯರಿಗೆ ಗರ್ಭಧರಿಸಲು ನೆರವಾಗುವುದು ಮತ್ತು ಇದು ಪುರುಷರಲ್ಲಿ ಫಲವತ್ತತೆಗೆ ಉಂಟು ಮಾಡಲು ಪ್ರಮುಖ ಅಂಶವಾಗಿದೆ. ಪ್ರತಿನಿತ್ಯ ಇದರ ಸೇವನೆಯಿಂದಾಗಿ ಶೇ. 70ರಷ್ಟು ವೀರ್ಯ ಗಣತಿಯು ಹೆಚ್ಚಾಗಿದೆ ಎಂದು ಹೇಳಲಾಗಿದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆ ಒಂದು ಪೋಷಕಾಂಶಗಳ ಆಗರವಾಗಿದ್ದು ಅತ್ಯಂತ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಕೆ ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಹೇರಳ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಅಷ್ಟೇ ಅಲ್ಲದೆ ವೀರ್ಯ ಗಣತಿಯನ್ನು ಹೆಚ್ಚು ಮಾಡುವಂತಹ ಮತ್ತು ವೀರ್ಯದ ಗುಣಮಟ್ಟವನ್ನು ಹೆಚ್ಚಿಸುವ ಅದ್ಭುತವಾಗಿರುವ ಹಣ್ಣು ಇದು. ಇದರಲ್ಲಿ ರಕ್ತನಾಳದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಇದರಲ್ಲಿವೆ. ಫ್ರೀ ರ್ಯಾಡಿಕಲ್ ನ್ನು ಪರೀಕ್ಷಿಸದೆ ಇದ್ದರೆ ಆಗ ಅದು ವೀರ್ಯಾಣುವನ್ನು ನಾಶ ಮಾಡಿ, ವೀರ್ಯಗಣತಿ ತಗ್ಗಿಸುವುದು. ದಾಳಿಂಬೆ ಹಣ್ಣಿನ ಜ್ಯೂಸ್ ವೀರ್ಯ ಗಣತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹಲವಾರು ವರ್ಷಗಳಿಂದ ಕಂಡುಕೊಳ್ಳಲಾಗಿದೆ.

ಅಕ್ರೋಟ್

ಅಕ್ರೋಟ್

ಅಕ್ರೋಟದಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ತುಂಬಿಕೊಂಡಿದ್ದು, ಇದು ಜನನೇಂದ್ರಿಯಗಳಿಗೆ ಸರಿಯಾಗಿ ರಕ್ತಸಂಚಾರವನ್ನು ಉಂಟುಮಾಡಿ ವೀರ್ಯದ ಪ್ರಮಾಣ ಮತ್ತು ಉತ್ಪತ್ತಿಯನ್ನು ಹೆಚ್ಚು ಮಾಡುವುದು. ಇದರಲ್ಲಿ ಅರ್ಜಿನಿನ್ ಇದ್ದು, ವೀರ್ಯದ ಪ್ರಮಾಣ ಹೆಚ್ಚು ಮಾಡುವುದು. ಇತರ ಬೀಜಗಳಿಗಿಂತ ಇದರಲ್ಲಿ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಇದೆ. ಇದು ರಕ್ತನಾಳಗಳಲ್ಲಿ ಇರುವಂತಹ ವಿಷಕಾರಿ ಅಂಶಗಳ ವಿರುದ್ಧ ಹೋರಾಡುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಅಡುಗೆಯ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ಅಜೀರ್ಣತೆ ಮತ್ತು ಇದರ ಮೂಲಕ ಎದುರಾಗುವ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ಇನ್ನು ಪ್ರತಿರೋಧಕ ಶಕ್ತಿ ಹೆಚ್ಚಿಸುವಂತಹ ಅತ್ಯುತ್ತಮ ಆಹಾರ ಬೆಳ್ಳುಳ್ಳಿ ಎಂದು ವಿಶ್ವದೆಲ್ಲೆಡೆಯಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ಇರುವಂತಹ ವಿಟಮಿನ್ ಬಿ6 ಮತ್ತು ಸೆಲೆನಿಯಂ ಆರೋಗ್ಯಕಾರಿ ವೀರ್ಯದ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು. ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿರುವ ಬೆಳ್ಳುಳ್ಳಿಯು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು ಮತ್ತು ಜನನೇಂದ್ರಿಯಗಳಿಗೆ ಸರಿಯಾಗಿ ರಕ್ತಸಂಚಾರವಾಗುವಂತೆ ಮಾಡುವುದು.

English summary

Super Foods That Increase Sperm Count

A low sperm count has often been linked with factors such as a zinc deficiency or a lack of vitamins. So, making some nutritional changes can be a great way to bring that sperm count up.That’s why we’ve put together a list of foods you definitely need to get on his Trying To Conceive menu.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more