For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣು ಅತಿಯಾಗಿ ಕೂಡ ಸೇವಿಸಬಾರದಂತೆ! ಇದರಿಂದ ಅಡ್ಡಪರಿಣಾಮಗಳೇ ಜಾಸ್ತಿಯಂತೆ!

|

ಅತಿಯಾದರೆ ಅಮೃತವು ವಿಷ ಎನ್ನವು ಮಾತಿದೆ. ನಾವು ಸೇವಿಸುವಂತಹ ಆಹಾರವು ಇದಕ್ಕೆ ಹೊರತಾಗಿಲ್ಲ. ಯಾವುದೇ ಆಹಾರವನ್ನು ನಾವು ದಿನದಲ್ಲಿ ಅತಿಯಾಗಿ ಸೇವನೆ ಮಾಡಬಾರದು. ಇದರಿಂದ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. ಬಾಳೆಹಣ್ಣು ಹೆಚ್ಚಿನವರಿಗೆ ಇಷ್ಟವಾಗುವುದು. ಇದು ರುಚಿಕರ ಮಾತ್ರವಲ್ಲದೆ, ಹಲವಾರು ರೀತಿಯ ಪೋಷಕಾಂಶಗಳು ಕೂಡ ಇದರಲ್ಲಿಇದೆ. ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಭಾವಿಸಲಾಗಿದೆ. ಹೆಚ್ಚಾಗಿ ಇದನ್ನು ಸೀರಲ್, ಸ್ಮೂಥಿ, ಮೊಸರು, ಕೇಕ್, ಬ್ರೆಡ್, ಮಫಿನ್ ಅಥವಾ ಸಿಹಿತಿಂಡಿಗಳಿಗೆ ಬಳಕೆ ಮಾಡುವರು ಅಥವಾ ಹಾಗೆ ಸೇವನೆ ಮಾಡುವರು.

Side Effects Of Eating Too Many Bananas

ವೈವಿದ್ಯಮವಾಗಿರುವಂತಹ ಬಾಳೆಹಣ್ಣಿನಲ್ಲಿ ಶಕ್ತಿಯಿದೆ, ತೂಕ ಕಳೆದುಕೊಳ್ಳಲು ಸಹಕಾರಿ, ಹೊಟ್ಟೆ ಉಬ್ಬರ ತಗ್ಗಿಸುವುದು, ಹೃದಯ ಆರೋಗ್ಯ ಕಾಪಾಡುವುದು, ಕಿಡ್ನಿಯಲ್ಲಿ ಕಲ್ಲುಗಳು ನಿರ್ಮಾಣವಾಗದಂತೆ ತಡೆಯುವುದು ಮತ್ತು ಅಜೀರ್ಣ ನಿವಾರಣೆ ಮಾಡುವುದು. ಬಾಳೆಹಣ್ಣು ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಅದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು. ಅತಿಯಾಗಿ ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳು ಅಡ್ಡಪರಿಣಾಮವಾಗಿ ಬದಲಾಗಬಹುದು. ನೀವು ಬಾಳೆಹಣ್ಣು ಪ್ರಿಯರಾಗಿದ್ದರೆ ಆಗ ಅತಿಯಾಗಿ ಬಾಳೆಹಣ್ಣು ಸೇವಿಸುವ ಅಡ್ಡಪರಿಣಾಮಗಳು ಏನು ಎಂದು ತಿಳಿಯಿರಿ.

ಮ್ಯಾಕ್ರೊಬಯೋಟಿಕ್ ಪೌಷ್ಟಿಕಾಂಶ ಮತ್ತು ಆರೋಗ್ಯ ತಜ್ಞರ ಪ್ರಕಾರ

ಮ್ಯಾಕ್ರೊಬಯೋಟಿಕ್ ಪೌಷ್ಟಿಕಾಂಶ ಮತ್ತು ಆರೋಗ್ಯ ತಜ್ಞರ ಪ್ರಕಾರ

"ನಾವು ಸೇವಿಸುವಂತಹ ಆಹಾರವು ಸೂಕ್ಷ್ಮ ಪೋಷಕಾಂಶಗಳು ಹಾಗೂ ಸ್ಥೂಲ ಪೋಷಕಾಂಶಗಳಿಂದ ಕೂಡಿರಬೇಕು. ಬಾಳೆಹಣ್ಣಿನಲ್ಲಿ ಹೆಚ್ಚಿನ ಮಟ್ಟ ನಾರಿನಾಂಶ ಮತ್ತು ಪೋಷಕಾಂಶಗ ಆಗರವಿದೆ. ಯಾವುದೇ ಆದರೂ ಅತಿಯಾದರೆ ಒಳ್ಳೆಯದಲ್ಲ. ಕೆಲವು ಜನರು ಬಾಳೆಹಣ್ಣಿನ ಆಹಾರ ಪಥ್ಯ ಮಾಡುವರು. ಇದಕ್ಕಾಗಿ ಅವರು ಇಡೀ ದಿನ ಬಾಳೆಹಣ್ಣು ಸೇವಿಸುತ್ತಾ ಇರುವರು. ಕೇವಲ ಬಾಳೆಹಣ್ಣನ್ನು ತಿನ್ನುತ್ತಲಿದ್ದರೆ ಆಗ ದೇಹಕ್ಕೆ ಬೇಕಾಗುವಂತಹ ಪ್ರೋಟೀನ್ ಮತ್ತು ಕೊಬ್ಬು ಸಿಗುವುದಿಲ್ಲ"

Most Read: ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಆರೋಗ್ಯ ತಜ್ಞರ ಪ್ರಕಾರ

ಆರೋಗ್ಯ ತಜ್ಞರ ಪ್ರಕಾರ

ದೈನಂದಿನ ಚಟುವಟಿಕೆಗೆ ಅನುಗುಣವಾಗಿ ಅತಿಯಾಗಿ ಏನನ್ನು ತಿಂದರೂ ಅದು ದೇಹಕ್ಕೆ ಒಳ್ಳೆಯದಲ್ಲ. ಅತಿಯಾಗಿ ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ಆರೋಗ್ಯ ಸಮಸ್ಯೆಗಳಾಗಿರುವಂತಹ ತೂಕ ಹೆಚ್ಚಳ, ಸಕ್ಕರೆ ಪ್ರಮಾಣ ಹೆಚ್ಚಳ ಮತ್ತು ಕೆಲವೊಂದು ಸಲ ತಲೆನೋವು ಹಾಗೂ ನಿದ್ರೆಗೆ ಹಾನಿಯುಂಟು ಮಾಡುವುದು. ಬಾಳೆಹಣ್ಣಿನಲ್ಲಿ ಟೈರೋಸಿನ್ ಎನ್ನುವ ಅಮಿನೋ ಆಮ್ಲವಿದೆ. ಇದು ದೇಹದಲ್ಲಿ ಟೈರೊಮಿನ್ ಆಗಿ ಪರಿವರ್ತನೆಯಾಗುವುದು. ಟೈರೊಮಿನ್ ನಿಂದಾಗಿ ಮೈಗ್ರೇನ್ ತಲೆನೋವು ಮತ್ತು ನೋವು ಬರಬಹುದು.

ಬಾಳೆಹಣ್ಣಿನಲ್ಲಿ ಪಿಷ್ಠದ ಪ್ರಮಾಣ ಹೆಚ್ಚಾಗಿರುತ್ತದೆ

ಬಾಳೆಹಣ್ಣಿನಲ್ಲಿ ಪಿಷ್ಠದ ಪ್ರಮಾಣ ಹೆಚ್ಚಾಗಿರುತ್ತದೆ

ಬಾಳೆಹಣ್ಣಿನಲ್ಲಿ ಪಿಷ್ಠದ ಪ್ರಮಾಣವು ಹೆಚ್ಚಾಗಿರುವ ಕಾರಣದಿಂದಾಗಿ ಇದು ದಂತಕುಳಿಗೆ ಕಾಣವಾಗಬಹುದು. ಚಾಕಲೇಟ್, ಚೂಯಿಂಗ್ ಗಮ್ ಅಥವಾ ಕ್ಯಾಂಡಿಗಳು ಉಂಟು ಮಾಡುವ ಪರಿಣಾಮಕ್ಕಿಂತ ಹೆಚ್ಚಾಗಿ ಇದು ಹಲ್ಲುಗಳಿಗೆ ಹಾನಿ ಉಂಟು ಮಾಡಬಹುದು. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಇದ್ದು, ಅತಿಯಾಗಿ ಇದನ್ನು ಸೇವನೆ ಮಾಡಿದರೆ ನರಗಳಿಗೆ ಹಾನಿಯಾಗಬಹುದು. ಅಸ್ತಮಾದಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಬಾಳೆಹಣ್ಣನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಾರದು. ಇದು ಉರಿಯೂತಕ್ಕೆ ಕಾರಣವಾಗುವುದು ಮತ್ತು ಅಲರ್ಜಿ ಉಂಟು ಮಾಡುವುದು. ಹೀಗಾಗಿ ಉಸಿರಾಟಕ್ಕೆ ತೊಂದರೆಯಾಗಬಹುದು"

ಮಲಬದ್ಧತೆ

ಮಲಬದ್ಧತೆ

ಮಾಗದ ಬಾಳೆಹಣ್ಣಿನಲ್ಲಿ ಹೆಚ್ಚಿನ ಪಿಷ್ಠವು ಇರುವ ಕಾರಣದಿಂದಾಗಿ ಇದು ಮಲಬದ್ಧತೆ ಉಂಟು ಮಾಡಬಹುದು. ಯಾಕೆಂದರೆ ಇದನ್ನು ದೇಹಕ್ಕೆ ಕರಗಿಸಲು ತುಂಬಾ ಕಷ್ಟವಾಗಬಹುದು. ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎನ್ನುವ ನಾರಿನಾಂಶವಿದ್ದು, ಇದು ಕರುಳಿನ ನೀರನ್ನು ಹೀರಿಕೊಳ್ಳುವುದು. ಇದರಿಂದಾಗಿ ನಿಮಗೆ ಮಲಬದ್ಧತೆ ಹಾಗೂ ನಿರ್ಜಲೀಕರಣವು ಉಂಟಾಗಬಹುದು.

Most Read:ನೋಡಿ, ಈ ಸಮಸ್ಯೆ ಇರುವವರು, ಆದಷ್ಟು ಬಾಳೆಹಣ್ಣಿನಿಂದ ದೂರವಿರಿ..

ಪೋಷಕಾಂಶಗಳ ಅಸಮತೋಲನ

ಪೋಷಕಾಂಶಗಳ ಅಸಮತೋಲನ

ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಪೋಷಕಾಂಶಗಳು ಸಮತೋಲನದಲ್ಲಿರಬೇಕು. ಹೊಟ್ಟೆಯಲ್ಲಿ ಬಾಳೆಹಣ್ಣು ಹೆಚ್ಚಿನ ಜಾಗವನ್ನು ಪಡೆದುಕೊಂಡರೆ, ಆಗ ಬೇರೆ ಒಳ್ಳೆಯ ಆಹಾರಗಳಿಗೆ ಜಾಗವಿರದು. ಯುಎಸ್ ಡಿಎ ಮಾರ್ಗಸೂಚಿಯ ಪ್ರಕಾರ ದಿನದಲ್ಲಿ ಎರಡು ಕಪ್ ಹಣ್ಣುಗಳನ್ನು ಸೇವಿಸಬೇಕು. ಇದು ಒಂದು ದೊಡ್ಡ ಬಾಳೆಹಣ್ಣಿಗೆ ಸಮಾನವಾಗಿರುವುದು. ಹೀಗಾಗಿ ದೇಹಕ್ಕೆ ಹೆಚ್ಚಿನ ತರಕಾರಿ, ಧಾನ್ಯಗಳು, ಪ್ರೋಟೀನ್ ಇತ್ಯಾದಿಗಳು ಸಿಗುವುದು.

ಅತಿಯಾದ ನಾರಿನಾಂಶವು ಜೀರ್ಣಕ್ರಿಯೆಗೆ ಸಮಸ್ಯೆಯಾಗುವುದು

ಅತಿಯಾದ ನಾರಿನಾಂಶವು ಜೀರ್ಣಕ್ರಿಯೆಗೆ ಸಮಸ್ಯೆಯಾಗುವುದು

ಮಿತವಾದ ನಾರಿನಾಂಶವು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ಅತಿಯಾದ ಪ್ರಮಾಣದಲ್ಲಿ ನಾರಿನಾಂಶವನ್ನು ಸೇವನೆ ಮಾಡಿದರೆ ಅದರಿಂದ ಹೊಟ್ಟೆಯಲ್ಲಿ ಸೆಳೆತ, ಗ್ಯಾಸ್, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅತಿಯಾಗಿ ನಾರಿನಾಂಶ ಸೇವನೆ ಮಾಡಿದರೆ ಆಗ ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶದ ಹೀರಿಕೊಳ್ಳುವಿಕೆಗೆ ಕಷ್ಟವಾಗುವುದು.

ತೂಕ ಹೆಚ್ಚಳ

ತೂಕ ಹೆಚ್ಚಳ

ಬಾಳೆಹಣ್ಣಿನಲ್ಲಿ ಕ್ಯಾಲರಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಒಳ್ಳೆಯ ತಿಂಡಿಯು ಆಗಿರುವುದು. ಆದರೆ ನೀವು ಎರಡಕ್ಕಿಂತ ಹೆಚ್ಚಿನ ಬಾಳೆಹಣ್ಣು ಸೇವನೆ ಮಾಡಿದರೆ ಆಗ ದೇಹಕ್ಕೆ 300 ಕ್ಯಾಲರಿಗಿಂತ ಹೆಚ್ಚು ಸಿಗುವುದು. ಇದರಿಂದ ನೀವು ದಿನಕ್ಕೆ ಎರಡು ಬಾಳೆಹಣ್ಣು ಮಾತ್ರ ಸೇವನೆ ಮಾಡಿ. ಬೇರೆ ಹಣ್ಣುಗಳನ್ನು ಸೇವನೆ ಮಾಡದೆ ಇದ್ದರೆ ಆಗ ಎರಡು ಬಾಳೆಹಣ್ಣು ಸಾಕು.

ನಿದ್ರಾಹೀನತೆ

ನಿದ್ರಾಹೀನತೆ

ಬಾಳೆಹಣ್ಣಿನಲ್ಲಿ ಟ್ರಿಪ್ಟೊಪಾನ್ ಎನ್ನುವ ಅಮಿನೋ ಆಮ್ಲವಿದೆ. ಇದು ಒಳ್ಳೆಯ ನಿದ್ರೆಗೆ ನೆರವಾಗುವುದು. ಬಾಳೆಹಣ್ಣಿನಲ್ಲಿ ಇರುವಂತಹ ಕಾರ್ಬ್ರೋಹೈಡ್ರೇಟ್ಸ್ ಗಳು ಅಮಿನೋ ಆಮ್ಲಗಳು ಮೆದುಳಿಗೆ ಪ್ರವೇಶಿಸದಂತೆ ತಡೆಯುತ್ತದೆ. ಇದರಿಂದ ಟ್ರಿಪ್ಟೊಪಾನ್ ಒಳಹರಿವು ಉಂಟಾಗಿ ಸೆರೊಟೊನಿನ್ ಉತ್ಪತ್ತಿಯು ಹೆಚ್ಚಾಗಬಹುದು. ಇದರಿಂದಾಗಿ ನಿದ್ರಾಹೀನತೆ ಬರಬಹುದು. ಬಾಳೆಹಣ್ಣಿನಲ್ಲಿ ಮೆಗ್ನಿಶಿಯಂ ಕೂಡ ಇರುವ ಕಾರಣದಿಂದಾಗಿ ಇದು ಸ್ನಾಯುಗಳಿಗೆ ಆರಾಮ ನೀಡುವುದು. ಇದು ಮತ್ತೊಂದು ಕಾರಣವಾಗಿದೆ.

ದಂತ ಆರೋಗ್ಯದ ಸಮಸ್ಯೆಗಳು

ದಂತ ಆರೋಗ್ಯದ ಸಮಸ್ಯೆಗಳು

ಬಾಳೆಹಣ್ಣು ಹೆಚ್ಚಿನ ಸಕ್ಕರೆಯಂಶವನ್ನು ಹೊಂದಿರುವ ಹಣ್ಣು. ಇದರಲ್ಲಿ ನೈಸರ್ಗಿಕ ಸಕ್ಕರೆಯಂಶವಿದೆ. ಇದು ಹಲ್ಲಿನ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಅತಿಯಾಗಿ ಸಕ್ಕರೆ ಸೇವನೆ ಮಾಡುವುದರಿಂದ ದಂತಕುಳಿ ಉಂಟಾಗಬಹುದು. ಅತಿಯಾಗಿ ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ದಂತಕವಚವು ಕಿತ್ತುಹೋಗಬಹುದು. ಇದರಿಂದ ಹಲ್ಲಿನ ಆರೋಗ್ಯ ಕೆಡುವುದು.

Most Read: ದಿನಕ್ಕೆ ಎರಡು ಬಾಳೆಹಣ್ಣು ತಿನ್ನಿ, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ !

ಕೊಬ್ಬು ತುಂಬಾ ಕಡಿಮೆ

ಕೊಬ್ಬು ತುಂಬಾ ಕಡಿಮೆ

ಬಾಳೆಹಣ್ಣಿನಲ್ಲಿ ಕೊಬ್ಬಿನ ಪ್ರಮಾಣವು ನಗಣ್ಯವಾಗಿರುವ ಕಾರಣದಿಂದಾಗಿ ಇದನ್ನು ತೂಕ ಇಳಿಸುವ ಆಹಾರ ಕ್ರಮಕ್ಕೆ ಬಳಸಿಕೊಳ್ಳಬಹುದು. ಅದಾಗ್ಯೂ, ಪ್ರತಿಯೊಬ್ಬರಿಗೂ ತಮ್ಮ ಆಹಾರ ಕ್ರಮದಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬಿನಾಂಶವು ಬೇಕಾಗಿರುವುದು. ನಾರಿನಾಂಶದ ಕೊಬ್ಬು ಮೆದುಳಿನ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತೀ ಅಗತ್ಯವಾಗಿರುವುದು. ಆರೋಗ್ಯಕರ ಕೊಬ್ಬು ಇರುವಂತಹ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಬಾಳೆಹಣ್ಣು ಅದ್ಭುತ ಆರೋಗ್ಯಕಾರಿ ಹಣ್ಣು. ಆದರೆ ಅತಿಯಾಗಿ ಸೇವನೆ ಮಾಡಿದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದಾಗಿ ನೀವು ದಿನದಲ್ಲಿ ಎರಡಕ್ಕಿಂತ ಹೆಚ್ಚು ಬಾಳೆಹಣ್ಣು ಸೇವನೆ ಮಾಡಬೇಡಿ.

English summary

Side Effects Of Eating Too Many Bananas

Bananas are not just delicious, but highly nutritious too. They make for a healthy snack, along with being an amazing addition to your cereal bowl, smoothie, yogurt, cake, breads, muffin or desserts. The versatile fruit can fill you with energy, helps you slim down, reduce bloating, protect your heart, prevent the development of kidney stones and relieves indigestion. Although bananas are healthy, it is said that eating, too, many of them may cause some or the other health problems.
X
Desktop Bottom Promotion