For Quick Alerts
ALLOW NOTIFICATIONS  
For Daily Alerts

ತಣ್ಣೀರು ಕುಡಿಯುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ

By Arshad
|

ಉಷ್ಣವಲಯದ ಪ್ರದೇಶದಲ್ಲಿ ವಾಸವಾಗಿರುವವರಿಗೆ ಮುಂಜಾನೆಯ ಒಂದು ಲೋಟ ತಣ್ಣೀರು ಕುಡಿಯುವುದು ಎಷ್ಟು ಆಹ್ಲಾದಕರವಾಗಿರುತ್ತದೆ ಎಂದು ಗೊತ್ತಿರುತ್ತದೆ. ಮುಂಜಾನೆ ಎದ್ದ ತಕ್ಷಣ ಒಂದು ಲೋಟ ತಣ್ಣೀರಿನ ಸೇವನೆ ಬಾಯಾರಿಕೆ ತಣಿಸಿ ತಾಜಾತನವನ್ನು ಹೆಚ್ಚಿಸುತ್ತದೆ. ತಣ್ಣೀರು ಎಂದರೆ ಇಡಿಯ ರಾತ್ರಿ ಫ್ರಿಜ್ಜಿನಲ್ಲಿಟ್ಟ ನೀರಲ್ಲ ಬದಲಿಗೆ ಒಂದು ಲೋಟದಲ್ಲಿ ಸುಮಾರು ಎರಡು ಅಥವಾ ಮೂರು ಚಿಕ್ಕ ಮಂಜುಗಡ್ಡೆಯ ತುಂಡುಗಳನ್ನು ಸೇರಿಸಿ ಅವು ಕರಗಿದ ಬಳಿಕ ನೀರಿನ ತಾಪಮಾನ ಸುಮಾರು ಹದಿನೈದು ಡಿಗ್ರಿಗೆ ಇಳಿಯುತ್ತದೆ.

ಈ ನೀರು ಅಥವಾ ಎಲ್ಲಕ್ಕಿಂತ ಉತ್ತಮ ಎಂದರೆ ಮಡಕೆಯಲ್ಲಿಟ್ಟು ತಣ್ಣಗಾಗಿರುವ ನೀರು. ಈ ತಣ್ಣೀರಿನ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ....

ಬೆಳಿಗ್ಗೆದ್ದ ತಕ್ಷಣ ಒಂದು ಲೋಟ ತಣ್ಣೀರಿನ ಸೇವನೆ

ಬೆಳಿಗ್ಗೆದ್ದ ತಕ್ಷಣ ಒಂದು ಲೋಟ ತಣ್ಣೀರಿನ ಸೇವನೆ

ನಮ್ಮ ದೇಹದ ಪ್ರತಿ ಅಂಗಕ್ಕೂ ನೀರು ಅವಶ್ಯಕ. ರಾತ್ರಿಯ ನಿದ್ದೆಯ ಸಮಯದಲ್ಲಿ ನಡೆಯುವ ಅನೈಚ್ಛಿಕ ಹಾಗೂ ಇತರ ಜೀವ ರಾಸಾಯನಿಕ ಕ್ರಿಯೆಗಳ ಮೂಲಕ ದೇಹ ನೀರನ್ನು ಬಳಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗಿನ ಪ್ರಥಮ ಅಹಾರವಾಗಿ ನೀರು ಕುಡಿಯುವುದು ಅವಶ್ಯ. ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ತಣ್ಣೀರನ್ನು ಕುಡಿಯುವುದು ಅತ್ಯಂತ ಆರೋಗ್ಯಕರವಾಗಿದೆ. ತಣ್ಣೀರಿನ ಸೇವನೆಯಿಂದ ದೇಹದ ತಾಪಮಾನವನ್ನು ಉಳಿಸಿಕೊಳ್ಳಲು ಹಾಗೂ ದಿನವಿಡೀ ತಾಜಾತನವನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗಗಳಿಗೂ ತಮ್ಮ ಪಾಲಿನ ನೀರು ದೊರಕುತ್ತದೆ ಹಾಗೂ ಹೊಸರಕ್ತಕಣಗಳು ಉತ್ಪತ್ತಿಯಾಗಲು ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

 ದೇಹದ ತಾಪಮಾನ ಉಳಿಸಿಕೊಳ್ಳಲು ನೆರವಾಗುತ್ತದೆ

ದೇಹದ ತಾಪಮಾನ ಉಳಿಸಿಕೊಳ್ಳಲು ನೆರವಾಗುತ್ತದೆ

ದೇಹದ ತಾಪಮಾನವನ್ನು ಕಡಿಮೆ ಮಾಡಲು ತಣ್ಣೀರು ನೆರವಾಗುತ್ತದೆ ಹಾಗೂ ಈ ಮೂಲಕ ಬೆವರಿನ ಮೂಲಕ ಕಳೆದುಕೊಂಡಿದ್ದ ನೀರು ಹಾಗೂ ಎಲೆಕ್ಟ್ರೋಲೈಟುಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ವಿಶೇಷವಾಗಿ ದೈಹಿಕ ವ್ಯಾಯಾಮ ಹಾಗೂ ನಿದ್ದೆಯಿಂದ ಎದ್ದ ಬಳಿಕ (ಹೆಚ್ಚಿನವರು ನಿದ್ದೆಯ ಸಮಯದಲ್ಲಿ ಹೆಚ್ಚು ಬೆವರುತ್ತಾರೆ) ದೇಹ ಹೆಚ್ಚು ಬೆವರಿನ ಮೂಲಕ ನೀರು ಕಳೆದುಕೊಂಡಿರುತ್ತದೆ. ಈ ಸಮಯದಲ್ಲಿ ಕುಡಿಯುವ ಒಂದು ಲೋಟ ತಣ್ಣೀರು ದೇಹದ ಅಧಿಕ ತಾಪಮಾನವನ್ನು ಕಡಿಮೆಗೊಳಿಸಿ ಸಂತುಲಿತಗೊಳಿಸಲು ನೆರವಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳು ಅಗಲವಾಗಿ ತೆರೆದಿರುವುದನ್ನು ಮುಚ್ಚುತ್ತದೆ ಹಾಗೂ ತನ್ಮೂಲಕ ದೇಹದ ತಾಪಮಾನ ಆರೋಗ್ಯಕರವಾಗಿರಲು ನೆರವಾಗುತ್ತದೆ.

ವ್ಯಾಯಾಮದ ಬಳಿಕ ಸೇವನೆ

ವ್ಯಾಯಾಮದ ಬಳಿಕ ಸೇವನೆ

ದೈಹಿಕ ಚಟುವಟಿಕೆ ಅಥವಾ ವ್ಯಾಯಾಮದ ಬಳಿಕ ನಮ್ಮ ದೇಹದ ಹಲವು ಚಟುವಟಿಕೆಗಳು ವೇಗವಾಗಿರುತ್ತವೆ. ಹೆಚ್ಚಿನ ಹೃದಯದ ಬಡಿತ, ಹೆಚ್ಚಿದ ರಕ್ತಪರಿಚಲನೆ, ಏರಿದ ಉಸಿರಾಟ ಮೊದಲಾದವು ದೇಹದ ತಾಪಮಾನವನ್ನು ಕೊಂಚ ಏರಿಸುತ್ತವೆ. American College of Sport Medicine ಎಂಬ ದೈಹಿಕ ಶಿಕ್ಷಣ ಸಂಸ್ಥೆ ಒದಗಿಸಿರುವ ಮಾಹಿತಿಯ ಪ್ರಕಾರ ವ್ಯಾಯಾಮದ ಬಳಿಕ ತಣ್ಣೀರು ಕುಡಿಯುವುದರಿಂದ ವ್ಯಾಯಾಮದ ಸಮಯದಲ್ಲಿ ಕಳೆದುಕೊಂಡಿದ್ದ ದ್ರವವನ್ನು ಮರುತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ನೀರು ಅತಿ ಹೆಚ್ಚು ತಣ್ಣಗಿರಬಾರದು. ಸಂಶೋಧನೆಯಲ್ಲಿ ಸಾಬೀತು ಪಡಿಸಿರುಂತೆ ವ್ಯಾಯಮದ ಬಳಿಕ ತಣ್ಣೀರು ಸೇವನೆ ಜಠರ ಹಾಗೂ ಕರುಳುಗಳನ್ನು ಕ್ಷಿಪ್ರವಾಗಿ ತಲುಪುತ್ತದೆ ಹಾಗೂ ಕರುಳುಗಳು ಶೀಘ್ರವೇ ನೀರನ್ನು ಹೀರಿಕೊಂಡು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

ವ್ಯಾಯಾಮದ ಬಳಿಕ ನಮ್ಮ ದೇಹದ ಅರ್ಧದಷ್ಟು ಅಂಗಗಳು ತಮ್ಮ ಸಾಮಾನ್ಯ ಸಾಮಾರ್ಥಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ವಿಶೇಷವಾಗಿ ಹೃದಯ ಹಾಗೂ ಸ್ನಾಯುಗಳ ಮೇಲಿನ ಭಾಗ ಅತಿಯಾಗಿ ಹೆಚ್ಚುತ್ತದೆ. ಇದೇ ಹೊತ್ತಿನಲ್ಲಿ ದೇಹದ ತಾಪಮಾನವೂ ಏರುವ ಕಾರಣ ಬೆವರು ಹರಿಸಿ ಇದನ್ನು ಸರಿಪಡಿಸಿಕೊಳ್ಳಲು ದೇಹ ವ್ಯವಸ್ಥೆ ಮಾಡುತ್ತದೆ. Experimental Physiology ಎಂಬ ವಿಭಾಗದಲ್ಲಿ ನಡೆಸಿದ ಸಂಶೋಧನೆಯಲ್ಲಿ ವ್ಯಾಯಾಮದ ಬಳಿಕ ತಣ್ಣೀರು ಸೇವಿಸುವುದರಿಂದ ದೇಹ ಕಳೆದುಕೊಂಡಿದ್ದ ದ್ರವವನ್ನು ತಕ್ಷಣ ಮರುಪಡೆಯಲು ಹಾಗೂ ಹೆಚ್ಚಿದ್ದ ದೇಹದ ತಾಪಮಾನ ಕಡಿಮೆಯಾಗಲು ನೆರವಾಗುತ್ತದೆ. ಇದರಿಂದ ಹೆಚ್ಚಿದ್ದ ಹೃದಯಬಡಿತ ನಿಧಾನವಾಗಿ ಸಾಮಾನ್ಯಕ್ಕೆ ಇಳಿಯುತ್ತದೆ ಹಾಗೂ ಆರೋಗ್ಯ ಉತ್ತಮಗೊಳ್ಳುತ್ತದೆ.

ಹೃದಯಬಡಿತದ ಲಯವನ್ನು ಸಾಮಾನ್ಯಗೊಳಿಸುತ್ತದೆ

ಹೃದಯಬಡಿತದ ಲಯವನ್ನು ಸಾಮಾನ್ಯಗೊಳಿಸುತ್ತದೆ

ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ರಕ್ತವನ್ನು ಒದಗಿಸಲು ಹೃದಯಕ್ಕೆ ಸತತವಾಗಿ ಹಾಗೂ ಲಯಬದ್ದವಾಗಿ ಬಡಿದುಕೊಳ್ಳುತ್ತಲೇ ಇರಬೇಕು. ರಕ್ತಪರಿಚಲನೆಗೆ ನೀರು ತುಂಬಾ ಆಗತ್ಯ. ತಣ್ಣೀರಿನ ಸೇವನೆಯಿಂದ ಹೃದಯದ ಲಯ ಸಾಮಾನ್ಯಪ್ರಕಾರವಾಗಿರಲು ನೆರವಾಗುತ್ತದೆ.

ತಲೆನೋವು ಹಾಗೂ ಗೊಂದಲದಿಂದ ಕಾಪಾಡುತ್ತದೆ

ತಲೆನೋವು ಹಾಗೂ ಗೊಂದಲದಿಂದ ಕಾಪಾಡುತ್ತದೆ

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಮೆದುಳಿಗೆ ಹರಿಯುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ಮೆದುಳಿನ ಎಲ್ಲಾ ಚಟುವಟಿಕೆಗಳಿಗೆ ರಕ್ತ ಕೊಂಡು ತರುವ ತಾಜಾ ಆಮ್ಲಜನಕ ಅಗತ್ಯ. ನೀರು ಕಡಿಮೆಯಾದರೆ ಆಮ್ಲಜನಕದ ಕೊರತೆಯಿಂದ ಮೆದುಳಿನ ಕ್ಷಮತೆ ತಗ್ಗುತ್ತದೆ. ಪರಿಣಾಮವಾಗಿ ತಲೆನೋವು, ಗೊಂದಲ ಮೊದಲಾದವು ಎದುರಾಗುತ್ತವೆ. ಒಂದು ಲೋಟ ತಣ್ಣೀರು ಸೇವನೆ ಈ ಕೊರತೆಗಳನ್ನು ಪೂರ್ಣಗೊಳಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಸಾಮಾನ್ಯವಾಗಿ ವ್ಯಾಯಾಮದ ಬಳಿಕ ನಾವು ಹಸಿವನ್ನು ಅನುಭವಿಸುತ್ತೇವೆ. ಈ ಸಮಯಲ್ಲಿ ಸೇವಿಸುವ ಆಹಾರ ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಹೆಚ್ಚಿಸುತ್ತದೆ. ತಣ್ಣೀರಿನ ಸೇವನೆಯಿಂದ ನಮ್ಮ ಹೊಟ್ಟೆ ತುಂಬಿಕೊಳ್ಳುವಂತೆ ಮಾಡುವ ಮೂಲಕ ಹಸಿವು ತಣಿಸುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಕಡಿಮೆ ನೀರಿನಿಂದ ಜೀವ ರಾಸಾಯನಿಕ ಕ್ರಿಯೆಗಳೂ ನಿಧಾನಗೊಳ್ಳುತ್ತವೆ.

ನಿರ್ಜಲೀಕರಣದಿಂದ ತಡೆಯುತ್ತದೆ

ನಿರ್ಜಲೀಕರಣದಿಂದ ತಡೆಯುತ್ತದೆ

ತಣ್ಣೀರಿನ ಸೇವನೆಯಿಂದ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ವಿಶೇಷವಾಗಿ ವ್ಯಾಯಾಮದ ಬಳಿಕ ಬೆವರಿನಿಂದ ಹೆಚ್ಚು ನೀರನ್ನು ದೇಹ ಕಳೆದುಕೊಂಡಿದ್ದರೆ ಅಥವಾ ದಿನವಿಡೀ ಹಲವಾರು ಚಟುವಟಿಕೆಗಳಿಂದ ದೇಹ ನೀರನ್ನು ಕಳೆದುಕೊಂಡಿದ್ದರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಈ ಸಮಯದಲ್ಲಿ ನೀರನ್ನು ಕುಡಿದರೆ ನಿರ್ಜಲೀಕರಣದಿಂದ ಕಾಪಾಡಬಹುದು. ತಣ್ಣೀರಿನ ಸೇವನೆಯಿಂದ ನಮ್ಮ ದೇಹದ ದುಗ್ಧಗ್ರಂಥಿಗಳ ಸ್ರವಿಕೆಯೂ ಉತ್ತಮಗೊಳ್ಳುತ್ತದೆ ಹಾಗೂ ಎಲ್ಲಾ ಅಂಗಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.

ದೈಹಿಕ ಕ್ಷಮತೆ ಹೆಚ್ಚಿಸುತ್ತದೆ

ದೈಹಿಕ ಕ್ಷಮತೆ ಹೆಚ್ಚಿಸುತ್ತದೆ

ನಮ್ಮ ದೇಹದ ರಕ್ತಪರಿಚಲನೆ ಹಾಗೂ ತನ್ಮೂಲಕ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಎಲ್ಲಾ ಜೀವಕೋಶಗಳಿಗೆ ತಲುಪಿಸಲು ನೀರು ಅತ್ಯಗತ್ಯವಾಗಿ ಬೇಕಾಗಿದೆ. ತಣ್ಣೀರಿನ ಸೇವನೆಯಿಂದ ದಣಿದಿದ್ದ ದೇಹಕ್ಕೆ ನವಚೇತನ ದೊರಕುತ್ತದೆ. ಈ ಚೇತನದಿಂದ ದೈಹಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚುತ್ತದೆ.

ಸ್ನಾಯುಗಳ ಸೆಡೆತವನ್ನು ತಡೆಯುತ್ತದೆ

ಸ್ನಾಯುಗಳ ಸೆಡೆತವನ್ನು ತಡೆಯುತ್ತದೆ

ಸ್ನಾಯುಗಳ ಕೆಲಸಕ್ಕೂ ನೀರು ತುಂಬಾ ಅಗತ್ಯವಾಗಿದೆ. ನೀರಿನ ಕೊರತೆ ಇದ್ದರೆ ಮಡಚಿದ ಸ್ನಾಯುಗಳು ಮತ್ತೆ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ಸ್ನಾಯುಗಳ ಸೆಡೆತಕ್ಕೆ ಕಾರಣವಾಗುತ್ತದೆ. ತಣ್ಣೀರಿನ ಸೇವನೆಯಿಂದ ಸ್ನಾಯುಗಳು ಕಳೆದುಕೊಂಡಿದ್ದ ನೀರನ್ನು ಪಡೆಯಲು ಹಾಗೂ ಸೆಡೆತಕ್ಕೆ ಒಳಗಾಗದೇ ಇರಲು ಸಾಧ್ಯವಾಗುತ್ತದೆ. ಆದರೆ ನೀರು ಹದಿನೈದು ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿರುವುದು ಅಗತ್ಯ.

ಕರುಳುಗಳನ್ನು ಶುದ್ಧಗೊಳಿಸುತ್ತದೆ

ಕರುಳುಗಳನ್ನು ಶುದ್ಧಗೊಳಿಸುತ್ತದೆ

ಖಾಲಿಹೊಟ್ಟೆಯಲ್ಲಿ, ಅಂದರೆ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ತಣ್ಣೀರನ್ನು ಕುಡಿಯುವ ಮೂಲಕ ಕರುಳುಗಳಿಗೆ ನೀರು ಶೀಘ್ರವಾಗಿ ತಲುಪುತ್ತದೆ ಹಾಗೂ ಕರುಳುಗಳಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ನಿವಾರಿಸಲು ಹಾಗೂ ಅಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

ರಕ್ತದ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಸಾಂದ್ರತೆಯಿಂದ ತಡೆಯುತ್ತದೆ

ರಕ್ತದ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಸಾಂದ್ರತೆಯಿಂದ ತಡೆಯುತ್ತದೆ

ನಮ್ಮ ದೇಹದಲ್ಲಿ ಶಕ್ತಿಯ ಕೊರತೆಯಾದಾಗಲೆಲ್ಲಾ ಒಂದು ಲೋಟ ತಣ್ಣೀರು ಸೇವನೆ ರಕ್ತದಲ್ಲಿ ಹೊಸ ಕೆಂಪುರಕ್ತಕಣಗಳಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರಕ್ತದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಉತ್ತಮವಾಗಿದ್ದಷ್ಟೂ ರಕ್ತದ ಸಾಂದ್ರತೆ ಸೂಕ್ತಮಟ್ಟದಲ್ಲಿರಲು ನೆರವಾಗುತ್ತದೆ ಹಾಗೂ ನೀರಿನ ಕೊರತೆಯಿಂದ ರಕ್ತದ ಸಾಂದ್ರತೆಯೂ ಹೆಚ್ಚುತ್ತದೆ. ಈ ಹೆಚ್ಚಿನ ಸಾಂದ್ರತೆಯ ರಕ್ತವನ್ನು ದೂಡಲು ಹೃದಯಕ್ಕೆ ಹೆಚ್ಚಿನ ಒತ್ತಡ ಬೇಕಾಗುತ್ತದೆ.

ಮೂತ್ರಪಿಂಡಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಮೂತ್ರಪಿಂಡಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಒಂದು ವೇಳೆ ದಿನದ ಪ್ರಥಮ ಆಹಾರವಾಗಿ ತಣ್ಣೀರನ್ನು ಸೇವಿಸಿದರೆ ಮೂತ್ರದ ಪ್ರಮಾಣ ಹೆಚ್ಚುತ್ತದೆ ಹಾಗೂ ಈ ಮೂಲಕ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ ಪರಿಣಾಮವಾಗಿ ಮೂತ್ರಪಿಂಡಗಳ ಆರೋಗ್ಯವೂ ಹೆಚ್ಚುತ್ತದೆ.

English summary

Science-Based Health Benefits of Drinking Chilled Water

For you who lives at tropical area, drinking chilled water in the morning is felt so fresh. A glass of chilled water can satisfy your thirst when you just woke up. Chilled water is water that has temperature around 15 degree Celsius or water that was added 2-3 ice cubes. It isn’t water that was saved one night in freezer. This is important for us to understand about it. So, there isn’t cause effect for our healthiness in the future. What are health benefits of drinking chilled water for our body?
X
Desktop Bottom Promotion