For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಸ್ಟ್ರಾ ಗಳನ್ನು ಇನ್ನೆಂದೂ ಬಳಸಬೇಡಿ - ಇಲ್ಲಿವೆ ಕಾರಣಗಳು

|

ಗ್ರಾಹಕರಿಗೆ ಆದಷ್ಟೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ವ್ಯಾಪಾರವನ್ನು ಹೆಚ್ಚಿಸಲು ಇಂದು ಮಾರುಕಟ್ಟೆಯಲ್ಲಿ ನೂರಾರು ಉತ್ಪನ್ನಗಳಿವೆ. ಇದರಲ್ಲಿ ಅತ್ಯಲ್ಪ ಮೌಲ್ಯದ ಹಾಗೂ ತಂಪು ಪಾನೀಯಗಳನ್ನು ಕುಡಿಯಲು ಬಳಸಲಾಗುವುದು ಎಂದರೆ ಹೀರುಕೊಳವೆ ಅಥವಾ ಸ್ಟ್ರಾ. ಇಂದು ಹಲವು ಪಾನೀಯಗಳು ಸಿದ್ಧರೂಪದಲ್ಲಿ ಕುಡಿಯಲು ಲಭ್ಯವಿದ್ದು ಇದನ್ನು ಸುಲಭವಾಗಿ ಕುಡಿಯಲು ಸಾಧ್ಯವಾಗುವಂತೆ ಪ್ಲಾಸ್ಟಿಕ್ಕಿನ ಚಿಕ್ಕ ಸ್ಟ್ರಾ ಒಂದನ್ನು ಇದರ ಜೊತೆಗೇ ಅಂಟಿಸಿರಲಾಗಿರುತ್ತದೆ. ಇಂದು ಈ ಪುಟ್ಟ ಉಪಯೋಗಿ ವಸ್ತುವಿನ ಬಳಕೆ ಎಷ್ಟಿದೆ ಎಂದರೆ ಕಾಫಿ ಟೀ ಮೊದಲಾದ ಬಿಸಿ ಪಾನೀಯಗಳನ್ನು ಹೊರತುಪಡಿಸಿ ಬೇರೆಲ್ಲಾ ತಂಪಾದ ಪಾನೀಯಗಳನ್ನು ಸ್ಟ್ರಾ ಮೂಲಕವೇ ಕುಡಿಯುತ್ತಿದ್ದೇವೆ.

ಎಳನೀರು ಸಹಾ ಇದಕ್ಕೆ ಹೊರತಲ್ಲ! ಕೆಲವರು ಸ್ಟ್ರಾ ಇಲ್ಲದೇ ಪಾನೀಯಗಳನ್ನು ಕುಡಿದರೆ ಇದರಿಂದ ಹಲ್ಲುಗಳ ಬಣ್ಣ ಮಾಸಬಹುದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಇದರಿಂದ ತಂಪು ಪಾನೀಯಗಳ ಸಕ್ಕರೆ ಹಲ್ಲುಗಳನ್ನು ಹಾಳು ಮಾಡುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ದಂತವೈದ್ಯರೇ ತಿಳಿಸುತ್ತಾರೆ.

ಹಾಗಾದರೆ ಸ್ಟ್ರಾ ಮೂಲಕ ಕುಡಿಯುವುದು ಆರೋಗ್ಯಕರವೇ? ಸರ್ವಥಾ ಅಲ್ಲ, ಏಕೆಂದರೆ ಇದರಲ್ಲಿ ಬಳಸಲಾಗುವ ವಸ್ತು ಪ್ಲಾಸ್ಟಿಕ್. ಪಕ್ಕಾ ವ್ಯಾಪಾರಿ ಮನೋಭಾವದಿಂದ ಈ ಅಲ್ಪ ವೆಚ್ಚದ ವಸ್ತುವನ್ನೂ ಪುಕ್ಕಟೆಯಾಗಿ ಕೊಡಬೇಕೆಂದರೆ ಇದನ್ನು ಒದಗಿಸುವವರು ಈ ಬಗ್ಗೆ ಚಿಂತಿಸದೇ ಇರುತ್ತಾರೆಯೆ? ಇದಕ್ಕೆ ಅತ್ಯಂತ ಅಗ್ಗದ ಹಾಗೂ ಮರುಬಳಕೆಯಾಗಿ, ಮರುಮರುಬಳಕೆಯಾದ ಪ್ಲಾಸ್ಟಿಕ್ ಗಳನ್ನೇ ಬಳಸುತ್ತಾರೆ. ಇವು ಸಾಮಾನ್ಯವಾಗಿ ತ್ವಚೆಗೆ ಹಾನಿಕರವಾಗಿವೆ. ಈ ಬಗ್ಗೆ ನಮ್ಮ ತಂಡ ನಡೆಸಿದ ಕೊಂಚ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಐದು ವಿಷಯಗಳನ್ನು ನೋಡೋಣ....

ತುಟಿಗಳು ಧೂಮಪಾನಿಗಳ ತುಟಿಗಂತಾಗುತ್ತವೆ

ತುಟಿಗಳು ಧೂಮಪಾನಿಗಳ ತುಟಿಗಂತಾಗುತ್ತವೆ

ಧೂಮಪಾನಿಗಳು ಬೀಡಿ-ಸಿಗರೇಟನ್ನು ತುಟಿಗಳಲ್ಲಿ ಹಿಡಿದಿಟ್ಟುಕೊಳ್ಳಲು ತುಟಿಗಳ ಸ್ನಾಯುಗಳನ್ನು ಅತಿಯಾಗಿ ಸಂಕುಚಿಸಬೇಕಾಗುತ್ತದೆ. ಸತತವಾದ ಈ ಸಂಕುಚನೆಯಿಂದ ನಡುವಿನ ಭಾಗ ಹೆಚ್ಚು ಗಾಢವರ್ಣ ಪಡೆಯುತ್ತದೆ. ಹಾಗೂ ತುಟಿಗಳನ್ನು ಕಂಡವರು ಇವರು ಧೂಮಪಾನಿಗಳು ಎಂದು ಒಂದೇ ನೋಟದಲ್ಲಿ ಹೇಳಲು ಸಾಧ್ಯವಾಗುತ್ತದೆ. ಒಂದು ವೇಳೆ ಸ್ಟ್ರಾ ಮೂಲಕವೇ ದ್ರವಾಹಾರಗಳನ್ನು ಸೇವಿಸುವ ಅಭ್ಯಾಸವಿದ್ದರೆ ಇವರ ತುಟಿಗಳೂ ಧೂಮಪಾನಿಗಳ ತುಟಿಗಳು ಪಡೆದ ಪ್ರಭಾವವನ್ನೇ ಪಡೆದು ಗಾಢವರ್ಣ ತಳೆಯುತ್ತವೆ. ಹೆಚ್ಚು ಹೆಚ್ಚು ಬಳಸಿದಷ್ಟೂ ಈ ಭಾಗದ ತ್ವಚೆ ಹೆಚ್ಚು ಹೆಚ್ಚು ನೆರಿಗೆಗಳನ್ನು ಮೂಡಿಸಿಕೊಳ್ಳುತ್ತಾ ಬಣ್ಣವೂ ಗಾಢಗೊಳ್ಳುತ್ತಾ ಸಾಗುತ್ತದೆ.

Most Read: ಕಣ್ಣ ರೆಪ್ಪೆ ಬಡಿಯುತ್ತಿದ್ದರೆ ಅದು ಶುಭವೇ ಅಥವಾ ಅಶುಭವೇ?

 ಅತಿಯಾದ ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ

ಅತಿಯಾದ ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ

ಸಾಮಾನ್ಯವಾಗಿ ಸ್ಟ್ರಾಗಳನ್ನು ತಂಪು ಮತ್ತು ಬುರುಗುಪಾನೀಯಗಳನ್ನು ಕುಡಿಯಲು ಬಳಸಲಾಗುತ್ತದೆ. ಈ ಪಾನೀಯಗಳನ್ನು ನೇರವಾಗಿ ಕುಡಿದರೆ ಇದರಿಂದ ಬಿಡುಗಡೆಯಾಗುವ ಅನಿಲ (ವಾಸ್ತವವಾಗಿ ಇಂಗಾಲದ ಡೈ ಆಕ್ಸೈಡ್, ನಮಗೆ ಬೇಡವಾದ ಅನಿಲ) ಗಂಟಲಿನ ಒಳಗಿಳಿಯದೇ ಬಾಯಿಯಿಂದಲೇ ಹೊರಹೊಮ್ಮುತ್ತದೆ. ಆದರೆ ಇದನ್ನು ಸ್ಟ್ರಾ ಮೂಲಕ ಕುಡಿದರೆ ಕರಗಿರುವ ಅನಿಲಕ್ಕೆ ಹೊರಬರಲು ಜಾಗವೇ ಇಲ್ಲವಾಗಿ ಗಂಟಲಿನಿಂದ ನೇರವಾಗಿ ಹೊಟ್ಟೆಗಿಳಿಯುತ್ತದೆ. ಹೆಚ್ಚು ಹೆಚ್ಚು ಸ್ಟ್ರಾ ಬಳಸಿದಷ್ಟೂ ಹೆಚ್ಚು ಹೆಚ್ಚು ಅನಿಲ ಹೊಟ್ಟೆ ಸೇರುತ್ತದೆ.

 ಅತಿಯಾದ ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ

ಅತಿಯಾದ ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ

ಜೀರ್ಣಕ್ರಿಯೆಯಲ್ಲಿ ಈ ಅನಿಲ ಬಿಡುಗಡೆಯಾಗಿ ಹೊಟ್ಟೆಯುಬ್ಬರಿಸುತ್ತದೆ ಹಾಗೂ ಅಹಿತಕರ ಅನುಭವ ನೀಡುತ್ತದೆ. ಇಲ್ಲಿಂದ ಕರುಳಿಗೆ ಸಾಗಿದ ಆಹಾರದಲ್ಲಿಯೂ ಈ ಪಾನೀಯದಿಂದ ಅನಿಲ ಬಿಡುಗಡೆಯಾಗಿ ವಾಯುಪ್ರಕೋಪವೂ ಎದುರಾಗುತ್ತದೆ. ಹಾಗಾಗಿ, ಸಿದ್ಧ ಪಾನೀಯಗಳನ್ನು ಕುಡಿಯಲೇಬೇಕೆಂದಿದ್ದರೆ, ಮೊದಲು ಲೋಟವೊಂದಕ್ಕೆ ಹಾಕಿ ಇದರ ಅನಿಲ ಆದಷ್ಟೂ ಹೋಗುವಂತೆ ಮಾಡಿ ಬಳಿಕ ನೇರವಾಗಿ ಕುಡಿಯಬೇಕು. ಸ್ಟ್ರಾ ಬಳಕೆಯನ್ನು ಆದಷ್ಟೂ ತಗ್ಗಿಸಬೇಕು.

ಹಲ್ಲುಗಳಲ್ಲಿ ಹುಳುಕು ಮತ್ತು ಕುಳಿ

ಹಲ್ಲುಗಳಲ್ಲಿ ಹುಳುಕು ಮತ್ತು ಕುಳಿ

ಒಂದು ಅಧ್ಯಯನದಲ್ಲಿ ಕಂಡುಕೊಂದಂತೆ ಹಲ್ಲುಗಳಲ್ಲಿ ಕುಳಿ ಉಂಟಾಗುವ ಸಂಭವವಿದ್ದರೆ ಇದನ್ನು ಸ್ಟ್ರಾ ಉಪಯೋಗದಿಂದ ತಡೆಯಲು ಸಾಧ್ಯವಿಲ್ಲ. ಅಲ್ಲದೇ ನಮಗೆ ಕಾಣದ ಹಲ್ಲುಗಳ ಹಿಂಭಾಗದಲ್ಲಿ ಇನ್ನೂ ಹೆಚ್ಚಿನ ಅಪಾಯವುಂಟಾಗುವ ಸಾಧ್ಯತೆ ಇದೆ. ಸತತವಾಗಿ ಸ್ಟ್ರಾ ಮೂಲಕವೇ ಸಿದ್ದ ಪಾನೀಯಗಳನ್ನು ಕುಡಿದರೆ, ಇದರಲ್ಲಿರುವ ಸಕ್ಕರೆ ಮತ್ತು ಆಮ್ಲೀಯ ದ್ರವಗಳು ಹಲ್ಲುಗಳನ್ನು ಒಳಭಾಗದಿಂದ ಹಾಗೂ ನಾವು ಕುಡಿಯುವಾಗ ಹೆಚ್ಚಾಗಿ ತಗಲುವ ಹಲ್ಲಿನ ಭಾಗಗಳಲ್ಲಿ ಕುಳಿ ಮತ್ತು ಹುಳುಕು ಉಂಟಾಗುವುದು ಸುಲಭವಾಗುತ್ತದೆ. ಒಂದು ವೇಳೆ ಹಲ್ಲುಗಳನ್ನು ಹುಳುಕುಗಳಿಂದ ರಕ್ಷಿಸಿಕೊಳ್ಳಬೇಕೆಂದರೆ ಹಲ್ಲುಗಳನ್ನು ಸೂಕ್ತ ಕ್ರಮದಲ್ಲಿ ಸ್ವಚ್ಛಗೊಳಿಸುವುದೇ ಸರಿಯಾದ ಕ್ರಮವಾಗಿದೆ ಹಾಗೂ ಇದರಿಂದಲೇ ನಿಮ್ಮ ಹಲ್ಲುಗಳು ಆರೋಗ್ಯಕರವಾಗಿ ಉಳಿಯುತ್ತವೆಯೇ ಹೊರತು ಸ್ಟ್ರಾ ಬಳಕೆಯಿಂದಲ್ಲ!

ಗಾಯ ಅಥವಾ ಪೆಟ್ಟು

ಗಾಯ ಅಥವಾ ಪೆಟ್ಟು

ಸ್ಟ್ರಾ ದಿಂದೇನು ಪೆಟ್ಟು ಆಗಲು ಸಾಧ್ಯ ಎಂಬ ಕುಹಕ ಮಾತು ಈಗಾಗಲೇ ನಿಮ್ಮ ಮನದಲ್ಲಿ ಮೂಡಿರಬಹುದು. ಆದರೆ ವಿಶೇಷವಾಗಿ ಮಕ್ಕಳಲ್ಲಿ ಈ ಪ್ಲಾಸ್ಟಿಕ್ ಸ್ಟ್ರಾ ಗಳೂ ಅಪಾಯ ಕಾರಿಯಾಗಿ ಪರಿಗಣಿಸಿವೆ. ಒಂದು ಸುದ್ದಿಯ ಪ್ರಕಾರ ವಿಶ್ವದಲ್ಲಿ ಒಂದು ವರ್ಷಕ್ಕೆ ತುರ್ತು ಚಿಕಿತ್ಸೆಗೆ ಆಗಮಿಸುವವರಲ್ಲಿ 1,400 ಜನರು ಸ್ಟ್ರಾ ಸಂಬಂಧಿತ ತೊಂದರೆಗಳೊಂದಿಗೆ ಬಂದಿರುತ್ತಾರೆ. ಕೆಲವರಿಗೆ ಸ್ಟ್ರಾ ಗಂಟಲಲ್ಲಿ ಸಿಲುಕಿಕೊಂಡಿದ್ದರೆ ಕೆಲವು ಪುಟ್ಟ ಮಕ್ಕಳು ಮೂಗು,ಕಿವಿಯೊಳಗೆ ಹಾಕಿ ಕೊಂಡಿರುತ್ತಾರೆ. ಕೆಲವರಿಗೆ ಇದರಿಂದ ಗಾಯಗಳುಂಟಾಗಿದ್ದರೆ ಕೆಲವು ಮಕ್ಕಳು ಸ್ಟ್ರಾಗಳನ್ನು ಕಣ್ಣಿಗೆ ತಾಕಿಸಿಕೊಂಡು ಸೂಕ್ಷ್ಮಭಾಗದಲ್ಲಿ ಗೀರುಗಳನ್ನು ಮೂಡಿಸಿ ಕೊಂಡು ಬಂದಿರುತ್ತಾರೆ.

Most Read: ದೇಹದ ಲಿವರ್‌ನ ಬಗ್ಗೆ ನಿಮಗೆ ತಿಳಿಯದೇ ಇರುವ ಪ್ರಮುಖ ಸಂಗತಿಗಳು

ಪ್ರದೂಷಣೆ

ಪ್ರದೂಷಣೆ

ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ ಸ್ಟ್ರಾ ಗಳನ್ನು ತಯಾರಿಸಲು ಬಳಸಲಾಗುವ ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ, ವಿಶೇಷವಾಗಿ ಇದು ಸಾಗರಜೀವಿಗಳಿಗೆ ಹೆಚ್ಚು ಮಾರಕವಾಗಿದೆ. ತ್ಯಾಜ್ಯದೊಂದಿಗೆ ಸಾಗರ ಸೇರುವ ಈ ಸ್ಟ್ರಾಗಳನ್ನು ಸಾಗರಜೀವಿಗಳು ತಿಂಡಿಯೆಂದು ತಿಂದು ಇವು ಅವುಗಳ ಜೀರ್ಣಾಂಗಗಳಲ್ಲಿ ಸಿಲುಕಿ ಇವು ಸಾಯುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ಇದರ ಪ್ಲಾಸ್ಟಿಕ್ ನೀರಿನಲ್ಲಿ ಕರಗಿ ವಿಷಕಾರಿ ರಾಸಾಯನಿಕಗಳನ್ನು ನೀರಿನಲ್ಲಿ ಕರಗಿಸುವ ಮೂಲಕ ಸೂಕ್ಷ್ಮಜೀವಿಗಳ ಸಾವಿಗೆ ಕಾರಣವಾಗುತ್ತವೆ. ಇವು ಎಷ್ಟು ಅಪಾಯಕಾರಿಯಾಗಬಲ್ಲವು ಎಂದು ಸಂಶೋಧನೆಗಳಲ್ಲಿ ಸಾಬೀತುಪಡಿಸಲಾಗಿದೆ. 2017 ರಲ್ಲಿ ಸಡೆಸಿದ ಸಮುದ್ರ ಸ್ವಚ್ಛತಾ ಅಭಿಯಾನದಲ್ಲಿ ಸಂಗ್ರಹಿಸಿದ ಕಸದಲ್ಲಿ ಸ್ಟ್ರಾಗಳಿಗೆ ಸಾಮಾನ್ಯವಾಗಿ ಕಂಡುಬರುವ ವಸ್ತುಗಳಲ್ಲಿ ಹನ್ನೊಂದನೆಯ ಸ್ಥಾನ ಸಿಕ್ಕಿದೆ. ಅಲ್ಲದೇ ಈ ಪ್ಲಾಸ್ಟಿಕ್ ಪೂರ್ಣವಾಗಿ ಕೊಳೆಯಲು ಇನ್ನೂರು ವರ್ಷಗಳೇ ಬೇಕಾಗುತ್ತವೆ.

ಪ್ಲಾಸ್ಟಿಕ್ ಸ್ಟ್ರಾಗಳಿಗೆ ಬದಲಿ ವಸ್ತುಗಳು

ಪ್ಲಾಸ್ಟಿಕ್ ಸ್ಟ್ರಾಗಳಿಗೆ ಬದಲಿ ವಸ್ತುಗಳು

*ಅತ್ಯುತ್ತಮ ಎಂದರೆ ಸ್ಟ್ರಾಗಳನ್ನು ಬಳಸದೇ ಇರುವುದು. ಆರೋಗ್ಯದ ಕಾಳಜಿ ಇರುವ ವ್ಯಕ್ತಿಗಳು ತಮ್ಮ ಮತ್ತು ಪರಿಸರದ ಕಾಳಜಿ ವಹಿಸುವವರಾದರೆ ಸ್ಟ್ರಾಗಳನ್ನೆಂದೂ ಮುಟ್ಟುವುದಿಲ್ಲ

*ಬಿದಿರಿನ ಸ್ಟ್ರಾಗಳು: ಇವು ಮರುಬಳಕೆ ಮಾಡಬಹುದಾದ ಕೊಳವೆಗಳಾಗಿದ್ದು ಮನೆಯ ಪ್ರತಿ ಸದಸ್ಯರಿಗೊಂದು ಕೊಳವೆಯನ್ನು ನೀಡುವ ಮೂಲಕ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.

*ಕಾಗದದ ಸ್ಟ್ರಾಗಳು: ಕಾಗದವನ್ನು ನೀರು ಹೀರಿಕೊಳ್ಳುವ ಕಾರಣ ಇದರ ಮೇಲೆ ಮೇಣದ ಲೇಪವನ್ನು ಲೇಪಿಸಿರುತ್ತಾರೆ. ಇವು ಒಂದೇ ಬಾರಿ ಬಳಸಬಹುದಾದ ಉತ್ಪನ್ನಗಳಾಗಿದ್ದು ಸುಲಭವಾಗಿ ನೆಲದಲ್ಲಿ ಕೊಳೆಯುತ್ತವೆ.

*ಲೋಹದ ಸ್ಟ್ರಾಗಳು: ರೆಸ್ಟೋರೆಂಟ್ ಮತ್ತು ಹೋಟೆಲುಗಳಿಗೆ ಇದೊಂದು ಉತ್ತಮ ಪರ್ಯಾಯವಾಗಬಲ್ಲುದು. ಬಳಕೆಯ ಬಳಿಕ ಉಳಿದ ಪಾತ್ರೆಗಳ ಜೊತೆಗೆ ತೊಳೆದು ಮತ್ತೆ ಉಪಯೋಗಿಸಬಹುದು.

ನೀವು ಸಹಾ ಸ್ಟ್ರಾ ಉಪಯೋಗಿಸುತ್ತಿರುವಿರೇ? ಒಂದು ವೇಳೆ ಇದರ ಬಳಕೆಯನ್ನು ವಿರೋಧಿಸುವಿರಾದರೆ ಅಥವಾ ಪರ್ಯಾಯ ಪರ್ಯಾವರಣ ಸ್ನೇಹಿ ಉತ್ಪನ್ನಗಳನ್ನು ಬಳಸಲು ಉತ್ಸುಕರಾಗಿದ್ದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

Reasons to Never Use Plastic Straws Again

If you knew all the facts about using plastic straws, you would change your mind and give up drinking with them. Some people use them because they think that it is more comfortable, others because they are convinced that it will prevent stains on their teeth. But even dentists say that it won’t protect you from sugary drinks and cavities, and could even harm you.Bright Side decided to do our own research to find out the reasons why straws can affect your health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more