Latest Updates
-
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು?
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ
ಹಿಂದೂಗಳಿಗೆ ಹೊಸ ವರ್ಷ ಎಂದು ಕರೆಯಲಾಗುವ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದ ಬಹುತೇಕ ಕಡೆಗಳಲ್ಲಿ ಈ ಯುಗಾದಿಯನ್ನು ಆಚರಿಸಲಾಗುತ್ತದೆ. ಆದ್ರೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ದಿನ ಹಾಗೆ ಬೇರೆ ಬೇರೆ ಹೆಸರಗಳ ಮೂಲಕ ಈ ಹಬ್ಬವನ್ನು ಆಚರಿಸುವುದು ನೋಡಬಹುದು. ಆದ್ರೆ ಎಲ್ಲಾ ಹಬ್ಬಗಳ ಅರ್ಥವೂ ಒಂದೇ ರೀತಿಯದ್ದಾಗಿರಲಿದೆ.
ಹಿಂದೂ ಶಾಸ್ತ್ರಗಳ ಪ್ರಕಾರ ಈ ದಿನದಂದು ಬ್ರಹ್ಮನು ಸೃಷ್ಟಿಯಲ್ಲಿ ತೊಡಗಿದನು, ಹೀಗಾಗಿ ಯುಗಾದಿಯ ಸಮಯದಿಂದ ಗಿಡ, ಮರಗಳು ಹೊಸ ಚಿಗುರು ಪಡೆಯಲಿವೆ. ಹೂವುಗಳು ಅರಳುವುದು, ವಸಂತ ಋತುವಿನ ಆಗಮನದ ಸೂಚನೆ ಇದಾಗಲಿದೆ. ಇದು ಹೊಸತನಕ್ಕೆ ಕಾರಣವಾಗಲಿದೆ ಎಂಬ ನಂಬಿಕೆ ಇದೆ. ಯುಗಾದಿಯಿಂದ ಹೊಸತು ಆರಂಭಿಸಲು ಸೂಕ್ತ ಕಾಲ ಬರಲಿದೆ ಎಂಬುದು ಕೂಡ ನಂಬಿಕೆಯಾಗಿದೆ.

ಚಂದ್ರಮಾನ ಯುಗಾದಿಯನ್ನು ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಪಾಲಿಸುತ್ತವೆ, ಹೀಗಾಗಿ ದಕ್ಷಿಣ ಭಾರತದಲ್ಲಿ ಒಂದೇ ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಮಾರ್ಚ್ 19ರಂದು ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಮುಹೂರ್ತ ಹಾಗೂ ಶುಭ ಸಮಯ
- ಪ್ರತಿಪದ ತಿಥಿ ಬೆಳಿಗ್ಗೆ 06:52 ಕ್ಕೆ ಪ್ರಾರಂಭ
- ಪ್ರತಿಪದ ತಿಥಿ ಬೆಳಿಗ್ಗೆ 04:52 ಕ್ಕೆ ಕೊನೆಗೊಳ್ಳುತ್ತದೆ (ಮಾರ್ಚ್ 20)
- ಬ್ರಹ್ಮ ಮುಹೂರ್ತ ಬೆಳಿಗ್ಗೆ 04:48 - 05:35
- ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:05ರಿಂದ ಮಧ್ಯಾಹ್ನ 12:55
ಯುಗಾದಿ ಪೂಜೆ ವಿಶೇಷ
ಯುಗಾದಿಯು ಬ್ರಹ್ಮ, ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ನಡೆಸುವ ಆಚರಣೆಗಳು ಪ್ರಾದೇಶಿಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಆಧರಿಸಿ ಬದಲಾಗಬಹುದು. ಆದ್ರೆ ಸೃಷ್ಟಿಯ ಸಂಕೇವಾಗಿ ಬ್ರಹ್ಮನ ಪೂಜಿಸಲಾಗುತ್ತದೆ. ಹಾಗೆ ಯುಗಾದಿಯಲ್ಲಿ ಲಕ್ಷ್ಮಿ ದೇವಿಯ ಆರಾಧನೆಯು ಹಲವು ರೀತಿಯಲ್ಲಿ ಹೊಸ ಜೀವನಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢರಾಗುವ ಮುನ್ಸೂಚನೆ ನೀಡಲಿದೆ ಎಂದು ಹೇಳಲಾಗಿದೆ.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಪಂಚಾಂಗದ ಪೂಜೆ, ಲಕ್ಷ್ಮಿ ಪೂಜೆ, ದೇವಿ ಪೂಜೆ ಸಾಮಾನ್ಯ, ಈ ದಿನ ಬೇವು ಬೆಲ್ಲ ಸವಿಯುವ ಮೂಲಕ ಆಚರಿಸಲಾಗುತ್ತದೆ. ಜೀನದಲ್ಲಿ ಸಿಹಿ ಕಹಿಗಳನ್ನು ಸಮನಾಗಿ ಸವಿಯಬೇಕು ಎಂಬ ಸಂದೇಶ ಹಿನ್ನಲೆ ಈ ದಿನ ಬೇವು ಬೆಲ್ಲ ಹಂಚುವುದು ನೋಡಬಹುದು.
ಯುಗಾದಿ ಮಂತ್ರ
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂಬುದು ಈ ಶ್ಲೋಕದ ಅರ್ಥವಾಗಿದೆ. ಯುಗಾದಿ ಹಬ್ಬ ಹೊಸತನಕ್ಕೆ ನಾಂದಿಯಂತೆ. ಈ ಯುಗಾದಿ ಎಲ್ಲರ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಯಸ್ಶಸ್ಸು ಕೀರ್ತಿ ತರಲಿ ಎಂಬುದಾಗಿದೆ.
ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಬಯಸುವ ಜನರು 'ಶತಾಯುರ್ ವಜ್ರ ದೇಹತ್ವಂ, ಸರ್ವ ಸಂಪತ್ ಪ್ರದಂ ತಥಾ, ಸರ್ವರಿಷ್ಟ ಹರಂ ಕುರ್ವೇ, ನಿಂಬಪತ್ರಾಶನಂ ಶುಭಂ' (ಶತಯುರ್ವಜರ,ಸತವ) ಸಂಪತ್ತಿಪ್ರದಂ ತಥಾ, ಸರ್ವರಿಷ್ಟಹರಂ ಕುರುವೇ, ನಿಂಬಪತ್ರಾಶನಂ ಶುಭಂ|) ಎಂಬ ಮಂತ್ರವನ್ನು ಪೂಜೆಯ ಸಮಯದಲ್ಲಿ ಪಠಿಸಬೇಕು ಎಂದು ಹೇಳಲಾಗಿದೆ.
ಆಚರಣೆ ಹೇಗೆ?
ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಸ್ನಾನ ಮಾಸಡುವುದು (ತಲೆಗೆ ಎಣ್ಣೆ ಹಾಕಿ ಮೈಗೆ ಎಣ್ಣೆ ಸವರಿಕೊಂಡು ಸ್ನಾನ ಮಾಡುವುದು) ಪುಣ್ಯಾಹ ಮಂತ್ರಗಳನ್ನು ಹೇಳುವುದು ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸಿ ಹೊಸ ಬಟ್ಟೆ ಅಥವಾ ಶುದ್ಧ ಬಟ್ಟೆ ಧರಿಸುವುದು. ಅನಂತರ ಬ್ರಹ್ಮ ಅಥವಾ ಲಕ್ಷ್ಮಿ ದೇವಿಯ ಕುರಿತಾದ ವಿಶೇಷ ಪ್ರಾರ್ಥನೆ ಮೂಲಕ ಪೂಜೆ ನೆರವೇರಿಸುವುದು.



Click it and Unblock the Notifications