For Quick Alerts
ALLOW NOTIFICATIONS  
For Daily Alerts

ನಾಲ್ಕೇ ನಾಲ್ಕು ನೆನೆಸಿಟ್ಟ ಬಾದಾಮಿ ಬೀಜದ ಆರೋಗ್ಯಕಾರಿ ಪ್ರಯೋಜನಗಳು

|

ನೀವು ಶಾಲೆಯಲ್ಲಿದ್ದಾಗ ಬೆಳಗ್ಗೆದ್ದ ತಕ್ಷಣ ತಿನ್ನಲೆಂದು ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಅಮ್ಮ ನೀಡುತ್ತಿದ್ದುದು ನೆನಪಿದೆಯೇ? ಇದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚುರುಕಾಗುತ್ತದೆ ಎಂದೆಲ್ಲಾ ಹೇಳಿದ್ದಿರಬಹುದು. ಅಂದು ಆಕೆ ಹೇಳಿದ ಮಾತು ಸುಳ್ಳಲ್ಲ. ನೆನೆಸಿಟ್ಟ ಬಾದಾಮಿಯಲ್ಲಿ ವಿಟಮಿನ್ನುಗಳು, ಖನಿಜಗಳು ಉತ್ತಮ ಪ್ರಮಾಣದಲ್ಲಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಇ ತ್ವಚೆಯ ಆರೋಗ್ಯಕ್ಕೆ ಉತ್ತಮವಾಗಿದೆ.

ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಒಮೆಗಾ3 ಕೊಬ್ಬಿನ ಆಮ್ಲಗಳು ಹಾಗೂ ಮೆಗ್ನೇಶಿಯಂ ಸಹಾ ಇದೆ. ಒಟ್ಟಾರೆ ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಬನ್ನಿ, ನೆನೆಸಿಟ್ಟ ನಾಲ್ಕು ಬಾದಾಮಿಗಳನ್ನು ನಿತ್ಯವೂ ಬೆಳಿಗ್ಗೆ ಸೇವಿಸುವುದರಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಪೋಷಕಾಂಶಗಳು ಮೆದುಳಿನ ಚಟುವಟಿಕೆಗೆ ಪೂರಕವಾಗಿವೆ. ಈ ಮೂಲಕ ಸ್ಮರಣಶಕ್ತಿ, ಏಕಾಗ್ರತೆಯ ಶಕ್ತಿ ಹಾಗೂ ತಾರ್ಕಿಕವಾಗಿ ಯೋಚಿಸುವ ಶಕ್ತಿಯ್ ಉತ್ತಮಗೊಳ್ಳುತ್ತದೆ.

ಚೈತನ್ಯವನ್ನು ಹೆಚ್ಚಿಸುತ್ತದೆ

ಚೈತನ್ಯವನ್ನು ಹೆಚ್ಚಿಸುತ್ತದೆ

ನೆನೆಸಿಟ್ಟ ಬಾದಾಮಿಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ಇಡಿಯ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ನೆರವಾಗುತ್ತದೆ. ಬೆಳಗ್ಗಿನ ಹೊತ್ತಿನಲ್ಲಿ ಇವುಗಳನ್ನು ಸೇವಿಸುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಅವಶ್ಯಕ ಪೋಶಕಾಂಶಗಳಾದ ರೈಬೋಫ್ಲೇವಿನ್, ತಾಮ್ರ ಹಾಗೂ ಮ್ಯಾಂಗನೀಸ್ ಗಳು ಅವಶ್ಯಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಬಾದಾಮಿಗಳಲ್ಲಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ( LDL) ಕಡಿಮೆಗೊಳಿಸುವ ಗುಣವಿದೆ. ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೆಗ್ನೇಶಿಯಂ ಹಾಗೂ ಪೊಟ್ಯಾಶಿಯಂ ಆರೋಗ್ಯವನ್ನು, ವಿಶೇಷವಾಗಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ನಿತ್ಯವೂ ನೆನೆಸಿಟ್ಟ ಬಾದಾಮಿಗಳನ್ನು ಸೇವಿಸುವುದರಿಂದ ನಿಮ್ಮ ತೂಕ ಇಳಿಸುವ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತದೆ. ಇವನ್ನು ಹಾಗೇ ತಿನ್ನುವ ಬದಲು ಸಾಲಾಡ್ ನೊಂದಿಗೆ ಬೆರೆಸಿ ತಿನ್ನುವ ಮೂಲಕ ಹೊಟ್ಟೆ ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಹೊತ್ತಿಗೂ ಮುನ್ನ ಹಸಿವಾಗದಿರದಂತೆ ತಡೆಯುತ್ತದೆ. ಅಲ್ಲದೇ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ.

ತ್ವಚೆಯ ಆರೋಗ್ಯ ಉತ್ತಮಗೊಳಿಸುತ್ತದೆ

ತ್ವಚೆಯ ಆರೋಗ್ಯ ಉತ್ತಮಗೊಳಿಸುತ್ತದೆ

ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟುಗಳು ತ್ವಚೆಯ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ನೆನೆಸಿಟ್ಟ ಬಾದಾಮಿಗಳು ತ್ವಚೆಯನ್ನು ಕಾಂತಿಯುಕ್ತ, ಕಲೆಯಿಲ್ಲದ ಹಾಗೂ ನೆರಿಗೆ ರಹಿತವಾಗಿಸುತ್ತದೆ. ಅಲ್ಲದೇ ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸಿ ವೃದ್ಧಾಪ್ಯವನ್ನು ಮುಂದೂಡುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ ಬಾದಾಮಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ನೆನೆಸಿದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ದೇಹದಲ್ಲಿ ಕ್ಯಾನ್ಸರ್‪ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ದೇಹ ಹೆಚ್ಚಿನ ಸಾಮರ್ಥ್ಯ ಪಡೆಯುತ್ತದೆ. ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನುತಡವಾಗಿಸಿ ವೃದ್ಧಾಪ್ಯವನ್ನೂ ತಡವಾಗಿಸುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಅಪರೂಪವಾಗಿರುವ ವಿಟಮಿನ್ B17 ಎಂಬ ಪೋಷಕಾಂಶ ಬಾದಾಮಿಯಲ್ಲಿದ್ದರೂ ನೆನೆಸಿಟ್ಟ ಬಳಿಕವೇ ಲಭ್ಯವಾಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದ್ದು ಪ್ರತಿದಿನವೂ ನಾಲ್ಕಾರು ನೆನೆಸಿಟ್ಟ ಬಾದಾಮಿಗಳನ್ನು ತಿನ್ನುವ ಮೂಲಕ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ಪಡೆಯಬಹುದು.

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು ನೆನೆಸಿಟ್ಟ ಬಾದಾಮಿಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಫೋಲಿಕ್ ಆಮ್ಲ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ಅತಿ ಉತ್ತಮವಾಗಿದ್ದು ಇದರಿಂದ ಹುಟ್ಟುವ ಮಗು ಯಾವುದೇ ಊನವಿಲ್ಲದೇ ಆರೋಗ್ಯಕರವಾಗಿ ಜನಿಸಲು ನೆರವಾಗುತ್ತದೆ.

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್‌ನ ಅ೦ಶ, ಹಾಗೂ ಸೋಡಿಯ೦ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

ಮೆದುಳಿಗೂ ಉತ್ತಮವಾಗಿದೆ

ಮೆದುಳಿಗೂ ಉತ್ತಮವಾಗಿದೆ

ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇರುವ ಕಾರಣ ಇದು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ರೈಬೋಫ್ಲೇವಿನ್ ಮತ್ತು ಎಲ್-ಕಾರ್ನೈಟ್ ಎಂಬ ಪೋಷಕಾಂಶಗಳು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲವೇ ಆಹಾರಗಳಲ್ಲಿ ಬಾದಾಮಿ ಮುಂಚೂಣಿಯಲ್ಲಿದೆ. ಅಲ್ಲದೇ ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಅಧಿಕಗೊಳಿಸಿ ಒಟ್ಟಾರೆ ರಕ್ತದ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಿಸುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ

ಬಾದಾಮಿ ಕಾಳುಗಳನ್ನು ಸರಿಯಾಗಿ ಸೇವಿಸುವ ವಿಧಾನ

ಬಾದಾಮಿ ಕಾಳುಗಳನ್ನು ಸರಿಯಾಗಿ ಸೇವಿಸುವ ವಿಧಾನ

ಬಾದಾಮಿಗಳ ಸೇವನೆಯು ಒ೦ದು ಉತ್ತಮ ಅಭ್ಯಾಸವೇ ಆಗಿದ್ದು, ಆದರೆ ಈ ಸೇವನಾಕ್ರಮವು ಮಾತ್ರ ಸಮರ್ಪಕವಾಗಿರಬೇಕು. ಬಾದಾಮಿಕಾಳುಗಳನ್ನು ಯಾವಾಗಲೂ ಒ೦ದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು,ಅವುಗಳ ಹೊರಕವಚವನ್ನು ನಿವಾರಿಸಿ ಬಳಿಕವಷ್ಟೇ ಅವನ್ನು ಸೇವಿಸಬೇಕು. ಆದ್ದರಿ೦ದ, ಬಾದಾಮಿ ಕಾಳುಗಳನ್ನು ಸರಿಯಾದ ಪದ್ಧತಿಯನ್ನನುಸರಿಸಿ ಸೇವಿಸುವುದರ ಮೂಲಕ ಅವುಗಳ ಗರಿಷ್ಠ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿರಿ. ಒ೦ದಾದ ಬಳಿಕ ಒ೦ದು ಬಾದಾಮಿ ಕಾಳನ್ನು ಮೆಲ್ಲುತ್ತಲೇ ಸಾಗಿರಿ.

English summary

Reasons to eat 4 soaked almonds every morning before breakfast

Do you remember your mom must have given you soaked almonds to eat every morning when you were in school? She must have said that it is good for your brain and she was right. Loaded with vitamins and minerals, these little nuts have several health benefits. Almonds contain vitamin E, which is important for healthy skin. It is also a good source of omega 3 fatty acids and magnesium. The nutrients present in almond are essential for normal development of body and mind. Here are some more reasons to eat four soaked almonds in the morning.
X
Desktop Bottom Promotion