For Quick Alerts
ALLOW NOTIFICATIONS  
For Daily Alerts

  ಆರೋಗ್ಯ ಟಿಪ್ಸ್: ಹಲಸಿನ ಹಣ್ಣು ಎಷ್ಟೊಂದು ಕಾಯಿಲೆ ದೂರ ಮಾಡುತ್ತೆ ನೋಡಿ..

  By Deepu
  |

  ಹಿಂದಿನ ಕಾಲದಲ್ಲಿ ತರಕಾರಿ ಎಂದರೆ ಹಣ ಕೊಟ್ಟು ಅಂಗಡಿಯಿಂದ ಕೊಂಡು ತರುವುದೆಂಬ ಕಲ್ಪನೆಯೇ ಇರಲಿಲ್ಲ. ಅಂತೆಯೇ ಹಣ್ಣುಗಳು ಸಹಾ. ಪ್ರತಿ ಮನೆಯಲ್ಲಿಯ ಹಿತ್ತಲಿನಲ್ಲಿ ಬಾಳೆ, ಮಾವು ಮತ್ತು ಹಲಸಿನ ಮರಗಳಿರುತ್ತಿದ್ದವು. ಮಾವು ಎಂದರೆ ಅತ್ಯುತ್ತಮ ಹಾಗೂ ಹಲಸಿನ ಹಣ್ಣು ಎಂದರೆ ಒಂದು ತರಹದ ನಿಕೃಷ್ಟ ಭಾವನೆ ಇಂದಿಗೂ ಇದೆ.

  ಇಂದು ನಗರಗಳಲ್ಲಿ ಹಲಸಿನ ಹಣ್ಣು ಭರ್ಜರಿಯಾಗಿ ಮಾರಾಟವಾಗುತ್ತಿದ್ದರೂ ಮಲೆನಾಡಿನಿಂದ ಬಂದ ಹಿರಿಯರು ಹಲಸಿನಹಣ್ಣಿಗೂ ದುಡ್ಡು ಕೊಡಬೇಕಾದ ಕಾಲ ಬಂತು ಎಂದು ಗೊಣಗುವುದನ್ನು ಕಾಣಬಹುದು. ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸಿದಂತೆ ಹಲಸಿನ ಹಣ್ಣಿನಲ್ಲಿಯೂ ವೈದ್ಯರನ್ನು ದೂರವಿರಿಸಲು ಅಗತ್ಯವಾದ ಪೋಷಕಾಂಶಗಳಿವೆ.

  ಹಲಸಿನ ರುಚಿಯನ್ನು ಮೆಚ್ಚಿದ ಜನತೆ ಇಂದು ಬಹಳವಾಗಿಯೇ ಕೊಳ್ಳುತ್ತಿದ್ದಾರೆ. ಹಲಸಿನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ತಳಿಗಳಿವೆ, ಆದರೆ ಮಾರಾಟಕ್ಕೆ ಬರುವುದು ನಾಲ್ಕಾರು ತಳಿಗಳು ಮಾತ್ರ. ಹಲಸು ವಾಸ್ತವವಾಗಿ ಮಲ್ಬೆರಿ (mulberry) ಹಣ್ಣುಗಳ ಜಾತಿಗೆ ಸೇರಿದೆ. ಹಲಸಿನ ಹಣ್ಣನ್ನು ಬಿಟ್ಟು ಉಳಿದ ಹಣ್ಣುಗಳೆಲ್ಲಾ ಕಿರುಬೆರಳಿನ ಗಾತ್ರದವು. ಆದರೆ ಸಸ್ಯಶಾಸ್ತ್ರ ಈ ಹಣ್ಣನ್ನು ಚಿಕ್ಕ ಹಣ್ಣುಗಳ ಜೊತೆಗೇ ಸೇರಿಸಲು ಕಾರಣಗಳಿವೆ.

  ಇದರಲ್ಲಿರುವ ವಿಟಮಿನ್ ಸಿ, ಎ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ನಿಯಾಸಿನ್, ಥಿಯಾಮಿನ್, ರೈಬೋಫ್ಲೋವಿನ್ ಮೊದಲಾದ ಪೋಷಕಾಂಶಗಳು ಚಿಕ್ಕ ಹಣ್ಣುಗಳ ಪ್ರಮಾಣದಲ್ಲಿಯೇ ಇವೆ. ಹಲಸನ್ನು ತರಕಾರಿಯಾಗಿ, ಹಣ್ಣಾಗಿ, ಬೋಂಡ ಮೊದಲಾದ ತಿನಿಸುಗಳಾಗಿ, ಹಪ್ಪಳ, ಸಂಡಿಗೆ ಮೊದಲಾದ ಹುರಿದು ತಿನ್ನಬಹುದಾದ ಖಾದ್ಯಗಳಾಗಿ ಸೇವಿಸಬಹುದು. ಈ ಅದ್ಭುತ ಹಲಸಿನ ಇತರ ಪ್ರಯೋಜಗಳಲ್ಲಿ ಪ್ರಮುಖವಾದ ಹದಿನೈದನ್ನು ಇಲ್ಲಿ ವಿವರಿಸಲಾಗಿದೆ.

   ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

  ಹಲಸಿನ ಹಣ್ಣಿಸ ಸೇವನೆಯಿಂದ ಕರುಳುಗಳ ಹುಣ್ಣು ಶೀಘ್ರವಾಗಿ ವಾಸಿಯಾಗುತ್ತದೆ ಹಾಗೂ ಮತ್ತೊಮ್ಮೆ ಬರದಿರುವಂತೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಬಡಿಸುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಮಲಬದ್ದತೆಯಾಗುವುದನ್ನು ತಡೆಯುತ್ತದೆ.

   ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

  ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

  ಹೊಟ್ಟೆಯಲ್ಲಿ ಕೇವಲ ಸಿಕ್ಸ್ ಪ್ಯಾಕ್ ಸ್ನಾಯುಗಳನ್ನು ಹೊಂದುವುದರಿಂದ ದೇಹ ದೇಹದಾರ್ಢ್ಯತೆ ಪಡೆಯುವುದಿಲ್ಲ. ದೇಹದ ಪ್ರತಿಯೊಂದು ಅಂಗವೂ ತನ್ನ ಪೂರ್ಣಸಾಮರ್ಥ್ಯದಲ್ಲಿ ಕೆಲಸ ಮಾಡಲು ಸಮರ್ಥವಾದಾಗ ಹಾಗೂ ಯಾವುದೇ ಕೆಲಸವನ್ನು ಬಹಳ ಹೆಚ್ಚಿನ ಹೊತ್ತು ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುವುದೇ ನಿಜವಾದ ದೇಹದಾರ್ಢ್ಯತೆ. ಹಲಸಿನ ಹಣ್ಣಿನಲ್ಲಿರುವ ಫ್ರುಕ್ಟೋಸ್ ಮತ್ತು ಸುಕ್ರೋಸ್ ಎಂಬ ಸಕ್ಕರೆಗಳು ರಕ್ತದಲ್ಲಿ ಗ್ಲುಕೋಸ್ ಸಕ್ಕರೆಯ ಪ್ರಮಾಣದಲ್ಲಿ ವ್ಯತ್ಯಯವಾಗದಂತೆ ಜೀವಕೋಶಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವ ಮೂಲಕ ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ.

  ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿರಿಸುತ್ತದೆ

  ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿರಿಸುತ್ತದೆ

  ಹಲಸಿನ ಬೇರು ಅಸ್ತಮಾ ರೋಗಕ್ಕೆ ಉತ್ತಮ ಪರಿಹಾರ ನೀಡಬಲ್ಲುದು ಎಂದು ಸಂಶೋಧನೆಗಳಿಂದ ಇತ್ತೀಚೆಗೆ ತಿಳಿದುಬಂದಿದೆ. ಇದಕ್ಕಾಗಿ ಹಲಸಿನ ಬೇರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುವುದನ್ನು ಗಮನಿಸಲಾಗಿದೆ.

  ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ

  ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ

  ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿಯಿಂದ ನಿಯಮಿತವಾಗಿ ಹಾರ್ಮೋನುಗಳು ಬಿಡುಗಡೆಯಾಗುತ್ತಾ ಇರಬೇಕು. ಜೊತೆಗೇ ಈ ಹಾರ್ಮೋನುಗಳ ಪ್ರಮಾಣ ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ಈ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ಹಲಸಿನಹಣ್ಣಿನ ಪೋಷಕಾಂಶಗಳು ನೆರವಾಗುತ್ತವೆ.

  ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

  ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

  ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಇದು ಕ್ಯಾಲ್ಸಿಯಂ ಖನಿಜವನ್ನು ಹೀರಿಕೊಳ್ಳುತ್ತದೆ. ಈ ಖನಿಜ ಮೂಳೆಗಳಲ್ಲಿ ವಾಯುಗುಳ್ಳೆಗಳು ತುಂಬಿಕೊಂಡು ಟೊಳ್ಳಾಗುವುದರಿಂದ (osteoporosis)ರಕ್ಷಿಸುತ್ತದೆ. ಜೊತೆಗೇ ಎರಡು ಮೂಳೆಗಳು ಕೂಡುವಲ್ಲಿ ಎಣ್ಣೆಯಂತಹ ದ್ರವ ಕಡಿಮೆಯಾಗಿ ನೋವುಂಟಾಗುವ arthritis ರೋಗ ಬರುವ ಸಂಭವವನ್ನೂ ಕಡಿಮೆಗೊಳಿಸುತ್ತದೆ.

  ವೃದ್ಧಾಪ್ಯವನ್ನು ದೂರಮಾಡುತ್ತದೆ

  ವೃದ್ಧಾಪ್ಯವನ್ನು ದೂರಮಾಡುತ್ತದೆ

  ಹಲಸಿನ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮ ಕಾಂತಿ ಮತ್ತು ಸೆಳೆತ ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಕಳೆ, ಕೋಮಲತೆ ಮತ್ತು ಕಾಂತಿಯನ್ನು ನೀಡುವ ಮೂಲಕ ತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

  ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

  ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

  ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಇದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವುದು ಮಾತ್ರವಲ್ಲದೇ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಣೆಯನ್ನೂ ನೀಡುತ್ತದೆ. ಕಣ್ಣಿನ ನರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಹಾಗೂ ಕ್ಯಾಟರಾಕ್ಟ್ ನಂತಹ ಕಣ್ಣಿನ ತೊಂದರೆಗಳು ಕಾಡದಂತೆ ರಕ್ಷಿಸುತ್ತದೆ.

  ಕರುಳಿನ ಕ್ಯಾನ್ಸರ್ ಬರದಂತೆ ಹಾಗೂ ಮೂಲವ್ಯಾಧಿಯಿಂದ ರಕ್ಷಿಸುತ್ತದೆ

  ಕರುಳಿನ ಕ್ಯಾನ್ಸರ್ ಬರದಂತೆ ಹಾಗೂ ಮೂಲವ್ಯಾಧಿಯಿಂದ ರಕ್ಷಿಸುತ್ತದೆ

  ಕೆಲವೊಮ್ಮೆ ಆಹಾರದ ಮೂಲಕ ದೇಹ ಪ್ರವೇಶಿಸುವ ಕ್ಯಾನ್ಸರ್ ಕಾರಕ ಕಣಗಳು (free radicals) ಕರುಳಿನ ಒಳಭಾಗದಲ್ಲಿ ಚಿಕ್ಕದಾಗಿ ಕ್ಯಾನ್ಸರ್ ಹಬ್ಬಿಸಿ ನಿಧಾನವಾಗಿ ಉಲ್ಬಣಿಸಲು ಕಾರಣವಾಗುತ್ತವೆ. ಹಲಸಿನ ಹಣ್ಣಿನಲ್ಲಿ ಈ ಕಣಗಳಿಗೆ ಪ್ರತ್ಯುತ್ತರ ನೀಡುವ ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಒಂದು ವೇಳೆ ಕ್ಯಾನ್ಸರ್ ಕಣಗಳು ಪ್ರಾರಂಭಹಂತದಲ್ಲಿದ್ದರೆ ಸುಲಭವಾಗಿ ನಿವಾರಿಸಲ್ಪಡುತ್ತವೆ. ಜೊತೆಗೇ ಉತ್ತಮ ಪ್ರಮಾಣದಲ್ಲಿರುವ ಕರಗದ ನಾರು ಮಲಬದ್ದತೆ ಮತ್ತು ಮೂಲವ್ಯಾಧಿಯಾಗುವುದರಿಂದ ರಕ್ಷಿಸುತ್ತದೆ.

  ಗರ್ಭಿಣಿಯರಿಗೂ ಉತ್ತಮವಾಗಿದೆ

  ಗರ್ಭಿಣಿಯರಿಗೂ ಉತ್ತಮವಾಗಿದೆ

  ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶ ಮತ್ತು ವಿಟಮಿನ್ ಗಳ ಅಗತ್ಯವಿದೆ. ವಿಶೇಷವಾಗಿ ವಿಟಮಿನ್ ಬಿ (niacin) ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯರಿಗೆ ದಿನವಿಡೀ ಅಗತ್ಯವಿರುವ ಪ್ರಮಾಣವನ್ನು ಪೂರೈಸುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ವಿವಿಧ ಹಾರ್ಮೋನುಗಳು ಸೂಕ್ತಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ. ಹಲಸಿನ ಹಣ್ಣಿನ ಪೋಷಕಾಂಶಗಳು ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿರುವ ತಾಯಿಹಾಲನ್ನು ಉತ್ಪಾದಿಸಲೂ ನೆರವಾಗುತ್ತವೆ.

  ಹಲಸಿನ ಬೀಜ ಕೂಡ ಉಪಕಾರಿ

  ಹಲಸಿನ ಬೀಜ ಕೂಡ ಉಪಕಾರಿ

  ಹಲಸಿನ ಬೀಜವನ್ನು ಸುಟ್ಟು ತಿನ್ನಬಹುದು ಅಥವಾ ಸಾರಿನಲ್ಲಿ ಬೇಯಿಸಿಯೂ ಸೇವಿಸಬಹುದು. ಹಲಸಿನ ಬೀಜದ ಮುಖಲೇಪದಿಂದ ಸೌಂದರ್ಯವೂ ವೃದ್ಧಿಸುವುದು. ಇದಕ್ಕಾಗಿ ಹಲಸಿನ ಹಸಿ ಬೀಜವೊಂದನ್ನು ಕಲ್ಲಿನ ಮೇಲೆ ಉಜ್ಜಿ ನಯವಾಗಿ ಅರೆದು ಸಮಪ್ರಮಾಣದಲ್ಲಿ ಜೇನು ಮತ್ತು ಹಾಲನ್ನು ಸೇರಿಸಿ ಮುಖಕ್ಕೆಹಚ್ಚಿ ಅರ್ಧಘಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ನೆರಿಗೆಗಳಾಗುವುದನ್ನೂ ತಪ್ಪಿಸಬಹುದು. ಹಲಸಿನ ಬೀಜ ವಾಯುಪ್ರಕೋಪವನ್ನು ಹೆಚ್ಚಿಸುವುದರಿಂದ ಈ ತೊಂದರೆ ಇರುವವರು ಸೇವಿಸದಿರುವುದು ಉತ್ತಮ.

  ತೂಕ ಇಳಿಸಲು ನೆರವಾಗುತ್ತದೆ

  ತೂಕ ಇಳಿಸಲು ನೆರವಾಗುತ್ತದೆ

  ಒಂದು ಕಪ್ ಹಲಸಿನ ತೊಳೆಯಲ್ಲಿ ಕೇವಲ 155 ಕ್ಯಾಲೋರಿಗಳಿದ್ದು ಇದು ಹೊಟ್ಟೆಯನ್ನು ತುಂಬಿಸುವ ಜೊತೆಗೇ ತೂಕ ಹೆಚ್ಚದಿರುವಂತೆ ನೋಡಿಕೊಳ್ಳುತ್ತದೆ.

  ಕರಗದ ನಾರು

  ಕರಗದ ನಾರು

  ಒಂದು ಕಪ್ ನಷ್ಟು ಹಲಸಿನ ತೊಳೆಗಳಲ್ಲಿ 11% ಕ್ಕೂ ಹೆಚ್ಚು ಪ್ರಮಾಣದ ನಿತ್ಯದ ಅಗತ್ಯದ ಕರಗದ ನಾರನ್ನು ಪಡೆಯಬಹುದು.

  ವಿಟಮಿನ್ನುಗಳ ಆಗರ

  ವಿಟಮಿನ್ನುಗಳ ಆಗರ

  ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಫೋಲೇಟ್, ನಿಯಾಸಿನ್, ಥಿಯಾಮೈನ್ ಮತ್ತು ರೈಬೋಫ್ಲೇವಿನ್ ನಂತಹ ಪೋಷಕಾಂಶಗಳಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ.

  ಇತರ ಪ್ರಯೋಜನಗಳು

  ಇತರ ಪ್ರಯೋಜನಗಳು

  ಹಣ್ಣಾಗುವ ಮೊದಲೇ ಕತ್ತರಿಸಿದ ಕಾಯಿಯಲ್ಲಿ (ಗುಜ್ಜೆ) ಪಿಷ್ಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜೊತೆಗೆ ವಿವಿಧ ಪ್ರೋಟೀನುಗಳು ಮತ್ತು ಖನಿಜಗಳಿವೆ. ಗುಜ್ಜೆಯನ್ನು ಸಾರು ಮಾಡಿ ಅನ್ನದೊಂದಿಗೆ ಕೊಂಚ ಉಪ್ಪಿನಕಾಯಿ ಸೇರಿಸಿ ತಿಂದರೆ ಸಿಗುವ ಆನಂದವೇ ಬೇರೆ. ಹಲಸಿನ ಬೀಜದ ಮತ್ತು ಹಣ್ಣಿನಿಂದ ತಯಾರಿಸಿದ ವಿವಿಧ ತಿನಿಸುಗಳು ಎಲ್ಲರ ಅಚ್ಚುಮೆಚ್ಚಿನದ್ದಾಗಿವೆ. ಜ್ವರ ಬಂದಾಗ ಹಲಸಿನ ಹಣ್ಣನ್ನು ತಿಂದರೆ ಮೈಜ್ವರ ಇಳಿದಿರುವುದನ್ನು ಗಮನಿಸಲಾಗಿದೆ.

  ಹಲಸಿನ ಹಣ್ಣಿನ ಅಡ್ಡಪರಿಣಾಮಗಳು

  ಹಲಸಿನ ಹಣ್ಣಿನ ಅಡ್ಡಪರಿಣಾಮಗಳು

  ಎಲ್ಲಾ ಆಹಾರಗಳಲ್ಲಿರುವಂತೆ ಹಲಸಿನಲ್ಲಿಯೂ ಕೆಲವು ಅಡ್ಡಪರಿಣಾಮಗಳಿವೆ. ಈ ತೊಂದರೆಗಳಿರುವವರು ಹಲಸಿನ ಸೇವನೆಯನ್ನು ವರ್ಜಿಸುವುದು ಒಳಿತು

  * ಹೂವಿನ ಪರಾಗದ (ವಿಶೇಷವಾಗಿ birch pollen ಎಂಬ ಪರಾಗ) ಅಲರ್ಜಿಯುಳ್ಳವರಿಗೆ ಹಲಸು ಹೇಳಿಸಿದ್ದಲ್ಲ.

  * ರಕ್ತಹೆಪ್ಪುಗಟ್ಟುವ ತೊಂದರೆ ಇರುವ ರೋಗಿಗಳಿಗೂ ಹಲಸು ಒಳ್ಳೆಯದಲ್ಲ. ಇದು ರಕ್ತವನ್ನು ಶೀಘ್ರವಾಗಿ ಹೆಪ್ಪುಗಟ್ಟಿಸುವುದರಿಂದ ತೊಂದರೆ ಹೆಚ್ಚಬಹುದು.

  * ಮಧುಮೇಹಿಗಳಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವುದರಿಂದ ಮಧುಮೇಹಿಗಳಿಗೂ ಹಿತವಲ್ಲ

  * ಅಂಗಾಂಶ ಕಸಿ, immunosuppression therapy ಮೊದಲಾದ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಿತವಲ್ಲ

  * ಸಂತಾನ ಬಯಸುತ್ತಿರುವ ದಂಪತಿಗಳಿಗೆ ಹಲಸು ಹೇಳಿಸಿದ್ದಲ್ಲ. ಏಕೆಂದರೆ ಪುರುಷರಲ್ಲಿ ನಿಮಿರುದೌರ್ಬಲ್ಯವನ್ನು ಹಲಸು ಕೊಂಚಮಟ್ಟಿಗೆ ಕಡಿಮೆಗೊಳಿಸುವುದು

  ಕಂಡುಬಂದಿದೆ.

  * ಗರ್ಭವತಿಯರಿಗೆ ಪ್ರಾರಂಭದ ಮೂರು ತಿಂಗಳವರೆಗೆ ಗುಜ್ಜೆ (ಹಲಸಿನ ಕಾಯಿ) ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣು ಮತ್ತು ಖಾದ್ಯ ತಿನ್ನುವುದರಿಂದ

  ಗರ್ಭಾಪಾತವಾಗುವ ಸಾಧ್ಯತೆ ಹೆಚ್ಚುತ್ತದೆ.

  * ಹಲಸಿನಲ್ಲಿ ಕರಗದ ನಾರಿನ ಪ್ರಮಾಣ ಹೆಚ್ಚಿರುವ ಕಾರಣ ತುಂಬಾ ಹೆಚ್ಚು ತಿನ್ನುವುದು ತರವಲ್ಲ. ಏಕೆಂದರೆ ಅತಿಹೆಚ್ಚು ಪ್ರಮಾಣದಲ್ಲಿ ನಾರು ಕರುಳಿನಲ್ಲಿ

  ಶೇಖರವಾದರೆ ಇತರ ತೊಂದರೆಗಳೂ ಎದುರಾಗಬಹುದು.

  English summary

  Proven Health Benefits of Jackfruit and Nutrition Facts

  Jackfruit has shown an effective result in preventing lungs, oral cavity and colon cancers. Besides acting as an anti-cancer element, there are other benefits of jackfruit as well, which are as give below.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more