For Quick Alerts
ALLOW NOTIFICATIONS  
For Daily Alerts

ಮುಜುಗರ ಉಂಟು ಮಾಡುವ ಸಮಸ್ಯೆ-ಸೆಕ್ಸ್ ವೇಳೆ ಮೂತ್ರ ವಿಸರ್ಜನೆ!

By Hemanth
|

ಗೂಗಲ್ ನಲ್ಲಿ ಹೋಗಿ ಸೆಕ್ಸ್ ಎನ್ನುವ ಪದ ಟೈಪ್ ಮಾಡಿದರೆ ನಿಮಗೆ ಸಾವಿರಾರು ಸಲಹೆಗಳು, ಸೂಚನೆಗಳು ಹಾಗೆ ಎಚ್ಚರಿಕೆಗಳು ಸಿಗುವುದು. ಇದರಲ್ಲಿ ಕೆಲವು ಕುತೂಹಲಕಾರಿಯಾಗಿದ್ದರೆ, ಇನ್ನು ಕೆಲವು ತುಂಬಾ ಮುಜುಗರ ಉಂಟು ಮಾಡುವುದು. ಇದರಲ್ಲಿ ಒಂದು ಕೆಲವು ಮಂದಿ ಲೈಂಗಿಕ ಕ್ರಿಯೆ ವೇಳೆ ಮೂತ್ರವಿಸರ್ಜನೆ ಮಾಡುವುದು ಅಥವಾ ತನ್ನ ಸಂಗಾತಿಯು ಮೂತ್ರ ವಿಸರ್ಜಿಸಬೇಕೆಂದು ಬಯಸುವುದು. ಇದು ಹೀಗೆ ಯಾಕೆ ನಡೆಯುತ್ತದೆ ಮತ್ತು ಇದರಿಂದ ಲೈಂಗಿಕ ಕ್ರಿಯೆಯು ಮತ್ತಷ್ಟು ರೋಮಾಂಚಕಾರಿಯಾಗುವುದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆಗಳು ಏಳಬಹುದು.

ಇದು ಸಂಪೂರ್ಣವಾಗಿ ಮಹಿಳೆಯರ ವಿಚಾರ. ಯಾಕೆಂದರೆ ಪುರುಷರಲ್ಲಿ ನಿಮಿರದ ಶಿಶ್ನವು ಅವರ ಮೂತ್ರವಿಸರ್ಜನೆಯನ್ನು ತಡೆಯುವುದು. ಲೈಂಗಿಕ ಕ್ರಿಯೆ ವೇಳೆ ಮೂತ್ರವಿಸರ್ಜನೆ ಆಗುವುದು ಹೇಗೆ ಮತ್ತು ಇದು ಕೆಲವರಲ್ಲಿ ರೋಮಾಂಚನ ಉಂಟು ಮಾಡಲು ಕಾರಣವೇನು ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ.

ಇದು ಮೂತ್ರ ವಿಸರ್ಜನೆಯಾ ಅಥವಾ ಹೊರಚೆಲ್ಲುವಿಕೆಯಾ?

ಇದು ಮೂತ್ರ ವಿಸರ್ಜನೆಯಾ ಅಥವಾ ಹೊರಚೆಲ್ಲುವಿಕೆಯಾ?

ಇದು ಮೂತ್ರ ವಿಸರ್ಜನೆಯಾ ಅಥವಾ ಹೊರಚೆಲ್ಲುವಿಕೆಯಾ? ಹೌದು, ಮಹಿಳೆಯರಿಗೆ ಕೂಡ ಸ್ಖಲನವಾಗಬಹುದು ಮತ್ತು ಇದನ್ನು ಮೂತ್ರವಿಸರ್ಜನೆಯೆಂದು ತಪ್ಪಾಗಿ ತಿಳಿದುಕೊಳ್ಳುವರು. ಅಧ್ಯಯನಗಳ ಪ್ರಕಾರ ಶೇ. 60ರಷ್ಟು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆ ವೇಳೆ ಅಸಂಯಮದ ಅನುಭವವಾಗುವುದು. ಕೆಲವರು ಇದನ್ನು ಮೂತ್ರವಿಸರ್ಜನೆ ಎಂದು ಭಾವಿಸಬಹುದು. ಆದರೆ ಇದು ನಿಜವಾಗಿಯೂ ಹೊರಚೆಲ್ಲುವಿಕೆಯಾಗಿದೆ. ಅಧ್ಯಯನಗಳು ಹೇಳುವಂತೆ ಹೊರಚೆಲ್ಲಲ್ಪಡುವಂತಹ ದ್ರವವು ಮೂತ್ರವಂತೆ. ಆದರೆ ಕೆಲವು ಆರೋಗ್ಯ ತಜ್ಞರ ಪ್ರಕಾರ ಪ್ಯಾರೆರೆಥ್ರಲ್ ಗ್ರಂಥಿಗಳು ದ್ರವವನ್ನು ಉತ್ಪತ್ತಿ ಮಾಡುವುದು ಮತ್ತು ಇದು ಪುರುಷರ ವೀರ್ಯಕ್ಕೆ ಸಮನವಾಗಿರುವುದು.

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಲ್ಲಿ ಮೂತ್ರವಿಸರ್ಜನೆಯಾಗಲು ಕಾರಣವೇನು?

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಲ್ಲಿ ಮೂತ್ರವಿಸರ್ಜನೆಯಾಗಲು ಕಾರಣವೇನು?

ಲೈಂಗಿಕ ಕ್ರಿಯೆ ವೇಳೆ ಉಂಟಾಗುವಂತಹ ಅಸಂಯಮವು ಮೂತ್ರವಿಸರ್ಜನೆಗೆ ಕಾರಣವಾಗಿದೆ. ಮೂತ್ರನಾಳಗಳಿಗೆ ಯಾವುದೇ ರೀತಿಯ ನಿಯಂತ್ರಣವಿರದೆ ಇರುವ ಕಾರಣದಿಂದ ಇದು ಉದ್ದೇಶಪೂರ್ವಕವಾಗಿ ಮಾಡಿರುವಂತದಲ್ಲ. ಲೈಂಗಿಕ ಉತ್ತೇಜನವು ಮೂತ್ರನಾಳಗಳ ಮೇಲೆ ಒತ್ತಡ ಹಾಕುವುದು ಮತ್ತು ಇದರೊಂದಿಗೆ ಶ್ರೋಣಿಯ ಸ್ನಾಯುಗಳು ದುರ್ಬಲವಾದಾಗ ಅಸಂಯಮ ಕಾಡುವುದು.

ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

ಲೈಂಗಿಕ ಕ್ರಿಯೆ ವೇಳೆ ಪುರುಷರಲ್ಲಿ ಅಸಂಯಮ

ಲೈಂಗಿಕ ಕ್ರಿಯೆ ವೇಳೆ ಪುರುಷರಲ್ಲಿ ಅಸಂಯಮ

ಶಿಶ್ನವು ನಿಮಿರಿದಾಗ ಮೂತ್ರಕೋಶದ ತಳಭಾಗದಲ್ಲಿ ಇರುವಂತಹ ಸ್ಪಿನ್ನಿಟರ್ ಮುಚ್ಚುವುದು. ಇದರಿಂದ ಲೈಂಗಿಕ ಕ್ರಿಯೆ ವೇಳೆ ಮೂತ್ರವಿಸರ್ಜನೆಯಾಗುವುದಿಲ್ಲ ಮತ್ತು ಲೈಂಗಿಕ ಕ್ರಿಯೆ ವೇಳೆ ಮೂತ್ರವಿಸರ್ಜನೆ ಮಾಡಲು ಹೆಚ್ಚಿನ ಪುರುಷರಿಗೆ ಸಾಧ್ಯವಾಗದು. ಜನನೇಂದ್ರಿಯ ಗ್ರಂಥಿಯ ಕ್ಯಾನ್ಸರ್ ಗಾಗಿ ಜನನೇಂದ್ರೀಯ ಗ್ರಂಥಿಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿಕೊಂಡಿರುವ ಪುರುಷರರಲ್ಲಿ ಅಸಂಯಮದ ಸಾಧ್ಯತೆಯು ಅತಿಯಾಗಿರುವುದು. ಇವರಿಗೆ ಲೈಂಗಿಕ ಕ್ರಿಯೆ ಮೊದಲಿನಾಟ ಅಥವಾ ಸ್ಖಲನ ವೇಳೆ ಮೂತ್ರವಿಸರ್ಜನೆಯಾಗಬಹುದು.

ಮೂತ್ರ ಮಾಂತ್ರಿಕವೇ ಅಥವಾ ಇದನ್ನು ಮಾಂತ್ರಿಕ ಸ್ವರ್ಣಸ್ನಾನವೆನ್ನಬಹುದೇ?

ಮೂತ್ರ ಮಾಂತ್ರಿಕವೇ ಅಥವಾ ಇದನ್ನು ಮಾಂತ್ರಿಕ ಸ್ವರ್ಣಸ್ನಾನವೆನ್ನಬಹುದೇ?

ಇದೊಂದು ಮಾಂತ್ರಿಕ ವಸ್ತು. ಇದನ್ನು ಯೂರೋಫಿಲಿಯಾ ಎಂದು ಕರೆಯಲಾಗುತ್ತದೆ, ಇದು ಸ್ಯಾಲಿರೊಫಿಲಿಯಾ ರೂಪವಾಗಿದ್ದು, ಲೈಂಗಿಕ ಉದ್ರೇಕದ ವೇಳೆ ಮೂತ್ರವಿಸರ್ಜನೆಯಿಂದ ಅವರಿಗೆ ರೋಮಾಂಚನವಾಗುವುದು. ನಮ್ಮ ಸಮಾಜದಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುವುದು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಇದು ಮತ್ತೊಂದು ಅಂತಹ ವಿಚಾರವಾಗಿದೆ. ಸ್ನಾನಗೃಹದಲ್ಲಿನ ನಮ್ಮ ಹವ್ಯಾಸಗಳು. ಯೂರೋಫಿಲಿಯಾವು ಈ ಎರಡು ವಿಚಾರಗಳನ್ನು ಜತೆಗೂಡಿಸುವುದು ಮತ್ತು ತಮ್ಮ ಮುಂದೆ ಸಂಗಾತಿಯು ಮೂತ್ರವಿಸರ್ಜನೆ ಮಾಡಬೇಕೆಂದು ಹೇಳುವುದು ಅವರ ಅನ್ಯೋನ್ಯತೆಗೆ ಸಾಕ್ಷಿಯಾಗಿದೆ. ಇದು ಅವರಿಬ್ಬರ ನಡುವಿನ ಪ್ರೀತಿ ಹಾಗೂ ಅನ್ಯೋನ್ಯತೆ ಎಂದು ಅವರು ತಿಳಿದಿರುವರು.

ಮೂತ್ರವಿಸರ್ಜನೆ ಕಾಮೋದ್ರೇಕಗೊಳಿಸುವುದೇ?

ಮೂತ್ರವಿಸರ್ಜನೆ ಕಾಮೋದ್ರೇಕಗೊಳಿಸುವುದೇ?

ಕೆಲವು ಜನರಿಗೆ ಮೂತ್ರವಿಸರ್ಜನೆ ಮಾಡುವುದನ್ನು ನೋಡಿ ಕಾಮೋದ್ರೇಕವಾಗುವುದು ಎನ್ನುವುದು ಯಾಕೆಂದು ತಿಳಿದಿಲ್ಲ. ಕೆಲವರಿಗೆ ಈ ವೇಳೆ ಅಶುದ್ಧವಾಗುವುದು ಬೇಕಾಗುತ್ತದೆ ಮತ್ತು ಮೂತ್ರವಿಸರ್ಜನೆಯಿಂದ ಅವರಲ್ಲಿನ ಕಾಮಾಸಕ್ತಿಯು ಹೆಚ್ಚಾಗಬಹುದು. ಇನ್ನೊಂದು ಕಾರಣವೆಂದರೆ ಇವರು ಲೈಂಗಿಕ ಕ್ರಿಯೆಯಲ್ಲೂ ತುಂಬಾ ಸಾಹಸಿ ಪ್ರವೃತ್ತಿಯನ್ನು ಹೊಂದಿರುವವರು ಆಗಿರುವರು. ಇದರಿಂದ ಯಾವುದೇ ಅಪಾಯ ಅಥವಾ ನೋವು ಇಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಕೆಲವರು ಇದನ್ನು ವಿಶೇಷವೆಂದು ಪರಿಗಣಿಸಿದರೆ, ಇನ್ನು ಕೆಲವರಿಗೆ ಪ್ರತಿಯೊಂದು ಬೇಕಾಗುವುದು.

ಇದಕ್ಕೆ ಚಿಕಿತ್ಸೆ ಇದೆಯಾ?

ಇದಕ್ಕೆ ಚಿಕಿತ್ಸೆ ಇದೆಯಾ?

ಪತಿಯ ಈ ರೀತಿಯ ಬೇಡಿಕೆಯು ನಿಮಗೆ ನಿಜವಾಗಿಯು ಮುಜುಗರ ಉಂಟುಮಾಡಿದ್ದರೆ ಆಗ ನೀವು ತಜ್ಞರನ್ನು ಭೇಟಿಯಾಗಬಹುದು. ಇದು ಸಾಮಾನ್ಯ ಲೈಂಗಿಕ ಚಟುವಟಿಕೆಯಲ್ಲ ಮತ್ತು ಸಮಾಜದ ಕಣ್ಣುಗಳಿಗೆ ಇದು ಕಾಣಿಸುತ್ತಿಲ್ಲ. ಇಂತಹ ಸಮಸ್ಯೆಯು ಹಲವಾರು ಮಂದಿಗೆ ಇರಬಹುದು. ಆದರೆ ಕೆಲವರು ತಮ್ಮ ಮರ್ಯಾದೆಗೆ ಅಂಜಿಕೊಂಡು ಇದನ್ನು ಬಹಿರಂಗಪಡಿಸುವುದಿಲ್ಲ. ಲೈಂಗಿಕ ಕ್ರಿಯೆ ವೇಳೆ ಇದು ಸ್ಖಲನವೇ ಅಥವಾ ಮೂತ್ರ ವಿಸರ್ಜನೆಯಾ ಎಂದು ವೈದ್ಯರು ಕೂಡ ಪತ್ತೆ ಹಚ್ಚಬಲ್ಲರು. ಶ್ರೋಣಿಯ ಸ್ನಾಯುಗಳನ್ನು ಬಳಪಡಿಸಲು ಕೆಲವು ವ್ಯಾಯಾಮ ಮತ್ತು ಜೀವನಶೈಲಿಯಲ್ಲಿನ ಕೆಲವೊಂದು ಬದಲಾವಣೆಗಳ ಬಗ್ಗೆ ವೈದ್ಯರು ಸಲಹೆ ನೀಡಬಹುದು.

English summary

Peeing During Sex things you should know

Peeing during sex is a very common concern. This is mainly a female issue because men’s bodies have a natural mechanism that prevents urination when they have an erection. As many as 60 percent of women who have some level of general incontinence experience leakage during sex. Some women who worry that they’re peeing during sex may not really be urinating, however. Instead they may be experiencing female ejaculation during orgasm.
Story first published: Tuesday, August 7, 2018, 17:51 [IST]
X
Desktop Bottom Promotion