For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿಯೇ ಇದೆ, ಕೆಲವು ನೈಸರ್ಗಿಕ ನೋವು ನಿವಾರಕಗಳು!

By Hemanth
|

ದೇಹದಲ್ಲಿ ಸಣ್ಣ ನೋವು ಕಾಣಿಸಿಕೊಂಡರೂ ತಕ್ಷಣ ಹೋಗಿ ನೋವು ನಿವಾರಕ ಮಾತ್ರೆ ಸೇವನೆ ಮಾಡುವುದು ಹೆಚ್ಚಿನವರಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಇದರಿಂದ ದೇಹದ ಮೇಲೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಅವರು ಆಲೋಚನೆ ಮಾಡುವುದೇ ಇಲ್ಲ. ಯಾಕೆಂದರೆ ದೀರ್ಘಕಾಲ ತನಕ ನೋವು ನಿವಾರಕ ಮಾತ್ರೆಗಳ ಸೇವನೆ ಮಾಡುತ್ತಲಿದ್ದರೆ ಅದರಿಂದ ಯಕೃತ್(ಲಿವರ್), ಕಿಡ್ನಿ ಮತ್ತು ಕರುಳಿನ ಮೇಲೆ ತೀವ್ರ ಪರಿಣಾಮವಾಗುವುದು.

ಉರಿಯೂತ ಶಮನಕಾರಿ ಮಾತ್ರೆಗಳು ಕೂಡ ನಿಮ್ಮ ಮೆದುಳು ಅಥವಾ ಯಕೃತ್ ಗೆ ಹಾನಿ ಮಾಡುವುದು, ಅಜೀರ್ಣ, ಆಯಾಸ, ಖಿನ್ನತೆ, ತುರಿಕೆ, ವಾಕರಿಕೆ, ಅತಿಯಾಗಿ ಬೆವರುವುದು, ಪ್ರತಿರೋಧಕ ಶಕ್ತಿ ದುರ್ಬಲವಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಮೆಡಿಕಲ್ ನಿಂದ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ನೈಸರ್ಗಿಕವಾಗಿರುವಂತಹ ನೋವುನಿವಾರಕ ತೆಗೆದುಕೊಂಡರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ನಿಮ್ಮ ಮೇಲೆ ಆಗದು.

ಇದು ಸಣ್ಣ ನೋವಿನಿಂದ ಹಿಡಿದು ತೀವ್ರವಾಗಿರುವ ನೋವನ್ನು ನಿವಾರಣೆ ಮಾಡುವಂತಹ ಸಾಮರ್ಥ್ಯ ಹೊಂದಿದೆ. ಹಾಗಾದರೆ ಇನ್ನೇಕೆ ತಡ, ನೀವು ಮೆಡಿಕಲ್ ಗೆ ಹಾದಿ ಹಿಡಿಯುವ ಬದಲು ನೇರವಾಗಿ ಅಡುಗೆ ಕೋಣೆಗೆ ಹೋಗಿ, ನೈಸರ್ಗಿಕವಾಗಿರುವ ನೋವು ನಿವಾರಕ ತೆಗೆದುಕೊಳ್ಳಿ.

ಅರಿಶಿನ

ಅರಿಶಿನ

ಹಲ್ಲು ನೋವಿನಿಂದ ಹಿಡಿದು, ಸ್ನಾಯು ನೋವು ಮತ್ತು ಬೆನ್ನು ನೋವಿಗೆ ಅರಿಶಿನವನ್ನು ಹಿಂದಿನಿಂದಲು ಬಳಸಿಕೊಂಡು ಬರಲಾಗುತ್ತಾ ಇದೆ. ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ಎನ್ನುವ ಅಂಶವೇ ಇದಕ್ಕೆ ಕಾರಣ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಸ್ನಾಯುಗಳು ಮತ್ತು ಗಂಟು ನೋವನ್ನು ನಿವಾರಣೆ ಮಾಡಿ, ಊತ ತಗ್ಗಿಸುವುದು. ಅರಿಶಿನದಲ್ಲಿ ಆ್ಯಂಟಿಆಕ್ಸಿಡೆಂಟ್, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ನಿಮ್ಮ ಆರೋಗ್ಯ ರಕ್ಷಿಸುವುದು. ಇನ್ನು ಅರಿಶಿನದಲ್ಲಿ ದೇಹವನ್ನು ನಿರ್ವಿಷಗೊಳಿಸುವಂತಹ ಗುಣವಿದೆ ಮತ್ತು ಪ್ರತೀ ದಿನ ಅರಿಶಿನ ನೀರನ್ನು ಕುಡಿದರೆ ದೇಹಕ್ಕೆ ಒಳ್ಳೆಯದು. ನಿರ್ವಿಷಗೊಳಿಸುವ ಪಾನೀಯವನ್ನು ಮಾಡಬೇಕಾದರೆ 1/4 ಚಮಚ ಅರಿಶಿನ ಹುಡಿ, ರುಚಿಗೆ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸವನ್ನು ಬಿಸಿ ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಶುಂಠಿ

ಶುಂಠಿ

ಶುಂಠಿಯಲ್ಲಿರುವಂತಹ ಉರಿಯೂತ ಶಮನಕಾರಿ ಗುಣದಿಂದಾಗಿ ಸ್ನಾಯುಗಳ ಊತ, ಹೊಟ್ಟೆನೋವು, ಎದೆನೋವು, ಸಂಧಿವಾತ ಮತ್ತು ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ನೋವು ಕಡಿಮೆ ಮಾಡುವುದು. ಶ್ವಾಸಕೋಶದ ಮೇಲ್ಭಾಗದ ಸೋಂಕನ್ನು ನಿವಾರಿಸಲು ಇದು ಅದ್ಬುತವಾಗಿ ಕೆಲಸ ಮಾಡುವುದು. ಕೆಮ್ಮು, ಗಂಟಲು ನೋವು ಮತ್ತು ಬ್ರಾಂಕೈಟಿಸ್ ಗೆ ಅದ್ಭುತ ಪರಿಹಾರ ನೀಡುವುದು. ಶುಂಠಿ ಹಾಕಿದ ಚಾ ಕುಡಿಯುವುದರಿಂದ ಮೈಗ್ರೇನ್ ಗೆ ಪರಿಹಾರ ಸಿಗುವುದು ಮತ್ತು ಶುಂಠಿ ಜಗಿದರೆ ಗ್ಯಾಸ್ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಇನ್ನು ಕೆಮ್ಮು, ಅಜೀರ್ಣದ ಸಮಸ್ಯೆ ಇದ್ದರೆ, ಅರ್ಧ ಟೀ ಚಮಚ ಶುಂಠಿ ರಸ, 1 ಟೀ ಚಮಚ ನಿಂಬೆರಸ, ಅಷ್ಟೇ ಪುದೀನ ಎಲೆಯ ರಸ, 1 ಟೀ ಚಮಚ ಜೇನುತುಪ್ಪ ಸೇರಿಸಿ 3 ಭಾಗ ಮಾಡಿ ದಿನಕ್ಕೆ 3 ಬಾರಿ ಸೇವಿಸಲು ಶ್ವಾಸರೋಗ, ಸ್ವರ ಭೇದ, ಅಜೀರ್ಣ, ಕೆಮ್ಮು ರೋಗಗಳನ್ನು ನಿವಾರಿಸಬಹುದು. ಋತುಸ್ರಾವದ ತೊಂದರೆ ಇದ್ದವರು ಒಂದು ಸಣ್ಣ ತುಂಡು ಹಸಿ ಶುಂಠಿಯನ್ನು ಒಂದು ಬಟ್ಟಲು ನೀರಿನಲ್ಲಿ 15 ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡಿದರೆ ಋತುಸ್ರಾವದ ತೊಂದರೆಗಳು ನಿವಾರಣೆಯಾಗುತ್ತದೆ.

ಟಾರ್ಟ್ ಚೆರೀಸ್

ಟಾರ್ಟ್ ಚೆರೀಸ್

ಟಾರ್ಟ್ ಚೆರೀಸ್ ಗಳಲ್ಲಿ ನೋವು ನಿವಾರಕ ಗುಣಗಳು ಇವೆ ಎಂದು ಯಾರಿಗಾದರೂ ತಿಳಿದಿದೆಯಾ? ಚೆರಿಯಲ್ಲಿ ಇರುವಂತಹ ಆಂಥೋಸಿಯಾನ್ಸಿಸ್ ಎನ್ನುವ ಉರಿಯೂತ ಶಮನಕಾರಿ ಗುಣವು ನೋವು ನಿವಾರಕವಾಗಿ ಅದ್ಭುತವಾಗಿ ಕೆಲಸ ಮಾಡುವುದು. ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನ ಪ್ರಕಾರ, ಚೆರ್ರಿಗೆ ಕೆಂಪು ಬಣ್ಣ ನೀಡುವಂತಹ ರಾಸಾಯನಿಕವು ಆಸ್ಪಿರಿನ್ ಮತ್ತು ಬೇರೆಯಾವುದೇ ರೀತಿಯ ನೋವು ನಿವಾರಕಕ್ಕಿಂತ ಚೆನ್ನಾಗಿ ನೋವು ನಿವಾರಣೆ ಮಾಡುವುದು.

ಲವಂಗ

ಲವಂಗ

ಹಿಂದಿನವರು ಹಲ್ಲುನೋವು ಆದರೆ ಲವಂಗ ತೆಗೆದು ಹಲ್ಲಿಗೆ ಇಡುತ್ತಲಿದ್ದರು. ಇದರಲ್ಲಿ ಇರುವಂತಹ ನೋವು ನಿವಾರಕ ನಿಜವಾಗಿ ಕೆಲಸ ಮಾಡುವುದು. ಲವಂಗದಲ್ಲಿ ಉರಿಯೂತ ಶಮನಕಾರಿ, ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಹಲ್ಲುನೋವು, ಬಾಯಿಯೊಳಗಿನ ಸೋಂಕಿನ ವಿರುದ್ಧ ಹೋರಾಡುವುದು. ಇದರಲ್ಲಿ ಇರುವಂತಹ ಯುಜೆನಾಲ್ ನೈಸರ್ಗಿಕ ನೋವು ನಿವಾರಕ. ಇದು ವಾಖರಿಕೆ, ಶೀತ, ತಲೆನೋವು ಮತ್ತು ಸಂಧೀವಾತದ ಉರಿಯೂತ ನಿವಾರಿಸುವುದು. ಇನ್ನು ಲವಂಗವು ಮಧುಮೇಹ ನಿಯಂತ್ರಣದಲ್ಲಿಡಲು ಒಳ್ಳೆಯ ಮನೆಮದ್ದು. 6-8 ಲವಂಗಗಳನ್ನು ಬಿಸಿ ನೀರಿನ ಲೋಟಕ್ಕೆ ಹಾಕಿ 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸೋಸಿಕೊಂಡು ನೀರನ್ನು ಕುಡಿಯಿರಿ. ಉಪಹಾರದ ಬಳಿಕ ಪ್ರತಿನಿತ್ಯ ಈ ನೀರನ್ನು ಸೇವಿಸಿ. ಕೆಲವೇ ತಿಂಗಳಲ್ಲಿ ವ್ಯತ್ಯಾಸ ಕಂಡುಬರುವುದು.

ಅಡುಗೆ ಮನೆಯ ಲವಂಗ-ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇರ್ ನಲ್ಲಿ ಇರುವಂತಹ ಪೊಟಾಶಿಯಂ ದೇಹದಲ್ಲಿ ವಿದ್ಯುದ್ವಿಚ್ಛೇದಗಳ ಸಮತೋಲನ ಕಾಪಾಡಲು ಪ್ರಮುಖ ಪಾತ್ರ ವಹಿಸುವುದು. ಗಂಟುಗಳಲ್ಲಿ ಜಮೆಯಾಗಿರುವಂತಹ ಕ್ಯಾಲ್ಸಿಯಂನ್ನು ತಡೆಯುವ ಪೊಟಾಶಿಯಂ ಗಂಟುನೋವಿನ ತೀವ್ರತೆ ಕಡಿಮೆ ಮಾಡುವುದು. ಸ್ನಾಯು ಸೆಳೆತ ಕಡಿಮೆ ಮಾಡಲು ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ನ್ನು ಬಿಸಿನೀರಿಗೆ ಹಾಕಿಕೊಂಡು ದಿದಲ್ಲಿ ಒಂದು ಸಲ ಕುಡಿಯಿರಿ. ರಾತ್ರಿ ವೇಳೆ ಕಾಣಿಸಿಕೊಳ್ಳುವ ಸ್ನಾಯುಸೆಳೆತ ಕಡಿಮೆ ಮಾಡಲು ರಾತ್ರಿ ಮಲಗುವ ಅರ್ಧಗಂಟೆಗೆ ಮೊದಲು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ. ಎದೆಯುರಿ ಕಾಣಿಸಿಕೊಳ್ಳುತ್ತಿದ್ದರೆ ಆಗ ಒಂದು ಲೋಟ ನೀರಿಗೆ 1 ಚಮಚ ಆ್ಯಪಲ್ ಸೀಡರ್ ವಿನೇಗರ್ ಹಾಕಿ ಕುಡಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಕಿವಿಸೋಂಕು, ಕರುಳಿನ ಪರಾವಲಂಬಿಗಳು, ಸಂಧಿವಾತದ ನೋವು, ನಿವಾರಿಸುವುದು. ಹಸಿ ಬೆಳ್ಳುಳ್ಳಿ ತಿಂದಷ್ಟು ಅದು ತುಂಬಾ ಪರಿಣಾಮಕಾರಿಯಾಗಿರುವುದು. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನಯವಾಗಿ ಅರೆದು ಹಲ್ಲುಜ್ಜುವ ಪೇಸ್ಟ್ ನಂತೆ ನೇರವಾಗಿ ಬ್ರಶ್ ಮೇಲೆ ಹಚ್ಚಿ ಹಲ್ಲುಜ್ಜಿರಿ. ಒಂದು ವೇಳೆ ಒಸಡುಗಳು ಹೆಚ್ಚು ಬಾಧಿತವಾಗಿದ್ದರೆ ಸ್ವಲ್ಪ ಹೆಚ್ಚಿನ ಉರಿ ತರಿಸಬಹುದು. ಈ ಉರಿ ತಾತ್ಕಾಲಿಕವಾಗಿದ್ದು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತದೆ. ಆದರೆ ಹಲ್ಲುನೋವಿನಿಂದ ಶೀಘ್ರವೇ ಉಪಶಮನ ನೀಡುತ್ತದೆ.

ಎಪ್ಸಮ್ ಸಾಲ್ಟ್(ಉಪ್ಪು)

ಎಪ್ಸಮ್ ಸಾಲ್ಟ್(ಉಪ್ಪು)

ಎಪ್ಸಮ್ ಸಾಲ್ಟ್(ಮೆಗ್ನಿಶಿಯಂ ಸಲ್ಫೇಟ್)ನಲ್ಲಿ ದೇಹದ ನೋವು ನಿವಾರಣೆ ಮಾಡುವಂತಹ ಚಿಕಿತ್ಸಕ ಗುಣಗಳು ಇವೆ. ಸ್ನಾನ ಮಾಡುವ ನೀರಿಗೆ ಉಪ್ಪು ಹಾಕಿಕೊಂಡು ಸ್ನಾನ ಮಾಡಿದರೆ ಆಗ ಅದು ಚರ್ಮದ ಮೂಲಕ ದೇಹದೊಳಗೆ ಪ್ರವೇಶಿಸುವುದು. ಇದರಿಂದ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ಗಂಟುಗಳು ಸಡಿಲವಾಗುವುದು.

ಮೊಸರು

ಮೊಸರು

ಮೊಸರಿನಲ್ಲಿ ಇರುವಂತಹ ಆರೋಗ್ಯಕಾರಿ ಬ್ಯಾಕ್ಟೀರಿಯಾವು ಅಜೀರ್ಣ ನಿವಾರಣೆ ಮಾಡುವುದು ಮತ್ತು ಹೊಟ್ಟೆನೋವನ್ನು ಶಮನಗೊಳಿಸುವುದು. ಜೀರ್ಣಕ್ರಿಯೆಯು ಸರಾಗವಾಗಿ ಆಗಲು ಬೇಕಾಗುವಂತಹ ಪ್ರೋಬಯಾಟಿಕ್ ಗಳು ಮೊಸರಿನಲ್ಲಿದೆ. ಹೊಟ್ಟೆ ಉಬ್ಬರ, ಉರಿಯೂತ ಮತ್ತು ನೋವು ನಿವಾರಣೆ ಮಾಡಲು ಒಂದು ಪಿಂಗಾಣಿ ಮೊಸರನ್ನು ಸೇವಿಸಿ. ಇನ್ನು ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜೇನನ್ನು ಸೇರಿಸಬೇಕಾಗುತ್ತದೆ. ಆದರೆ ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನಿನ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳಲು ಸಾಧ್ಯ.

ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸುತ್ತದೆ.

ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದರಲ್ಲಿ ಓಲಿಯೊಕಾಂತಲ್ ಎನ್ನುವ ನೈಸರ್ಗಿಕ ಅಂಶವಿದ್ದು, ಇದು ಸಂಧಿವಾತದಿಂದ ಕಾಣಿಸುವಂತಹ ಉರಿಯೂತ ನಿವಾರಿಸುವುದು. ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲದಲ್ಲಿ ಇಬುಪ್ರೊಫೇನ್ ಎನ್ನುವ ಅಂಶವಿದ್ದು, ಇದು ಅತ್ಯುತ್ತಮ ನೋವು ನಿವಾರಕವಾಗಿದೆ. ಒಂದು ವೇಳೆ ನಿಮಗೆ ಕಿವಿ ನೋವಿದ್ದರೆ, ಒಂದು ಚಮಚ ಆಲಿವ್ ಎಣ್ಣೆಗೆ, 3-4 ಜಜ್ಜಿದ ಲವಂಗವನ್ನು ಎಣ್ಣೆಯಲ್ಲಿ ಮಿಶ್ರಗೊಳಿಸಿ, ನಂತರ ಈ ಮಿಶ್ರಣವನ್ನು ಬಿಸಿ ಮಾಡಿಕೊಂಡು, ಉಗುರು ಬೆಚ್ಚಗಿನ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ, ಕಿವಿಯ ನೋವಿರುವ ಜಾಗದಲ್ಲಿ ಇಡಬೇಕು. 5. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕಿವಿ ನೋವು ಶಮನವಾಗುವುದು.

English summary

Natural Painkillers In Your Kitchen

No matter how small a health concern is, we tend to turn to painkillers for instant relief. But what we don't realize is how toxic such dependence on painkillers can become to your body. So, why not ditch the medications and switch to natural painkillers? Painkillers have serious side effects in the long run, in spite of which they are often consumed. They can cause serious damage to your liver, kidneys and intestines.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more