For Quick Alerts
ALLOW NOTIFICATIONS  
For Daily Alerts

  ರಾತ್ರಿ ನಿದ್ರೆ ಬರ್ತಾ ಇಲ್ವಾ? ಸರಳ ಮನೆ ಮದ್ದುಗಳು ಇಲ್ಲಿದೆ ನೋಡಿ..

  By Deepu
  |

  "ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತಂತೆ " ಆದರೆ ಕೆಲವರನ್ನು ಸುಪ್ಪತ್ತಿಗೆ ಮೇಲೆ ಎತ್ತಿ ಹಾಕಿದರೂ ನಿದ್ದೆ ಮಾತ್ರ ಅವರನ್ನು ಆವರಿಸುವುದಿಲ್ಲ. ಇನ್ಸೋಮ್ನಿಯಾ ಎಂದು ಕರೆಯಲ್ಪಡುವ ನಿದ್ರಾಹೀನತೆ ಸ್ಥಿತಿ ಯಾರಿಗೂ ಬೇಡದ ಕಾಯಿಲೆ. ಇಂದಿನ ಹೈ ಸ್ಪೀಡ್ ಯುಗದಲ್ಲಿ ಕೆಲಸದ ಒತ್ತಡದಿಂದ ನಿದ್ರಾಹೀನತೆ ಉಂಟಾಗಿ ಬಳಲಿ ಬೆಂಡಾಗದೆ ಉಳಿದವರ ಸಂಖ್ಯೆ ವಿರಳ.

  ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳು ಕೆಲವೊಮ್ಮೆ ದಿನಗಟ್ಟಲೆ, ವಾರಗಟ್ಟಲೆ ಕಣ್ಣು ಮುಚ್ಚದೇ ಬೇಡದ ಧ್ಯಾನಾವಸ್ಥೆಗೆ ದೂಡಿದ್ದಂತಾಗಿ ಸಂಕಟ ಪಡುವುದುಂಟು. ನಿದ್ರಾಹೀನತೆಗೆ ಹಲವಾರು ಕಾರಣಗಳಿರಬಹುದು ಅಧಿಕ ಕೆಲಸದ ಒತ್ತಡ, ಮಾನಸಿಕ ಜಂಜಾಟ, ಹಾರ್ಮೋನ್‌ನಲ್ಲಿ ಏರು ಪೇರು, ಚೈನ್ ಸ್ಮೋಕಿಂಗ್ (ಸೀರಿಯಲ್ ಧೂಮಪಾನಿ?) ಇತ್ಯಾದಿ... ಆದರೆ ನಿದ್ರಾಹೀನತೆಯ ತೊಂದರೆಯನ್ನು ತಕ್ಷಣ ನೋಡಿ ಸರಿಪಡಿಸಿಕೊಂಡರೆ ಮುಂದೆ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು.

  ಒಂದು ವೇಳೆ ಈ ನಿದ್ರಾಹೀನತೆಯನ್ನು ಆರಂಭದಲ್ಲಿಯೇ ನೋಡಿಕೊಳ್ಳದಿದ್ದರೆ, ಮುಂದೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಜೊತೆಗೆ ನೆನಪಿನ ಶಕ್ತಿ ಕುಂದುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮಾರ್ಥ್ಯ ಕುಂಠಿತಗೊಳ್ಳುವುದು, ಇತ್ಯಾದಿ ಸಮಸ್ಯೆಗಳು ಉಲ್ಪಣಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ನಿವಾರಿಸುವ ಉಪಾಯಗಳ ಕಡೆಗೆ ನಾವು ಇಂದು ಗಮನ ಹರಿಸೋಣ ಬನ್ನಿ...

  ಬೆಚ್ಚಗಿನ ಹಾಲನ್ನು ಕುಡಿಯಿರಿ

  ಬೆಚ್ಚಗಿನ ಹಾಲನ್ನು ಕುಡಿಯಿರಿ

  ಹಲವಾರು ಶತಮಾನಗಳಿಂದಲು ನಿದ್ರಾಹೀನತೆಗೆ ಇದೇ ಅತ್ಯುತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿನಲ್ಲಿರುವ ಅಮೈನೊ ಆಮ್ಲವು ನಿದ್ದೆಯನ್ನು ಉದ್ದೀಪಿಸಿ, ಅದರ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ನೀವು ಆಲ್ಕೋಹಾಲ್ ಸೇವಿಸಿದ್ದರು ಸಹ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ, ಇದರಿಂದಾಗಿ ಮುಂದೆ ನಿಮಗೆ ಬರಬಹುದಾದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.

  ರಾತ್ರಿ ಹೊತ್ತು ಕಾಫಿ ಅಥವಾ ಟೀ ಸೇವಿಸಬೇಡಿ

  ರಾತ್ರಿ ಹೊತ್ತು ಕಾಫಿ ಅಥವಾ ಟೀ ಸೇವಿಸಬೇಡಿ

  ಬೆಳಗಿನ ಹೊತ್ತು ಬಹುಶಃ ನೀವು ಹೆಚ್ಚಿನ ಕಾಫೀ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರಬಹುದು. ಅದು ನಿಮ್ಮ ಕೆಲಸಕ್ಕೆ ಅಗತ್ಯವಾಗಿರುವ ಪ್ರೇರೇಪಣೆಯನ್ನು ಸಹ ನೀಡುತ್ತಿರಬಹುದು. ಆದರೆ ಸಂಜೆಯ ಹೊತ್ತು ಈ ಕೆಫೀನ್ ಇರುವ ಪಾನೀಯಗಳನ್ನು ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಮಾಡುವುದನ್ನೆ ತ್ಯಜಿಸಿಬಿಡಿ. ಕೆಫೀನ್ ನಿದ್ದೆಗೆ ಮಾರಕ ಎಂಬ ಅಂಶವನ್ನು ಮೊದಲು ಮನಗಾಣಿ.

  ರಾತ್ರಿ ಊಟದ ನಂತರ ಒಂದು ಬಾಳೆಹಣ್ಣು ಸೇವಿಸಿ

  ರಾತ್ರಿ ಊಟದ ನಂತರ ಒಂದು ಬಾಳೆಹಣ್ಣು ಸೇವಿಸಿ

  ಬಾಳೆಹಣ್ಣುಗಳಲ್ಲಿ ಅಧಿಕ ಪ್ರಮಾಣದ ಮೆಗ್ನಿಷಿಯಂ ಮತ್ತು ಪೊಟಾಶಿಯಂಗಳು ಇರುತ್ತವೆ. ಇವು ಸ್ನಾಯುಗಳನ್ನು ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುತ್ತವೆ. ಅಲ್ಲದೆ ಅವುಗಳಲ್ಲಿರುವ ಅಧಿಕ ಪ್ರಮಾಣದ ಕಾರ್ಬೊಹೈಡ್ರೇಟ್‌ಗಳು ಸಹ ನಿದ್ದೆಯನ್ನು ತರುತ್ತವೆ. ಪೊಟಾಶಿಯಂ ಸಹ ಆರೋಗ್ಯಕ್ಕೆ ಮತ್ತು ಸ್ಮರಣೆ ಶಕ್ತಿಗೆ ಒಳ್ಳೆಯದು.

  ಸಿಹಿ ಗೆಣಸು!

  ಸಿಹಿ ಗೆಣಸು!

  ಸಿಹಿ ಗೆಣಸುಗಳು ಸಹ ನಿದ್ದೆಯನ್ನು ತರುತ್ತವೆ. ಇವುಗಳಲ್ಲಿ ಕಾರ್ಬೊಹೈಡ್ರೇಟ್‌ಗಳು ಮತ್ತು ಪೊಟಾಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತವೆ. ರಾತ್ರಿ ಮಲಗುವ ಮುನ್ನ ಸ್ನ್ಯಾಕ್ಸ್ ರೂಪದಲ್ಲಿ ಬೇಯಿಸಿದ ಸಿಹಿ ಗೆಣಸುಗಳನ್ನು ಸೇವಿಸಿ.

  ಹಾಲು+ಜೇನುತುಪ್ಪ+ವೆನಿಲ್ಲಾ

  ಹಾಲು+ಜೇನುತುಪ್ಪ+ವೆನಿಲ್ಲಾ

  *ಒಂದು ಕಪ್ ಹಾಲು ಬಿಸಿಮಾಡಿ, ಕುದಿಯಲು ಪ್ರಾರಂಭಿಸಿದ ತಕ್ಷಣ ಉರಿ ನಂದಿಸಿ

  *ಬಿಸಿಹಾಲನ್ನು ಒಂದು ಲೋಟಕ್ಕೆ ಬಗ್ಗಿಸಿ ಇದಕ್ಕೆ ಒಂದು ದೊಡ್ಡಚಮಚ ಜೇನು ಮತ್ತು ಕೊಂಚವೇ ವನಿಲ್ಲಾ ಸಾರವನ್ನು ಸೇರಿಸಿ ಚೆನ್ನಾಗಿ ಕಲಕಿ.

  *ಈ ಪೇಯವನ್ನು ರಾತ್ರಿ ಮಲಗುವ ಮುನ್ನ ಕುಡಿದು ಮಲಗಿ. ಒಂದೇ ನಿಮಿಷದಲ್ಲಿ ನೀವು ಗಾಢನಿದ್ದೆಗೆ ಜಾರಿರುತ್ತೀರಿ.

  ಬಿಸಿನೀರಿನ ಸ್ನಾನ ಮಾಡಿ

  ಬಿಸಿನೀರಿನ ಸ್ನಾನ ಮಾಡಿ

  ಮಲಗುವುದಕ್ಕೆ ಮು೦ಚೆ ನೀವು ಬಿಸಿನೀರಿನ ಸ್ನಾನವನ್ನು ಕೈಗೊ೦ಡಲ್ಲಿ, ನಿಮ್ಮ ದೇಹದ ಉಷ್ಣತೆಯಲ್ಲಿ ಹೆಚ್ಚಳವಾಗುತ್ತದೆ ಹಾಗೂ ಬಳಿಕ ದೇಹವನ್ನು ಕ್ಷಿಪ್ರವಾಗಿ ತ೦ಪಾಗಿಸುತ್ತದೆ. ಈ ಪ್ರಕ್ರಿಯೆಯು ನಿಮಗೆ ನಿರಾಳತೆಯ ಅನುಭವವನ್ನು ನೀಡಿ ಚೆನ್ನಾಗಿ ನಿದ್ರಿಸಲು ನೆರವಾಗುತ್ತದೆ. ಜೊತೆಗೆ, ಎಸ್ಸೆನ್ಶಿಯಲ್ ಆಯಿಲ್ ನ ಕೆಲವು ಹನಿಗಳನ್ನು ನಿಮ್ಮ ಸ್ನಾನದ ನೀರಿಗೆ ಬೆರೆಸಿದಲ್ಲಿ, ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಚಮತ್ಕಾರಿಕ ರೀತಿಯಲ್ಲಿ ಕೆಲಸ ಮಾಡುತ್ತದೆ

  ಚಳಿಗಾಲದಲ್ಲಿ ಸಾಕ್ಸ್‌ಗಳನ್ನು ಧರಿಸಿ

  ಚಳಿಗಾಲದಲ್ಲಿ ಸಾಕ್ಸ್‌ಗಳನ್ನು ಧರಿಸಿ

  ಚಳಿಗಾಲದಲ್ಲಿ ಸಾಕ್ಸ್‌ಗಳನ್ನು ಧರಿಸಿಕೊಳ್ಳಿರಿ ಪಾದಗಳಲ್ಲಿನ ತ೦ಪಾದ ಅನುಭವವು ನಿಮ್ಮನ್ನು ರಾತ್ರಿಯಿಡೀ ಎಚ್ಚರವಾಗಿಯೇ ಇರಿಸುವ ಸಾಧ್ಯತೆಯು ಇರುವುದರಿ೦ದ, ಹಾಸಿಗೆಗೆ ತೆರಳುವ ಮುನ್ನ, ಸಾಕ್ಸ್‌ಗಳನ್ನು ಧರಿಸಿಕೊಳ್ಳುವುದು ಒಳ್ಳೆಯದು. ಮಲಗಿಕೊ೦ಡಿರುವಾಗ, ನಿಮ್ಮ ಪಾದಗಳು ಆಗಾಗ್ಗೆ ಶೀತಲ ಸ೦ವೇದನೆಯನ್ನು ಅನುಭವಿಸಿಯಾವು. ಏಕೆ೦ದರೆ, ಆ ವೇಳೆಯಲ್ಲಿ, ಆ ಭಾಗದಲ್ಲಿ ರಕ್ತದ ಪರಿಚಲನೆಯು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ, ರಾತ್ರಿಯ ವೇಳೆಯಲ್ಲಿ ಎಚ್ಚರವಾಗಿರುವುದರ ಸಾಧ್ಯತೆಯನ್ನು ತಪ್ಪಿಸುವುದಕ್ಕೋಸ್ಕರ, ಒ೦ದು ಜೊತೆ ಸಾಕ್ಸ್ ಗಳನ್ನು ಧರಿಸಿಕೊ೦ಡು ಹಾಸಿಗೆಯತ್ತ ತೆರಳಿರಿ.

  ಸ್ವೀಟ್ಸ್ ಅಥವಾ ಸಿಹಿ ಇರುವ ಆಹಾರಗಳನ್ನು ತಿನ್ನಬೇಡಿ

  ಸ್ವೀಟ್ಸ್ ಅಥವಾ ಸಿಹಿ ಇರುವ ಆಹಾರಗಳನ್ನು ತಿನ್ನಬೇಡಿ

  ರಾತ್ರಿ ಮಲಗುವ ಮುನ್ನ ಸಿಹಿ ಹೆಚ್ಚಿರುವ ತಿಂಡಿಗಳನ್ನು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಸಕ್ಕರೆ ಹೆಚ್ಚಾದರೆ ರಾತ್ರಿ ನಿದ್ದೆಯಲ್ಲಿ ಹಲವು ಬಾರಿ ಬೆಚ್ಚಿ ಬಿದ್ದು ಎಚ್ಚರಾಗುವುದನ್ನು ಗಮನಿಸಲಾಗಿದೆ. ಆದರೆ ಬೆಚ್ಚಿ ಬೀಳಲು ಸಿಹಿತಿಂಡಿಗಳೇ ಏಕೈಕ ಕಾರಣ ಎಂದು ಹೇಳಲಾಗುವುದಿಲ್ಲ. ಆದರೂ ಸುಖನಿದ್ದೆಗೆ ಅಡ್ಡಿಯಾಗದಿರಲು ಸಿಹಿತಿಂಡಿ, ಚಾಕಲೇಟು ಮೊದಲಾದವುಗಳನ್ನು ಸೇವಿಸದಿರುವುದೇ ಉತ್ತಮ.

  ಐಸ್ ಕ್ರೀಮ್

  ಐಸ್ ಕ್ರೀಮ್

  ಒಂದು ಐಸ್ ಕ್ರೀಮ್ ಒಂದು ಪೂರ್ಣ ಊಟದ ಮೂಲಕ ದೊರಕುವುದಕ್ಕಿಂತಲೂ ಹೆಚ್ಚಿನ ಕೊಬ್ಬನ್ನು ನೀಡುತ್ತದೆ. ಅಂದರೆ ರಾತ್ರಿ ಮಲಗುವ ಮುನ್ನ ಒಂದು ಐಸ್ ಕ್ರೀಂ ತಿಂದರೂ ದೇಹಕ್ಕೆ ಲಭಿಸಿರುವ ಅಪಾರವಾದ ಕೊಬ್ಬನ್ನು ದಹಿಸಲು ಸಮಯವೇ ಉಳಿಯುವುದಿಲ್ಲ. ಇದು ತೂಕ ಹೆಚ್ಚಿಸಲು ನೆರವಾಗುತ್ತದೆ ಹಾಗೂ ರಾತ್ರಿ ಸುಖನಿದ್ದೆಯನ್ನೂ ಬಾಧಿಸುತ್ತದೆ.

  ಲ್ಯಾವೆಂಡರ್ ಎಣ್ಣೆಯ ಮಸಾಜ್

  ಲ್ಯಾವೆಂಡರ್ ಎಣ್ಣೆಯ ಮಸಾಜ್

  ಮಲಗುವ ಮೊದಲು, ಹದ ಬಿಸಿ ನೀರಿಗೆ ಸ್ವಲ್ಪ ಲ್ಯಾವೆಂಡರ್ ಎಣ್ಣೆ ಹಾಕಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆ ನರಗಳಿಗೆ ಶಕ್ತಿ ತುಂಬುವ ಟಾನಿಕ್‌ನಂತೆ ವರ್ತಿಸುತ್ತದೆ. ಈ ಎಣ್ಣೆಯಿಂದ ಮಸಾಜ್ ಮಾಡಿದರೆ ದೇಹ ಮತ್ತು ಮನಸ್ಸಿಗೆ ಆರಾಮದಾಯಕವಾಗಿರುತ್ತದೆ.

  ಜಾಯಿಕಾಯಿ

  ಜಾಯಿಕಾಯಿ

  1.ಒಂದು ಅಥವಾ ಎರಡು ಒಣಗಿದ ಜಾಯಿಕಾಯಿ ತೆಗೆದುಕೊಳ್ಳಿ.

  2.ಇದನ್ನು ಹುಡಿ ಮಾಡಿ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ಜಾಯಿಕಾಯಿಯ ಹುಡಿ ತೆಗೆದುಕೊಳ್ಳಿ.

  3.ಒಂದು ಹಿಡಿ ಜಾಯಿಕಾಯಿ ಹುಡಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ.

  4.ಐದು ನಿಮಿಷ ಕಾಲ ಬಾಯಿ ಮುಚ್ಚಿ ಹಾಗೆ ಬಿಡಿ.

  5.ಮಿಶ್ರಣವನ್ನು ಗಾಳಿಸಿಕೊಂಡು ಕುಡಿಯಿರಿ.

  6.ಮಲಗುವ 5-6 ಗಂಟೆ ಮೊದಲು ಈ ನೀರನ್ನು ಕುಡಿಯಿರಿ.

  ಸಾಧ್ಯವಾದಷ್ಟು ಮಸಾಲೆಭರಿತ ಅಲ್ಲದೆ ಖಾರವಾದ ಪದಾರ್ಥ ಸೇವಿಸಬೇಡಿ

  ಸಾಧ್ಯವಾದಷ್ಟು ಮಸಾಲೆಭರಿತ ಅಲ್ಲದೆ ಖಾರವಾದ ಪದಾರ್ಥ ಸೇವಿಸಬೇಡಿ

  ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಭರಿತ ಆಹಾರವನ್ನು ಸೇವಿಸಬೇಡಿ ಯಾವ ಆಹಾರಗಳಲ್ಲಿ ಹೆಚ್ಚು ಮಸಾಲೆ ಅಥವಾ ಸಕ್ಕರೆಯ ಅಂಶವಿರುತ್ತದೆಯೋ ಅಂತಹ ಆಹಾರವನ್ನು ಸೇವಿಸತಕ್ಕದ್ದಲ್ಲ. ಇವು ನಿದ್ರೆಯನ್ನು ಹೋಗಲಾಡಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಲಗುವಾದ ಹಾಗು ಸಮತೋಲನತೆಯುಳ್ಳ ಆಹಾರವನ್ನು ಸೇವಿಸುವುದು ಹೆಟ್ಟು ಸೂಕ್ತ.

  English summary

  Natural Insomnia Cures foods that actually work instantly

  Insomnia is a state of sleeplessness in the night. The person who is suffering from this disease cannot have sound sleep and in chronic cases, the patient cannot sleep at all. Here are some of the home remedies for sleeplessness.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more