For Quick Alerts
ALLOW NOTIFICATIONS  
For Daily Alerts

ಕೆಲವೊಂದು ಆಹಾರಗಳನ್ನು ತಿನ್ನುವಾಗ ಎಚ್ಚರವಿರಲಿ! ಫುಡ್ ಪಾಯಿಸನ್‌ ಆಗಬಹುದು!

By Arshad
|

ಆಹಾರ ಸೇವನೆಯ ಬಳಿಕ ಯಾವುದೇ ರೀತಿಯಲ್ಲಿ ಹೊಟ್ಟೆ ಕೆಟ್ಟರೆ ಈ ಸ್ಥಿತಿಗೆ ವಿಷಾಹಾರ ಸೇವನೆ (Food Poisoning) ಎಂದು ವೈದ್ಯರು ಗುರುತಿಸುತ್ತಾರೆ. ಇದಕ್ಕೆ ಕಾರಣವೆಂದರೆ ಕಲಬೆರಕೆ, ಕೆಟ್ಟು ಹೋದ ಅಥವಾ ವಿಷಪೂರಿತ ಆಹಾರ ಸೇವನೆ. ಆಹಾರ ವಸ್ತುಗಳು ನಮಗೆ ಹೇಗೆ ಆಹಾರವೋ ಹಾಗೇ ಸೂಕ್ಷ್ಮಕ್ರಿಮಿ ಹಾಗೂ ಕೀಟಾಣುಗಳಿಗೂ ಆಹಾರವಾಗಿದೆ. ಹಾಗಾಗಿ ನಾವು ಸೇವಿಸುವ ಯಾವುದೇ ಆಹಾರದಲ್ಲಿ ಅಲ್ಪಾಂಶದಲ್ಲಾದರಿಯಾದರೂ ಸರಿ, ಕ್ರಿಮಿಗಳು ಬ್ಯಾಕ್ಟೀರಿಯಾಗಳು ಇದ್ದೇ ಇರುತ್ತವೆ. ಇದೇ ಕಾರಣಕ್ಕೆ ನಮ್ಮ ಆಹಾರವನ್ನು ಬೇಯಿಸಿ ಸೇವಿಸುತ್ತೇವೆ. ಈ ಮೂಲಕ ಬಹುತೇಕ ಕ್ರಿಮಿಗಳನ್ನು ಕೊಲ್ಲಬಹುದು. ಇದೇ ಕಾರಣಕ್ಕೇ ಎಲ್ಲಾ ಆಹಾರಗಳನ್ನು ಹಸಿಯಾಗಿ ಸೇವಿಸಬಾರದು ಸಹಾ!

ವಿಶೇಷವಾಗಿ ಮಾಂಸಾಹಾರ, ಡೈರಿ ಉತ್ಪನ್ನಗಳು, ಮೊಟ್ಟೆ ಮೊದಲಾದವು ಅತಿ ಹೆಚ್ಚಾಗಿ ಕ್ರಿಮಿಗಳಿಂದ ಕೂಡಿರುತ್ತವೆ. ಆದ್ದರಿಂದ ಇವುಗಳನ್ನು ಸ್ವಚ್ಛವಾಗಿ ತೊಳೆದು, ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು. ಅರಿಯದೇ ಒಂದು ವೇಳೆ ವಿಷಾಹಾರ ಸೇವಿಸಿದರೆ ಇದರ ಪರಿಣಾಮವಾಗಿ ವಾಂತಿ, ವಾಕರಿಕೆ, ಕೆಳಹೊಟ್ಟೆಯಲ್ಲಿ ನೋವು, ಹೊಟ್ಟೆಯ ಸೆಡೆತ, ಹಸಿವಾಗದಿರುವುದು, ಚಿಕ್ಕದಾಗಿ ಜ್ವರ ಕಾಣಿಸಿಕೊಳ್ಳುವುದು, ನಿಃಶಕ್ತಿ, ತಲೆನೋವು ಹಾಗೂ ಬೇಧಿ ಆವರಿಸಬಹುದು.

ಫುಡ್ ಪಾಯಿಸನ್‌ ಆಗಿ ಹೊಟ್ಟೆ ಕೆಟ್ಟಿದೆಯೇ? ಇನ್ನು ಚಿಂತೆ ಬಿಡಿ

ವಿಷಾಹಾರ ಸೇವನೆಯ ಪರಿಣಾಮ ಹೆಚ್ಚಾದರೆ ಇದು ಪ್ರಾಣಾಪಾಯವನ್ನೂ ಒಡ್ಡಬಲ್ಲುದು. ಆದ್ದರಿಂದ ಕೆಲವೊಮ್ಮೆ ಯಾವ ಆಹಾರಗಳನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂದು ನಿರ್ಧರಿಸುವುದು ಕಷ್ಟಕರವಾಗುತ್ತದೆ. ಆದರೆ, ಒಂದು ವೇಳೆ ಯಾವ ಆಹಾರಗಳು ಸುಲಭವಾಗಿ ವಿಷಾಹಾರವಾಗಬಲ್ಲವು ಎಂಬ ಮಾಹಿತಿ ಇದ್ದರೆ ಹಾಗೂ ಇವುಗಳನ್ನು ಸರಿಯಾಗಿ ಬೇಯಿಸದೇ ಇರುವ ಅನುಮಾನ ಎದುರಾದರೆ ಇವನ್ನು ಸೇವಿಸದಿರುವುದೇ ಲೇಸು. ಕೆಲವು ಹೋಟೆಲು ಹಾಗೂ ಸಾರ್ವಜನಿಕ ಅಡುಗೆಗಳಲ್ಲಿ ಸಮಯಾ ಭಾವದಿಂದ ಮುಕ್ಕಾಲು ಪಾಲು ಬೇಯಿಸಿದ ಆಹಾರಗಳನ್ನು ಬಡಿಸಿ ಬಿಡುತ್ತಾರೆ.

ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಇವನ್ನು ನೀವೇ ತಯಾರಿಸುವುದಾದರೆ ಪೂರ್ಣವಾಗಿ ಬೆಂದಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಈ ಮೂಲಕ ಕ್ರಿಮಿಗಳನ್ನು ಪೂರ್ಣವಾಗಿ ನಾಶಪಡಿಸಿದ್ದೇವೆ ಎಂದು ಖಚಿತಪಡಿಸಿಕೊಳ್ಳಬಹುದು. ಕೆಳಗೆ ವಿವರಿಸಿದ ಹತ್ತು ಆಹಾರಗಳ ಬಗ್ಗೆ ಎಚ್ಚರಿಕೆ ಅಗತ್ಯ. ಆದರೆ ವಿಷಕಾರಿ ಎಂದು ಇವುಗಳ ಸೇವನೆ ನಿಲ್ಲಿಸಬಾರದು, ಇದರಿಂದ ಪಡೆಯಬಹುದಾದ ಪೋಷಕಾಂಶಗಳಿಂದಲೂ ವಂಚಿತರಾಗಬೇಕಾಗುತ್ತದೆ....

ದಪ್ಪ ಎಲೆಗಳ ತರಕಾರಿಗಳು/ಸೊಪ್ಪುಗಳು

ದಪ್ಪ ಎಲೆಗಳ ತರಕಾರಿಗಳು/ಸೊಪ್ಪುಗಳು

ನಮ್ಮ ಸಾಲಾಡ್ ನಲ್ಲಿ ದಪ್ಪನೆಯ ಎಲೆಗಳನ್ನು ಹಸಿಯಾಗಿ ಸೇವಿಸಬಹುದು ಹಾಗೂ ಬೇಯಿಸಿ ಸಾರನ್ನೂ ಮಾಡಬಹುದು. ಲೆಟ್ಯೂಸ್, ಪಾಲಕ್, ಎಲೆಕೋಸು ಮೊದಲಾದವು ಹಸಿಯಾಗಿ ಸೇವಿಸಬಹುದಾದ ತರಕಾರಿಗಳಾಗಿದ್ದರೂ ಇವುಗಳಲ್ಲಿ ಗಾಳಿಯಲ್ಲಿ ತೇಲಿಬಂದಿದ್ದ ಧೂಳು, ಮಣ್ಣು, ಕೊಳೆಯಾದ ನೀರು ಮೊದಲಾದವು ಕಿರಿದಾದ ಬಿರುಕುಗಳ ಆಳದಲ್ಲಿರುತ್ತವೆ. ಇವುಗಳನ್ನು ಸ್ವಚ್ಚಗೊಳಿಸುವುದು ಕೊಂಚ ಕಷ್ಟವೇ ಆದ್ದರಿಂದ ಇವನ್ನು ಬೇಯಿಸದೇ ಸೇವಿಸುವುದು ಕೊಂಚ ಅಪಾಯಕ್ಕೆ ಎದುರುಗೊಂಡಂತಾಗುತ್ತದೆ. ಆದ್ದರಿಂದ ಇವನ್ನು ಬೇಯಿಸಿಯೇ ಸೇವಿಸುವುದು ಉತ್ತಮ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯ ದ್ರವದಲ್ಲಿ ಸಾಲ್ಮೋನೆಲ್ಲಾ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾಗಳಿದ್ದು ನಮ್ಮ ಜೀರ್ಣಾಂಗಗಳು ಇವನ್ನು ಜೀರ್ಣಿಸಿ ಕೊಳ್ಳಲಾರವು. ಆದ್ದರಿಂದ ಮೊಟ್ಟೆಯನ್ನು ಹಸಿಯಾಗಿ ತಿನ್ನುವುದು ಅಪಾಯಕಾರಿ! ಕೋಳಿಯ ದೇಹದಲ್ಲಿ ಇನ್ನೂ ಮೊಟ್ಟೆಯ ಕವಚವೂ ಬೆಳೆಯದಿದ್ದಾಗಲೇ ಈ ಬ್ಯಾಕ್ಟೀರಿಯಾಗಳು ಮೊಟ್ಟೆಯ ದ್ರವದಲ್ಲಿ ಮನೆ ಮಾಡಿರುತ್ತವೆ. ಆದ್ದರಿಂದ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಅಥವಾ ಹುರಿದೇ ತಿನ್ನಬೇಕು.

ಮಾಂಸ

ಮಾಂಸ

ಯಾವುದೇ ಬಗೆಯ ಮೀನು ಅಥವಾ ಮಾಂಸವಾಗಲಿ, ಹಸಿಯಾಗಿ ತಿನ್ನುವುದರಿಂದ ಅಥವಾ ಪೂರ್ಣವಾಗಿ ಬೇಯಿಸದೇ ತಿನ್ನುವುದರಿಂದ ಹೊಟ್ಟೆಯಲ್ಲಿ ವಿಷಾಹಾರವಾಗುವುದು ಶತಃಸಿದ್ಧ. ಇದರಲ್ಲಿಯೂ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಹಾಗೂ ಸ್ಟಾಫ್ ಬ್ಯಾಕ್ಟೀರಿಯಾಗಳಿರುತ್ತವೆ. ಆದ್ದರಿಂದ ಪೂರ್ಣವಾಗಿ ಬೆಂದಿರುವ ಮಾಂಸಾಹಾರವನ್ನು ಮಾತ್ರವೇ ಸೇವಿಸಬೇಕು.

ಟ್ಯೂನಾ

ಟ್ಯೂನಾ

ಡಬ್ಬಿಯಲ್ಲಿ ಸಿದ್ಧರೂಪದಲ್ಲಿ ಸಿಗುವ ಟ್ಯೂನಾ ಮೀನಿನಲ್ಲಿಯೂ ಸ್ಕಾಂಬ್ರೋಟಾಕ್ಸಿನ್ ಎಂಬ ವಿಷಕಾರಿ ರಾಸಾಯನಿಕವಿದೆ. ಇದರ ಸೇವನೆಯಿಂದ ಅತಿಸಾರ, ತಲೆನೋವು ಹಾಗೂ ಹೊಟ್ಟೆಯ ಸೆಡೆತ ಎದುರಾಗುತ್ತದೆ. ಒಂದು ವೇಳೆ ಟ್ಯೂನಾ ಮೀನನ್ನು ಸಂಸ್ಕರಿಸಿದ ಬಳಿಕ ಅರವತ್ತು ಡಿಗ್ರಿ ಫ್ಯಾ, ತಾಪಮಾನದಲ್ಲಿರಿಸಿದರೆ ಈ ವಿಷ ಪರಿಪಕ್ವಗೊಳ್ಳುತ್ತದೆ ಹಾಗೂ ಇದನ್ನು ಬೇಯಿಸುವ ಮೂಲಕ ಇದರ ಪ್ರಭಾವವನ್ನು ನಿವಾರಿಸಲು ಸಾಧ್ಯವಿಲ್ಲ. ಆದ್ದರಿಂದ ಡಬ್ಬಿಯ ಸಂಸ್ಕರಿಸಿದ ಆಹಾರಕ್ಕಿಂತ ತಾಜಾ ಮೀನನ್ನು ತಂದು ಪೂರ್ಣವಾಗಿ ಬೇಯಿಸಿ ಸೇವಿಸುವುದೇ ಆರೋಗ್ಯಕರ.

ಆಲೂಗಡ್ಡೆ

ಆಲೂಗಡ್ಡೆ

ಒಂದು ವೇಳೆ ಆಲೂಗಡ್ಡೆ ಸಹಾ ಪೂರ್ಣವಾಗಿ ಬೇಯದಿದ್ದರೂ ಇದು ಹೊಟ್ಟೆ ಕೆಡಿಸಬಲ್ಲುದು. ಇವು ನೆಲದಾಳದಲ್ಲಿ ಬೆಳೆಯುವ ಗಡ್ಡೆಗಳಾಗಿದ್ದು ಇವನ್ನು ಚೆನ್ನಾಗಿ ಸ್ವಚ್ಛಗೊಳಿಸಿಯೇ ಬೇಯಿಸಬೇಕು. ಕೆಲವು ಹೋಟೆಲುಗಳಲ್ಲಿ ಸಾಲಾಡ್ ರೂಪದಲ್ಲಿ ಹಸಿ ಆಲೂಗಡ್ಡೆಯ ಬಿಲ್ಲೆಗಳನ್ನಿರಿಸಿರುತ್ತಾರೆ. ಇವನ್ನು ಸರ್ವಥಾ ಸೇವಿಸಕೂಡದು. ಇದರಲ್ಲಿಯೂ ವಿಷಕಾರಿ ಕ್ರಿಮಿಗಳಿರುತ್ತವೆ.

ಚೀಸ್

ಚೀಸ್

ಚೀಸ್ ರುಚಿಕರ ಎಂದು ಹೆಚ್ಚಾಗಿ ಮನೆಯಲ್ಲಿ ತಿನ್ನುವವರು ಆಗಾಗ ಹೊಟ್ಟೆ ಕೆಡಿಸಿಕೊಳ್ಳುತ್ತಿರುತ್ತಾರೆ. ಚೀಸ್ ನಲ್ಲಿಯೂ ಸಾಲ್ಮೋನೆಲ್ಲಾ ಹಾಗೂ ಲಿಸ್ಟೀರಿಯಾ ಎಂಬ ಭಯಾನಕ ಬ್ಯಾಕ್ಟೀರಿಯಾಗಳಿವೆ. ಅದರಲ್ಲೂ ಲಿಸ್ಟೀರಿಯಾ ಗರ್ಭಿಣಿಯರಿಗೆ ಗರ್ಭಾಪಾತವಾಗಿಸುವ ಗುಣ ಹೊಂದಿರುವ ಕಾರಣ ಗರ್ಭಿಣಿಯರು ಸರ್ವಥಾ ಸೇವಿಸಬಾರದು.

ಟೊಮಾಟೋ

ಟೊಮಾಟೋ

ಒಂದು ವೇಳೆ ಟೊಮಾಟೋ ಹಣ್ಣನ್ನು ಹೆಚ್ಚು ಕಾಲ ಗಾಳಿಯಲ್ಲಿಟ್ಟಿದ್ದರೆ ಇದರಲ್ಲಿಯೂ ಕೀಟಾಣುಗಳು ಹೆಚ್ಚು ಸಾಂದ್ರೀಕೃತಗೊಂಡಿರುತ್ತವೆ. ಇವನ್ನು ಸೇವಿಸುವ ಮೂಲಕ ವಿಷಾಹಾರದ ಪ್ರಭಾವ ಕಂಡುಬರಬಹುದು. ಆದ್ದರಿಂದ ಟೊಮಾಟೋ ತಾಜಾ ಆಗಿದ್ದು ನಲ್ಲಿಯ ನೀರಿನ ರಭಸದೊಡನೆ ತೊಳೆದುಕೊಳ್ಳಬೇಕು. ಹಸಿಯಾಗಿ ಸೇವಿಸುವ ಬದಲು ಇವನ್ನೂ ಬೇಯಿಸಿಯೇ ಸೇವಿಸುವುದು ಉತ್ತಮ.

ಮೊಳಕೆ ಬರಿಸಿದ ಕಾಳುಗಳು

ಮೊಳಕೆ ಬರಿಸಿದ ಕಾಳುಗಳು

ತೂಕ ಇಳಿಸುವವರಿಗೆ ಮೊಳಕೆ ಬರಿಸಿದ ಕಾಳುಗಳು ಅತ್ಯುತ್ತಮ ಆಯ್ಕೆ ಹಾಗೂ ಅತ್ಯಂತ ಪೌಷ್ಟಿಕ ಆಹಾರವಾಗಿದ್ದರೂ ಇವನ್ನು ಬೇಯಿಸದೇ ತಿನ್ನಬಾರದು. ಏಕೆಂದರೆ ಮೊಳಕೆಯೊಡೆದ ಬೀಜದ ಭಾಗದ ತೇವ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮ ತಾಣವಾಗಿದ್ದು ಇಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು ಸಂಗ್ರಹಗೊಂಡಿರುತ್ತವೆ. ಆದ್ದರಿಂದ ಇವನ್ನು ಚೆನ್ನಾಗಿ ತೊಳೆದು ಬೇಯಿಸಿಯೇ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವ ವ್ಯಕ್ತಿಗಳು ಇವನ್ನು ಸೇವಿಸದೇ ಇರುವುದು ಕ್ಷೇಮ.

ಮೃದ್ವಂಗಿಗಳು

ಮೃದ್ವಂಗಿಗಳು

ಚಿಪ್ಪುಗಳಲ್ಲಿರುವ ಮೃದ್ವಂಗಿಗಳು, ಉದಾಹರಣೆಗೆ ಏಡಿ, ಸಿಗಡಿ, ಕಪ್ಪೆಚಿಪ್ಪು, ಸಿಂಪಿ ಮೊದಲಾದವು ಸಹಾ ಹೊಟ್ಟೆ ಕೆಡಿಸುವ ಬ್ಯಾಕ್ಟೀರಿಯಾ ಗಳನ್ನು ತಮ್ಮಲ್ಲಿ ಹುದುಗಿಸಿರುತ್ತವೆ. ನೀರಿನಿಂದ ಹೊರಬರುವ ಮೊದಲೇ ಇವುಗಳ ದೇಹದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಇದೇ ಕಾರಣಕ್ಕೆ ನೀರಿನಿಂದ ಹೊರತೆಗೆದ ಕೆಲವೇ ಗಂಟೆಗಳಲ್ಲಿ ಇವು ಪೂರ್ಣವಾಗಿ ಕೊಳೆಯುತ್ತವೆ. ಆದ್ದರಿಂದ ಇವುಗಳನ್ನೂ ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು. ಹಸಿಯಾಗಿ ಎಂದಿಗೂ ಸೇವಿಸಬಾರದು.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ನೇರಳೆ ಹಣ್ಣುಗಳಂತಿರುವ ರಾಸ್ಪ್ರೆರಿ, ಸ್ಟ್ರಾಬೆರಿ, ಬ್ಲಾಕ್ ಬೆರಿ ಮೊದಲಾದ ಹುಳಿಯಾದ ಹಣ್ಣುಗಳ ಹುಳಿರುಚಿಗೂ ಬ್ಯಾಕ್ಟೀರಿಯಾಗಳೇ ಕಾರಣ. ಏಕೆಂದರೆ ಈ ಹಣ್ಣುಗಳಲ್ಲಿ ಸೂಕ್ಷ್ಮವಾದ ಬಿರುಕುಗಳಿದ್ದು ಇಲ್ಲಿ ಬ್ಯಾಕ್ಟೀರಿಯಾಗಳು ಬೀಡುಬಿಡಲು ಸೂಕ್ತ ತಾಣವಾಗಿದೆ. ಅಲ್ಲದೇ ಈ ಹಣ್ಣುಗಳ ಮೇಲೆ ಎರಚುವ ಕೀಟನಾಶಕಗಳ ಪ್ರಭಾವ ಕಡಿಮೆಯಾಗಿ ಒಣಗಿದ ಬಳಿಕ ಉಳಿಯುವ ಪುಡಿಯಲ್ಲಿಯೂ ಅಪಾರವಾದ ಬ್ಯಾಕ್ಟೀರಿಯಾ ಗಳಿರುತ್ತವೆ. ಆದ್ದರಿಂದ ಈ ಹಣ್ಣುಗಳನ್ನು ರಭಸದಿಂದ ಸುರಿಯುವ ನೀರಿನಡಿಯಲ್ಲಿ ಹಿಡಿದು ಚೆನ್ನಾಗಿ ತೊಳೆದು ಕೊಳ್ಳದ ಹೊರತು ತಿನ್ನಬಾರದು. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ಇದರ ಕೊಂಡಿಯನ್ನು ನಿಮ್ಮ ಆಪ್ತರು ಸ್ನೇಹಿತರಿಗೆ ಹಂಚಿಕೊಂಡು ಅವರೂ ಇದರ ಪ್ರಯೋಜನ ಪಡೆಯುವಂತಾಗಲು ಸಹಕರಿಸಿ.

English summary

Most Common Foods That Could Cause Food Poisoning

Meat, dairy products and eggs are frequently contaminated, so it should be properly cleaned and boiled before consuming. The most common symptoms of food poisoning include nausea, vomiting, abdominal cramps, loss of appetite, mild fever, weakness, headache and diarrhoea. Food poisoning can also be a life-threatening experience; but, sometimes, it's hard to determine which food is safe to eat. But, if you know about the foods which are risky, you can cook them in a proper way to kill the pathogens. But, most importantly, do not avoid them. These are the most common foods that could cause food poisoning.
X
Desktop Bottom Promotion