For Quick Alerts
ALLOW NOTIFICATIONS  
For Daily Alerts

ಕೀಲು, ಹಾಗೂ ಮಂಡಿ ನೋವು ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸುವ ನೈಸರ್ಗಿಕ ಜ್ಯೂಸ್‌ಗಳು

|

ದೇಹದಲ್ಲಿ ಉರಿಯೂತದಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇವುಗಳು ನೀಡುವಂತಹ ನೋವು ಸಹಿಸಲು ಅಸಾಧ್ಯವಾಗಿರುವಂತದ್ದಾಗಿದೆ. ಇದರಲ್ಲಿ ಪ್ರಮುಖವಾಗಿ ಸಂಧಿವಾತ ಅಥವಾ ಅಸ್ಥಿರಂಧ್ರತೆ ಪ್ರಮುಖವಾಗಿರುವುದು. ಈ ಸಮಸ್ಯೆಯು ಉರಿಯೂತದಿಂದಾಗಿ ಬರುವುದು. ಉರಿಯೂತದಿಂದಾಗಿ ಬರುವಂತಹ ಇತರ ಕೆಲವೊಂದು ಸಮಸ್ಯೆಯೆಂದರೆ ಅಲ್ಝೈಮರ್, ಸಂಧಿವಾತ, ಮೈಗ್ರೇನ್, ಹೊಟ್ಟೆ ಮತ್ತು ಋತುಚಕ್ರದ ಸಮಯದ ಸೆಳೆತ ಮತ್ತು ಕೆಲವೊಂದು ಸಲ ಕ್ಯಾನ್ಸರ್ ಕೂಡ ಬರಬಹುದು. ಕ್ಯಾರೊಟಿನಾಯ್ಡ್ ಗಳಿಂದ ಸಮೃದ್ಧವಾಗಿರುವಂತಹ ಆಹಾರಗಳು ಉರಿಯೂತವನ್ನು ತುಂಬಾ ಕಡಿಮೆ ಮಾಡುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಕ್ಯಾರೊಟಿನಾಯ್ಡ್ ಗಳಾಗಿರುವ ಬೀಟಾ-ಕ್ರಿಪ್ಟೋಕ್ಸಾಂಟಿನ್ ಮತ್ತು ಬೆಟಾ ಕ್ಯಾರೊಟಿನ್ ಅಂಶವು ಕಿತ್ತಳೆ ಬಣ್ಣ ಹೊಂದಿರುವಂತಹ ಹಣ್ಣುಗಳಾಗಿರುವ ಕಿತ್ತಳೆ, ಮಾವಿನ ಹಣ್ಣು ಮತ್ತು ಕುಂಬಳಕಾಯಿಯಲ್ಲಿ ಕಂಡುಬರುವುದು.

Juice Recipes To Stop Joint and knee Pain Fast

ಸಾಂಬಾರ ಪದಾರ್ಥಗಳಾಗಿರುವಂತಹ ಶುಂಠಿ ಮತ್ತು ಅರಿಶಿನದಲ್ಲೂ ಪ್ರಬಲವಾಗಿರುವ ಉರಿಯೂತ ಶಮನಕಾರಿ ಗುಣಗಳು ಇವೆ. ವಿಟಮಿನ್ ಸಿ ಯು ಗೌಟ್ ನ್ನು ಕಡಿಮೆ ಮಾಡುವುದು. ನೀವು ಸಂಧಿವಾತದಿಂದ ಬಳಲುತ್ತಿದ್ದರೆ ಅಥವಾ ಉರಿಯೂತದಿಂದ ಬರುವಂತಹ ಯಾವುದೇ ರೀತಿಯ ಕಾಯಿಲೆಗಳಿಂದ ದೂರವಿರಬೇಕೆಂದು ಬಯಸಿದರೆ ಆಗ ನೀವು ಉರಿಯೂತ ಶಮನಗೊಳಿಸುವಂತಹ ಕೆಲವೊಂದು ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಸ್ಮೂಥಿ ಮತ್ತು ಜ್ಯೂಸ್ ನ ಮೂಲಕವಾಗಿ ನೀವು ಉರಿಯೂತ ಶಮನಕಾರಿ ಗುಣಗಳನ್ನು ಪಡೆಯಬಹುದು. ಉರಿಯೂತ ಶಮನಕಾರಿ ಗುಣ ಹೊಂದಿರುವ ಎಂಟು ಜ್ಯೂಸ್ ಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಪ್ರತಿನಿತ್ಯ ಈ ಸ್ಮೂಥಿ ಅಥವಾ ಜ್ಯೂಸ್ ನ್ನು ಕುಡಿಯುವುದರಿಂದ ನೀವು ಸಂಧಿವಾತದ ನೋವು ಮತ್ತು ದೀರ್ಘಕಾಲದ ಉರಿಯೂತ ಶಮನ ಮಾಡಬಹುದು. ನೀವು ಈ ಸ್ಮೂಥಿ ಅಥವಾ ಜ್ಯೂಸ್ ನ ಪದೇ ಪದೇ ಮಾಡಿಕೊಳ್ಳಬೇಕಾದರೆ ಈ ಲೇಖನದ ಒಂದು ಪ್ರಿಂಟ್ ತೆಗೆದಿಟ್ಟುಕೊಂಡರೆ ತುಂಬಾ ಒಳ್ಳೆಯದು.

ಕೆಂಪು ಮತ್ತು ಹಸಿರು ಸಿಹಿಯಾದ ಶಮನಕಾರಿ ಸ್ಮೂಥಿ

ಕೆಂಪು ಮತ್ತು ಹಸಿರು ಸಿಹಿಯಾದ ಶಮನಕಾರಿ ಸ್ಮೂಥಿ

ಬೇಕಾಗುವ ಸಾಮಗ್ರಿಗಳು

* 6 ಔನ್ಸ್ ಶುದ್ಧೀಕರಿಸಿದ ನೀರು

* ನಾಲ್ಕು ಕಪ್ ಸಾವಯವ ಬಸಲೆ ಚಿಗುರು

* 2 ಸಾವಯವ ಬಾಳೆಹಣ್ಣು

* 1 ಕಪ್ ಸಾವಯವ ಸ್ಟ್ರಾಬೆರಿ

* 1/2 ಕಪ್ ಬೀಜ ತೆಗೆದಿರುವ ಪೇರಳೆ

ಎಲ್ಲವನ್ನು ಬ್ಲೆಂಡರ್ ಗೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಸ್ಮೂಥಿ ತುಂಬಾ ದಪ್ಪಗಿದ್ದರೆ ಆಗ 4 ಔನ್ಸ್ ನೀರು ಅಥವಾ ಐಸ್ ಹಾಕಿ.

 ಸಿಹಿ ಅರಿಶಿನದ ಜ್ಯೂಸ್

ಸಿಹಿ ಅರಿಶಿನದ ಜ್ಯೂಸ್

ಬೇಕಾಗುವ ಸಾಮಗ್ರಿಗಳು

* 2 ಮಧ್ಯಮ ಗಾತ್ರದ ಸಾವಯವ ಸೇಬು ಬೀಜ ತೆಗೆದು

* 2 ಮಧ್ಯಮ ಗಾತ್ರದ ಸಾವಯವ ಪೀಯರ್ಸ್

* 3 ಮಧ್ಯಮ ಗಾತ್ರದ ಕ್ಯಾರೆಟ್

* 2 ಸಣ್ಣ ಸಾವಯ ಲಿಂಬೆ, ಬೀಜ ತೆಗೆದು, ಸಿಪ್ಪೆ ತೆಗೆದಿರುವುದು.

* 1 ಹೆಬ್ಬೆರಳಿನ ಗಾತ್ರ ತಾಜಾ ಶುಂಠಿ ಬೇರು

* 1 ಹೆಬ್ಬೆರಳಿನ ಗಾತ್ರದ ತಾಜಾ ಅರಶಿನ ಬೇರು

ಇದನ್ನು ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ತೆಗೆದು, ಸೋಸಿಕೊಂಡು ಕುಡಿಯಿರಿ.

Most Read: ಇಂತಹ ಆಹಾರಗಳಿಂದ ದೂರವಿರಿ! ಇಲ್ಲಾಂದ್ರೆ ವೀರ್ಯಾಣುಗಳ ಮೇಲೆ ಅಪಾಯ ಕಾಡಬಹುದು

ಕಿತ್ತಳೆ ಸ್ಮೂಥಿ

ಕಿತ್ತಳೆ ಸ್ಮೂಥಿ

ಬೇಕಾಗುವ ಸಾಮಗ್ರಿಗಳು

* 8 ಔನ್ಸ್ ಶುದ್ಧೀಕರಿಸಿದ ನೀರು

* 1 ಸಾವಯವ ಕಿತ್ತಳೆ, ಸಿಪ್ಪೆ ತೆಗೆದು, ಬೀಜ ತೆಗೆದಿರುವುದು.

* 2 ಕಪ್ ಸಾವಯವ ಬಸಲೆ

* 1.5 ಕಪ್ ತಾಜಾ ಅನಾನಸು ತುಂಡುಗಳು

* 1/2 ಚಮಚ ತಾಜಾ ಶುಂಠಿ.

* 2 ದೊಡ್ಡ ಸಾವಯವ ಕ್ಯಾರೆಟ್, ತುಂಡು ಮಾಡಿರುವುದು.

* 2 ಚಮಚ ಚಿಯಾ ಬೀಜಗಳು

ಎಲ್ಲವನ್ನು ಬ್ಲೆಂಡರ್ ಗೆ ಹಾಕಿಕೊಂಡು ಮಿಶ್ರಣ ಮಾಡಿ. ಕೆಲವರು ಇದಕ್ಕೆ ಐಸ್ ಹಾಕಿಕೊಂಡು ಕೂಡ ಸೇವಿಸಬಹುದು.

ಸ್ಟ್ರಾಬೆರಿ ಪುದೀನಾ ಜ್ಯೂಸ್

ಸ್ಟ್ರಾಬೆರಿ ಪುದೀನಾ ಜ್ಯೂಸ್

ಬೇಕಾಗುವ ಸಾಮಗ್ರಿಗಳು

* 1 ಕಪ್ ತಾಜಾ, ಸಾವಯವ ಸ್ಟ್ರಾಬೆರಿ

* 1 ಮಧ್ಯಮ ಗಾತ್ರದ ಸಾವಯವ ಪೀಯರ್

* 15 ತಾಜಾ, ಸಾವಯವ ಪುದೀನಾ ಎಲೆಗಳು.

* 1 ಕಪ್ ತಾಜಾ ಅನಾನಸು ತುಂಡುಗಳು.

ಕೆಲವೊಂದು ಜ್ಯೂಸರ್ ಗಳಲ್ಲಿ ಪುದೀನಾ ಎಲೆಗಳು ದೊಡ್ಡ ಸಮಸ್ಯೆಯಾಗಿರುವುದು. ಇದನ್ನು ಜಜ್ಜಿಕೊಳ್ಳಲು ಕಷ್ಟವಾಗುತ್ತಲಿದ್ದರೆ ಆಗ ನೀವು ಹಿಂದಿನ ಲಿಂಬೆರಸ ಹೀರುವ ಸಾಧನ ಬಳಸಿಕೊಂಡು ಇದರ ರಸ ಪಡೆಯಿರಿ. ಪುದೀನಾದ ಸ್ವಾದವು ಜ್ಯೂಸ್ ನಲ್ಲಿ ಸರಿಯಾಗಿ ಒಗ್ಗಿಕೊಂಡ ಬಳಿಕ ಇದನ್ನು ಸೇವಿಸಿ.

ಬೀಜಗಳ ಸ್ಮೂಥಿ

ಬೀಜಗಳ ಸ್ಮೂಥಿ

ಬೇಕಾಗುವ ಸಾಮಗ್ರಿಗಳು

* 1.5 ಕಪ್ ಶುದ್ಧೀಕರಿಸಿದ ನೀರು

* 1 ಕಪ್ ತಾಜಾ ಅನಾನಸು(ರಾತ್ರಿ ಇದನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಡಿ)

* 1 ದೊಡ್ಡ ಗಾತ್ರದ ಸಾವಯವ ಬಾಳೆಹಣ್ಣು, ಇದನ್ನು ಕೂಡ ತುಂಡು ಮಾಡಿ ಫ್ರಿಡ್ಜ್ ನಲ್ಲಿಡಿ.

* 1 ಮಧ್ಯಮ ಗಾತ್ರದ ಸಾವಯವ ಕ್ಯಾರೆಟ್

* 1 ಚಮಚ ದಾಲ್ಚಿನಿ

* 1 ಚಮಚ ಶುಂಠಿ

* 1 ಚಮಚ ಅರಿಶಿನ

* 12 ಹಸಿ ಬಾದಾಮಿ, ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ತೆಗೆಯಿರಿ.

ಬಾದಾಮಿ ಮತ್ತು ನೀರನ್ನು ಜತೆಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ(90 ಸೆಕೆಂಡು ರುಬ್ಬಿ).

ಬಾಕಿ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸರಿಯಾಗಿ ಮತ್ತೆ ರುಬ್ಬಿ.

Most Read: ಇದೇ 7 ಕಾರಣದಿಂದಾಗಿ ಕೆಲಸ ಮಾಡುವ ಸ್ಥಳದಲ್ಲಿ, ನಿಮ್ಮ ತೂಕ ಹೆಚ್ಚಾಗುತ್ತಿರುವುದು!

ಶುಂಠಿ, ಹಸಿರು ಜ್ಯೂಸ್

ಶುಂಠಿ, ಹಸಿರು ಜ್ಯೂಸ್

ಬೇಕಾಗುವ ಸಾಮಗ್ರಿಗಳು

* 5 ಹಿಡಿ ಸಾವಯವ ಬಸಲೆ

* 3 ಸಾವಯವ ಸೇಬು

* 1 ಸಾವಯವ ಕಿತ್ತಳೆ. ಸಿಪ್ಪೆ, ಬೀಜ ತೆಗೆದಿರುವುದು.

* ಸಾವಯವ ಸೆಲೆರಿಯ ನಾಲ್ಕು ದಳಗಳು

* 1 ಲಿಂಬೆ, ಇದರ ಸಿಪ್ಪೆ ತೆಗೆಯಬೇಡಿ.

* 1/4 ಇಂಚು ತಾಜಾ ಶುಂಠಿ ಬೇರು.

ಇದೆಲ್ಲವನ್ನು ಜ್ಯೂಸರ್ ಗೆ ಹಾಕಿಕೊಂಡು ಬಳಿಕ ಒಂದು ಶುದ್ಧವಾದ ಡಬ್ಬಕ್ಕೆ ಹಾಕಿ.

ಅನಾನಸು ಜ್ಯೂಸ್

ಅನಾನಸು ಜ್ಯೂಸ್

ಬೇಕಾಗುವ ಸಾಮಗ್ರಿಗಳು

* 1 ದೊಡ್ಡ ಹಿಡಿ ಚೆರ್ರಿಗಳು

* ಹೆಬ್ಬೆರಳಿನ ಗಾತ್ರದ ಒಂದು ತಾಜಾ ಅರಿಶಿನ ಬೇರು.

* 1 ದೊಡ್ಡ ಹಿಡಿಯಷ್ಟು ಸಾವಯ ದ್ರಾಕ್ಷಿ, ಬೀಜ ತೆಗೆದಿರುವುದು.

* 1 ದೊಡ್ಡ ಗಾತ್ರದ ಸಾವಯವ ಕ್ಯಾರೆಟ್

* 1 ಹೆಬ್ಬೆರಳಿನ ಗಾತ್ರ ತಾಜಾ ಶುಂಠಿ ಬೇರು.

* ಅನಾನಸಿನ ನಾಲ್ಕು ತುಂಡುಗಳು.

ಎಲ್ಲವನ್ನು ಜ್ಯೂಸರ್ ಗೆ ಹಾಕಿಕೊಂಡು ಇದನ್ನು ಕುಡಿಯಿರಿ.

Most Read: ಈ ಮಹಿಳೆಯ ಬಾಲ್ಯವನ್ನೇ ನುಂಗಿದ ಜನ್ಮ ಗುರುತು!

ಹಳದಿ-ಹಸಿರು ನೋವು ನಿವಾರಕ ಸ್ಮೂಥಿ

ಹಳದಿ-ಹಸಿರು ನೋವು ನಿವಾರಕ ಸ್ಮೂಥಿ

ಬೇಕಾಗುವ ಸಾಮಗ್ರಿಗಳು

* 1ಕಪ್ ತಾಜಾ ಅನಾನಸು, ತುಂಡುಗಳನ್ನಾಗಿ ಮಾಡಿ.

* 1/4 ಕಪ್ ತಾಜಾ ದ್ರಾಕ್ಷಿ ಹಣ್ಣಿನ ಜ್ಯೂಸ್.

* 1 ಕಪ್ ತಾಜಾ ಪೀಯರ್ ತುಂಡುಗಳು.

* 2 ಕಪ್ ತಾಜಾ ಸಾವಯವ ಚಿಗುರು ಬಸಲೆ ಎಲೆಗಳು ಮತ್ತು ದಂಡು.

* 1 ಹಿಡಿ ತಾಜಾ ಸಾವಯ ಪಾರ್ಸ್ಲಿ, ದಂಡಿನೊಂದಿಗೆ.

* 1/2 ಮಧ್ಯಮ ಗಾತ್ರದ ಸಾವಯವ ಕ್ಯಾರೆಟ್.

ದ್ರಾಕ್ಷಿ ಹಣ್ಣಿನ ಜ್ಯೂಸ್ ಹೊರತುಪಡಿಸಿ, ಎಲ್ಲವನ್ನು ಜ್ಯೂಸರ್ ಗೆ ಹಾಕಿ. ಬೇಕಿದ್ದರೆ ನೀವು ನೊರೆ ತೆಗೆಯಿರಿ. ಇದರ ಬಳಿಕ ದ್ರಾಕ್ಷಿ ರಸ ಹಾಕಿ. ಇದನ್ನು ಐಸ್ ಜತೆಗೆ ಹಾಕಿ ಕುಡಿದರೆ ಮತ್ತಷ್ಟು ಚೆನ್ನಾಗಿರುವುದು. ಈ ಎಲ್ಲಾ ಜ್ಯೂಸ್ ಗಳನ್ನು ಕುಡಿದು ನೋವಿನಿಂದ ಮುಕ್ತರಾಗಿ.

English summary

Juice Recipes To Stop Joint and knee Pain Fast

If you or someone you love suffers from joint pain such as arthritis, rheumatoid arthritis, gout, or osteoarthritis, then you know the intense pain that these inflammatory diseases can cause. Inflammation is linked to numerous health problems in the body such as Alzheimer’s, arthritis, migraines, abdominal and menstrual cramps, and even cancer. Foods rich in carotenoids have been shown in numerous studies to reduce inflammation. Carotenoids, such as beta-cryptoxanthin and beta-carotene are found in many orange colored foods such as tangerines, mangoes, and pumpkins.
X
Desktop Bottom Promotion