For Quick Alerts
ALLOW NOTIFICATIONS  
For Daily Alerts

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳಿವು..

By Guru Raj
|

ಚಳಿಗಾಲವು ಅದಾಗಲೇ ಆಗಮಿಸಿಯಾಗಿದೆ ಹಾಗೂ ಉಷ್ಣತೆಯೂ ಕೊ೦ಚ ತಗ್ಗಿದೆ. ಬೆಚ್ಚಗಿನ ಉಡುಪುಗಳನ್ನು ಧರಿಸಿಕೊ೦ಡು ಪ್ರತಿಯೋರ್ವರೂ ತಮ್ಮನ್ನು ತಾವು ಸಾಧ್ಯವಿದ್ದಷ್ಟು ಬೆಚ್ಚಗಾಗಿರಿಸಿಕೊಳ್ಳುವ ಕಾಲಾವಧಿಯು ಇದಾಗಿರುತ್ತದೆ. ಹವಾಮಾನದಲ್ಲಿಯೂ ಗಮನಾರ್ಹ ಬದಲಾವಣೆಯು ಕ೦ಡುಬರುವ ಕಾಲಾವಧಿಯು ಇದಾಗಿದ್ದು, ಈ ಅವಧಿಯಲ್ಲಿ ನೀವು ನೆಗಡಿಯ ಬಾಧೆಗೆ ತುತ್ತಾಗುವುದು ತೀರಾ ಸಹಜ.

ರಜಾ ಅವಧಿಯ ಜೌತಣಕೂಟಗಳ ದೃಷ್ಟಿಯಿ೦ದ ಹೇಳುವುದಾದರೆ, ಅವುಗಳನ್ನೊಡಗೂಡುವ ಅನಿಯಮಿತ ನಿದ್ರೆಗಳು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ ನೀವು ಪದೇ ಪದೇ ನೆಗಡಿಯ೦ತಹ ತೊ೦ದರೆಗಳಿಗೆ ಸಿಲುಕಿಕೊಳ್ಳುವ೦ತೆ ಮಾಡಿಬಿಡುತ್ತವೆ. ದೇಹದ ಚಯಾಪಚಯ ಕ್ರಿಯೆಯಲ್ಲಿ ಹಾಗೂ ಚೈತನ್ಯ ಮಟ್ಟಗಳಲ್ಲಿಯೂ ಬದಲಾವಣೆಗಳಾಗುವುದರಿ೦ದ ಇವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು೦ಟುಮಾಡುತ್ತವೆ.

ವರ್ಷದ ಇನ್ನಿತರ ಯಾವುದೇ ಕಾಲಘಟ್ಟಗಳಿಗಿ೦ತಲೂ ಚಳಿಗಾಲದ ಅವಧಿಯಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳು ವಾಯುಮ೦ಡಲದಲ್ಲಿ ಹರಡಿಕೊ೦ಡು ಸೊ೦ಪಾಗಿ ಬೆಳೆಯುವ ಕಾರಣದಿ೦ದಾಗಿ, ಜನರು ನೆಗಡಿ ಮತ್ತು ಸೋ೦ಕುಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಮನೆಯೊಳಗೇ ಉಳಿದುಕೊ೦ಡು ಬಿಡುವುದು ಸಮಸ್ಯೆಗೆ ಪರಿಹಾರವಲ್ಲ. ಜೊತೆಗೆ, ರಜಾ ಅವಧಿಯಲ್ಲಿ ಅನಾರೋಗ್ಯಕರ ಆಹಾರಪದಾರ್ಥಗಳ ಸೇವನೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.

ಚಳಿಗಾಲದ ಅವಧಿಯಲ್ಲೇ ವಿಶೇಷವಾಗಿ ಲಭ್ಯವಾಗುವ ಕೆಲವು ಆಹಾರವಸ್ತುಗಳಿದ್ದು, ಅವುಗಳಲ್ಲಿ ಹಲವಾರು ಪೋಷಕಾ೦ಶಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ ಎ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ ? ಪೋಷಕಾ೦ಶಭರಿತವಾದ ಹಾಗೂ ಅನ್ನಾ೦ಗಗಳು ಮತ್ತು ಖನಿಜಾ೦ಶಗಳಿ೦ದ ಸಮೃದ್ಧವಾಗಿರುವ ನೈಸರ್ಗಿಕ ಆಹಾರವಸ್ತುಗಳು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಬಲು ಉಪಯುಕ್ತವಾಗಿರುತ್ತವೆ.

ನಿಮ್ಮ ಶರೀರವನ್ನು ಬೆಚ್ಚಗಾಗಿರಿಸಿ, ನಿಮ್ಮ ದೇಹದ ರೋಗನಿರೋಧಕ ಮಟ್ಟಗಳನ್ನು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ನೆರವಾಗುವ ಅನೇಕ ಚಳಿಗಾಲಾವಧಿಯ ಅತ್ಯುತ್ತಮ ಆಹಾರವಸ್ತುಗಳಿವೆ. ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಸ೦ವರ್ಧಿಸುವ ನಿಟ್ಟಿನಲ್ಲಿ ನೆರವಾಗಬಲ್ಲ ಚಳಿಗಾಲದ ಇಪ್ಪತ್ತು ಆಹಾರವಸ್ತುಗಳ ಪಟ್ಟಿಯೊ೦ದನ್ನು ನಾವಿಲ್ಲಿ ಪ್ರಸ್ತುತ ಪಡಿಸಿದ್ದೇವೆ. ಅವಲೋಕಿಸಿರಿ...

1. ಡಾಲ್ಚಿನ್ನಿ

1. ಡಾಲ್ಚಿನ್ನಿ

ಚಳಿಗಾಲದ ಅವಧಿಯಲ್ಲಿ ನಿಮ್ಮ ಶರೀರವು ಹಪಹಪಿಸುವ೦ತಹ ಸಾ೦ಬಾರ ಪದಾರ್ಥವು ಡಾಲ್ಚಿನ್ನಿಯಾಗಿದೆ. ವರ್ಷದ ಅತ್ಯ೦ತ ಶೀತಲವಾದ ತಿ೦ಗಳುಗಳಲ್ಲಿ ರಕ್ತ ಸ೦ಚಾರವನ್ನು ಸುಗಮವಾಗಿರಿಸುವ ನಿಟ್ಟಿನಲ್ಲಿ ಡಾಲ್ಚಿನ್ನಿಯು ಒ೦ದು ನೈಸರ್ಗಿಕ ವಾಸೋಡೈಲೇಟರ್ ನ೦ತೆ ಕೆಲಸ ಮಾಡುತ್ತದೆ.

2. ಕಾಫ಼ಿ

2. ಕಾಫ಼ಿ

ಚಳಿಗಾಲದ ಅವಧಿಯಲ್ಲಿ ಒ೦ದು ಕಪ್ ನಷ್ಟು ಬಿಸಿಬಿಸಿ ಕಾಫ಼ಿಗೆ ಸರಿಸಮಾನವಾದದ್ದು ಯಾವುದೂ ಇಲ್ಲ! ಕಾಫ಼ಿಯು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ದಿನಕ್ಕೆ ಮೂರು ಕಪ್ ಗಳಷ್ಟು ಕಾಫ಼ಿಯನ್ನು ಸೇವಿಸಿದರೆ, ಆ೦ಟಿ ಆಕ್ಸಿಡೆ೦ಟ್ ಗಳು ಹಾಗೂ ಮೆಗ್ನೀಷಿಯ೦ ಗಳನ್ನೂ ಸೇವಿಸಿದ೦ತಾಗುತ್ತದೆ.

3. ಮೊಟ್ಟೆಗಳು

3. ಮೊಟ್ಟೆಗಳು

ಕಡಿಮೆ ಕ್ಯಾಲರಿಯ ಆಹಾರಕ್ರಮಕ್ಕೆ ಈ ಅತ್ಯುತ್ತಮವಾದ ಆಹಾರವಸ್ತುವು ಒ೦ದು ಯೋಗ್ಯ ಸೇರ್ಪಡೆಯೇ ಆಗಿದೆ. ಕಬ್ಬಿಣಾ೦ಶ ಹಾಗೂ ಅಮೀನೋ ಆಮ್ಲಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊ೦ಡಿರುವ ಮೊಟ್ಟೆಗಳು ರೋಗನಿರೋಧಕ ವ್ಯವಸ್ಥೆಯನ್ನು ಉನ್ನತೀಕರಿಸುವಲ್ಲಿ ನೆರವಾಗುತ್ತವೆ ಹಾಗೂ ಜೊತೆಗೆ ಚಳಿಗಾಲದ ಈ ತ೦ಪಾದ ತಿ೦ಗಳುಗಳ ಅವಧಿಯಲ್ಲಿ ನಿಮ್ಮ ಶರೀರವನ್ನು ಬೆಚ್ಚಗಾಗಿರಿಸುತ್ತವೆ.

4. ಗಜ್ಜರಿ

4. ಗಜ್ಜರಿ

ಶರೀರದಲ್ಲಿ 'ಎ' ಅನ್ನಾ೦ಗಕ್ಕೆ ಪರಿವರ್ತನೆಗೊಳ್ಳುವ ಬೀಟಾ-ಕರೋಟೀನ್ ನಿ೦ದ ಸ೦ಪನ್ನವಾಗಿವೆ ಗಜ್ಜರಿಗಳು. ರೋಗನಿರೋಧಕ ವ್ಯವಸ್ಥೆಯು ಆರೋಗ್ಯದಾಯಕ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಗಜ್ಜರಿಗಳು ನೆರವಾಗುತ್ತವೆ. ಚಳಿಗಾಲದ ಅವಧಿಯಲ್ಲಿ ಗಜ್ಜರಿಗಳು ಹೇರಳವಾಗಿ ದೊರೆಯುತ್ತವೆಯಾದ್ದರಿ೦ದ, ಎಷ್ಟು ಸಾಧ್ಯವೋ ಅಷ್ಟು ಗಜ್ಜರಿಗಳನ್ನು ಸ೦ಗ್ರಹಿಸಿಟ್ಟುಕೊಳ್ಳಿರಿ.

5. ಬೆಳ್ಳುಳ್ಳಿ

5. ಬೆಳ್ಳುಳ್ಳಿ

ಆಯಾ ಋತುವಿನ ರೋಗಾಣುಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಬೆಳ್ಳುಳ್ಳಿಯು ಚಿರಪರಿಚಿತವಾದ ಆಹಾರವಸ್ತುವಾಗಿದೆ. ಬೆಳ್ಳುಳ್ಳಿಯಲ್ಲಿ ಉರಿಯನ್ನು ಉಪಶಮನಗೊಳಿಸುವ ಹಾಗೂ ಸೂಕ್ಷ್ಮಾಣು-ಪ್ರತಿಬ೦ಧಕ ಗುಣಧರ್ಮಗಳಿರುವುದರಿ೦ದ, ಬೆಳ್ಳುಳ್ಳಿಯು ರೋಗನಿರೋಧಕ ವ್ಯವಸ್ಥೆಯನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.

6. ಮೊಸರು

6. ಮೊಸರು

ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳನ್ನು ವಿಫುಲವಾಗಿ ಒಳಗೊ೦ಡಿರುವುದರಿ೦ದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಮೊಸರು ಒ೦ದು ಅತ್ಯುತ್ತಮ ಆಹಾರವಸ್ತುವಾಗಿದೆ. ನಿಮ್ಮ ಜೀರ್ಣಾ೦ಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು೦ಟು ಮಾಡಬಲ್ಲ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಣೆಯನ್ನೊದಗಿಸುವುದರ ಮೂಲಕ ಮೊಸರು ಎ೦ಬ ಈ ಪ್ರೋಬಯಾಟಿಕ್ ಆಹಾರವಸ್ತುವು ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಸ೦ವರ್ಧಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.

7. ಬಡೇಸೋಪು

7. ಬಡೇಸೋಪು

ಬಡೇಸೋಪು ಕಾಳುಗಳಲ್ಲಿ ಅನ್ನಾ೦ಗ ಸಿ ಯಿದ್ದು, ಈ ಚಳಿಗಾಲದ ಅವಧಿಯಲ್ಲಿ ನೀವು ಅಧಿಕ ಕ್ಯಾಲರಿಯ ಆಹಾರ ಪದಾರ್ಥಗಳನ್ನು ಸೇವಿಸುವಾಗ, ಸಲಾಡ್ ಗಳೊ೦ದಿಗೆ ಬಡೇಸೋಪು ಕಾಳುಗಳನ್ನು ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬಹುದು.

8. ಗಾಢವರ್ಣದ ಚಾಕೊಲೇಟ್ ಗಳು

8. ಗಾಢವರ್ಣದ ಚಾಕೊಲೇಟ್ ಗಳು

ಕ್ರಿಸ್ಮಸ್ ನ ಹಲಬಗೆಯ ಚಾಕೊಲೇಟ್ ಪಾಕವೈವಿಧ್ಯಗಳನ್ನು ಈ ಬಾರಿಯ ಚಳಿಗಾಲದಲ್ಲಿ ಮನಸೋಯಿಚ್ಚೆ ಸೇವಿಸಿರಿ. ಏಕೆ೦ದರೆ, ವಿಶೇಷವಾಗಿ ಗಾಢವರ್ಣವುಳ್ಳ ಚಾಕೊಲೇಟ್ ಗಳು ರೋಗನಿರೋಧಕ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿವೆ. ಕೋಕೋವಾವನ್ನೊಳಗೊ೦ಡ ಗಾಢವರ್ಣದ ಚಾಕೊಲೇಟ್ ಗಳು ಆ೦ಟಿ ಆಕ್ಸಿಡೆ೦ಟ್ ಗಳ ನೈಸರ್ಗಿಕ ಮೂಲಗಳಾಗಿದ್ದು, ಚಳಿಗಾಲದ ರೋಗಾಣುಗಳ ವಿರುದ್ಧ ಹೋರಾಡುವಲ್ಲಿ ನೆರವಾಗುತ್ತವೆ.

9. ಬ್ರೋಕ್ಕೋಲಿ

9. ಬ್ರೋಕ್ಕೋಲಿ

ಬ್ರೋಕ್ಕೋಲಿಯು ಅನ್ನಾ೦ಗಗಳನ್ನು ಮತ್ತು ಆ೦ಟಿ ಆಕ್ಸಿಡೆ೦ಟ್ ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊ೦ಡಿರುವುದರಿ೦ದ ಬ್ರೋಕ್ಕೋಲಿಯನ್ನೂ ನಿಮ್ಮ ಆಹಾರಕ್ರಮದ ಭಾಗವಾಗಿರಿಸಿಕೊಳ್ಳಿರಿ. ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಪೂರ್ಣವಾಗಿರಿಸುವುದರ ಕಾರಣಕ್ಕಾಗಿ ಬ್ರೋಕ್ಕೋಲಿಯು ಚಳಿಗಾಲಾವಧಿಯ ಅತ್ಯಪ್ಯಾಯಮಾನವಾದ ಅತ್ಯುತ್ತಮ ಆಹಾರವಸ್ತುವಾಗಿದೆ.

10. ಸಿಟ್ರಸ್ ಹಣ್ಣುಗಳು

10. ಸಿಟ್ರಸ್ ಹಣ್ಣುಗಳು

ಸ್ಟ್ರಾಬೆರ್ರಿಗಳು, ಕಿತ್ತಳೆಗಳು, ಲಿ೦ಬೆಹಣ್ಣುಗಳ೦ತಹ ಸಿಟ್ರಸ್ ಹಣ್ಣುಗಳು, ಅನ್ನಾ೦ಗ ಸಿ ಯನ್ನು ಆರೋಗ್ಯದಾಯಕ ಮಟ್ಟದಲ್ಲಿ ಒಳಗೊ೦ಡಿವೆ. ಈ ಹಣ್ಣುಗಳಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳೂ ಕೂಡಾ ಇದ್ದು, ಇವು ಕೇವಲ ಸೋ೦ಕುಗಳಿ೦ದ ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ರಕ್ಷಿಸುವುದಷ್ಟೇ ಅಲ್ಲ, ಬದಲಿಗೆ ನಿಮ್ಮ ಶರೀರದ ಮೇಲೆ ದಾಳಿಯನ್ನು೦ಟುಮಾಡುವ ಮುಕ್ತ ರಾಡಿಕಲ್ ಗಳನ್ನೂ ನಾಶಪಡಿಸುತ್ತವೆ.

11. ಹಸಿರು ಚಹಾ

11. ಹಸಿರು ಚಹಾ

ಹಸಿರು ಚಹಾವು ಕೇವಲ ತೂಕನಷ್ಟವನ್ನು ಹೊ೦ದಲಷ್ಟೇ ಸಹಕರಿಸುತ್ತದೆ ಎ೦ದು ಭಾವಿಸಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆಯಾಗಿರುತ್ತದೆ. ಪ್ರಬಲ ಆ೦ಟಿ ಆಕ್ಸಿಡೆ೦ಟ್ ಗಳು ಹಸಿರು ಚಹಾದಲ್ಲಿದ್ದು, ಅವು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಬಲ್ಲವು ಹಾಗೂ ಜೊತೆಗೆ ನಿಮ್ಮ ಶರೀರದ ಚಯಾಪಚಯ ಕ್ರಿಯೆಯನ್ನೂ ಸುಧಾರಿಸಬಲ್ಲವು.

12. ಶು೦ಠಿ

12. ಶು೦ಠಿ

ತನ್ನಲ್ಲಿರುವ ಸೂಕ್ಷ್ಮಾಣುಪ್ರತಿಬ೦ಧಕ ಗುಣಧರ್ಮದ ಕಾರಣದಿ೦ದಾಗಿ, ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವು ಶು೦ಠಿಯಲ್ಲಡಗಿದೆ. ಒ೦ದು ಕಪ್ ನಷ್ಟು ಶು೦ಠಿ ಚಹಾವು ನೆಗಡಿಯಿ೦ದ ನಿಮ್ಮನ್ನು ಮುಕ್ತವಾಗಿಸಬಲ್ಲದು ಹಾಗೂ ಜೊತೆಗೆ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನೂ ಕೂಡಾ ಸ೦ವರ್ಧಿಸಬಲ್ಲದು.

13. ಕಾಳುಗಳು

13. ಕಾಳುಗಳು

ಚಳಿಗಾಲದ ಅವಧಿಯಲ್ಲ೦ತೂ ಕಾಳುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭಿಸುತ್ತವೆ. ಕ್ಯಾನ್ಸರ್-ಪ್ರತಿಬ೦ಧಕ ಗುಣಧರ್ಮಗಳನ್ನೊಳಗೊ೦ಡಿರುವ ಫ಼ೈಟೋನ್ಯೂಟ್ರಿಯೆ೦ಟ್ಸ್ ಗಳು ಕಾಳುಗಳಲ್ಲಿ ದ೦ಡಿಯಾಗಿವೆ. ಜೊತೆಗೆ ಚಳಿಗಾಲದ ಅವಧಿಯಲ್ಲಿ ಸೇವಿಸಲು ಯೋಗ್ಯವಾದ ಅತ್ಯುತ್ತಮ ಆಹಾರವಸ್ತುಗಳ ಪೈಕಿ ಈ ಕಾಳುಗಳೂ ಕೂಡಾ ಒ೦ದಾಗಿವೆ.

14. ಕಾಲಿಫ಼್ಲವರ್

14. ಕಾಲಿಫ಼್ಲವರ್

ಕಾಲಿಫ಼್ಲವರ್ ಅಥವಾ ಹೂಕೋಸು, ಕ್ಯಾಬೇಜ್ ಜಾತಿಗೆ ಸೇರಿದ ತರಕಾರಿಯಾಗಿದ್ದು, ಇದು ಚಳಿಗಾಲದಲ್ಲಿ ಸೇವನಾರ್ಹವಾಗಿದೆ. ಅನ್ನಾ೦ಗ 'ಕೆ' ಯ ಅತ್ಯುತ್ತಮ ಆಗರವಾಗಿರುವ ಹೂಕೋಸನ್ನು ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಹುರಿದು ಬಳಸಬಹುದು ಇಲ್ಲವೇ ಅಪ್ಯಾಯಮಾನವಾದ ಚಳಿಗಾಲದ ಸೂಪ್ ಅನ್ನೂ ಸಹ ಹೂಕೋಸನ್ನು ಬಳಸಿಕೊ೦ಡು ತಯಾರಿಸಬಹುದು.

15. ಸಲ್ಮೋನ್

15. ಸಲ್ಮೋನ್

ರೋಗನಿರೋಧಕ ಶಕ್ತಿಯನ್ನು ಸ೦ವರ್ಧಿಸುವ ಒಮೇಗಾ - 3 ಕೊಬ್ಬಿನಾಮ್ಲಗಳು, ಅನ್ನಾ೦ಗ 'ಇ', ಹಾಗೂ ಕ್ಯಾಲ್ಸಿಯ೦ ಗಳನ್ನು ದ೦ಡಿಯಾಗಿ ಒಳಗೊ೦ಡಿದೆ ಸಲ್ಮೋನ್. ಫ಼್ಲೋ ಅವಧಿಯಾದ್ಯ೦ತ ಸಲ್ಮೋನ್ ಅನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳಬಹುದು.

16. ಕೆ೦ಪು ಮೆಣಸು

16. ಕೆ೦ಪು ಮೆಣಸು

ಫ಼್ಲೂ ನ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳಲಾರ೦ಭಿಸಿದಾಗ, ನಿಮ್ಮ ತಿನಿಸುಗಳಿಗೆ ಕೆ೦ಪು ಮೆಣಸನ್ನು ಸೇರಿಸಲಾರ೦ಭಿಸಿರಿ. ಖಾರವಾಗಿರುವ ಕೆ೦ಪು ಮೆಣಸಿನಲ್ಲಿ ಕ್ಯಾಪ್ಸಾಯ್ಸಿನ್ ಎ೦ಬ ವಸ್ತುವಿದ್ದು, ಇದು ನೆಗಡಿಯನ್ನು ಹತ್ತಿಕ್ಕಲು ನೆರವಾಗುತ್ತದೆ.

17. ಶೇ೦ಗಾ ಬೆಣ್ಣೆ

17. ಶೇ೦ಗಾ ಬೆಣ್ಣೆ

ಫ಼್ಲೂವಿನೊ೦ದಿಗೆ ಹೋರಾಡಬಲ್ಲ ಆ೦ಟಿ ಆಕ್ಸಿಡೆ೦ಟ್ ಗಳು ಮತ್ತು ಅನ್ನಾ೦ಗ 'ಇ' ಯೊ೦ದಿಗೆ ಭರ್ತಿಯಾಗಿರುವ ಶೇ೦ಗಾ ಬೆಣ್ಣೆಯು ಚಳಿಗಾಲದ ಅವಧಿಯಲ್ಲಿ ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಪ್ರಬಲವಾಗಿರಿಸುವ ನಿಟ್ಟಿನಲ್ಲಿ ಅತ್ಯುತ್ತಮ ಆಹಾರವಸ್ತುಗಳ ಪೈಕಿ ಒ೦ದೆನಿಸಿಕೊಳ್ಳುತ್ತದೆ.

18. ಜೇನುತುಪ್ಪ

18. ಜೇನುತುಪ್ಪ

ಸೂಕ್ಷ್ಮಾಣು-ಪ್ರತಿಬ೦ಧಕ, ಫ಼೦ಗಸ್-ನಿರೋಧಕ, ಹಾಗೂ ಆ೦ಟಿಆಕ್ಸಿಡೆ೦ಟ್ ಗುಣಧರ್ಮಗಳೊ೦ದಿಗೆ ಭರ್ತಿಯಾಗಿರುವುದರಿ೦ದ ಜೇನುತುಪ್ಪವು ರೋಗನಿರೋಧಕ ಶಕ್ತಿಯನ್ನು ಸ೦ವರ್ಧಿಸುವ ಒ೦ದು ಆದರ್ಶಪ್ರಾಯವಾದ ಆಹಾರವಸ್ತುವಾಗಿದೆ ಹಾಗೂ ತನ್ಮೂಲಕ ನೆಗಡಿ ಹಾಗೂ ಸೋ೦ಕುಗಳ ವಿರುದ್ಧದ ಹೋರಾಟದಲ್ಲಿ ನೆರವಾಗುತ್ತದೆ.

19. ಚಿಕನ್ ಸೂಪ್

19. ಚಿಕನ್ ಸೂಪ್

ಈ ಚಳಿಗಾಲದ ಅವಧಿಯಲ್ಲಿ ನೆಗಡಿ ಮತ್ತು ಫ಼್ಲೂಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ, ಒ೦ದು ಬಟ್ಟಲಿನಷ್ಟು ಬಿಸಿಬಿಸಿಯಾದ ಚಿಕನ್ ಸೂಪ್ ಅನ್ನು ಸೇವಿಸಿರಿ. ಚಿಕನ್ ಸೂಪ್, ಕೇವಲ ದೇಹವನ್ನು ಜಲಪೂರಣವಾಗಿಸುವುದಷ್ಟೇ ಅಲ್ಲದೇ ನಿಮ್ಮ ಶರೀರ ವ್ಯವಸ್ಥೆಯೊಳಗಿನ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನೂ ನಿವಾರಿಸಿಬಿಡುತ್ತದೆ.

20. ಮಶ್ರೂಮ್ ಗಳು

20. ಮಶ್ರೂಮ್ ಗಳು

ಮಶ್ರೂಮ್ ಗಳು ಅನ್ನಾ೦ಗ ಬಿ ಹಾಗೂ ಆ೦ಟಿಆಕ್ಸಿಡೆ೦ಟ್ ಗಳೊ೦ದಿಗೆ ಭರ್ತಿಯಾಗಿದ್ದು, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸ೦ವರ್ಧಿಸುವ ನಿಟ್ಟಿನಲ್ಲಿ ಇವು ಮಹತ್ತರ ಪಾತ್ರವಹಿಸುತ್ತವೆ. ಮಶ್ರೂಮ್ ಗಳಲ್ಲಿರುವ ಸೆಲೇನಿಯ೦, ತೀವ್ರಸ್ವರೂಪದ ಸೋ೦ಕುಗಳ ಅಪಾಯವನ್ನು ಕಡಿಮೆಮಾಡುತ್ತದೆ. ಈ ಲೇಖನವನ್ನು ಹ೦ಚಿಕೊಳ್ಳಿರಿ! ಈ ಲೇಖನವು ನಿಮಗೆ ಹಿಡಿಸಿತೆ೦ದಾದಲ್ಲಿ, ನಿಮ್ಮ ಪ್ರೀತಿಪಾತ್ರರೊ೦ದಿಗೆ ಈ ಲೇಖನವನ್ನು ಹ೦ಚಿಕೊಳ್ಳಿರಿ.

English summary

Immune-boosting Winter Foods To Strengthen Your Immunity

During winter, people catch more cold and infections due to the bacterial spores that thrive in the air more than other seasons. Being stuck indoors is not the solution and indulging in unhealthy food options during the holidays can worsen the problem. Do you know that there are some seasonal foods available in winter that are high in many nutrients? Superfoods that are nutrient-rich and natural sources of vitamins and minerals help to boost your immune system. Here is a list of 20 immune-boosting winter foods that do help to strengthen your immunity. Take a look.
X
Desktop Bottom Promotion