ಸಿಹಿಗೆಣಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!

By Arshad
Subscribe to Boldsky

ಸಿಹಿಗೆಣಸು ತಿನ್ನುವುದರಿಂದ ಕೊಬ್ಬು ಬರುತ್ತದೆಯೇ? ಇದು ಆರೋಗ್ಯಕ್ಕೆ ಒಳ್ಳೆಯದೇ? ಇಂತಹ ಪ್ರಶ್ನೆಗಳು ಸಿಹಿಗೆಣಸನ್ನು ಕಂಡಾಗ ಮನದಲ್ಲಿ ಮೂಡಬಹುದು. ವಾಸ್ತವವಾಗಿ ಸಿಹಿಗೆಣಸಿನಲ್ಲಿ ಹೆಚ್ಚಿನ ಹಾಗೂ ಪ್ರಬಲ ಪೋಷಕಾಂಶಗಳಿದ್ದು ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಎ ಹಾಗೂ ಕರಗುವ ನಾರುಗಳಲ್ಲಿ ಅಪಾರ ಪ್ರಯೋಜನಗಳಿವೆ.

ಇವು ಸಾಮಾನ್ಯವಾಗಿ ಎಲ್ಲೆಡೆ ಹಾಗೂ ವರ್ಷದ ಬಹುತೇಕ ದಿನಗಳಲ್ಲಿ ಲಭ್ಯವಿರುತ್ತವೆ. ಯಾವ ಆಹಾರಗಳನ್ನು ಸೇವಿಸಿದರೆ ಕೊಬ್ಬು ಹೆಚ್ಚುತ್ತದೆ ಎಂಬ ಅನುಮಾನವಿರುತ್ತದೆಯೋ ಅಲ್ಲೆಲ್ಲಾ ಗೆಣಸನ್ನು ಬದಲಿಯಾಗಿ ಬಳಸಬಹುದು. ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇವೆ. ಈ ಒರಟು ಒರಟಾಗಿ ಕಾಣುವ ಸಿಹಿಯಾದ ಗಡ್ಡೆಯಲ್ಲಿ ಬೀಟಾ ಕ್ಯಾರೋಟೀನ್ ಎಂಬ ವಿಶೇಷ ಆಂಟಿ ಆಕ್ಸಿಡೆಂಟ್ ಇದೆ, ಇದೊಂದು ವಿಟಮಿನ್ ಎ ಬಗೆಯ ಪೋಷಕಾಂಶವೇ ಆಗಿದೆ. ಅಲ್ಲದೇ ಗೆಣಸಿನಲ್ಲಿ ಮ್ಯಾಂಗನೀಸ್, ವಿಟಮಿನ್ ಬಿ6 ಹಾಗೂ ವಿಟಮಿನ್ ಸಿ ಸಹಾ ಉತ್ತಮ ಪ್ರಮಾಣದಲ್ಲಿವೆ.

ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಇದರ ಜೊತೆಗೇ ಪೊಟ್ಯಾಶಿಯಮ್, ನಿಯಾಸಿನ್, ವಿಟಮಿನ್ ಬಿ1,ಬಿ2, ಕರಗುವ ನಾರು ಹಾಗೂ ಗಂಧಕವೂ ಇದೆ. ಇವುಗಳನ್ನು ಯಾವುದೇ ಖಾದ್ಯಗಳ ಜೊತೆಗೆ ಸೇರಿಸಿ ಸೇವಿಸಬಹುದು. ಅಷ್ಟೇ ಅಲ್ಲ, ಸಿಹಿಪದಾರ್ಥಗಳ ಜೊತೆಗೂ ಸಹಾ! ಗೆಣಸಿನಲ್ಲಿರುವ ನವಿರಾದ ಸಿಹಿ ಖಾದ್ಯಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಬನ್ನಿ, ಗೆಣಸಿನ ಅದ್ಭುತ ಆರೋಗ್ಯಕರ ಗುಣಗಳ ಬಗ್ಗೆ ಅರಿಯೋಣ...

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ಗೆಣಸಿನಲ್ಲಿ ಪ್ರಮುಖವಾಗಿ ಪಿಷ್ಟದ ಪ್ರಮಾಣ ಹೆಚ್ಚಿದ್ದರೂ ಇವು ಜೀರ್ಣಗೊಂಡಾಗ ಸರಳ ಸಕ್ಕರೆಗಳಾಗಿ ವಿಂಗಡನೆಗೊಳ್ಳುತ್ತವೆ. ಈ ಸಕ್ಕರೆಗಳನ್ನು ಹೀರಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಹಾಗೂ ಈ ಸಕ್ಕರೆ ರಕ್ತದಲ್ಲಿನ ಒಟ್ಟಾರೆ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುವ ಕಾರಣ ಮಧುಮೇಹಿಗಳಿಗೂ ಗೆಣಸು ಸೂಕ್ತವಾದ ಆಹಾರವಾಗಿದೆ.

ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟುಗಳಿವೆ

ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟುಗಳಿವೆ

ಸಿಹಿಗೆಣಸಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಮೊದಲಾದವುಗಳ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಬೀಟ್ಯಾ ಕ್ಯಾರೋಟೀನ್ ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ನಿಯಮಿತ ಸೇವನೆಯಿಂದ ಕಣ್ಣಿನ ಆರೋಗ್ಯ, ಉಸಿರಾಟದ ವ್ಯವಸ್ಥೆ ಹಾಗೂ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಸಿಹಿಗೆಣಸಿನ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ಸಿಹಿಗೆಣಸಿನ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನೆನಪಿನ ಶಕ್ತಿ ಹೆಚ್ಚಿಸಲಾದರೂ ಗೆಣಸನ್ನು ಆಗಾಗ ತಿನ್ನುತ್ತಿರಬೇಕು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ವಿಟಮಿನ್ ಎ ಹೇರಳಪ್ರಮಾಣದಲ್ಲಿದ್ದು ದಿನದ ಅಗತ್ಯದ 438% ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ವಿಟಮಿನ್ ಎ ಆರೋಗ್ಯ ಕಾಪಾಡಿಕೊಳ್ಳಲು ಹಲವು ರೂಪದಲ್ಲಿ ಅಗತ್ಯವಾಗಿರುವ ಪೋಷಕಾಂಶವಾಗಿದೆ. ವಿಶೇಷವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ಅನಗತ್ಯ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಸಿಹಿಗೆಣಸಿನಲ್ಲಿರುವ ವಿಟಮಿನ್ 3 ಕಣ್ಣಿನ ದೃಷ್ಟಿ ಉತ್ತಮಗೊಳಿಸುವ ಪೋಷಕಾಂಶವಾಗಿದೆ. ಈ ವಿಟಮಿನ್ ಕೊರತೆಯಿಂದ ಒಣಗಿದ ಕಣ್ಣುಗಳು, ರಾತ್ರಿಗುರುಡು, ಗಂಭೀರ ಪರಿಸ್ಥಿತಿಗಳಲ್ಲಿ ಒಟ್ಟಾರೆ ದೃಷ್ಟಿ ನಷ್ಟವಾಗುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಆದ್ದರಿಂದ ಕಣ್ಣುಗಳ ಆರೋಗ್ಯ ಉತ್ತಮವಾಗಿರಲಾದರೂ ಗೆಣಸನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಿ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ನಿಮ್ಮ ಹೊಟ್ಟೆಯಿಂದ ಆ ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲು ನೀವು ಹೆಣಗಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಸಿಹಿ ಆಲೂಗಡ್ಡೆಗಳನ್ನು ಸೇರಿಸುವುದು ನಿಮಗೆ ಹೆಚ್ಚಿನ ನೆರವು ನೀಡುತ್ತದೆ. ತೂಕ ಕಳೆಯಲು ಇದರಲ್ಲಿರುವ ಕರಗುವ ನಾರು ನೆರವಾಗುತ್ತದೆ. ಕರಗುವ ನಾರು ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ ಹಾಗೂ ಮತ್ತು ತೂಕ ಕಳೆದುಕೊಳ್ಳಲು ಸಹಾಯ ಮಾಡಲು ಅನಗತ್ಯ ಆಹಾರ ಸೇವನೆಯನ್ನು ಕಡಿತಗೊಳಿಸುತ್ತದೆ.

ಬ್ರಾಂಖೈಟಿಸ್ ರೋಗವನ್ನು ಗುಣಪಡಿಸುತ್ತದೆ

ಬ್ರಾಂಖೈಟಿಸ್ ರೋಗವನ್ನು ಗುಣಪಡಿಸುತ್ತದೆ

ಗೆಣಸಿನ ಸೇವನೆಯಿಂದ ದೇಹದ ತಾಪಮಾನ ಹೆಚ್ಚಲು ನೆರವಾಗುತ್ತದೆ. ಇದರಲ್ಲಿರುವ ಸಕ್ಕರೆ ಹಾಗೂ ಇತರ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ತಾಪಮಾನ ಏರಿಸಬೇಕಾಗುತ್ತದೆ. ಆದರೆ ಈ ಹೆಚ್ಚಳ ಬ್ರಾಂಖೈಟಿಸ್ ರೋಗಿಗಳಿಗೆ ವರದಾನವಾಗಿದೆ. ಶ್ವಾಸನಾಳಗಳು ಕಟ್ಟಿಕೊಂಡಿದ್ದರೆ ಇವುಗಳನ್ನು ಕರಗಿಸಿ ಉಸಿರಾಟ ನಿರಾಳವಾಗಿಸಲು ನೆರವಾಗುತ್ತದೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಸಿ ಬ್ರಾಂಖೈಟಿಸ್ ಗುಣಪಡಿಸಲು ಹೆಚ್ಚಿನ ನೆರವು ನೀಡುತ್ತದೆ.

ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

ಗೆಣಸಿನಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್, ಸತು, ಮೆಗ್ನೀಶಿಯಂ, ಬೀಟಾ ಕ್ಯಾರೋಟಿನ್ ಮೊದಲಾದ ಪೋಷಕಾಂಶಗಳು ಸಂಧಿವಾತದ ರೋಗಿಗಳಿಗೆ ಅಗತ್ಯವಾಗಿದ್ದು ರೋಗ ಗುಣಪಡಿಸಲು ನೆರವಾಗುತ್ತವೆ. ಗೆಣಸಿನ ಸೇವನೆಯಿಂದ ದೇಹದೊಳಗಿನಿಂದ ನೆರವು ಪಡೆದರೆ ಗೆಣಸನ್ನು ಬೇಯಿಸಿದ ನೀರನ್ನು ಬಿಸಿಬಿಸಿಯಾಗಿಯೇ ಸಂಧಿವಾತ ಎದುರಾಗಿರುವ ಗಂಟಿನ ಮೇಲೆ ಸುರಿದುಕೊಳ್ಳುವ ಮೂಲಕ ಹೊರಗಿನಿಂದಲೂ ಚಿಕಿತ್ಸೆ ನೀಡಬಹುದು.

ಕ್ಯಾನ್ಸರ್ ಗುಣಪಡಿಸುತ್ತದೆ

ಕ್ಯಾನ್ಸರ್ ಗುಣಪಡಿಸುತ್ತದೆ

ಗೆಣಸಿನ ಬಣ್ಣಕ್ಕೆ ಕಾರಣವಾಗಿರುವ ಬೀಟಾ ಕ್ಯಾರೋಟಿನ್ ಗೆ ಕ್ಯಾನ್ಸರ್ ಗುಣಪಡಿಸುವ ಕ್ಷಮತೆಯೂ ಇದೆ. ಇದರೊಂದಿಗೆ ವಿಟಮಟಿನ್ ಸಿ ಜೊತೆಯಾದರೆ ಈ ಜೋಡಿಗೆ ಕರುಳು ಪ್ರಾಸ್ಟೇಟ್, ಮೂತ್ರಪಿಂಡ ಮೊದಲಾದ ಪ್ರಮುಖ ಅಂಗಗಳಿಗೆ ಎದುರಾಗುವ ಕ್ಯಾನ್ಸರ್ ಅನ್ನು ಗುಣಪಡಿಸಲು ಹೆಚ್ಚಿನ ನೆರವು ದೊರೆತಂತಾಗುತ್ತದೆ.

ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ

ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ

ಗೆಣಸಿನಲ್ಲಿರುವ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ಫಲಕಾರಿಯಾಗಿವೆ. ಅಲ್ಲದೇ ಇದರಲ್ಲಿರುವ ಕರಗುವ ನಾರು ಮಲಬದ್ಧತೆಯಾಗದಿರಲು ನೆರವಾಗುವ ಮೂಲಕ ಹುಣ್ಣುಗಳು ಹಾಗೂ ಮೂಲವ್ಯಾಧಿ ಎದುರಾಗದಿರಲು ನೆರವಾಗುತ್ತದೆ.

ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದೆ

ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದೆ

ಹೃದಯದ ಬಡಿತವನ್ನು ನಿಯಂತ್ರಿಸಲು ಪೊಟ್ಯಾಶಿಯಂ ತುಂಬಾ ಅಗತ್ಯವಾದ ಎಲೆಕ್ಟ್ರೋಲೈಟ್ ಆಗಿದೆ. ಬಾಳೆಹಣ್ಣಿನಂತೆಯೇ ಗೆಣಸಿನಲ್ಲಿಯೂ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿದ್ದು ದೇಹದ ಹಲವಾರು ಕ್ರಿಯೆಗಳನ್ನು ಸುಲಭಗೊಳಿಸುತ್ತದೆ. ಸೆಡೆತಗೊಂಡಿದ್ದ ಸ್ನಾಯುಗಳನ್ನು ಸಡಿಲಿಸುವುದು, ಊದಿಕೊಂಡ ಭಾಗವನ್ನು ಮತ್ತೆ ಹಿಂದಿರುಗುವಂತೆ ಮಾಡುವುದು ಮೊದಲಾದವುಗಳಿಗೆ ಪೊಟ್ಯಾಶಿಯಂ ಅಗತ್ಯವಾಗಿದೆ.ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡು ಬಂದರೆ ಇದರ ಕೊಂಡಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರೂ ಇದರ ಪ್ರಯೋಜನವನ್ನು ಪಡೆಯುವಂತಾಗಲಿ.

For Quick Alerts
ALLOW NOTIFICATIONS
For Daily Alerts

    English summary

    Healthy Facts About Sweet Potatoes You Should Know

    Is a sweet potato fattening? Are sweet potatoes really good for you? All these questions might be coming to your mind when you think of buying sweet potatoes, isn't it? Sweet potatoes have more powerful nutritional benefits and contain a good load of fibre and vitamin A. Sweet potatoes taste good in all types of dishes, including desserts. They will tweak your taste buds with some extra flavour. So, read on to know more about the healthy facts on sweet potatoes....
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more