For Quick Alerts
ALLOW NOTIFICATIONS  
For Daily Alerts

ವಯಸ್ಸು ಮೂವತ್ತು ದಾಟಿದ ಬಳಿಕ ಮಹಿಳೆಯರಿಗೆ ಇದೆಲ್ಲಾ ಸಮಸ್ಯೆ ಬರಬಹುದು!

|

ಮಹಿಳೆಯರು 30ರ ಹರೆಯಕ್ಕೆ ಕಾಲಿಡುತ್ತಿರುವಂತೆ ಅವರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುವುದು. 30ರ ಹರೆಯದ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಕಾಯಿಲೆಗಳು ಇವುಗಲಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. 30ರ ಹರೆಯಕ್ಕೆ ಕಾಲಿಟ್ಟು ಮಹಿಳೆಯರು ತಮ್ಮ ದೇಹ ಮತ್ತು 30ರ ಹರೆಯದ ಬಳಿಕ ಕಾಣಿಸಿಕೊಳ್ಳುವ ಕೆಲವೊಂದು ರೋಗ ಲಕ್ಷಣಗಳು ಹಾಗೂ ಚಿಹ್ನೆಗಳ ಬಗ್ಗೆ ಗಮನಹರಿಸಲೇಬೇಕು.

ಮಹಿಳೆಯರು ಯಾವಾಗಲೂ ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುವರು. ಇಷ್ಟು ಮಾತ್ರವಲ್ಲದೆ ವೃತ್ತಿ, ಮಕ್ಕಳು, ಗರ್ಭಧಾರಣೆ ಇತ್ಯಾದಿಗಳು ಮಹಿಳೆಯರ ದೇಹದ ಮೇಲೆ ಪರಿಣಾಮ ಬೀರಬಹುದು. 30ರ ಹರೆಯ ದಾಟಿದ ಮಹಿಳೆಯರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ಕಡೆಗಣಿಸುವರು. ಇದು ಮಹಿಳೆಯರು ಮಾಡುವಂತಹ ದೊಡ್ಡ ತಪ್ಪಾಗಿದೆ. ಮಹಿಳೆಯರು ಈ ಪ್ರಾಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಅದರಿಂದ ಮುಂದೆ ಬರುವ ಪ್ರಮುಖ ಕಾಯಿಲೆಗಳನ್ನು ತಡೆಯಬಹುದು.

ಕೆಲವು ಕಾಯಿಲೆಗಳಿಗೆ ಆರಂಭದಲ್ಲೇ ಚಿಕಿತ್ಸೆ ನೀಡದೆ ಹೋದರೆ ಮುಂದೆ ಇದಕ್ಕೆ ಚಿಕಿತ್ಸೆ ಕಠಿಣವಾಗಬಹುದು. ಯಾವುದೇ ರೀತಿಯ ಕಾಯಿಲೆಯಾದರೂ ಅದು ಆರಂಭದಲ್ಲಿ ಕೆಲವು ಲಕ್ಷಣಗಳನ್ನು ತೋರಿಸುವುದು. ಈ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾದ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅತೀ ಅಗತ್ಯ. ಈ ಲೇಖನದಲ್ಲಿ 30 ದಾಟಿದ ಮಹಿಳೆಯರಲ್ಲಿ ಕಂಡುಬರುವಂತಹ ಕೆಲವೊಂದು ಚಿಹ್ನೆ ಹಾಗೂ ಲಕ್ಷಣಗಳನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿ.....

ಸ್ತನಗಳಲ್ಲಿ ಗಡ್ಡೆ ಅಥವಾ ಸ್ತನದ ಚರ್ಮದ ಬಣ್ಣ ಬದಲಾಗುವುದು

ಸ್ತನಗಳಲ್ಲಿ ಗಡ್ಡೆ ಅಥವಾ ಸ್ತನದ ಚರ್ಮದ ಬಣ್ಣ ಬದಲಾಗುವುದು

ಸ್ತನದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲೂ ಬರಬಹುದು. ಆದರೆ ಮಧ್ಯವಯಸ್ಸಿನ ಮಹಿಳೆಯರಲ್ಲಿ ಇದು ಸಾಮಾನ್ಯ. ವಯಸ್ಸಾಗುತ್ತಿರುವಂತೆ ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತಾ ಹೋಗುತ್ತದೆ. ಸ್ತನದಲ್ಲಿ ಯಾವುದೇ ರೀತಿಯ ಬದಲಾವಣೆ ಬಂದರೆ ಗಮನಹರಿಸಿ. ಗಡ್ಡೆಗಳು ಅಥವಾ ಸ್ತನಗಳ ವಿನ್ಯಾಸ, ತೊಟ್ಟುಗಳಲ್ಲಿ ಹಠಾತ್ ಬದಲಾವಣೆಯಾದರೆ ಸ್ತನ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು. ಕ್ಯಾನ್ಸರ್ ನ್ನು ಬೇಗನೆ ಪತ್ತೆ ಹಚ್ಚಿದರೆ ಅದರಿಂದ ಚಿಕಿತ್ಸೆಗೆ ಕ್ಯಾನ್ಸರ್ ನೆರವಾಗಲಿದೆ.

ಗರ್ಭ ಧರಿಸಲು ಕಠಿಣವಾಗಬಹುದು

ಗರ್ಭ ಧರಿಸಲು ಕಠಿಣವಾಗಬಹುದು

30ರ ಹರೆಯದ ದಾಟಿದ ಬಳಿಕ ಮಹಿಳೆಯರಿಗೆ ಗರ್ಭಧರಿಸಲು ತುಂಬಾ ಕಠಿಣವಾಗಲಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಅಂಡೋತ್ಪತ್ತಿಯ ತೀವ್ರತೆಯು ತಗ್ಗುತ್ತಾ ಹೋಗುವುದು, ಅಂಡಾಶಯದ ದ್ರವವು ಕಡಿಮೆಯಾಗುವುದು, ಮೊಟ್ಟೆಗಳ ಗುಣಮಟ್ಟವು ಕೆಟ್ಟದಾಗಿರುವುದು, ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದಾಗಿ ಫಲವತ್ತತೆಯು ಕಡಿಮೆಯಾಗುವುದು. ಅದಾಗ್ಯೂ, ಕೆಲವೊಂದು ಸಲ ಈ ಸಮಸ್ಯೆಗಳ ಹೊರತಾಗಿಯೂ ಕೆಲವು ಸಮಸ್ಯೆಗಳು ಇರುವುದು. 30 ಹರೆಯ ದಾಟಿದ ಬಳಿಕ ಫಲವತ್ತತೆಯು ಬದಲಾಗುವುದು. ಹಾರ್ಮೋನು ಅಸಮತೋಲನ, ಗಡ್ಡೆಯು ಗರ್ಭಧಾರಣೆಯಾಗದೆ ಇರಲು ಕೆಲವು ಕಾರಣಗಳು.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

30ರ ಹರೆಯ ದಾಟಿದ ಮಹಿಳೆಯರಲ್ಲಿ ಅನಿರೀಕ್ಷಿತವಾಗಿ ಕೂದಲು ಉದುರುವಿಕೆ ಸಮಸ್ಯೆಯು ಕಾಣಿಸುವುದು. ಪ್ರತಿನಿತ್ಯ 50-100 ಕೂದಲುಗಳು ಉದುರಬಹುದು. ಅತಿಯಾಗಿ ಕೂದಲು ಉದುರಿದರೆ ಮತ್ತು ಕೋಶಗಳು ಬೆಳೆಯದೆ ಇದ್ದರೆ ಆಗ ಇದು ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ಒತ್ತಡ ಮತ್ತು ಹೆರಿಗೆ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿರಬಹುದು. ನಾಲ್ಕರಲ್ಲಿ ಒಬ್ಬರು ಮಹಿಳೆ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆ ಎದುರಿಸಬಹುದು. ಇದರಲ್ಲಿ ಶೇ.95ರಷ್ಟು ಆಂಡ್ರೊಜೆನೆಟಿಕ್ ಅಲೋಪೆಸಿಯಾ ಸಮಸ್ಯೆಯಿಂದ ಬರುವುದು. 30 ದಾಟಿದ ಬಳಿಕ ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಕೊರತೆಯಾಗುವ ಕಾರಣದಿಂದಾಗಿ ಕೂದಲು ಉದುರುವಿಕೆ ಉಂಟಾಗಬಹುದು. ಕಬ್ಬಿನಾಂಶದ ಕೊರತೆಯಿಂದಲೂ ಕೂದಲು ಉದುರುವಿಕೆ ಉಂಟಾಗಬಹುದು. 30 ದಾಟಿದ ಬಳಿಕ ನೀವು ರಕ್ತಹೀನತೆಯಿಂದ ಬಳಲುತ್ತಿಲ್ಲವೆಂದು ದೃಢಪಡಿಸಿಕೊಳ್ಳಲು ಹಿಮೋಗ್ಲೋಬಿನ್ ಪರೀಕ್ಷೆಯನ್ನು ಆಗಾಗ ಮಾಡುತ್ತಲಿರಿ. ವಿಟಮಿನ್ ಡಿ ಕೊರತೆಯಿಂದಲೂ ಈ ಸಮಸ್ಯೆ ಬರಬಹುದು. ಹಾರ್ಮೋನು ಅಸಮತೋಲನ(ಗರ್ಭನಿರೋಧಕ ಮಾತ್ರೆ ಸೇವನೆಯಿಂದ ಬರುವುದು) ಕೂದಲು ಉದುರುವಿಕೆಗೆ ಕಾರಣವಾಗುವುದು.

ತೂಕ ಹೆಚ್ಚಳ

ತೂಕ ಹೆಚ್ಚಳ

ಹಠಾತ್ ಆಗಿ ತೂಕದಲ್ಲಿ ಹೆಚ್ಚಳವಾಗುವುದು ಯಾವುದಾದರೂ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ನೀವು ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು, ವ್ಯಾಯಾಮ ಮಾಡುತ್ತಲಿದ್ದರೂ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದಾದರೆ ಇದು ಥೈರಾಯ್ಡ್, ಕೊಲೆಸ್ಟ್ರಾಲ್, ಮಧುಮೇಹ ಅಥವಾ ಪಿಸಿಒಎಸ್(ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಸಮಸ್ಯೆಯಾಗಿರಬಹುದು. 30 ಹರೆಯ ದಾಟಿದ ಬಳಿಕ ನಿಯಮಿತವಾಗಿ ಥೈರಾಯ್ಡ್ ಪರೀಕ್ಷೆ, ಕೊಲೆಸ್ಟ್ರಾಲ್ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ.ಪಿಸಿಒಎಸ್ ಸಮಸ್ಯೆ ಇರುವಂತಹ ಮಹಿಳೆಯರಿಗೆ ತೂಕ ಕಳೆದುಕೊಳ್ಳಲು ತುಂಬಾ ಕಷ್ಟವಾಗಬಹುದು. ಇದೊಂದು ಹಾರ್ಮೋನು ಕಾಯಿಲೆಯಾಗಿದ್ದು, ಪಿಸಿಒಎಸ್ ಅಧಿಕ ಮಟ್ಟದ ಪುರುಷರ ಹಾರ್ಮೋನು ಮತ್ತು ಇನ್ಸುಲಿನ್ ಪ್ರತಿರೋಧಕವಾಗಿರುವುದು. ಈ ಮಹಿಳೆಯರು ಮಧುಮೇಹ ಮತ್ತು ವಿವಿಧ ರೀತಿಯ ಹೃದಯ ಕಾಯಿಲೆಯಿಂದ ಬಳಲಬಹುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಅತಿಯಾದ ತೂಕ, ಗರ್ಭನಿರೋಧಕ ಮಾತ್ರೆಗಳ ಸೇವನೆ ಅಥವಾ ಹಾರ್ಮೋನು ಥೆರಪಿಯಿಂದಾಗಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡವು ಕಾಣಿಸಿಕೊಳ್ಳುವುದು. ಕೆಲವು ಪಥ್ಯ ಮಾತ್ರೆಗಳು ಮತ್ತು ಖಿನ್ನತೆ ತಡೆಯುವ ಮಾತ್ರೆಗಳು ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಇರುವಂತಹ ಮಹಿಳೆಯರು ಗರ್ಭಧಾರಣೆ ವೇಳೆ ಸಮಸ್ಯೆ ಎದುರಿಸಬಹುದು ಮತ್ತು ಇವರು ತೀವ್ರ ಎಚ್ಚರಿಕೆ ವಹಿಸಬೇಕು. 30 ಹರೆಯ ದಾಟಿದ ಬಳಿಕ ಉಪ್ಪನ್ನು ಅತಿಯಾಗಿ ಸೇವಿಸುವುದು ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡುವುದರೊಂದಿಗೆ ದೈಹಿಕ ವ್ಯಾಯಮವಿಲ್ಲದೆ ಬರುವ ಒತ್ತಡ ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡದಿಂದ ಕಿಡ್ನಿ ಕಾಯಿಲೆ ಮತ್ತು ಕಿಡ್ನಿ ವೈಫಲ್ಯವಾಗಬಹುದು. ಅಧಿಕ ರಕ್ತದೊತ್ತಡ ಕಡೆಗಣಿಸಿದರೆ ಆಗ ರಕ್ತನಾಳಗಳಿಗೆ ಹಾನಿಯಾಗಿ ಕಿಡ್ನಿಗೆ ಶುದ್ಧೀಕರಿಸಲು ಸಮಸ್ಯೆಯಾಗಬಹುದು. ಇದರಿಂದ ದೇಹದಿಂದ ಕಲ್ಮಷ ಹೊರಹೋಗುವುದು ತುಂಬಾ ಕಠಿಣವಾಗಬಹುದು.

ನಿಶ್ಯಕ್ತಿ

ನಿಶ್ಯಕ್ತಿ

30 ಹರೆಯ ದಾಟಿದ ಮಹಿಳೆಯರಲ್ಲಿ ಕಂಡುಬರುವಂತಹ ಪ್ರಮುಖ ಸಮಸ್ಯೆಯೆಂದರೆ ಅದು ನಿಶ್ಯಕ್ತಿ. ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ನಿಶ್ಯಕ್ತಿಯು ಲಕ್ಷಣವಾಗಿರಬಹುದು. ಥೈರಾಯ್ಡ್ ಸಮಸ್ಯೆಯು ಸಾಮಾನ್ಯವಾಗಿದ್ದು, ಇದು ನಿಮ್ಮನ್ನು ಬೇಗನೆ ಆಯಾಸಗೊಳಿಸಬಹುದು. ಸರಿಯಾಗಿ ಥೈರಾಯ್ಡ್ ಗೆ ಔಷಧಿ ಸೇವನೆ ಮಾಡಿದರೆ ಅದರಿಂದ ಚಿಕಿತ್ಸೆ ಸಾಧ್ಯ. ದೀರ್ಘಕಾಲದ ತನಕ ನಿಮಗೆ ನಿಶ್ಯಕ್ತಿಯಾಗುತ್ತಲಿದ್ದರೆ ಆಗ ಇದು ಯಾವುದಾದರೂ ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿರಬಹುದು. ಇದಕ್ಕೆ ಕಾರಣಗಳು ತಿಳಿಯದ ಕಾರಣ ಅಂತಿಮವಾಗಿ ಇದಕ್ಕೆ ಕಾರಣವೇನು ಎಂದು ತಿಳಿಯಲು ನೀವು ಹಲವಾರು ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕಾಗಬಹುದು. ರಕ್ತಹೀನತೆ ಮತ್ತು ಮಧುಮೇಹ ಕೂಡ ನಿಶ್ಯಕ್ತಿಗೆ ಕಾರಣವಾಗಬಹುದು. 30ರ ವಯಸ್ಸು ದಾಟಿದ ಬಳಿಕ ನೀವು ನಿಯಮಿತವಾಗಿ ರಕ್ತಹೀನತೆ ಮತ್ತು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟದ ಪರೀಕ್ಷೆ ಮಾಡಿಸಿಕೊಳ್ಳುತ್ತಾ ಇರಿ.

ದೃಷ್ಟಿ ಮಂದವಾಗುವುದು

ದೃಷ್ಟಿ ಮಂದವಾಗುವುದು

30ರ ಬಳಿಕ ಪೋಷಕಾಂಶಗಳ ಕೊರತೆಯಿಂದಾಗಿ ದೃಷ್ಟಿಯು ಮಂದವಾಗುವುದು. ವಿಟಮಿನ್ ಎ, ಸಿ ಮತ್ತು ಇ ಹಾಗೂ ಸತುವಿನ ಕೊರತೆಯು ದೃಷ್ಟಿ ಮಂದವಾಗಲು ಪ್ರಮುಖ ಕಾರಣವಾಗಿದೆ. ವಯಸ್ಸಾಗುತ್ತಿರುವಂತೆ ಕಾಡುವ ಅಕ್ಷಿಪಟಲದ ಅವನತಿಯನ್ನು ತಡೆಯಲು ಈ ಪೋಷಕಾಂಶಗಳು ಅತೀ ಅಗತ್ಯವಾಗಿ ಬೇಕು.ಪದೇ ಪದೇ ಮೈಗ್ರೇನ್ ಕಾಡುವುದು ಕೂಡ ದೃಷ್ಟಿಮಂದವಾಗಲು ಕಾರಣವಾಗಬಹುದು. ಕುರುಡು ಕಲೆಗಳು ಮತ್ತು ಮಿನುಗುವ ದೀಪಗಳನ್ನು ನೋಡುವಾಗ ಉಂಟಾಗುವ ದೃಷ್ಟಿ ಕಾಯಿಲೆಯಾಗಬಹುದು. ಇದು ಎರಡು ಕಣ್ಣುಗಳಲ್ಲಿ ಕಂಡುಬರುವುದು. ಆಘಾತದ ಬಳಿಕ ಮೆದುಳಿಗೆ ಆಗಿರುವ ಹಾನಿಯಿಂದಾಗಿ ಕಣ್ಣಿನ ದೃಷ್ಟಿಯ ಹಾದಿಗೆ ಹಾನಿಯಾಗುವುದು. 30ರ ಹರೆಯ ದಾಟಿದ ಬಳಿಕ ಕಾಣಿಸಿಕೊಳ್ಳುವಂತಹ ಆರೋಗ್ಯ ಸಮಸ್ಯೆಗಳನ್ನು ನಿಮಗೆ ಇಲ್ಲಿ ತಿಳಿಸಲಾಗಿದೆ. ನಿಮ್ಮ ದೇಹ ಮತ್ತು ಅದು ನೀಡುವಂತಹ ಸೂಚನೆಗಳನ್ನು ನೀವು ಗಮನಿಸಬೇಕು. ಇದರಿಂದ ನೀವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

English summary

Health Warnings For Women In Their 30s

Most women who are aged 30+ do not give importance to their health which is a big mistake. Post 30 years your body starts sending you signals, such as difficulty in conceiving, signs of breast cancer, severe hair loss which is due to stress and childbirth, etc. One in every four women suffers from hair thinning and hair loss.
Story first published: Wednesday, August 22, 2018, 17:49 [IST]
X
Desktop Bottom Promotion