For Quick Alerts
ALLOW NOTIFICATIONS  
For Daily Alerts

ಮುಖದ ಮೇಲಿನ ಮೊಡವೆಗಳು ಕೂಡ ಬಲು ಡೇಂಜರ್!! ಯಾಕೆಂದರೆ...

By Arshad
|

ಭಾವನೆಗಳನ್ನು ಮನುಷ್ಯರು ವ್ಯಕ್ತಪಡಿಸಿದಷ್ಟು ಸ್ಪಷ್ಟವಾಗಿ ಇನ್ನಾವ ಪ್ರಾಣಿಯೂ ಪ್ರಕಟಿಸಲಾರದು. ಭಾವನೆಗಳನ್ನು ಪ್ರಕಟಿಸುವಲ್ಲಿ ಮುಖದ ಪಾತ್ರ ದೊಡ್ಡದು. ಅಂತೆಯೇ ಮುಖ ನೋಡಿಯೇ ಕೆಲವರ ಕಾಯಿಲೆಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಮುಖದ ತ್ವಚೆ ಕಾಂತಿಯುಕ್ತ ಹಾಗೂ ಕಲೆಯಿಲ್ಲದಂತಿದ್ದರೆ ದೇಹದಲ್ಲಿಯೂ ಯಾವುದೇ ಕಾಯಿಲೆ ಇಲ್ಲವೆಂದು ತಿಳಿದುಕೊಳ್ಳಬಹುದು. ಆದರೆ ಮುಖದ ಕೆಲವು ಗುರುತುಗಳು ಆಂತರಿಕ ಆರೋಗ್ಯದ ಲಕ್ಷಣವೂ ಆಗಿರಬಹುದು.

ಅಂತೆಯೇ ಮುಖದ ಮೇಲಿನ ಮೊಡವೆಗಳು ಸಹಾ ಕೆಲವು ಅನಾರೋಗ್ಯದ ಪರಿಣಾಮವೂ ಆಗಿರಬಹುದು. ಮೊಡವೆಗಳಿಗೆ ಚರ್ಮದ ಕೆಳಪದರದಲ್ಲಿ ಆವರಿಸಿರುವ ಸೋಂಕು ಹಾಗೂ ಈ ಸೋಂಕಿನ ಪರಿಣಾಮವಾಗಿ ಎದುರಾದ ಕೀವು ಸಂಗ್ರಹಗೊಂಡು ಹೊರಪದರವನ್ನು ಕೆಳಗಿನಿಂದ ಒತ್ತಿ ದೂಡುವುದೇ ಆಗಿದೆ. ಸಾಮಾನ್ಯವಾಗಿ ಎಣ್ಣೆಚರ್ಮದವರಿಗೆ ಮೊಡವೆ ಕಾಟವೂ ಹೆಚ್ಚು. ಆದರೆ ಮುಖದ ವಿವಿಧ ಭಾಗಗಳಲ್ಲಿ ಮೊಡವೆಗಳು ಮೂಡಲು ನಮ್ಮ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಯೇ ಕಾರಣವಿರಬಹುದು ಎಂದು ಹೆಚ್ಚಿನವರು ತಿಳಿದಿಲ್ಲ.

ಮೊಡವೆಗಳ ನಿವಾರಣೆಗೆ ಸೂಕ್ತವಾದ ವಿಧಾನವೆಂದರೆ ಮೊಡವೆಗೆ ಕಾರಣವಾದ ತೊಂದರೆಯನ್ನು ನಿವಾರಿಸಿ ಸೋಂಕಿಲ್ಲದಂತೆ ನೋಡಿಕೊಂಡಾಗಲೇ ಈ ಕೀವು ಇಲ್ಲವಾಗುತ್ತದೆ. ಚೀನಾದ ಪುರಾತನ ನಂಬಿಕೆ ಹಾಗೂ ಚಿಕಿತ್ಸೆಗಳ ಪ್ರಕಾರ ಮೊಡವೆಗಳು ಇತರ ಅನಾರೋಗ್ಯದ ಬಗ್ಗೆ ವಿವರಗಳನ್ನು ತಿಳಿಸುತ್ತವೆ. ಮೊಡವೆಗಳು ಮೂಡಲು ಯಾವ ತೊಂದರೆ ಇದೆ ಎಂದು ಗೊತ್ತಾದ ಬಳಿಕ ಆ ತೊಂದರೆಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ತೊಂದರೆಯನ್ನೇ ಇಲ್ಲವಾಗಿಸಿದರೆ ಮೊಡವೆಯೂ ತನ್ನಿಂತಾನೇ ಇಲ್ಲವಾಗುತ್ತದೆ. ಮೊಡವೆಗಳನ್ನು ಕಲೆಯಿಲ್ಲದೇ ನಿವಾರಿಸುವ ಗುಟ್ಟು ಇದು.

ಬನ್ನಿ, ಈ ಗುಟ್ಟನ್ನು ಅರಿತುಕೊಳ್ಳುವ ಮೂಲಕ ನಮ್ಮ ದೇಹದಲ್ಲಿ ನಮಗೇ ಅರಿವಿದರಂತೆ ಯಾವುದೋ ತೊಂದರೆ ಈಗಾಗಲೇ ಪ್ರಾರಂಭವಾಗಿದ್ದು ಉಲ್ಬಣಗೊಳ್ಳುವ ಮುನ್ನವೇ ಗುರುತಿಸಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ಒಂದು ರೀತಿಯಲ್ಲಿ ಮೊಡವೆ ಈ ಕಾಯಿಲೆ ಇರುವ ಬಗ್ಗೆ ಸೂಚನೆ ನೀಡುವ ಗುರುತು ಎಂದೇ ತಿಳಿದುಕೊಳ್ಳಬಹುದು. ಯಾವ ಭಾಗದಲ್ಲಿ ಮೊಡವೆ ಇದ್ದರೆ ಯಾವ ಕಾಯಿಲೆ ಕಾರಣವಾಗಿರಬಹುದು ಎಂಬುದನ್ನು ಈಗ ನೋಡೋಣ.....

ಹಣೆಯ ಮೇಲ್ಭಾಗ

ಹಣೆಯ ಮೇಲ್ಭಾಗ

ಈ ಭಾಗದಲ್ಲಿ ಮೊಡವೆ ಇದ್ದರೆ ಇದು ದೊಡ್ಡ ಕರುಳು ಹಾಗೂ ಮೂತ್ರಕೋಶದಲ್ಲಿ ಸೋಂಕು ಅಥವಾ ಇತರ ತೊಂದರೆಗಳಿರುವ ಸೂಚನೆಯಾಗಿದೆ. ಈ ಭಾಗದಲ್ಲಿ ಮೊಡವೆ ಇರುವ ವ್ಯಕ್ತಿಗಳು ದುರ್ಬಲ ಜೀರ್ಣವ್ಯವಸ್ಥೆ ಹಾಗೂ ಮೂತ್ರಕೋಶ, ಮೂತ್ರನಾಳಗಳ ಸೋಂಕಿನ ತೊಂದರೆ ಇರುತ್ತದೆ.

 ಚಿಕಿತ್ಸೆ

ಚಿಕಿತ್ಸೆ

ಜೀರ್ಣವ್ಯವಸ್ಥೆ ಉತ್ತಮಗೊಳಿಸಿ ಮೊಡವೆಗಳನ್ನು ಇಲ್ಲವಾಗಿಸಲು ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳಾದ ಟೊಮಾಟೋ, ಬೆರ್ರಿಗಳು, ಚೆರ್ರಿ ಹಣ್ಣುಗಳು, ಸೇಬು, ಲಿಂಬೆ, ಹಸಿರು ಟೀ ಮೊದಲಾದವುಗಳನ್ನು ಸೇವಿಸಬೇಕು. ಹಣೆಯ ಕೆಳಭಾಗ ಭಾವನೆಗಳು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪ್ರಕಟಿಸುತ್ತದೆ.

ಹಣೆಯ ಕೆಳಭಾಗದ ಮೊಡವೆ

ಹಣೆಯ ಕೆಳಭಾಗದ ಮೊಡವೆ

ಹಣೆಯ ಕೆಳಭಾಗ ಭಾವನೆಗಳು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪ್ರಕಟಿಸುತ್ತದೆ. ಚೀನಾದ ನಂಬಿಕೆಗಳ ಪ್ರಕಾರ ಇಲ್ಲಿ ಮೂಡುವ ಮೊಡವೆಗಳು ಉದ್ವೇಗ, ಖಿನ್ನತೆಗಳಿಂದ ಬಳಲುತ್ತಿರುವುದನ್ನು ಸೂಚಿಸುತ್ತದೆ.

ಚಿಕಿತ್ಸೆ

ಚಿಕಿತ್ಸೆ

ಈ ಭಾಗದಲ್ಲಿ ಮೊಡವೆಗಳು ಮೂಡದೇ ಇರಲು ನಿಮ್ಮ ಮನಸ್ಸನ್ನು ನಿರಾಳವಾಗಿರಿಸಿ, ಚೆನ್ನಾಗಿ ನಿದ್ದೆ ಮಾಡಿ ಹಾಗೂ ನಿಮ್ಮ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಾಗಿ ಕಳೆಯಿರಿ. ಇದರಿಂದ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಹಾಗೂ ಮೊಡವೆಯೂ ಮಾಯವಾಗಿ ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

ಹುಬ್ಬುಗಳಲ್ಲಿರುವ ಮೊಡವೆ

ಹುಬ್ಬುಗಳಲ್ಲಿರುವ ಮೊಡವೆ

ಹುಬ್ಬುಗಳ ಭಾಗ ಯಕೃತ್ ನ ಕಾರ್ಯವಿಧಾನದ ಸೂಚಕ ಎಂದು ನಂಬಲಾಗಿದೆ. ಹುಬ್ಬುಗಳ ಒಳಗೆ ಅಥವಾ ಪಕ್ಕದಲ್ಲಿ ಎದುರಾಗಿರುವ ಮೊಡವೆಗಳು ನೀವು ತಪ್ಪಾದ ಆಹಾರಕ್ರಮದ ಮೂಲಕ ಯಕೃತ್ ನ ಮೇಲೆ ಅಪಾರವಾದ ಭಾರವನ್ನು ಹೇರುತ್ತಿದ್ದೀರಿ ಎಂದು ಸೂಚಿಸುತ್ತದೆ. ಹಾಗಾಗಿ ತಕ್ಷಣವೇ ಅನಾರೋಗ್ಯಕರ ಸಿದ್ಧ ಆಹಾರ, ಹುರಿದ, ಕರಿದ, ಹೆಚ್ಚಿನ ಕೊಬ್ಬು ಇರುವ, ಧೂಮಪಾನ ಹಾಗೂ ನಿಯಮಿತವಾದ ಮದ್ಯಪಾನವನ್ನು ವಿಸರ್ಜಿಸಬೇಕಾಗುತ್ತದೆ.

ಚಿಕಿತ್ಸೆ

ಚಿಕಿತ್ಸೆ

ಈ ಭಾಗದ ಮೊಡವೆಗಳನ್ನು ನಿವಾರಿಸಲು ಮೊದಲು ನಿಮ್ಮ ಆಹಾರಕ್ರಮವನ್ನು ಕೊಬ್ಬಿಲ್ಲದ ಅಥವಾ ಕಡಿಮೆ ಕೊಬ್ಬಿನ ಆಹಾರಗಳಿಗೆ ಬದಲಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನಗಳನ್ನು ವರ್ಜಿಸಲು ತೊಡಗಬೇಕು, ತಾಜಾ ತರಕಾರಿಗಳನ್ನು ಸೇವಿಸಲು ಪ್ರಾರಂಭಿಸಬೇಕು. ದೇಹದಿಂದ ಕಲ್ಮಶಗಳನ್ನು ನಿವಾರಿಸಬಲ್ಲ ಕ್ಷಮತೆ ಇರುವ ಹಣ್ಣು ಮತ್ತು ತರಕಾರಿಗಳ ಜ್ಯೂಸ್ ಮಾಡಿಕೊಂಡು ಕುಡಿಯಬೇಕು. ಇದರಿಂದ ಯಕೃತ್ ನಲ್ಲಿ ಬಹಳ ಹಿಂದಿನಿಂದಲೂ ಸಂಗ್ರಹವಾಗಿರುವ ಕಲ್ಮಶಗಳು ನಿವಾರಣೆಗೊಂಡು ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಮೊಡವೆಯೂ ಇಲ್ಲವಾಗುತ್ತದೆ.

ಕೆನ್ನೆಗಳ ಮೇಲಿನ ಮೊಡವೆ

ಕೆನ್ನೆಗಳ ಮೇಲಿನ ಮೊಡವೆ

ಕೆನ್ನೆಗಳು ಶ್ವಾಸಕೋಶದೊಂದಿಗೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ. ಧೂಮಪಾನ ಹಾಗೂ ಶ್ವಾಸಕೋಶದ ತೊಂದರೆಗಳಾದ ಅಸ್ತಮಾ, ಉಸಿರಾಟದ ತೊಂದರೆ, ಅಲರ್ಜಿ, ಬ್ರಾಂಕೈಟಿಸ್ ಮೊದಲಾದ ಶ್ವಾಸಸಂಬಂಧಿ ತೊಂದರೆ ಇರುವವರಿಗೆ ಕೆನ್ನೆಗಳಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ

ಚಿಕಿತ್ಸೆ

ಧೂಮಪಾನಕ್ಕೆ ಕಡ್ಡಾಯ ವಿದಾಯ, ಅಲರ್ಜಿಕಾರಕ ಕಣಗಳು ಅಥವಾ ಆಹಾರಗಳಿಂದ ದೂರವಿರುವುದೇ ಇದಕ್ಕೆ ಮದ್ದು. ಇದರಿಂದ ಶ್ವಾಸಕೋಶಗಳು ಉತ್ತಮವಾಗಿರಲು ನೆರವಾಗುತ್ತದೆ ಹಾಗೂ ಕೆನ್ನೆಯ ಮೊಡವೆಗಳೂ ಇಲ್ಲವಾಗುತ್ತವೆ.

ಮೂಗಿನ ಮೇಲಿನ ಮೊಡವೆ

ಮೂಗಿನ ಮೇಲಿನ ಮೊಡವೆ

ಮೂಗು ಹೃದಯಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಮೂಗಿನ ಮೇಲಿನ ಮೊಡವೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳಾದ ಅಧಿಕ ಹೃದಯದೊತ್ತಡ ಹಾಗೂ ಮಾನಸಿಕ ಒತ್ತಡದ ಸೂಚನೆಯಾಗಿದೆ. ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ಸಹಾ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಮೂಡಿಸುವ ಅಂಶವಾಗಿದ್ದು ಇದರ ಇರುವಿಕೆಯನ್ನು ಮೂಗಿನ ಮೇಲಿನ ಮೊಡವೆ ತಿಳಿಸುತ್ತದೆ.

ಚಿಕಿತ್ಸೆ

ಚಿಕಿತ್ಸೆ

ಟ್ರಾನ್ಸ್ ಕೊಬ್ಬು ಹೆಚ್ಚಿರುವ ಆಹಾರಗಳಾದ ಸಿದ್ದ ಆಹಾರಗಳು, ಪ್ಯಾಕೆಟ್ಟುಗಳಲ್ಲಿ ಲಭ್ಯವಿರುವ ಆಹಾರಗಳು, ಮೈದಾ ಮೊದಲಾದವುಗಳನ್ನು ವರ್ಜಿಸಬೇಕು. ಇವುಗಳಿಂದ ರಕ್ತದಲ್ಲಿ ಕೊಲೆಸ್ಟಾಲ್ ಹೆಚ್ಚುವುದು ಮಾತ್ರವಲ್ಲ, ಹೃದಯಸ್ತಂಭನದ ಸಾಧ್ಯತೆಯೂ ಹೆಚ್ಚುತ್ತದೆ. ಬದಲಿಗೆ ಹೃದಯಸ್ನೇಹಿ ಆಹಾರಗಳನ್ನು ಸೇವಿಸಿ, ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹಾಗೂ ಆರೋಗ್ಯಕರ ಹೃದಯದ ಒತ್ತಡ ಹೊಂದುವ ಮೂಲಕ ಮೂಗಿನ ಮೇಲಿನ ಮೊಡವೆ ಇಲ್ಲವಾಗಿಸಬಹುದು.

ತುಟಿಯ ಬಳಿ ಹಾಗೂ ಗದ್ದದ ಭಾಗದಲ್ಲಿರುವ ಮೊಡವೆ

ತುಟಿಯ ಬಳಿ ಹಾಗೂ ಗದ್ದದ ಭಾಗದಲ್ಲಿರುವ ಮೊಡವೆ

ತುಟಿಗಳು ಹಾಗೂ ಗದ್ದದ ಮೊಡವೆಗಳು ಹೊಟ್ಟೆ ಹಾಗೂ ಸಣ್ಣಕರುಳಿನ ತೊಂದರೆಯ ಸೂಚನೆಯಾಗಿವೆ. ವಿಶೇಷವಾಗಿ ಗದ್ದದ ಮೇಲಿರುವ ಮೊಡವೆ ಜನನಾಂಗ, ಮೂತ್ರನಾಳ ಹಾಗೂ ಮೂತ್ರಪಿಂಡಗಳಿಗೆ ಸಂಬಂಧಿಸಿದೆ. ಅಲ್ಲದೇ ಈ ಮೊಡವೆ ರಸದೂತಗಳ ಏರುಪೇರಿನ ಪರಿಣಾಮ ಹಾಗೂ ಮಲಬದ್ದತೆಯ ಮೂಲಕವೂ ಎದುರಾಗಿರಬಹುದು. ಇದಕ್ಕಾಗಿ ಹೆಚ್ಚಿನ ನಾರುಯುಕ್ತ ಆರೋಗ್ಯಕರ ಆಹಾರಗಳನ್ನೇ ಸೇವಿಸಿ, ಅನಾರೋಗ್ಯ ಆಹಾರಗಳನ್ನು ವರ್ಜಿಸುವುದೊಂದೇ ಮಾರ್ಗ.

ಚಿಕಿತ್ಸೆ

ಚಿಕಿತ್ಸೆ

ಸಾಧ್ಯವಾದಷ್ಟು ಹೆಚ್ಚು ಹೆಚ್ಚಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಕರಗದ ನಾರು ಹೆಚ್ಚಿರುವ ಆಹಾರಗಳೂ ಸಾಕಷ್ಟಿರಲಿ. ಎಣ್ಣೆ, ಸಿದ್ದ ಆಹಾರಗಳು, ಲಘು ಪಾನೀಯಗಳನ್ನು ಸೇವಿಸದಿರಿ.

ಕಿವಿಗಳ ಮೇಲಿನ ಮೊಡವೆ

ಕಿವಿಗಳ ಮೇಲಿನ ಮೊಡವೆ

ಕಿವಿಗಳು ಮೂತ್ರಪಿಂಡಗಳೊಂದಿಗೆ ಸಂಪರ್ಕ ಹೊಂದಿದೆ. ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಾಗ ಕಿವಿಯಲ್ಲಿ ಮೊಡವೆಗಳು ಮೂಡಬಹುದು ಎಂದು ಚೀನೀ ವೈದ್ಯವಿಜ್ಞಾನ ತಿಳಿಸುತ್ತದೆ. ಸಾಕಷ್ಟು ನೀರು ಕುಡಿಯದೇ ಇರುವುದು ಮೂತ್ರಪಿಂಡಗಳಲ್ಲಿನ ತೊಂದರೆಗೆ ಪ್ರಮುಖ ಕಾರಣವಾಗಿದ್ದು ಮೊಡವೆ ಮೂಡಲೂ ಕಾರಣವಾಗುತ್ತದೆ.

ಚಿಕಿತ್ಸೆ

ಈ ಕ್ಷಣದಿಂದಲೇ ಪ್ರತಿ ಗಂಟೆಗೊಂದು ಬಾರಿ ನೀರು ಕುಡಿಯುವುದು ಹಾಗೂ ಎರಡು ಗಂಟೆಗೊಂದು ಬಾರಿ ಮೂತ್ರವಿಸರ್ಜನೆಗೆ ಹೋಗುವುದನ್ನು ರೂಢಿಸಿಕೊಳ್ಳಿ. ಮೂತ್ರವರ್ಧಕ ಪಾನೀಯಗಳಾದ ಎಳನೀರು, ಬಾರ್ಲಿ ಕುದಿಸಿದ ನೀರು ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ.

English summary

Health Secrets That Your Acne Is Hiding

Face can be the first indicator of your inner health. If we have a glowing and clear skin, it means that we are having a disease-free body. Our face can tell much more about our internal health issues. However, presence of acne on face may reveal a lot of secrets about our health. We all know that acne outburst on the skin can happen due to skin infection or oily skin. However, most of us are unaware of the fact that acne on different areas of the face can indicate many underlying health conditions.
X
Desktop Bottom Promotion