ಆರೋಗ್ಯ ಟಿಪ್ಸ್: ಹಸಿರು ಬಾಳೆಕಾಯಿಯಲ್ಲಿದೆ ಹತ್ತಾರು ಪ್ರಯೋಜನಗಳು

Posted By: Arshad
Subscribe to Boldsky

ತರಕಾರಿ ಮಾರುಕಟ್ಟೆಯಲ್ಲಿ ಇನ್ನೂ ಕಾಯಿಯೇ ಆಗಿರುವ ದಪ್ಪನೆಯ ಕಲ್ಲುಬಾಳೆಗಳನ್ನು ಇರಿಸಿರುತ್ತಾರೆ. ಇದನ್ನು ನಾವು ಒಂದು ತರಕಾರಿಯ ರೂಪದಲ್ಲಿ ಪರಿಗಣಿಸುತ್ತೇವೆಯೇ ವಿನಃ ಹಣ್ಣಿನ ರೂಪದಲ್ಲಿ ಅಲ್ಲ. ಬಾಳೆಕಾಯಿಯನ್ನು ಹಾಗೇ ತಿನ್ನಲು ಆಗದು, ಬದಲಿಗೆ ಹುರಿದು, ಬೇಯಿಸಿ, ಸಾರಿನಲ್ಲಿ ಅಥವಾ ಪಲ್ಯದಲ್ಲಿ ಉಪಯೋಗಿಸಿ ಸೇವಿಸುತ್ತೇವೆ. ಬಾಳೆಕಾಯಿ ಎಂದು ಸಾಮಾನ್ಯವಾಗಿ ಕಲ್ಲು ಬಾಳೆಯನ್ನೇ ಬಳಸಲು ಕಾರಣವೇನೆಂದರೆ ಹಣ್ಣಾದ ಬಳಿಕ ಇದರ ಬೀಜಗಳು ಕಲ್ಲಿನಷ್ಟು ಗಟ್ಟಿಯಾಗಿದ್ದು ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ.

ವಿನಃ ಕಾಯಿಯ ರೂಪದಲ್ಲಿ ಯಾವುದೇ ಬಾಳೆಯನ್ನೂ ಸಾರಿಗೆ ಉಪಯೋಗಿಸಬಹುದು. ಬಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿರುವಂತೆಯೇ ಬಾಳೆಕಾಯಿಯಿಂದಲೂ ಇದೆ. ಪ್ರಮುಖವಾಗಿ ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು. ಅಲ್ಲದೇ ವಿಟಮಿನ್ನುಗಳು, ಖನಿಜಗಳು ಹಾಗೂ ವಿಶೇಷವಾಗಿ ಅಧಿಕ ಪ್ರಮಾಣದ ಪಿಷ್ಟ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಅತಿಸಾರದ ತೊಂದರೆ ಇರುವವರಿಗೆ ಬಾಳೆಕಾಯಿ ಸಿದ್ದರೂಪದ ಔಷಧಿಯೂ ಆಗಿದೆ.

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಬಾಳೆಕಾಯಿಯಲ್ಲಿರುವ ಕಠಿಣ ಪಿಷ್ಟ ಹಾಗೂ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು ಹಾಗೂ ಬಾಳೆಹಣ್ಣಿನಲ್ಲಿರುವಂತಹ ಇತರ ವಿಟಮಿನ್ ಮತ್ತು ಖನಿಜಗಳು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳಾಗಿವೆ. ಖನಿಜಗಳಲ್ಲಿ ಪ್ರಮುಖವಾಗಿ ಸೋಡಿಯಂ ಪೊಟ್ಯಾಶಿಯಂ ಹಾಗೂ ಅಲ್ಪ ಪ್ರಮಾಣದ ಪ್ರೋಟೀನ್ ಸಹಾ ಇದೆ. ಬಾಳೆಕಾಯಿಯ ರುಚಿ ಕೊಂಚ ಒಗರಾಗಿರುವ ಕಾರಣ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರ ಆರೋಗ್ಯಕರ ಪ್ರಯೋಜನಗಳನ್ನು ಮನಗಂಡ ಬಳಿಕ ಇದನ್ನು ಸೇವಿಸದೇ ಇರಲು ರುಚಿಯ ಕೊರತೆ ಅಡ್ಡಿಯಾಗಲಾರದು. ಬನ್ನಿ, ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತವೆ

ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತವೆ

ನಿಮ್ಮ ಆಹಾರದಲ್ಲಿ ಆಗಾಗ ಬಾಳೆಕಾಯಿಯನ್ನೂ ಅಳವಡಿಸಿಕೊಂಡರೆ ಕರುಳುಗಳ ಆರೋಗ್ಯ ಉತ್ತಮಗೊಳ್ಳುತದೆ. ಇದಕ್ಕೆ ಕಾರಣ ಚಿಕ್ಕ ಸಂಕಲೆಯ ಕೊಬ್ಬಿನ ಆಮ್ಲಗಳು. ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ಕೊಬ್ಬಿನ ಆಮ್ಲಗಳು ಆಹಾರದಲ್ಲಿರುವ ಪೋಷಕಾಂಶಗಳನ್ನು, ವಿಶೇಷವಾಗಿ ಕ್ಯಾಲ್ಸಿಯಂ ಅನ್ನು ಗರಿಷ್ಟ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವಾಗುತ್ತವೆ.

ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ

ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ

ಬಾಳೆಕಾಯಿಯಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಶಿಯಂ ದೇಹಕ್ಕೆ ಅಗತ್ಯವಾದ ಒಂದು ಖನಿಜವಾಗಿದೆ.ಈ ಖನಿಜ ಒಂದು ನರಗಳ ಬಿಗುತನವನ್ನು ಕಡಿಮೆ ಮಾಡುವ (vasodilator) ಪೋಷಕಾಂಶವಾಗಿದ್ದು ರಕ್ತಪರಿಚಲನೆ ಸುಲಭವಾಗಿ ನೆರವೇರಲು ಅಗತ್ಯವಾಗಿದೆ. ಈ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗಿ ಅಧಿಕ ರಕ್ತದೊತ್ತಡದ ತೊಂದರೆ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಇದರಲ್ಲಿರುವ ಕಠಿಣ ಪಿಷ್ಟ ಜಠದಲ್ಲಿ ನಡೆಯುವ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಲ್ಲದೇ ಅಧಿಕ ಪ್ರಮಾಣದ ಕರಗದ ನಾರು ಹೊಟ್ಟೆಯುಬ್ಬರಿಕೆ, ಮಲಬದ್ಧತೆ ಮೊದಲಾದವುಗಳಿಂದ ರಕ್ಷಿಸುತ್ತದೆ. ಆದರೆ ಈ ಪ್ರಮಾಣ ಅಧಿಕವಾಗಿರುವ ಕಾರಣದಿಂದ ಹೆಚ್ಚಿನ ಪ್ರಮಾಣದ ಬಾಳೆಕಾಯಿಯನ್ನು ಸೇವಿಸಬಾರದು. ಪಲ್ಯ ಹಾಗೂ ಸಾರಿನ ಹೋಳಿನಂತೆ ಗರಿಷ್ಠ ಅರ್ಧ ಬಾಳೆಕಾಯಿ ತಿಂದರೆ ಬೇಕಾದಷ್ಟಾಯಿತು. ಈ ಪ್ರಮಾಣ ಜೀರ್ಣಾಂಗಗಳು ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸಲು ನೆರವಾಗುತ್ತದೆ.

ಇದಲ್ಲಿದೆ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು

ಇದಲ್ಲಿದೆ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು

ಮೊಸರಿನಂತೆಯೇ ಬಾಳೆಕಾಯಿಯಲ್ಲಿಯೂ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿವೆ. ವಿಶೇಷವಾಗಿ ಕರುಳುಗಳಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಈ ಬ್ಯಾಕ್ಟೀರಿಯಾಗಳು ಸಹಕರಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಕರುಳುಗಳು ಉತ್ತಮ ಆರೋಗ್ಯ ಹೊಂದುತ್ತವೆ.

ಅತಿಸಾರಕ್ಕೆ ಮದ್ದು

ಅತಿಸಾರಕ್ಕೆ ಮದ್ದು

ಅತಿಸಾರ, ಬೇಧಿ, ಆಮಶಂಕೆ ಮೊದಲಾದ ತೊಂದರೆ ಇರುವ ವ್ಯಕ್ತಿಗಳಿಗೆ ಬಾಳೆಕಾಯಿ ಉತ್ತಮವಾದ ಔಷಧಿಯಾಗಿದೆ. ಸಾಮಾನ್ಯವಾಗಿ ಅತಿಸಾರಕ್ಕೆ ಬ್ಯಾಕ್ಟೀರಿಯಾ, ವೈರಸ್ ಅಥವಾ ಪರಾವಲಂಬಿ ಜೀವಿಗಳಿಂದ ಎದುರಾದ ಸೋಂಕು ಕಾರಣವಾಗಿದೆ. ಬಾಳೆಕಾಯಿಯ ಸೇವನೆಯಿಂದ ಈ ಸೋಂಕಿನ ವಿರುದ್ಧ ಹೋರಾಡುವ ಮೂಲಕ ಸೋಂಕನ್ನು ಇಲ್ಲವಾಗಿಸಿ ಅತಿಸಾರ ಕಡಿಮೆಯಾಗುತ್ತದೆ.

ಮಧುಮೇಹಿಗಳಿಗೂ ಉತ್ತಮವಾಗಿದೆ

ಮಧುಮೇಹಿಗಳಿಗೂ ಉತ್ತಮವಾಗಿದೆ

ವಿಶೇಷವಾಗಿ ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಬಾಳೆಕಾಯಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇದರಲ್ಲಿ ಸಕ್ಕರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಈ ಬಗೆಯ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಉತ್ತಮ ಪರಿಣಾಮಕ್ಕಾಗಿ ಬಾಳೆಕಾಯಿಯನ್ನು ಬೇಯಿಸಿ ಸೇವಿಸಬೇಕು.

ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ

ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ

ಬಾಳೆಕಾಯಿಯಲ್ಲಿರುವ ಅವಶ್ಯಕ ಖನಿಜಗಳು ಹಾಗೂ ಪೋಷಕಾಂಶಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಸ್ಥಿರವಾದ, ಸಂಕೀರ್ಣ ಕಾರ್ಬೋಹೈಡ್ರೇಟ್ ಆಧಾರಿತ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ಆಹಾರದಿಂದ ಲಭ್ಯವಾದ ಕ್ಯಾಲೋರಿಗಳನ್ನು ದಹಿಸಲೂ ನೆರವಾಗುತ್ತದೆ ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ವಿಟಮಿನ್ B6 ಹೆಚ್ಚಿನ ಪ್ರಮಾಣದಲ್ಲಿದೆ

ವಿಟಮಿನ್ B6 ಹೆಚ್ಚಿನ ಪ್ರಮಾಣದಲ್ಲಿದೆ

ಬಾಳೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ B6 ದಿನದ ಈ ಪೋಷಕಾಂಶದ ಅಗತ್ಯತೆಯ 39% ರಷ್ಟು ಪ್ರಮಾಣವನ್ನು ಪೂರೈಸುತ್ತದೆ. ನಮ್ಮ ದೇಹದ ಸುಮಾರು ನೂರಕ್ಕೂ ಹೆಚ್ಚು ಕಿಣ್ವ ಆಧಾರಿತ ಕಾರ್ಯಗಳಿಗೆ ಈ ವಿಟಮಿನ್ B6 ಅಗತ್ಯವಾಗಿದೆ. ವಿಶೇಷವಾಗಿ ರಕ್ತದಲ್ಲಿರುವ ಹೀಮೋಗ್ಲೋಬಿನ್ ಉತ್ಪಾದನೆಗೆ ಈ ವಿಟಮಿನ್ ಬೇಕೇ ಬೇಕು. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯ ಪ್ರಮಾನವನ್ನು ನಿಯಂತ್ರಿಸಲೂ ನೆರವಾಗುತ್ತದೆ.

ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ

ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ

ಬಾಳೆಕಾಯಿಯ ಸೇವನೆಯಿಂದ ಮೂತ್ರಪಿಂಡಗಳು ಉತ್ತಮವಾಗಿ ಕೆಲಸ ನಿರ್ವಹಿಸಲು ನೆರವು ದೊರಕುತ್ತದೆ. ಹೇಗೆ ಎಂದರೆ, ನಮ್ಮ ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಬಾಳೆಕಾಯಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಇದಕ್ಕಾಗಿ ಆಗಾಗ ಬಾಳೆಕಾಯಿಯನ್ನು ಸೇವಿಸುತ್ತಿರಬೇಕು. ವಿಶೇಷವಾಗಿ ಮೂತ್ರಪಿಂಡಗಳ ಕ್ಯಾನ್ಸರ್ ಹಾತೂ ಇತರ ಮೂತ್ರಪಿಂಡಗಳ ತೊಂದರೆಗಳಿಂದ ಬಾಳೆಕಾಯಿ ರಕ್ಷಣೆ ಒದಗಿಸುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವೆಂದು ಅನಿಸಿದರೆ ಲೇಖನದ ಕೊಂಡಿಯನ್ನು ನಿಮ್ಮ ಆಪ್ತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತಾಗಲು ಸಹಕರಿಸಿ.

English summary

Health Benefits Of Green Bananas, which should surprise you

Green bananas are high in resistant starch and short-chain fatty acids as well as contain similar levels of key vitamins and minerals that are found in yellow bananas. These nutrients include sodium and potassium and dietary fibre and even a small amount of protein. Though, eating green bananas might sound unappealing to many people, there are a number of health benefits associated with green bananas. So, read on to know more about the health benefits of green bananas...