For Quick Alerts
ALLOW NOTIFICATIONS  
For Daily Alerts

ಉಗುರು ಬೆಚ್ಚಗಿನ ಬಿಸಿನೀರು ಕುಡಿದರೆ, ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ...

By Arshad
|

ನೀರು ಕುಡಿಯುವುದರ ಮಹತ್ವವನ್ನು ನಾವೆಲ್ಲರೂ ಬಲ್ಲೆವು, ನೀರಿಲ್ಲದೇ ಬದುಕಲು ಅಸಾಧ್ಯ. ಮಾನವರೆಲ್ಲರೂ ತೂಕ, ವಯಸ್ಸಿಗನು ಗುಣವಾಗಿ ಸುಮಾರು ಏಳರಿಂದ ಎಂಟು ಲೋಟಗಳಷ್ಟು ನೀರನ್ನು ನಿತ್ಯವೂ ಸೇವಿಸುವ ಮೂಲಕ ಮಾತ್ರವೇ ದೇಹದ ಎಲ್ಲಾ ಕ್ರಿಯೆಗಳನ್ನು ಸುಲಲಿತವಾಗಿ ನಡೆಸಲು ಸಾಧ್ಯ. ನೀರು ಎಂದಾಕ್ಷಣ ನಮ್ಮಲ್ಲಿ ಹೆಚ್ಚಿನವರು ಸಾಮಾನ್ಯ ತಾಪಮಾನದಲ್ಲಿರುವ ನೀರು ಎಂದೇ ಪರಿಗಣಿಸುತ್ತಾರೆ. ಕೆಲವರಿಗೆ ಫ್ರಿಜ್ಜಿನಲ್ಲಿಟ್ಟ ನೀರಿನ ಹೊರತು ಬೇರೆ ಯಾವ ನೀರೂ ಬೇಡ. ಆದರೆ ಸಾಮಾನ್ಯ ನೀರಿಗಿಂತಲೂ ಆರೋಗ್ಯಕ್ಕೆ ಉಗುರುಬೆಚ್ಚನೆಯ ನೀರು ಉತ್ತಮ ಹಾಗೂ ಕೆಲವು ವಿಶಿಷ್ಟ ಪ್ರಯೋಜನಗಳಿವೆ.

ಪುರಾತನ ಚೀನಾ ಹಾಗೂ ಭಾರತದ ವೈದ್ಯಪದ್ಧತಿಯ ಪ್ರಕಾರ ಪ್ರತಿದಿನದ ಬೆಳಗನ್ನು ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರೊಂದಿಗೆ ಪ್ರಾರಂಭಿಸುವ ಮೂಲಕ ಜೀರ್ಣಕ್ರಿಯೆ ಉತ್ತಮವಾಗುವ ಜೊತೆಗೇ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಒಂದು ಲೋಟ ಉಗುರುಬೆಚ್ಚಗಿನ ನೀರಿನ ಸೇವನೆ ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ ಹಾಗೂ ದೇಹವಿಡೀ ನಿರಾಳವಾಗಲು ನೆರವಾಗುತ್ತದೆ.

ಆಯುರ್ವೇದ ಟಿಪ್ಸ್: ಬೆಳಿಗ್ಗೆ ಬಿಸಿ ನೀರು ಕುಡಿಯುವುದನ್ನು ಮರೆಯದಿರಿ

ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಸೇವಿಸುವ ಪ್ರಯೋಜನದ ಬಗ್ಗೆ ಅರಿತವರು ದೇಹದ ಸಮಗ್ರ ಆರೋಗ್ಯ ವೃದ್ಧಿಗಾಗಿ ಇದನ್ನೊಂದು ನಿತ್ಯದ ಅಭ್ಯಾಸವನ್ನಾಗಿಸಿಕೊಂಡಿದ್ದಾರೆ. ಉಗುರುಬೆಚ್ಚಗಿನ ನೀರು ಒಂದು ನೈಸರ್ಗಿಕ ನಿಯಂತ್ರಕವಾಗಿದ್ದು ಉತ್ತಮ ಆರೋಗ್ಯ ಪಡೆಯುವತ್ತ ಮೊದಲ ಹೆಜ್ಜೆಯಾಗಿದೆ. ಬನ್ನಿ, ದಿನದ ನೀರಿನ ಅಗತ್ಯತೆಯನ್ನು ಉಗುರುಬೆಚ್ಚಗಿನ ನೀರಿನ ಸೇವನೆಯಿಂದ ಪೂರೈಸಿಕೊಳ್ಳುವ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ನೋಡೋಣ...

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಕಟ್ಟಿಕೊಂಡಿರುವ ಮೂಗು ಕುಹರ ಅಥವಾ ಸೈನಸ್ ಎಂಬ ಭಾಗದಲ್ಲಿ ಸೋಂಕನ್ನುಂಟು ಮಾಡಿ ಭಾರೀ ತಲೆನೋವಿಗೆ ಕಾರಣವಾಗಬಹುದು. ಈ ಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಹಬೆ ಉತ್ತಮ ಆಯ್ಕೆಯಾಗಿದೆ. ಬಿಸಿನೀರಿನ ಸೇವನೆಯಿಂದ ಗಂಟಲ ಒಳಭಾಗ ಹಾಗೂ ಕುಹರದ ಭಾಗದಲ್ಲಿ ಹಾಯುವ ಬಿಸಿನೀರಿನ ಹಬೆ ಇಲ್ಲಿನ ಕಫವನ್ನು ಸಡಿಲಿಸಿ ಕರಗಿಸಲು ನೆರವಾಗುತ್ತದೆ ಹಾಗೂ ಇನ್ನಷ್ಟು ಕಫ ಕಟ್ಟಿಕೊಳ್ಳದೇ ಇರಲು ನೆರವಾಗುತ್ತದೆ.

ಜೀರ್ಣಕ್ರಿಯೆಗೆ ನೆರವಾಗುತ್ತದೆ

ಜೀರ್ಣಕ್ರಿಯೆಗೆ ನೆರವಾಗುತ್ತದೆ

ನಿತ್ಯವೂ ಬಿಸಿನೀರನ್ನೇ ಕುಡಿಯುವ ಮೂಲಕ ಜೀರ್ಣಾಂಗಗಳಿಗೆ ಪ್ರಚೋದನೆ ಸಿಗುವ ಮೂಲಕ ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಬಿಸಿನೀರು ಹೊಟ್ಟೆ ಮತ್ತು ಕರುಳುಗಳಲ್ಲಿ ಚಲಿಸುವಾಗ ಜೀರ್ಣಾಂಗಗಳ ಒಳಭಾಗದಲ್ಲಿ ತಣ್ಣೀರಿಗಿಂತ ಹೆಚ್ಚಿನ ಆರ್ದ್ರತೆ ದೊರಕುತ್ತದೆ ಹಾಗೂ ಕಲ್ಮಶಗಳನ್ನು ತ್ವರಿತವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಜೀರ್ಣಾಂಗಗಳ ಒಳಭಾಗದಲ್ಲಿ ಜಾರುಕದಂತೆ ಕಾರ್ಯನಿರ್ವಹಿಸುವ ಮೂಲಕ ಪಚನಗೊಂಡ ಆಹಾರ ಶೀಘ್ರವಾಗಿ ಮುಂದೆ ಚಲಿಸಲು ಸಾಧ್ಯವಾಗುತ್ತದೆ.

ನರವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ

ನರವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ

ಬಿಸಿನೀರಿನ ಸೇವನೆಯಿಂದ ಇಡಿಯ ದೇಹ ಉತ್ತಮ ಪ್ರಮಾಣದ ಆರ್ದ್ರತೆಯನ್ನು ಪಡೆಯುತ್ತದೆ ಹಾಗೂ ಈ ಮೂಲಕ ನರವ್ಯವಸ್ಥೆ ಶಾಂತವಾಗಿರಲು ನೆರವಾಗುತ್ತದೆ. ನರವ್ಯವಸ್ಥೆ ಶಾಂತ ಸ್ಥಿತಿಯಲ್ಲಿದ್ದಾಗ ದೇಹದಲ್ಲಿ ಎಲ್ಲಿಯೂ ನೋವಿನ ಅನುಭವ ಇರುವುದಿಲ್ಲ ಹಾಗೂ ದಿನವಿಡೀ ಯಾವುದೇ ಬಗೆಯ ಹೆದರಿಕೆ ಉಂಟಾಗದಿರಲು ಸಾಧ್ಯವಾಗುತ್ತದೆ. ಸಂಧಿವಾತ ಹಾಗೂ ಇತರ ಸಂಬಂಧಿತ ಕಾಯಿಲೆ ಇರುವ ರೋಗಿಗಳಿಗೆ ಬಿಸಿನೀರಿನ ಸೇವನೆಯಿಂದ ಹೆಚ್ಚಿನ ಪ್ರಯೋಜನವಿದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ಸೇವಿಸುವವರಿಗೆ ಮಲಬದ್ದತೆ ನಿತ್ಯದ ತೊಂದರೆಯಾಗಿದೆ. ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಲು ಹೆಚ್ಚು ಸಂಕುಚಿತಗೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತದೆ.ಆದ್ದರಿಂದ ಮಲಬದ್ಧತೆಯ ತೊಂದರೆ ಇರುವವರು ತಕ್ಷಣ ತಮ್ಮ ನೀರಿನ ಅಗತ್ಯತೆಯನ್ನು ಬಿಸಿನೀರಿಗೆ ಬದಲಿಸಿಕೊಳ್ಳುವ ಮೂಲಕ ಶೀಘ್ರವೇ ಈ ತೊಂದರೆ ನಿವಾರಣೆಯಾಗುವುದನ್ನು ಗಮನಿಸಬಹುದು.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ನಿತ್ಯವೂ ಮುಂಜಾನೆ ಒಂದು ಲೋಟ ಬಿಸಿನೀರನ್ನು ಕುಡಿಯುವ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ಇದಕ್ಕಾಗಿ ದೇಹ ಅನಿವಾರ್ಯವಾಗಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಲೇಬೇಕಾಗಿ ಬರುತ್ತದೆ. ಇಡಿಯ ದಿನ ಹೀಗೇ ಬಿಸಿನೀರನ್ನೇ ಕುಡಿಯುತ್ತಾ ಬಂದರೆ ಹೆಚ್ಚು ಹೆಚ್ಚು ಕೊಬ್ಬು ಕರಗುತ್ತದೆ. ಅಲ್ಲದೇ ಕರುಳುಗಳಲ್ಲಿ ಕಲ್ಮಶ ಕಟ್ಟಿಕೊಳ್ಳದೇ ಶೀಘ್ರ ನಿವಾರಣೆಗೆ ನೆರವಾಗುವ ಮೂಲಕ ಹೊಟ್ಟೆಯುಬ್ಬರಿಕೆ ಹಾಗೂ ಈ ಮೂಲಕವೂ ಎದುರಾಗುವ ಕೊಬ್ಬಿನ ಸಂಗ್ರಹದಿಂದ ತಡೆಯುತ್ತದೆ.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಇಡಿಯ ದಿನದ ಚಟುವಟಿಕೆಯಿಂದ ದೇಹ ಬಳಲಿದ್ದರೆ ಬಿಸಿನೀರಿನ ಸ್ನಾನ ದೇಹಕ್ಕೆ ಆರಾಮ ಒದಗಿಸುತ್ತದೆ. ಏಕೆಂದರೆ ಬಿಸಿನೀರು ಚರ್ಮದ ಮೇಲೆ ಬಿದ್ದಾಗ ನರಗಳೆಲ್ಲವೂ ಕೊಂಚ ಬಿಸಿಯ ಪ್ರಚೋದನೆ ಪಡೆದು ಹೆಚ್ಚಿನ ರಕ್ತವನ್ನು ಹರಿಸುತ್ತವೆ. ಇದರಿಂದ ದೇಹದ ಕ್ರಿಯೆಗಳು ಚುರುಕಾಗುತ್ತವೆ. ಬಿಸಿನೀರಿನ ಸೇವನೆಯಿಂದಲೂ ಇದೇ ಪ್ರಕಾರದ ಪ್ರಚೋದನೆ ದೇಹದ ಒಳಗಿನಿಂದ ಪಡೆಯುವ ಮೂಲಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಹಲವಾರು ಹೃದಯ ಸಂಬಂಧಿತ ತೊಂದರೆಗಳಿಂದ ರಕ್ಷಿಸುತ್ತದೆ.

ಕಲ್ಮಶಗಳನ್ನು ನಿವಾರಿಸುತ್ತದೆ

ಕಲ್ಮಶಗಳನ್ನು ನಿವಾರಿಸುತ್ತದೆ

ಬಿಸಿನೀರಿನ ಸೇವನೆ ಹಾಗೂ ಬಿಸಿನೀರಿನ ಸ್ನಾನದಿಂದ ದೇಹದಲ್ಲಿರುವ ಬೆವರು ಹಾಗೂ ರಸದೂತಗಳನ್ನು ಸ್ರವಿಸುವ ವ್ಯವಸ್ಥೆ (endocrine system) ಪ್ರಚೋದನೆಗೊಂಡು ದೇಹದ ಏರಿತ ತಾಪಮಾನವನ್ನು ಕಡಿಮೆ ಮಾಡಲು ಬೆವರಲು ಸೂಚನೆ ನೀಡುತ್ತದೆ. ಆಗ ಹರಿಯುವ ಧಾರಾಕಾರ ಬೆವರು ಕೊಂಚ ಅಹಿತಕರ ಎಂದು ಆ ಕ್ಷಣಕ್ಕೆ ಅನ್ನಿಸಿದರೂ ಇದು ದೇಹದ ಒಳಗಿರುವ ಕಲ್ಮಶಗಳನ್ನು ಬೆವರಿನ ಮೂಲಕ ಹೊರಹಾಕುವ ಮೂಲಕ ಒಳ್ಳೆಯದನ್ನೇ ಮಾಡುತ್ತದೆ.

ನೈಸರ್ಗಿಕ ನೋವು ನಿವಾರಕವಾಗಿದೆ

ನೈಸರ್ಗಿಕ ನೋವು ನಿವಾರಕವಾಗಿದೆ

ಬಿಸಿನೀರಿನ ಸೇವನೆಯಿಂದ ರಕ್ತಪರಿಚಲನೆ ದೇಹದ ಪ್ರತಿ ಅಂಗಾಂಶಕ್ಕೂ ಹೆಚ್ಚುತ್ತದೆ ಹಾಗೂ ಈ ಮೂಲಕ ಸ್ನಾಯುಗಳು ಸಡಿಲಗೊಳ್ಳಲು ನೆರವಾಗುತ್ತದೆ. ಸ್ನಾಯುಗಳ ಸಡಿಲಿಕೆಯಿಂದ ಹಲವಾರು ಬಗೆಯ ನೋವುಗಳು ಇಲ್ಲವಾಗುತ್ತವೆ. ವಿಶೇಷವಾಗಿ ಮಹಿಳೆಯರ ಮಾಸಿಕ ದಿನಗಳಲ್ಲಿ ಕಾಣಬರುವ ಕೆಳಹೊಟ್ಟೆಯ ನೋವನ್ನು ನಿವಾರಿಸಲು ಬಿಸಿನೀರಿನ ಸೇವನೆ ಅತ್ಯುತ್ತಮವಾಗಿದೆ. ಒಂದು ವೇಳೆ ರಾತ್ರಿ ಪವಡಿಸಿದ ಬಳಿಕ ನಿದ್ದೆ ಬರಲು ತುಂಬಾ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ಮಲಗುವ ಮುನ್ನ ಬಿಸಿನೀರನ್ನು ಸೇವಿಸುವ ಮೂಲಕ ಶೀಘ್ರವೇ ನಿದ್ದೆಗೆ ಜಾರಲು ಸಾಧ್ಯವಾಗುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ

ಒತ್ತಡವನ್ನು ಕಡಿಮೆ ಮಾಡುತ್ತದೆ

ದಿನದ ಹಲವಾರು ಒತ್ತಡಗಳಿಂದ ಸಂಜೆಯಾಗುತ್ತಿದ್ದಂತೆಯೇ ಬಳಲಿಕೆ ಆವರಿಸಿದ್ದರೆ ಇದನ್ನು ಮರೆಯಲು ವ್ಯಸನಗಳತ್ತ ಒಲವು ತೋರುವ ಬದಲು ಬಿಸಿನೀರನ್ನು ಕುಡಿಯುವುದು ಉತ್ತಮ. ಮನಸ್ಸಿನ ನಿರಾಳತೆಗೆ ಕಾರ್ಟಿಸೋಲ್ ಎಂಬ ರಸದೂತ ಕಾರಣವಾಗಿದೆ. ಬಿಸಿನೀರಿನ ಸೇವನೆಯಿಂದ ಉತ್ತಮಗೊಳ್ಳುವ ರಕ್ತಪರಿಚಲನೆ ಮೆದುಳಿಗೆ ತಲುಪುವ ರಕ್ತದ ಪ್ರಮಾಣವನ್ನೂ ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಆರಾಮ ನೀಡುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಅಗತ್ಯವಾದ ಆರ್ದ್ರತೆಯನ್ನು ಒದಗಿಸುತ್ತದೆ

ಅಗತ್ಯವಾದ ಆರ್ದ್ರತೆಯನ್ನು ಒದಗಿಸುತ್ತದೆ

ದೇಹದ ನೀರಿನ ಅಗತ್ಯವನ್ನು ತಣ್ಣೀರಿಗಿಂತಲೂ ಬಿಸಿನೀರು ಹೆಚ್ಚು ಪ್ರಮಾಣದಲ್ಲಿ ಪೂರೈಸುತ್ತದೆ. ದೇಹದ ಎಲ್ಲಾ ಕಾರ್ಯಗಳಿಗೆ ಆರ್ದ್ರತೆ ಅಗತ್ಯವಾಗಿದ್ದು ಇದಕ್ಕೆ ನೀರು ಸದಾ ಬೇಕಾಗುತ್ತದೆ. ತಣ್ಣೀರಿನ ಬದಲು ಬಿಸಿನೀರನ್ನು ಸೇವಿಸುವ ಮೂಲಕ ಆದ್ರತೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಹಾಗೂ ಹೃದಯದ ಬಡಿತ ಹೆಚ್ಚಿಸುತ್ತದೆ. ತನ್ಮೂಲಕ ನಿರ್ಜಲೀಕರಣ, ವಾಕರಿಕೆ, ಸುಸ್ತು, ತಲೆನೋವು ಮೊದಲಾದವುಗಳಿಂದ ರಕ್ಷಿಸುತ್ತದೆ.

English summary

Health Benefits Of Drinking Hot Water The Whole Day

Everyone knows how water is beneficial for health and one cannot do without it. Every human being needs to drink at least 7 to 8 glasses of water daily to hydrate the body. Though most people prefer consuming normal water, researchers have shown that drinking warm water has some exclusive benefits for your health. According to ancient Chinese and Indian medicine, starting the day with a glass of warm water helps kick-start the digestive system and provides a range of health benefits. Drinking warm water can relieve congestion and can even make you feel relaxed.
X
Desktop Bottom Promotion