For Quick Alerts
ALLOW NOTIFICATIONS  
For Daily Alerts

ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

By Arshad
|

ಬೆಳಿಗ್ಗೆದ್ದ ಬಳಿಕ ಒಂದು ಲೋಟ ಸೌತೆ ನೀರನ್ನು ಕುಡಿಯುವುದರಿಂದ ಪಡೆಯುವ ತಾಜಾತನವನ್ನು ವರ್ಣಿಸಲು ಸಾಧ್ಯವಿಲ್ಲ. ದೇಹದ ಕಲ್ಮಶಗಳನ್ನು ನಿವಾರಿಸಲು ಸೌತೆ ನೀರಿಗಿಂತ ಉತ್ತಮವಾದ ದ್ರವ ಇನ್ನೊಂದಿಲ್ಲ. ಅಲ್ಲದೇ ತೂಕ ಇಳಿಸಲೂ ಈ ನೀರು ಅತ್ಯುತ್ತಮವಾಗಿದೆ. ನಿತ್ಯದ ಇತರ ಹೊತ್ತಿನಲ್ಲಿ ಸೇವಿಸುವ ನೀರಿನಲ್ಲಿಯೂ ಸೌತೆಯನ್ನು ಸೇರಿಸಿಕೊಳ್ಳುವ ಮೂಲಕ ಹೆಚ್ಚಿನ ವಿಟಮಿನ್ನುಗಳು ಹಾಗೂ ಖನಿಜಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಬಾಯಾರಿಕೆಯಾದಾಗ ನಾವು ಸೇವಿಸುವ ಅನಾರೋಗ್ಯಕರ ಬುರುಗು ಬರುವ ಹಾಗೂ ಹೆಚ್ಚಿನ ಸಕ್ಕರೆ ಇರುವ ಪೇಯಗಳನ್ನು ಕುಡಿಯುವ ಬದಲು ಸೌತೆ ನೀರನ್ನು ಕುಡಿದರೆ ಇದು ಬಾಯಾರಿಕೆಯನ್ನು ನಿವಾರಿಸಿ ದೇಹದ ನೀರಿನ ಅಗತ್ಯತೆಯನ್ನು ಪೂರೈಸುವುದು ಮಾತ್ರವಲ್ಲ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಹೊಂದಿರಲೂ ನೆರವಾಗುತ್ತದೆ. ಸೌತೆನೀರಿನ ಸೇವನೆಯಿಂದ ತೂಕ ಹೇಗೆ ಇಳಿಯುತ್ತದೆ ಎಂದು ನೀವು ಅಚ್ಚರಿ ಪಡುತ್ತಿರಬಹುದು.

ದಿನಾ ಸೌತೆಕಾಯಿ ತಿನ್ನಿ, ಡೋಂಟ್ ಮಿಸ್ ಇಟ್ ಓಕೆ?

ಸೌತೆ ನೀರಿನ ಸೇವನೆಯಿಂದ ದೇಹದ ಕಲ್ಮಶಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ರಕ್ಷಿಸುತ್ತದೆ. ಸೌತೆಯಲ್ಲಿ ವಿಟಮಿನ್ ಬಿ, ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಬನ್ನಿ, ಈ ನೀರಿನ ಸೇವನೆಯಿಂದ ಪಡೆಯುವ ಹತ್ತು ಪ್ರಯೋಜನಗಳ ಬಗ್ಗೆ ಅರಿಯೋಣ....

ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ

ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುತ್ತದೆ

ಉತ್ಕರ್ಷಣಶೀಲ ಒತ್ತಡ ಎದುರಾಗಲು ನಮ್ಮ ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಜೀವಕೋಶಗಳ ಮೇಲೆ ಮಾಡುವ ಧಾಳಿ ಕಾರಣವಾಗಿದೆ. ಸೌತೆಯಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್, ಮ್ಯಾಂಗನೀಸ್ ಹಾಗೂ ಇತರ ಫ್ಲೇವನಾಯ್ಡುಗಳು ಈ ಧಾಳಿಯಿಂದ ರಕ್ಷಿಸುತ್ತವೆ.

ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತದೆ

ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತದೆ

ಆಂಟಿ ಆಕ್ಸಿಡೆಂಟುಗಳ ಹೊರತಾಗಿ ಸೌತೆಯಲ್ಲಿರುಅವ್ ಇತರ ಪೋಷಕಾಂಶಗಳಲ್ಲಿ ಕುರ್ಕುರ್ಬಿಟಾಸಿನ್ ಹಾಗೂ ಲಿಗ್ನನ್ಸ್ ಎಂಬ ಪೋಷಕಾಂಶಗಳು ಕ್ಯಾನ್ಸರ್ ಬರುವುದರಿಂದ ತಡೆಯುತ್ತವೆ. ಅಲ್ಲದೇ ಇನ್ನೊಂದು ನಾರು ಪದಾರ್ಥವಾದ ಫಿಸೆಟಿನ್ ಎಂಬ ಇನ್ನೊಂದು ಪೋಷಕಾಂಶ ಪ್ರಾಸ್ಟೇಟ್ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ನಿಧಾನವಾಗಿಸಲು ನೆರವಾಗುತ್ತದೆ.

ಅಧಿಕ ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡಕ್ಕೆ ಆಹಾರದ ಮೂಲಕ ಸೇವಿಸುವ ಹೆಚ್ಚಿನ ಪ್ರಮಾಣದ ಉಪ್ಪು ಹಾಗೂ ಕಡಿಮೆ ಪೊಟ್ಯಾಶಿಯಂ ಕಾರಣ. ಉಪ್ಪು ಹೆಚ್ಚಾದಷ್ಟೂ ಇದನ್ನು ಹೊರಹಾಕಲು ದೇಹ ಹೆಚ್ಚು ನೀರನ್ನು ಬಳಸುವ ಕಾರಣ ರಕ್ತ ಹೆಚ್ಚು ಗಾಢವಾಗುತ್ತದೆ. ಈ ರಕ್ತವನ್ನು ದೂಡಲು ಹೃದಯಕ್ಕೆ ಹೆಚ್ಚಿನ ಒತ್ತಡದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಸೌತೆಯಲ್ಲಿರುವ ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ನಂತೆ ಕಾರ್ಯನಿವಹಿಸುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ ಹಾಗೂ ಮೂತ್ರಪಿಂಡಗಳಲ್ಲಿ ಸೋಡಿಯಂ ಉಳಿದುಕೊಳ್ಳುವುದನ್ನು ತಡೆಯುತ್ತದೆ.

ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ

ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ

ಸೌತೆಯಲ್ಲಿ ಹೆಚ್ಚಿನಾಂಶ ನೀರೇ ಇದೆ. ಇದು ತ್ವಚೆಯ ಬುಡಕ್ಕೆ ಹೆಚ್ಚಿನ ಆರ್ದ್ರತೆಯನ್ನು ಒದಗಿಸುವ ಮೂಲಕ ತ್ವಚೆ ಉತ್ತಮ ಕಾಂತಿ ಪಡೆಯಲು ನೆರವಾಗುತ್ತದೆ. ದೇಹದಲ್ಲಿ ನೀರಿನ ಕೊರತೆ ಇಲ್ಲದಂತೆ ಮಾಡುವ ಮೂಲಕ ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ವಿಟಮಿನ್ B5 ಸಹಾ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಸೌತೆಯಲ್ಲಿ ವಿಟಮಿನ್ ಕೆ ವಿಪುಲವಾಗಿದ್ದು ದಿನದ ಅಗತ್ಯದ 19 ಶೇಖಡಾದಷ್ಟು ಪ್ರಮಾಣವನ್ನು ಪೂರೈಸುತ್ತದೆ. ಮೂಳೆಗಳ ದೃಢತೆ ಹೆಚ್ಚಿಸಲು ಹಾಗೂ ರಕ್ತವನ್ನು ಹೆಪ್ಪುಗಟ್ಟಿಸಲು ವಿಟಮಿನ್ ಕೆ ಅಗತ್ಯವಾಗಿದೆ. ಈ ಅಗತ್ಯಕ್ಕಾದರೂ ಸೌತೆನೀರನ್ನು ಸೇವಿಸುವುದು ಅಗತ್ಯವಾಗಿದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಬಾಯಾರಿಕೆ ತಣಿಸಲು ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿರುವ ಬುರುಗು ಬರುವ ಪಾನೀಯ, ಎನರ್ಜಿ ಡ್ರಿಂಕ್, ಡಯಟ್ ಸೋಡಾ ಮೊದಲಾದ ಅನಾರೋಗ್ಯಕರ ಪೇಯಗಳ ಬದಲಿಗೆ ಸೌತೆ ನೀರನ್ನು ಕುಡಿಯುವ ಮೂಲಕ ಇವುಗಳಿಂದ ಪಡೆಯಬಹುದಾಗಿದ್ದ ಅನಗತ್ಯ ಕ್ಯಾಲೋರಿಗಳು ಇಲ್ಲವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನೀರಿನ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೆಚ್ಚಿನ ಆಹಾರ ಸೇವನೆಯಿಂದ ತಡೆಯುತ್ತದೆ. ಇವೆಲ್ಲವೂ ತೂಕ ಇಳಿಯಲು ಸಹಕಾರಿಯಾಗಿವೆ.

ಸ್ನಾಯುಗಳಿಗೆ ಅಗತ್ಯವಾದ ಆರ್ದ್ರತೆ ಒದಗಿಸುತ್ತದೆ

ಸ್ನಾಯುಗಳಿಗೆ ಅಗತ್ಯವಾದ ಆರ್ದ್ರತೆ ಒದಗಿಸುತ್ತದೆ

ಸ್ನಾಯುಗಳನ್ನು ಹುರಿಗಟ್ಟಿಸಿ ಇವುಗಳ ಕ್ಷಮತೆಯನ್ನು ಕಾಯ್ದುಕೊಳ್ಳುವುದು ಆರೋಗ್ಯದ ಒಂದು ಗುಟ್ಟಾಗಿದೆ. ಸೌತೆಯಲ್ಲಿರುವ ಸಿಲಿಕಾ ಎಂಬ ಪೋಷಕಾಂಶ ಕೇವಲ ತ್ವಚೆಗೆ ಮಾತ್ರವಲ್ಲ, ಸ್ನಾಯುಗಳ ಅಂಗಾಂಶಗಳು ಉತ್ತಮ ಆರೋಗ್ಯದಲ್ಲಿರಲೂ ನೆರವಾಗುತ್ತದೆ. ನಿತ್ಯವೂ ಸೌತೆನೀರನ್ನು ಕುಡಿಯುವ ಮೂಲಕ ಘಾಸಿಗೊಂಡಿದ್ದ ಸ್ನಾಯುಗಳ ಅಂಗಾಂಶಗಳು ಮತ್ತೊಮ್ಮೆ ಮೊದಲಿನ ಆರೋಗ್ಯ ಪಡೆಯಲು, ವ್ಯಾಯಾಮದ ಬಳಿಕ ಕಳೆದುಕೊಂಡಿದ್ದ ಆರ್ದ್ರತೆಯನ್ನು ಮರಳಿ ಪಡೆಯಲು ಹಾಗೂ ಒಟ್ಟಾರೆ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಲು ಸೌತೆ ನೀರು ಉತ್ತಮವಾಗಿದೆ.

ಮೆದುಳಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ

ಮೆದುಳಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ

ಸೌತೆಯಲ್ಲಿರುವ ಫೆಸಿಟಿನ್ ಎಂಬ ಪೋಷಕಾಂಶ ಹಾಗೂ ಫ್ಲೇವೋನಾಲ್ ಎಂಬ ಪೋಷಕಾಂಶಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇವು ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಲು ನೆರವಾಗುತ್ತವೆ. ಪರಿಣಾಮವಾಗಿ ಮೆದುಳನ್ನು ಆರೋಗ್ಯಕರ ಹಾಗೂ ತಾರುಣ್ಯದಲ್ಲಿರಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಆಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ಕೆಲವು ರೋಗಿಗಳು ಸೌತೆ ನೀರನ್ನು ಕುಡಿದ ಬಳಿಕ ಹೆಚ್ಚಿನ ತಾರ್ಕಿಕ ಚಿಂತನಾ ಶಕ್ತಿಯನ್ನು ಪಡೆದಿರುವುದನ್ನು ಕಂಡುಕೊಳ್ಳಲಾಗಿದೆ.

ಉಸಿರಿನ ದುರ್ವಾಸನೆ ತಡೆಯುತ್ತದೆ

ಉಸಿರಿನ ದುರ್ವಾಸನೆ ತಡೆಯುತ್ತದೆ

ಸೌತೆನೀರು ದೇಹದ ಮೇಲೆ ತಂಪು ಪರಿಣಾಮ ಬೀರುತ್ತದೆ, ತನ್ಮೂಲಕ ಬಾಯಿಯಲ್ಲಿ ದುರ್ವಾಸನೆ ಮೂಡುವ ಸಾಧ್ಯತೆಯಿಂದ ರಕ್ಷಿಸುತ್ತದೆ. ಹೊಟ್ಟೆಯಲ್ಲಿ ಹೆಚ್ಚಿನ ತಾಪಮಾನವಿದ್ದರೆ ಬಾಯಿಯ ದುರ್ವಾಸನೆಯೂ ಎದುರಾಗುತ್ತದೆ. ಸೌತೆನೀರಿನ ಸೇವನೆಯಿಂದ ಲಾಲಾರಸದ ಉತ್ಪತ್ತಿಯೂ ಹೆಚ್ಚುತ್ತದೆ ಹಾಗೂ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಇಲ್ಲವಾಗಿಸಿ ದುರ್ವಾಸನೆಯಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆ ಅಜೀರ್ಣ ಮತ್ತು ಜಠರದುರಿತದಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುತ್ತದೆ. ಸೌತೆನೀರನ್ನು ಕುಡಿಯುವ ಮೂಲಾಕ ಅದರಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರಿನಂಶ ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೌತೆಕಾಯಿಯ ಸಿಪ್ಪೆಯಲ್ಲಿ ಕರಗದ ಫೈಬರ್ ಇದೆ, ಇದು ಆಹಾರವು ನಿಮ್ಮ ಜೀರ್ಣಾಂಗಗಳ ಮೂಲಕ ಸುಲಭವಾಗಿ ಸಾಗಲು ಸಹಾಯ ಮಾಡುತ್ತದೆ.

English summary

Great Benefits of Drinking Cucumber Water In The Morning

There is nothing more refreshing than a cool glass of cucumber water. Cucumber water will help in the detoxification process and flush out all the toxins, which aids in weight loss. Incorporating the mighty cucumber into your regular drinking water is the best way to consume vitamins and minerals. It is a good substitute to sweetened drinks and keeps you well hydrated. Cucumber is packed with vitamins, minerals, dietary fibre and phytonutrients that help to maintain a healthy body and mind.
X
Desktop Bottom Promotion