For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರೋಪೊರೆಸಿಸ್ ಎಂಬ ಸೈಲೆಂಟ್ ಕಿಲ್ಲರ್‌ ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ

By Hemanth
|

ಅಗಸ್ಟ್ ತಿಂಗಳನ್ನು ಗ್ಯಾಸ್ಟ್ರೋಪೊರೆಸಿಸ್ ಜಾಗೃತಿ ತಿಂಗಳೆಂದು ಆಚರಿಸಲಾಗುತ್ತದೆ. ಗ್ಯಾಸ್ಟ್ರೋಪೊರೆಸಿಸ್ ಎಂದರೆ ಹೊಟ್ಟೆಯು ನೀವು ತಿಂದಿರುವ ಆಹಾರವನ್ನು ಸಣ್ಣ ಕುರುಳಿಗೆ ಸಾಗಿಸಲು ವಿಫಲವಾಗುವುದು. ಜೀರ್ಣಾಂಗ ಸಮಸ್ಯೆಯನ್ನು ನಿಯಂತ್ರಿಸುವ ವೇಗಸ್ ನರಗಳಿಗೆ ಹಾನಿಯಾದಾಗ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಈ ನರಗಳು ಹೊಟ್ಟೆಯ ಸ್ನಾಯುಗಳನ್ನು ಮತ್ತು ಕುರುಳನ್ನು ಸರಿಯಾಗಿ ಕಾರ್ಯನಿರ್ವಹಿಸಿದಂತೆ ತಡೆಯುವುದು. ಇದರಿಂದ ಆಹಾರವು ಜೀರ್ಣಾಂಗ ವ್ಯೂಹಕ್ಕೆ ಸರಿಯಾಗಿ ಚಲಿಸಲು ವಿಫಲವಾಗುವುದು.

ಗ್ಯಾಸ್ಟ್ರೋಪೊರೆಸಿಸ್ ಗೆ ಕಾರಣಗಳು ಏನು?

* ಅನಿಯಂತ್ರಿತ ಮಧುಮೇಹ

*ಪರ್ಕಿಸನ್ ಕಾಯಿಲೆ

* ಸ್ಕ್ಲೆರೊಸಿಸ್

*ಗ್ಯಾಸ್ಟ್ರಿಕ್ ಶಸ್ತ್ರಚಿಕಿತ್ಸೆ ವೇಳೆ ವೇಗಸ್ ನರಕ್ಕೆ ಹಾನಿಯಾಗಿರುವುದು.

gastroparesis causes

ಗ್ಯಾಸ್ಟ್ರೋಪೊರೆಸಿಸ್ ನ ಲಕ್ಷಣಗಳು ಏನು?

ಗ್ಯಾಸ್ಟ್ರೋಪೊರೆಸಿಸ್ ನ ಕೆಲವೊಂದು ಚಿಹ್ನೆಗಳು ಹಾಗೂ ಲಕ್ಷಣಗಳು ಹೀಗಿವೆ.

*ಜೀರ್ಣವಾಗದೆ ಇರುವ ಆಹಾರ ವಾಂತಿಯಾಗುವುದು.

*ಎದೆಯುರಿ

*ವಾಕರಿಕೆ

*ಊಟ ಮಾಡುವ ವೇಳೆ ತಕ್ಷಣ ಹೊಟ್ಟೆ ತುಂಬಿದಂತೆ ಆಗುವುದು.

*ಹಸಿವು ಕಡಿಮೆ ಮತ್ತು ತೂಕ ಕಳೆದುಕೊಳ್ಳುವುದು.

*ರಕ್ತದಲ್ಲಿನ ಸಕ್ಕರೆ ಮಟ್ಟ ಕುಗ್ಗುವುದು.

*ಹೊಟ್ಟೆ ನೋವು

ಗ್ಯಾಸ್ಟ್ರೋಪೊರೆಸಿಸ್ ನ ಅಪಾಯಗಳು ಏನು?

ಗ್ಯಾಸ್ಟ್ರೋಪೊರೆಸಿಸ್ ನ್ನು ಹೆಚ್ಚಿಸುವ ಕೆಲವು ಅಂಶಗಳು

*ಮಧುಮೇಹ

*ಹೊಟ್ಟೆಯ ಶಸ್ತ್ರಚಿಕಿತ್ಸೆ

*ವೈರಲ್ ಸೋಂಕು

*ಸ್ಕ್ಲೆರೊಡೆರ್ಮಾ

*ಹೈಪರ್ ಥೈರೋಡಿಸಮ್

*ನರ ವ್ಯವಸ್ಥೆಯ ಕಾಯಿಲೆ

ಗ್ಯಾಸ್ಟ್ರೋಪೊರೆಸಿಸ್ ಪತ್ತೆ ಮಾಡುವುದು ಹೇಗೆ?

ನಿಮ್ಮ ವೈದ್ಯಕೀಯ ಇತಿಹಾಸ ಮತ್ತು ಲಕ್ಷಣಗಳನ್ನು ವೈದ್ಯರು ಮೊದಲು ವಿಶ್ಲೇಷಿಸುವರು. ಇದರ ಆಧಾರದ ಮೇಲೆ ವೈದ್ಯರು ದೈಹಿಕ ಪರೀಕ್ಷೆ ಮತ್ತು ಕೆಲವು ರಕ್ತಪರೀಕ್ಷೆ ಮಾಡುವರು.

ಗ್ಯಾಸ್ಟ್ರೋಪೊರೆಸಿಸ್ ಪತ್ತೆ ಮಾಡಲು ಇರುವ ಇತರ ಕೆಲವೊಂದು ಪರೀಕ್ಷೆಗಳು

ಬೇರಿಯಂ ಎಕ್ಸ್ ರೇ

ರೋಗಿಯು ಬೇರಿಯಂ(ಬೇರಿಯಂ ಹುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ) ದ್ರವವನ್ನು ಸೇವಿಸಬೇಕಾಗುತ್ತದೆ. ಇದು ಅನ್ನನಾಳ, ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಪದರಗಳಲ್ಲಿ ಒಳಪದರವನ್ನು ಹೊಂದಿರುವುದು. ಎಕ್ಸ್ ರೇಯಲ್ಲಿ ನಿಮಗೆ ಹೊಟ್ಟೆಯ ಪದರ, ಗಾತ್ರ, ವಿನ್ಯಾಸ, ಬಾಹ್ಯರೇಖೆ ಮತ್ತು ಪಾರಂಪರಿಕತೆ ಕಂಡುಬರುವುದು. ಇದರಿಂದ ಸಮಸ್ಯೆಯನ್ನು ನಿಖರವಾಗಿ ಪತ್ತೆ ಮಾಡಬಹುದು.

ಗ್ಯಾಸ್ಟ್ರಿಕ್ ಮ್ಯಾನೋಮೆಟ್ರಿ: ತೆಳ್ಳಗಿನ ಟ್ಯೂಬ್ ಒಂದರನ್ನು ಬಾಯಿ ಮೂಲಕ ಹೊಟ್ಟೆಗೆ ಹಾಕಲಾಗುತ್ತದೆ. ಇದು ಜೀರ್ಣಕ್ರಿಯೆಯ ಗತಿಯನ್ನು ತಿಳಿಯಲು ಹೊಟ್ಟೆಯ ವಿದ್ಯುತ್ ಮತ್ತು ಸ್ನಾಯುಗಳ ಚಟುವಟಿಕೆಯನ್ನು ಪರಿಶೀಲಿಸುವುದು.

ಎಲೆಕ್ಟ್ರೊಗಸ್ಟ್ರೋಗ್ರಫಿ

ಹೊಟ್ಟೆಯ ಚರ್ಮದಲ್ಲಿ ಸ್ಥಾಪಿತವಾಗಿರುವಂತಹ ವಿದ್ಯುದ್ವಿಚ್ಛೇದಗಳಮೂಲ ಹೊಟ್ಟೆಯ ಮೈಯೋಲೆಕ್ಟ್ರಿಕಲ್ ಚಟುವಟಿಕೆಯನ್ನು ಈ ಪರೀಕ್ಷೆಯು ಪರಿಶೀಲಿಸುವುದು. ಇದರಿಂದ ಪಡೆದಿರುವುದನ್ನು ದಾಖಲಿಸಿಕೊಳ್ಳುವುದನ್ನು ಎಲೆಕ್ಟ್ರೊಗಸ್ಟ್ರೋಗ್ರಫಿ ಎಂದು ಕರೆಯಲಾಗುತ್ತದೆ.

ಮೇಲ್ಭಾಗದ ಎಂಡೋಸ್ಕೋಪಿ

ತೆಳ್ಳಗಿನ ಟ್ಯೂಬ್ ನ್ನು ಹಾಕುವ ಮೂಲಕ ಅನ್ನನಾಳದ ಪರೀಕ್ಷೆ, ಹೊಟ್ಟೆಯ ಪದರ ಮತ್ತು ಸಣ್ಣಕರುಳಿನ ಮೇಲ್ಬಾಗದ ಪರೀಕ್ಷೆ ಮಾಡಲಾಗುವುದು.

ಗ್ಯಾಸ್ಟ್ರೋಪೊರೆಸಿಸ್ ಗೆ ಚಿಕಿತ್ಸೆಗಳು

ಕೆಲವೊಂದು ಔಷಧಿಗಳಾಗಿರುವಂತಹ ಮೆಟೊಕ್ಲೋಪ್ರಮೈಡ್(ವಾಕರಿಕೆ ಮತ್ತು ವಾಂತಿ ತಗ್ಗಿಸುವುದು), ಎರಿಥ್ರೊಮೈಸಿನ್, ಮತ್ತು ಇತರ ವಿರೋಧಿ ಔಷಧಿಗಳಿಂದ ಇದಕ್ಕೆ ಚಿಕಿತ್ಸೆ ನೀಡಬಹುದು. ಗ್ಯಾಸ್ಟ್ರೋಪೊರೆಸಿಸ್ ರೋಗಿಗಳಿಗೆ ಇದನ್ನು ವೈದ್ಯರು ಸೂಚಿಸುವರು. ಇದರಿಂದ ಆಹಾರವು ಸಣ್ಣ ಕರುಳಿಗೆ ಹೋಗುವುದು ಮತ್ತು ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.

ಗ್ಯಾಸ್ಟ್ರೋಪೊರೆಸಿಸ್ ರೋಗಿಗಳಿಗೆ ಆಹಾರ ಮತ್ತು ದ್ರವವು ಹೆಚ್ಚು ಅಸಹಿಷ್ಣು ಆಗಿರುವಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಇದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಸಣ್ಣ ಕರುಳಿನಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಸಣ್ಣ ಟ್ಯೂಬ್ ನ್ನು ಅಳವಡಿಸುವರು. ಈ ಟ್ಯೂಬ್ ತಾತ್ಕಾಲಿಕ ಮತ್ತು ಸಮಸ್ಯೆ ತೀವ್ರವಾಗಿದ್ದಾಗ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಗದೆ ಇರುವಾಗ ಹೀಗೆ ಮಾಡಲಾಗುತ್ತದೆ. ಗ್ಯಾಸ್ಟ್ರೋಪೊರೆಸಿಸ್ ಗೆ ಚಿಕಿತ್ಸೆ ನೀಡಲು ಬೇರೆ ರೀತಿಯ ಔಷಧಿಗಳನ್ನು ಕೂಡ ಅಧ್ಯಯನಗಳು ಕಂಡುಹಿಡಿಯುತ್ತಿದೆ.

ಗ್ಯಾಸ್ಟ್ರೋಪೊರೆಸಿಸ್ ಪಥ್ಯ

ಯಾವ ಆಹಾರ ಸೇವಿಸಬೇಕು ಮತ್ತು ಯಾವುದನ್ನು ಕಡೆಗಣಿಸಬೇಕು?

ನೀವು ಗ್ಯಾಸ್ಟ್ರೋಪೊರೆಸಿಸ್ ನಿಂದ ಬಳಲುತ್ತಿದ್ದರೆ ಆಗ ನೀವು ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದರೆ ಅದರಲ್ಲಿ ಪೋಷಕಾಂಶಗಳು ಇರುವ ಬಗ್ಗೆ ಗಮನಹರಿಸಬೇಕು. ಸಣ್ಣ ಪ್ರಮಾಣದಲ್ಲಿ, ಹಲವಾರು ಸಲ, ಸುಲಭವಾಗಿ ಜೀರ್ಣವಾಗುವಂತಹ ಆಹಾರ ಸೇವನೆ ಮಾಡಬೇಕು.

ನೀವು ಈ ಆಹಾರಗಳನ್ನು ಸೇವಿಸಬಹುದು

*ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಹಣ್ಣುಗಳ ಜ್ಯೂಸ್

*ಕ್ಯಾರೆಟ್, ಹಾಗಲಕಾಯಿ, ಬಸಲೆ ಸೊಪ್ಪಿನ ಜ್ಯೂಸ್

*ಕಡಲೆಕಾಯಿ ಬೆಣ್ಣೆ

*ಬಾಳೆಹಣ್ಣು

*ಸಂಸ್ಕರಿಸಿದ ಬ್ರೆಡ್ ಮತ್ತು ಬಿಸಿ ಸೀರಲ್

*ಮೊಟ್ಟೆ

*ಹಣ್ಣುಗಳ ಪ್ಯೂರಿ

*ಸರಿಯಾಗಿ ಬೇಯಿಸಿದ ತರಕಾರಿ ಮತ್ತು ಹಣ್ಣುಗಳು

*ಸೂಪ್

*ಸಿಪ್ಪೆ ತೆಗೆದ ಬಟಾಟೆ ಮತ್ತು ಗೆಣಸು

*ಕಸ್ಟರ್ಡ್

*ಕೊಬ್ಬು ಕಡಿಮೆ ಇರುವ ಕಾಟೇಜ್ ಚೀಸ್

*ರುಬ್ಬಿದ ಮಾಂಸ

*ಕೊಬ್ಬು ಕಡಿಮೆ ಇರುವ ಹಾಲು

*ಮೊಸರು

*ಚಿಪ್ಪು ಮೀನು

*ಚರ್ಮದ ಸುಳಿದ ಕೋಳಿ.

ನೀವು ಕಡೆಗಣಿಸಬೇಕಾದ ಆಹಾರಗಳು

 • ಬೀನ್ಸ್ ಮತ್ತು ದ್ವಿದಳ ಧಾನ್ಯಗಳು
 • ಜೋಳ
 • ಮದ್ಯ ಮತ್ತು ಕಾರ್ಬ್ರೋನೇಟೆಡ್ ಪಾನೀಯ
 • ಬೀಜಗಳು ಮತ್ತು ಕಾಳುಗಳು
 • ಬ್ರಾಕೋಲಿ ಮತ್ತು ಹೂಕೋಸು
 • ಕ್ರೀಮ್
 • ಚೀಸ್
 • ಅತಿಯಾದ ಎಣ್ಣೆ ಅಥವಾ ಬೆಣ್ಣೆ
 • ಜಂಕ್ ಮತ್ತು ಕರಿದ ಆಹಾರ

ಸೂಚನೆ:

ನಾರಿನಾಂಶ ಅಧಿಕವಾಗಿರುವ ಮತ್ತು ಪೂರ್ತಿ ಆರ್ದ್ರವಾಗಿರುವ ಕೊಬ್ಬು ಕಡಿಮೆ ಇರುವಂತಹ ಆಹಾರ ಮಿತವಾಗಿ ನೀವು ಸೇವನೆ ಮಾಡಬೇಕು. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು.

ಗ್ಯಾಸ್ಟ್ರೋಪೊರೆಸಿಸ್ ಗೆ ಪಥ್ಯ

 • ಪ್ರತಿನಿತ್ಯ ನೀವು ಐದರಿಂದ ಎಂಟು ಸಲ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ.
 • ನುಂಗುವ ಮೊದಲು ಆಹಾರ ಸರಿಯಾಗಿ ಜಗಿಯಿರಿ.
 • ಪೋಷಕಾಂಶಗಳು ಇರುವಂತಹ ಆಹಾರ ಮತ್ತು ಪೋಷಕಾಂಶಗಳು ಇರುವಂತಹ ಹಣ್ಣುಗಳು ಮತ್ತು ತರಕಾರಿ ಸ್ಮೂಥಿ, ಮೊಸರಿನ ಸ್ಮೂಥಿ, ಪ್ರೋಟೀನ್ ಶೇಕ್ ಮತ್ತು ದ್ರವವಿರುವ ಆಹಾರಗಳನ್ನು ಸೇವಿಸಿ.

English summary

Gastroparesis Causes,Symptoms and treatment

Gastroparesis is a condition that occurs when your stomach is unable to pass down food to the small intestine. It is caused due to the damage to the vagus nerve, which regulates the digestive system. This nerve prevents the stomach muscles and intestine from functioning properly, thereby causing poor movement of food through the digestive system.
Story first published: Tuesday, August 28, 2018, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more