For Quick Alerts
ALLOW NOTIFICATIONS  
For Daily Alerts

ಅಧಿಕ ಬಿಪಿ ಸಮಸ್ಯೆ ಇರುವವರು ಕಡೆಗಣಿಸಬೇಕಾದ ಆಹಾರಗಳು

By Hemanth
|

ಆಧುನಿಕ ಹಾಗೂ ತಂತ್ರಜ್ಞಾನದ ಯುಗವೆಂದರೆ ಅದು ಒತ್ತಡದ ಜೀವನವೆನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಿಗೆ ಹೋದರೂ ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ನಡೆಸುತ್ತಾ ಇರುವುದನ್ನು ನೋಡುತ್ತೇವೆ. ಇಂತಹ ಒತ್ತಡದಿಂದಾಗಿ ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಸಾಮಾನ್ಯವಾಗಿದೆ. ವಯಸ್ಸಿನ ಭೇದವಿಲ್ಲದೆ ಪುರುಷರು ಹಾಗೂ ಮಹಿಳೆಯರಿಗೆ ಅಧಿಕ ರಕ್ತದೊತ್ತಡ ಸಮಸ್ಯೆಯು ಬರುತ್ತಲಿದೆ. ಇಂತಹ ಸಮಸ್ಯೆ ಒಮ್ಮೆ ಬಂದರೆ ಅದು ವಂಶಪಾರಂಪರ್ಯವಾಗಿ ಮುಂದುವರಿಯುತ್ತಾ ಇರುತ್ತದೆ. ಅತಿಯಾದ ರಕ್ತದೊತ್ತಡದಿಂದ ಬಳಲುತ್ತಾ ಇರುವವರು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಇದು ಪ್ರಾಣಕ್ಕೆ ಅಪಾಯ ತಂದೊಡ್ಡಬಲ್ಲದು.

ಹೈ ಬಿಪಿ ರೋಗದ ಸಮಸ್ಯೆಯಿದ್ದವರು, ಆದಷ್ಟು ಇಂತಹ ಆಹಾರಗಳಿಂದ ದೂರವಿರಿ!

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿ ಬರಬಹುದು. ಇದರಿಂದ ವ್ಯಕ್ತಿಯು ಸರಿಯಾದ ಔಷಧಿಯೊಂದಿಗೆ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಅದರಿಂದ ಖಂಡಿತವಾಗಿಯೂ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆ ಮಾಡಬಹುದು. ತಿನ್ನುವಂತಹ ಹಲವಾರು ಆಹಾರಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ಅದರಿಂದ ಆರೋಗ್ಯ ಕೆಡಬಹುದು ಎಂದು ಅಧ್ಯಯನಗಳು ಹೇಳಿವೆ. ಈ ಲೇಖನದಲ್ಲಿ ಬೋಲ್ಡ್ ಸ್ಕೈ ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವವರು ಸೇವಿಸಲೇಬಾರದ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ....

ಅತಿಯಾದ ಉಪ್ಪು/ ಉಪ್ಪಿನ ಆಹಾರಗಳು

ಅತಿಯಾದ ಉಪ್ಪು/ ಉಪ್ಪಿನ ಆಹಾರಗಳು

ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದರೆ ನೀವು ಉಪ್ಪು ಸೇವನೆ ಕಡಿಮೆ ಮಾಡಿ. ಅಧಿಕ ರಕ್ತದೊತ್ತಡ ಇರುವವರಿಗೆ ಸೋಡಿಯಂನಿಂದ ನಿಮ್ಮ ಕಿಡ್ನಿಗಳು, ಹೃದಯ, ಅಪಧಮನಿ ಮತ್ತು ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಧಿಕ ರಕ್ತದೊತ್ತಡವು ರಕ್ತನಾಳಗಳ ಮೇಲೆ ಒತ್ತಡ ಬೀರುವುದು. ಇದರಿಂದ ರಕ್ತನಾಳಗಳು ಕುಗ್ಗಿ ಹೋಗುವುದು.

ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಅದು ಹೃದಯಕ್ಕೆ ಸಂಪರ್ಕ ಕಲ್ಪಿಸುವ ರಕ್ತನಾಳಗಳಿಗೆ ಹಾನಿ ಉಂಟುಮಾಡುವುದು. ಇದರಿಂದ ಹೃದಯಕ್ಕೆ ರಕ್ತಸಂಚಾರವು ಕಡಿಮೆಯಾಗಿ ಹೃದಯಾಘಾತವಾಗುವುದು.

ಇದರಿಂದ ವ್ಯಕ್ತಿಯು ದಿನಕ್ಕೆ 2-3 ಮಿ.ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬಾರದು. ಉಪ್ಪನ್ನು ನೇರವಾಗಿ ಸೇವಿಸುವುದು ಮತ್ತು ಅಧಿಕ ಉಪ್ಪಿನಾಂಶವಿರುವ ಆಹಾರ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವುದು.

ಡಬ್ಬಗಳಲ್ಲಿರುವ ಆಹಾರ

ಡಬ್ಬಗಳಲ್ಲಿರುವ ಆಹಾರ

ಡಬ್ಬಗಳಲ್ಲಿ ಇರುವ ಆಹಾರಗಳಾದ ಬೀನ್ಸ್, ಬೇಯಿಸಿರುವ ಟೊಮೆಟೋ ಉತ್ಪನ್ನಗಳು, ತಯಾರಿಸಿಟ್ಟಿರುವ ಸೂಪ್ ಮತ್ತು ನೂಡಲ್ಸ್ ನಲ್ಲಿ ಹೆಚ್ಚಿನ ಉಪ್ಪಿನಾಂಶವಿರುವುದು. ಈ ಆಹಾರವನ್ನು ಸಂರಕ್ಷಿಸಿಡಲು ಹೆಚ್ಚು ಉಪ್ಪು ಹಾಕುವುದು ಅಗತ್ಯವಾಗಿರುತ್ತದೆ. ಡಬ್ಬದಲ್ಲಿರುವ ಬೀನ್ಸ್ ಬಳಸುತ್ತಾ ಇದ್ದರೆ ನೀವು ಅದನ್ನು ಮೊದಲು ಸರಿಯಾಗಿ ತೊಳೆಯಿರಿ. ಇದರಿಂದ ಉಪ್ಪಿನಾಂಶ ಹೋಗುವುದು. ಟೊಮೆಟೋ ಕೆಚಪ್, ಟೊಮೆಟೋ ಪೇಸ್ಟ್ ಮತ್ತು ಸಾಸ್ ನ್ನು ಸಂರಕ್ಷಿಸಲು ಹೆಚ್ಚು ಉಪ್ಪು ಬಳಸಲಾಗುತ್ತದೆ. ಅಧಿಕ ಉಪ್ಪಿನಾಂಶವನ್ನು ತಪ್ಪಿಸಲು ನೀವು ಮನೆಯಲ್ಲೇ ಸಾಸ್ ತಯಾರಿಸಿ. ರೆಡಿಮೇಡ್ ಸೂಪ್ ಮತ್ತು ನೂಡಲ್ಸ್ ಗಳನ್ನು ತಯಾರಿಸಿ ಕೊಳ್ಳುವುದು ಸುಲಭ ಮತ್ತು ತಿನ್ನಲು ರುಚಿ. ಆದರೆ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದ ನೀವೇ ಮನೆಯಲ್ಲಿ ಸೂಪ್ ತಯಾರಿಸಿಕೊಳ್ಳಿ.

ಸಂಸ್ಕರಿತ ಆಹಾರ

ಸಂಸ್ಕರಿತ ಆಹಾರ

ಸಂಸ್ಕರಿತ ಆಹಾರವಾಗಿರುವ ಶೀತಲೀಕರಿಸಿರುವ ಕೋಳಿಮಾಂಸ, ಬೀಫ್, ಹಂದಿಮಾಂಸ, ಸಿಗಡಿ ಇತ್ಯಾದಿ ಮತ್ತು ಫ್ರೈ ಮಾಡಲು ತಯಾರಾಗಿರುವಂತಹ ಚಿಕನ್ ಸಾಸೆಜ್, ನಗೆಟ್ಸ್ ಅಥವಾ ಫ್ರೆಂಚ್ ಫ್ರೈಗಳಲ್ಲಿ ಅತ್ಯಧಿಕ ಉಪ್ಪಿನಾಂಶವಿರುವುದು. ಇದು ತಿನ್ನಲು ರುಚಿ ಮತ್ತು ಸಮಯ ಉಳಿತಾಯ ಮಾಡುವುದು. ಆದರೆ ತಾಜಾ ಮಾಂಸವನ್ನು ಮಾರುಕಟ್ಟೆಯಲ್ಲಿ ಖರೀದಿಸಿದರೆ ಒಳ್ಳೆಯದು. ಶೀತಲೀಕರಿಸಿರುವ ಆಹಾರಗಳು ರಕ್ತದೊತ್ತಡ ಹೆಚ್ಚಾಗಿಸುವುದು.

ಸಕ್ಕರೆಯುಕ್ತ ಆಹಾರಗಳು

ಸಕ್ಕರೆಯುಕ್ತ ಆಹಾರಗಳು

ಮಾರುಕಟ್ಟೆಯಲ್ಲಿ ಅತ್ಯಧಿಕ ಸಕ್ಕರೆಯಂಶವಿರುವಂತಹ ಆಹಾರಗಳು ನೂರಾರು ಬಗೆಯಲ್ಲಿ ಸಿಗುವುದು. ಇದು ನೈಸರ್ಗಿಕ ಅಥವಾ ಕೃತಕ ಸಕ್ಕರೆಯನ್ನು ಹೊಂದಿರುವುದು. ಅತಿಯಾದ ಸಕ್ಕರೆ ಸೇವನೆಯಿಂದ ತೂಕ ಹೆಚ್ಚಾಗುವುದು ಮತ್ತು ಕ್ಯಾಲರಿ ಹೆಚ್ಚುವುದು.ನೀವು ಮಧುಮೇಹಿಯಾಗಿದ್ದುಕೊಂಡು ಅಧಿಕಸಕ್ಕರೆಯಿರುವ ಆಹಾರ ಸೇವನೆ ಮಾಡುತ್ತಲಿದ್ದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಅಧಿಕ ರಕ್ತದೊತ್ತಡ ಅಥವಾ ಬೊಜ್ಜನ್ನು ಹೊಂದಿರುವ ಜನರಲ್ಲಿ ರಕ್ತದೊತ್ತಡ ಹೆಚ್ಚಾಗಲು ಈ ಆಹಾರಗಳೇ ಕಾರಣವಾಗಿದೆ. ಇದರಿಂದ ನೇರವಾಗಿ ಅಥವಾ ಚಾಕಲೇಟ್, ಬ್ರೆಡ್, ಸಂಸ್ಕರಿಸಿರುವ ಹಣ್ಣಿನ ಜ್ಯೂಸ್ ಇತ್ಯಾದಿಗಳನ್ನು ಕಡೆಗಣಿಸಿ. ನೀವು ಸಕ್ಕರೆಗೆ ಪರ್ಯಾಯವಾಗಿರುವುದನ್ನು ಬಳಸಿದರೆ ಉತ್ತಮ.

ತಂಪು ಪಾನೀಯಗಳು

ತಂಪು ಪಾನೀಯಗಳು

ಹೆಚ್ಚಿನವರು ಬಾಯಾರಿಕೆ ನಿವಾರಿಸಲು ಮತ್ತು ರುಚಿಗಾಗಿ ತಂಪು ಪಾನೀಯ ಸೇವನೆ ಮಾಡುವರು. ಆದರೆ ಈ ತಂಪು ಪಾನೀಯಗಳಲ್ಲಿ ಅತ್ಯಧಿಕ ಮಟ್ಟದ ಕಾರ್ಬ್ರೋನೇಟೆಡ್ ಸೋಡಾ ಇರುವುದು. ಇದು ಅಸಿಡಿಟಿ ಮೇಲೆ ಪರಿಣಾಮ ಬೀರುವುದು ಮತ್ತು ಇದರಲ್ಲಿ ಅತ್ಯಧಿಕ ಮಟ್ಟದಲ್ಲಿ ಸಕ್ಕರೆಯಂಶ

ವಿರುವುದು.ಚಾಕಲೇಟ್ ಗಿಂತ ಹೆಚ್ಚಾಗಿ ತಂಪು ಪಾನೀಯದಿಂದ ಸಕ್ಕರೆಯಂಶವು ದೇಹ ಸೇರುವುದು. ದೀರ್ಘಕಾಲದ ತನಕ ತಂಪುಪಾನೀಯ ಸೇವನೆ ಮಾಡಿದರೆ ಅದರಿಂದ ಬೊಜ್ಜು ಬರುವುದು ಮತ್ತು ರಕ್ತದೊತ್ತಡ ಮಟ್ಟವು ಹೆಚ್ಚಾಗುವುದು. ಇದರಿಂದ ತಂಪು ಪಾನೀಯಗಳ ಸೇವನೆ ನಿಲ್ಲಿಸಿ, ತಾಜಾ ಹಣ್ಣುಗಳ ಜ್ಯೂಸ್ ಸೇವನೆ ಮಾಡಿ.

ಪ್ಯಾಸ್ಟ್ರೀಸ್

ಪ್ಯಾಸ್ಟ್ರೀಸ್

ಪ್ಯಾಸ್ಟ್ರೀಗಳು ದೊಡ್ಡವರಿಂದ ಹಿಡಿದು ಮಕ್ಕಳ ತನಕ ಪ್ರತಿಯೊಬ್ಬರಿಗೂ ಇಷ್ಟ. ರುಚಿಕರವಾದ ಕುಕ್ಕೀಸ್, ಡೌನಟ್ ಇತ್ಯಾದಿಗಳು ಬಾಯಲ್ಲಿ ನೀರುರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇವುಗಳು ತುಂಬಾ ರುಚಿಯಾಗಿದ್ದರೂ ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಸಕ್ಕರೆಯಂಶವು ದೇಹದ ತೂಕ ಹೆಚ್ಚಿಸುವುದು. ಬೊಜ್ಜು ದೇಹದ ಸೌಂದರ್ಯ ಕೆಡಿಸುವುದು ಮಾತ್ರವಲ್ಲದೆ, ಹಲವಾರು ರೀತಿಯ ರೋಗಗಳಿಗೆ ಕಾರಣವಾಗುವುದು. ಇದರಿಂದ ರಕ್ತದೊತ್ತಡವು ಹೆಚ್ಚಾಗುವುದು. ಇದರಿಂದ ಇಂತಹ ಆಹಾರ ಸೇವನೆ ಕಡಿಮೆ ಮಾಡಿ.

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ಕುಡಿಯುವುದು ಇಂದಿನ ದಿನಗಳಲ್ಲಿ ಫ್ಯಾಶನ್ ಆಗಿ ಹೋಗಿದೆ. ಯುವಕರಿಂದ ಹಿಡಿದು ಉದ್ಯಮ ಜಗತ್ತಿನ ಪ್ರತಿಯೊಬ್ಬರು ಆಲ್ಕೋಹಾಲ್ ಸೇವನೆಯಲ್ಲಿ ತೊಡಗಿರುವರು. ಆದರೆ ಇದರಲ್ಲಿ ಇರುವ ಸಕ್ಕರೆಯಂಶವು ರಕ್ತದೊತ್ತಡ ಹೆಚ್ಚು ಮಾಡುವುದು.ಆಲ್ಕೋಹಾಲ್ ನಿಂದಾಗಿ ಕಿಡ್ನಿ ವೈಫಲ್ಯ, ಹೃದಯಕ್ಕೆ ಹಾನಿ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಇದೆಲ್ಲವೂ ಜತೆಯಾಗಿದ್ದರೆ ಆಗ ರಕ್ತದೊತ್ತಡ ಹೆಚ್ಚಾಗುವುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ತಂಬಾಕು

ತಂಬಾಕು

ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರವೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ತಂಬಾಕಿನಿಂದಾಗಿ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ, ಆರೋಗ್ಯ ಸಮಸ್ಯೆ ಇತ್ಯಾದಿ ಕಾಣಿಸಿಕೊಳ್ಳುವುದು. ಧೂಮಪಾನ ಮತ್ತು ತಂಬಾಕು ಜಗಿಯುವುದರಿಂದ ರಕ್ತನಾಳಗಳು ಕುಗ್ಗಿ ಅದರಿಂದ ರಕ್ತದೊತ್ತಡ ಉಂಟಾಗುವುದು. ಪದೇ ಪದೇ ಧೂಮಪಾನ ಮಾಡುವುದು ಅಥವಾ ಯಾವಾಗಲೊಮ್ಮೆ ಧೂಮಪಾನ ಮಾಡುವುದರಿಂದ ರಕ್ತದೊತ್ತಡವು ಹೆಚ್ಚಾಗುವುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದ ಧೂಮಪಾನ ತ್ಯಜಿಸಿ.

ಕೆಫಿನ್

ಕೆಫಿನ್

ಮೈನಡುಗಿಸುವ ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ಬಿಸಿ ಕಾಫಿ ಕುಡಿದರೆ ದೇಹಕ್ಕೆ ಉಲ್ಲಾಸ ಬರುವುದರಲ್ಲಿ ಸಂಶಯವೇ ಇಲ್ಲ. ಆದರೆ ಅತಿಯಾಗಿ ಕೆಫಿನ್ ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡವು ಹೆಚ್ಚಾಗುವುದು.ಈ ಸಮಸ್ಯೆಯು ಅಲ್ಪಾವಧಿಗೆ ಇದ್ದರೂ ನಿಮ್ಮ ಕೆಫಿನ್ ಸೇವನೆಯು ಹೆಚ್ಚಾದಂತೆ ರಕ್ತದೊತ್ತಡವು ಕೂಡ ಹೆಚ್ಚಾಗುವುದು. ಇದರಿಂದ ವಾರದಲ್ಲಿ ಎರಡು ಸಲ ಮಾತ್ರ ಕೆಫಿನ್ ಸೇವನೆ ಮಾಡಿ.

ಉಪ್ಪಿನಕಾಯಿ

ಉಪ್ಪಿನಕಾಯಿ

ಉಪ್ಪಿನಕಾಯಿ ಇಲ್ಲದೆ ಊಟ ಮಾಡದ ಜನರು ಇದ್ದಾರೆ. ಇವರಿಗೆ ಉಪ್ಪಿನಕಾಯಿ ಬೇಕೇಬೇಕು. ಅದರಲ್ಲೂ ಭಾರತದಲ್ಲಿ ಉಪ್ಪಿನಕಾಯಿಯನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ. ಆದರೆ ಇದನ್ನು ಸಂಸ್ಕರಿಸಿ ಇಡಲು ಅಧಿಕ ಮಟ್ಟದಲ್ಲಿ ಉಪ್ಪನ್ನು ಬಳಸುವ ಕಾರಣದಿಂದ ಇದು ರಕ್ತದೊತ್ತಡ ಹೆಚ್ಚಳ ಮಾಡುವುದು. ಇದರಿಂದ ಉಪ್ಪಿನಾಂಶ ಕಡಿಮೆ ಇರುವಂತಹ ಉಪ್ಪಿನಕಾಯಿ ಸೇವನೆ ಮಾಡಿದರೆ ಅದು ಒಳ್ಳೆಯದು.ಅಧಿಕ ರಕ್ತದೊತ್ತಡ ಇರುವಂತಹವರು ತಮ್ಮ ಆಹಾರ ಸೇವನೆ ಬಗ್ಗೆ ಗಮನಹರಿಸಬೇಕು. ಅನಾರೋಗ್ಯಕರ ಆಹಾರ ಕ್ರಮದಿಂದ ರಕ್ತದೊತ್ತಡ ಹೆಚ್ಚಾಗುವುದು. ಇದರಿಂದ ಅರೋಗ್ಯ ಕೂಡ ಕೆಡಬಹುದು. ಇದರಿಂದ ಮೇಲೆ ಹೇಳಿರುವ ಆಹಾರಗಳನ್ನು ಆದಷ್ಟು ಕಡೆಗಣಿಸಲು ಪ್ರಯತ್ನಿಸಿ.

English summary

Foods To Avoid With High Blood Pressure

Hypertension can often become deadly and can become the cause of associated diseases like heart attack, stroke, etc. These can lead to adverse health conditions, which can make a person paralyzed even. Therefore, it is increasingly important a person follows proper medication and food habits to control the blood pressure level. Below is the list of few such foods which a person suffering from hypertension should strictly avoid. Take a look.
X
Desktop Bottom Promotion