For Quick Alerts
ALLOW NOTIFICATIONS  
For Daily Alerts

ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಅತ್ಯುತ್ತಮ ಆಹಾರಗಳು

|

ಇಂದು ವಿಶ್ವದ ಹಲವಾರು ಪುರುಷರು ಫಲವತ್ತತೆಯ ಕೊರತೆಯಿಂದ ಬಳಲುತ್ತಿದ್ದಾರೆ. ಒಂದು ಸಂಶೋಧನೆಯ ಪ್ರಕಾರ ಈ ಪುರುಷರು ತಂದೆಯಾಗಲು ಇರುವ ಪ್ರಮುಖ ಅಡ್ಡಿ ಎಂದರೆ ವೀರ್ಯಾಣುಗಳ ಸಂಖ್ಯೆಯ ಕೊರತೆ. ಗರ್ಭಾಂಕುರಗೊಳ್ಳಲು ಕೇವಲ ಒಂದೇ ವೀರ್ಯಾಣುವಿನ ಅಗತ್ಯವಿದ್ದರೂ ಇವುಗಳ ಸಾಂದ್ರತೆ ಕನಿಷ್ಟ ಪ್ರತಿ ಮಿಲಿಲೀಟರ್ ಸುಮಾರು ಇಪ್ಪತ್ತರಿಂದ ನಲವತ್ತು ಮಿಲಿಯನ್ ನಷ್ಟು ಇರಬೇಕೆಂಬುದು ಸೃಷ್ಟಿಯ ವಿಚಿತ್ರವೇ ಸರಿ.

ಕೆಲವು ಸಂದರ್ಭಗಳಲ್ಲಿ ಹದಿನಾಲ್ಕು ಅಥವಾ ಹದಿನೈದು ಇದ್ದರೂ ಫಲ ಸಿಗುವ ಸಾಧ್ಯತೆ ಇದ್ದರೂ ಇದು ಕಡಿಮೆ. ನಿಸರ್ಗ ನಿಯಮವನ್ನು ಮೀರಿ ಫಲ ಸಿಗಲು ಸಾಧ್ಯವಿಲ್ಲವಾದುದರಿಂದ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿ ಅಗತ್ಯ ಸಾಂದ್ರತೆ ಪಡೆಯುವುದೇ ನಿಸರ್ಗಕ್ಕೆ ನೀಡುವ ಗೌರವವಾಗಿದ್ದು ಈ ಮೂಲಕ ಫಲವತ್ತತೆಯ ಕೊರತೆಯನ್ನು ನೀಗಿಸಬಹುದು. ಈ ಕೊರತೆಯನ್ನು ನೀಗಿಸಲು ಕೆಲವು ಆಹಾರಗಳ ಸೇವನೆ ನೆರವಾಗಲಿದೆ...

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಇದೊಂದು ಕಪ್ಪು ಹಾಗೂ ನೈಸರ್ಗಿಕ ಚಾಕಲೇಟ್ ಆಗಿದ್ದು ಇದರಲ್ಲಿ ಎಲ್-ಆರ್ಜಿನೈನ್ ಎಂಬ ಅಮೈನೋ ಆಮ್ಲವಿದೆ. ಈ ಪೋಷಕಾಂಶವೇ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ನವದಂಪತಿಗಳು ಮಧುಚಂದ್ರಕ್ಕೆ ಹೋದಾಗ ಇವರ ಶಯನಗೃಹವನ್ನು ಅಲಂಕರಿಸುವವರು ಇವರ ಕಣ್ಣಿಗೆ ಕಾಣುವಂತೆ ಸ್ಟ್ರಾಬೆರಿ ಹಣ್ಣೊಂದು ಚಾಕಲೇಟಿನ ದ್ರವದಲ್ಲಿ ಮುಳುಗಿಸುತ್ತಿರುವಂತಹ ಚಿತ್ರವನ್ನು ದೊಡ್ಡದಾಗಿ ಹಾಕಲಾಗಿರುತ್ತದೆ. ಇದರಿಂದ ಕಪ್ಪು ಚಾಕಲೇಟು ತಿನ್ನಲು ಪ್ರೇರಣೆ ದೊರೆತು ಪುರುಷರ ಫಲವತ್ತಗೆ ಹೆಚ್ಚುವಂತಾಗಬೇಕೆಂದೇ ಇದರ ಉದ್ದೇಶವಾಗಿದೆ. ಅಲ್ಲದೇ ಕಪ್ಪು ಚಾಕಲೇಟು ಪುರುಷರ ಹಲವು ಅಂಗಗಳ ಕ್ಷಮತೆಯನ್ನು ಹೆಚ್ಚಿಸಿ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಹಾಗಾಗಿ ಕೇವಲ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಮಾತ್ರವಲ್ಲ ಲೈಂಗಿಕ ಆಸಕ್ತಿ ಹಾಗೂ ಶಕ್ತಿಯನ್ನುಹೆಚ್ಚಿಸಲೂ ನೆರವಾಗುತ್ತದೆ.

ಸಿಂಪಿ

ಸಿಂಪಿ

ಕಪ್ಪೆಚಿಪ್ಪು ಎಂದು ಕರೆಯಲ್ಪಡುವ ಸಾಗರ ಉತ್ಪನ್ನವಾದ ಸಿಂಪಿಗಳಲ್ಲಿ ಸತುವಿನ ಪ್ರಮಾಣ ಹೆಚ್ಚಾಗಿರುತ್ತದೆ ಹಾಗೂ ಇದು ಪುರುಷರ ದೇಹದಲ್ಲಿ ಟೆಸ್ಟಾಸ್ಟೆರೋನ್ ರಸದೂತ ಹಾಗೂ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಸಿಂಪಿ ಸಹಾ ಉತ್ತಮ ಕಾಮೋತ್ತೇಜಕ ಆಹಾರವಾಗಿದ್ದು ಲೈಂಗಿನ ಆಸಕ್ತಿ ಹಾಗೂ ಶಕ್ತಿಯನ್ನು ಹೆಚ್ಚಿಸುತ್ತದೆ. ವೀರ್ಯಾಣುಗಳ ಸಂಖ್ಯೆ ಅಗತ್ಯವಿರುವ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಂಪಿಯನ್ನು ಸೇವಿಸುವ ಮೂಲಕ ಗರ್ಭಾಂಕುರಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಹೆಚ್ಚಿರುವ ಟೆಸ್ಟಾಸ್ಟೆರೋನ್ ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯ ಉತ್ತಮಗೊಳ್ಳಲು ನೆರವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹಲವು ಖನಿಜಗಳು ಹಾಗೂ ವಿಟಮಿನ್ ಎ, ಬಿ೧, ಹಾಗೂ ಸಿ ಸಮೃದ್ಧವಾಗಿದೆ. ಇವು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಅಗತ್ಯವಾಗಿದ್ದು ಲೈಂಗಿಕ ಸಾಮರ್ಥ್ಯ ಹೆಚ್ಚಲೂ ನೆರವಾಗುತ್ತವೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಪುರುಷಕ ಲೈಂಗಿಕ ಶಕ್ತಿ ಹಾಗೂ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚುವ ಸಾಮರ್ಥ್ಯವಿರುವ ಇನ್ನೊಂದು ಅದ್ಭುತ ಆಹಾರವೆಂದರೆ ಬೆಳ್ಳುಳ್ಳಿ. ಈ ಜನಪ್ರಿಯ ಸಾಂಬಾರ ವಸ್ತುವನ್ನು ಶತಮಾನಗಳಿಂದ ನಮ್ಮ ಪೂರ್ವಜರು ಉಸಿರಾಟಾದ ತೊಂದರೆ, ಹೃದಯದ ತೊಂದರೆ ಹಾಗೂ ಇತರ ದೈಹಿಕ ಆರೋಗ್ಯ ಸಂಬಂಧಿ ಅನಾರೋಗ್ಯಗಳಿಗೆ ಔಷಧಿಯ ರೂಪದಲ್ಲಿ ಬಳಸುತ್ತಾ ಬಂದಿದ್ದಾರೆ. ಅಲ್ಲದೇ ಬೆಳ್ಳುಳ್ಳಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಕೇವಲ ಇದರ ಪರಿಮಳ ಕೊಂಚ ಘಾಟು ಎಂಬ ಅಂಶವನ್ನು ಕಡೆಗಣಿಸಿದರೆ ಇದೊಂದು ಅದ್ಭುತ ಕಾಮೋತ್ತೇಜಕವಾಗಿದೆ. ಇದರಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ ಬಿ೬ ಎರಡೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಬೆಳ್ಳುಳ್ಳಿಯಲ್ಲಿವು ಆಲಿಸಿನ್ ಎಂಬ ಇನ್ನೊಂದು ಪೋಷಕಾಂಶ ಪುರುಷರ ಜನನಾಂಗಕ್ಕೆ ಹೆಚ್ಚಿನ ರಕ್ತಸಂಚಾರವನ್ನು ಪೂರೈಸಿ ವೀರ್ಯಾಣುಗಳ ಪ್ರಮಾಣವನ್ನೂ ಹೆಚ್ಚಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ರಕ್ತವನ್ನು ಶುದ್ದೀಕರಿಸುವ ಗುಣವನ್ನೂ ಹೊಂದಿದೆ. ತನ್ಮೂಲಕ ರಕ್ತನಾಳಗಳಲ್ಲಿ ಉಂಟಾಗಿದ್ದ ತಡೆಗಳನ್ನು ನಿವಾರಿಸಿ ರಕ್ತಪರಿಚಲನೆ ಸರಾಗಗೊಳಿಸುತ್ತದೆ.

ಶತಾವರಿ

ಶತಾವರಿ

ಆಸ್ಪರಾಗಸ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಶತಾವರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಸಹಾ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ವೃಷಣದ ಜೀವಕೋಶಗಳನ್ನು ರಕ್ಷಿಸಲು ನೆರವಾಗುತ್ತದೆ. ಅಲ್ಲದೇ ಜನನಾಂಗಕ್ಕೆ ರಕ್ತಪರಿಚಲನೆ ಹೆಚ್ಚಿಸುತ್ತದೆ ಹಾಗೂ ವೃಷಣಗಳಿಗೆ ಎದುರಾಗುವ ಸೋಂಕಿನಿಂದ ರಕ್ಷಿಸುತ್ತದೆ. ಅಲ್ಲದೇ ಇದು ವೃಷಣಗಳ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ, ತನ್ಮೂಲಕ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಹಾಗೂ ವೀರ್ಯಾಣುಗಳ ಗುಣಮಟ್ಟ ಹೆಚ್ಚಲೂ ನೆರವಾಗುತ್ತದೆ. ಹಾಗಾಗಿ ಈ ಕೊರತೆ ಇರುವ ಪುರುಷರು ಶತಾವರಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿದೆ.

ಗೋಜಿ ಬೆರ್ರಿಗಳು

ಗೋಜಿ ಬೆರ್ರಿಗಳು

ದೇಹದಾರ್ಢ್ಯತೆ ಹೆಚ್ಚಿಸಲು ಹಾಗೂ ಮನೋಭಾವವನ್ನು ಉತ್ತಮಗೊಳಿಸಲು ಗೋಜಿಬೆರ್ರಿಗಳು ನೆರವಾಗುತ್ತವೆ. ವಿಶೇಷವಾಗಿ ವೃಷಣಗಳ ತಾಪಮಾನವನ್ನು ಸೂಕ್ತಮಟ್ಟದಲ್ಲಿರಿಸುವ ಮೂಲಕ ವೃಷಣಗಳಲ್ಲಿ ವೀರ್ಯಾಣುಗಳ ಉತ್ಪತ್ತಿ ಹೆಚ್ಚಲು ನೆರವಾಗುತ್ತದೆ. ಒಂದು ವೇಳೆ ವೃಷಣಗಳ ತಾಪಮಾನ ಹೆಚ್ಚಿದರೆ ಇದು ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟದಲ್ಲಿ ಕೊರತೆಯುಂಟಾಗುತ್ತದೆ. ಇದು ನೇರವಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಗೋಜಿಬೆರ್ರಿಗಳ ಸೇವನೆಯಿಂದ ಈ ಕೊರತೆ ನೀಗಿ ಫಲವತ್ತತೆ ಹೆಚ್ಚುತ್ತದೆ.

ಅಕ್ರೋಟು

ಅಕ್ರೋಟು

ಅಕ್ರೋಟಿನ ಸೇವನೆಯಿಂದಲೂ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಜನನಾಂಗಕ್ಕೆ ಹರಿಯುವ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಹಾಗೂ ಎಲ್-ಆರ್ಜಿನೈನ್ ಎಂಬ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಿಸುತ್ತವೆ. ಇತರ ಒಣಫಲಗಳಿಗೆ ಹೋಲಿಸಿದರೆ ಅಕ್ರೋಟಿನಲ್ಲಿ ದುಪ್ಪಟ್ಟು ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ರಕ್ತದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಹೋರಾಡುತ್ತವೆ. ಅಲ್ಲದೇ ಒಮೆಗಾ ೩ ಕೊಬ್ಬಿನ ಆಮ್ಲಗಳು ಜನನಾಂಗಕ್ಕೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ.

ಕುಂಬಳದ ಬೀಜಗಳು

ಕುಂಬಳದ ಬೀಜಗಳು

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಕ್ಷಮತೆ ಇರುವ ಆಹಾರಗಳಲ್ಲಿ ಇನ್ನೊಂದು ಕುಂಬಳದ ಒಣ ಬೀಜಗಳು. ಇದರಲ್ಲಿರುವ ಫೈಟೋ ಸ್ಟೆರಾಲ್ ಎಂಬ ಪೋಷಕಾಂಶಗಳು ಪುರುಷರ ದೇಹದಲ್ಲಿ ಟೆಸ್ಟಾಸ್ಟೆರಾನ್ ಪ್ರಮಾಣವನ್ನು ಹೆಚ್ಚಿಸುತ್ತವೆ ಹಾಗೂ ಮುಖ್ಯ ಕೊಬ್ಬಿನ ಆಮ್ಲಗಳು ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಿ ದೇಹ ದಾರ್ಢ್ಯತೆ ಹಾಗೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಜಿನ್ಸೆಂಗ್

ಜಿನ್ಸೆಂಗ್

ಹಸಿ ಶುಂಠಿಯನ್ನೇ ಹೋಲುವ ಈ ಚೀನಾದ ಮೂಲಿಕೆ ಪುರುಷರ ದಾರ್ಢ್ಯತೆಯನ್ನು ಹೆಚ್ಚಿಸುತ್ತದೆ. ಕಾಮಾಸಕ್ತಿಯನ್ನು ಹೆಚ್ಚಿಸಲು ಹಾಗೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಿಕೆಯ ಸೇವನೆಯಿಂದ ಪ್ರಬಲ ಕಾಮಪರಾಕಾಷ್ಠೆಯನ್ನು ಪಡೆಯಲು ಹಾಗೂ ನಿಮಿರುದೌರ್ಬಲ್ಯದ ತೊಂದರೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಜಿನ್ಸೆಂಗ್ ವೀರ್ಯಾಣುಗಳ ಗುಣಮಟ್ಟ ಹಾಗೂ ಸಾಂದ್ರತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಫಲವತ್ತತೆಯ ಕೊರತೆ ಇರುವ ಪುರುಷರು ಈ ಮೂಲಿಕೆಯನ್ನು ತಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಕೊರತೆಯನ್ನು ಸಮರ್ಥವಾಗಿ ಎದುರಿಸಬಹುದು.

ಮಾಕಾ

ಮಾಕಾ

ನಪುಂಸಕತ್ವವನ್ನು ನಿವಾರಿಸಲು ಇದೊಂದು ಪ್ರಬಲ ಆಹಾರವಾಗಿದೆ. ವಿಶೇಷವಾಗಿ ಇದರಲ್ಲಿರುವ ಹೆಚ್ಚುವರಿ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆ ಹಾಗೂ ಸಾಂದ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮಹಿಳೆಯರ ಸಹಿತ ಪುರುಷರಲ್ಲಿಯೂ ಕಾಮಾಸಕ್ತಿ ಮತ್ತು ದಾರ್ಢ್ಯತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಸಾರಾಂಶ

ಸಾರಾಂಶ

ಈ ಆಹಾರಗಳು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು, ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಹಾಗೂ ಈ ಮೂಲಕ ಎದುರಾಗುವ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತವೆ. ಸಾಮಾನ್ಯವಾಗಿ ಈ ಆಹಾರಗಳಲ್ಲಿ ವಿಟಮಿನ್ನುಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಇವುಗಳು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಈ ಆಹಾರಗಳು ಟೆಸ್ಟಾಸ್ಟೆರೋನ್ ಮಟ್ಟವನ್ನು ಹೆಚ್ಚಿಸಿ ಪುರುಷರಲ್ಲಿ ಕಾಮಾಸಕ್ತಿ, ಒಟ್ಟಾರೆ ಆರೋಗ್ಯ ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಪುರುಷರಿಗೆ ಸಾಮಾನ್ಯವಾಗಿ ಎದುರಾಗುವ ಶೀಘ್ರಸ್ಖಲನ, ನಿಮಿರುದೌರ್ಬಲ್ಯ ಹಾಗೂ ಕಾಮಸಕ್ತಿಯ ಕೊರತೆ ಮೊದಲಾದವುಗಳನ್ನು ನಿವಾರಿಸಿ ಲೈಂಗಿಕ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಸಂಗಾತಿ ಗರ್ಭ ಧರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

English summary

fabulous foods to boost sperm count

Many men around the world struggle with male infertility problems. According to research 90% are caused by low sperm count. This can be due to lack of vitamins or zinc deficiency. Foods rich in nutrients and vitamins are the best foods to boost sperm count as well as the overall volume of semen
Story first published: Saturday, August 11, 2018, 15:39 [IST]
X
Desktop Bottom Promotion