For Quick Alerts
ALLOW NOTIFICATIONS  
For Daily Alerts

  ಬಾದಾಮಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು!

  By Hemanth
  |

  ಆರೋಗ್ಯಕರ ಬೀಜಗಳ ಸಾಲಿನಲ್ಲಿ ಬಾದಾಮಿ ಕೂಡ ಒಂದು. ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದು ನಮ್ಮ ದೇಹಕ್ಕೆ ತುಂಬಾ ಲಾಭಕಾರಿ. ಸಾವಿರಾರು ವರ್ಷಗಳ ಹಿಂದಿನಿಂದಲೂ ಬಾದಾಮಿಯ ಲಾಭಗಳನ್ನು ಜನರು ಪಡೆದುಕೊಳ್ಳುತ್ತಾ ಬರುತ್ತಿದ್ದಾರೆ. ಬಾದಾಮಿಯಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವಿದೆ. ಒಂದು ಔನ್ಸ್(ಸುಮಾರು 30 ಗ್ರಾಂ) ಬಾದಾಮಿ ತಿಂದರೆ ಅದರಿಂದ ವಯಸ್ಕರಿಗೆ ಒಂದು ದಿನಕ್ಕೆ ಬೇಕಾಗುವ ಪ್ರೋಟೀನ್ ಲಭ್ಯವಾಗುವುದು. ಬಾದಾಮಿಯನ್ನು ನೀವು ಹೇಗೆ ಬೇಕಿದ್ದರೂ ಸೇವಿಸಬಹುದು.

  Almonds

  ಇದನ್ನು ಹಸಿಯಾಗಿ ಅಥವಾ ಹುರಿದು ತಿನ್ನಬಹುದು. ಇದರ ಚಿಪ್ಸ್, ಬಾದಾಮಿ ಹಿಟ್ಟು, ಎಣ್ಣೆ ಮತ್ತು ಬಾದಾಮಿ ಹಾಲು ಕೂಡ ಲಭ್ಯವಿದೆ. ಮಾನವ ಉಪಯೋಗಕ್ಕೆ ಬಳಸಿದ ಮೊದಲ ಬಾದಾಮಿಯೆಂದು ಇತಿಹಾಸವು ಹೇಳುತ್ತದೆ. ಕ್ರಿ.ಪೂ. 3000ದಲ್ಲಿ ಬಾದಾಮಿ ಮರಗಳನ್ನು ನೆಟ್ಟಿರುವಂತಹ ಸಾಕ್ಷ್ಯಗಳು ಜೋರ್ಡನ್ ನಲ್ಲಿ ಸಿಗುತ್ತದೆ. ಬಾದಾಮಿಯಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಕೆಲವೊಂದು ಅಧ್ಯಯನಗಳು ಇದನ್ನು ದೃಢಪಡಿಸಿಕೊಂಡಿವೆ. ಇನ್ನು ತಡವೇಕೇ? ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಾದಾಮಿ ಸೇರಿಸಿಕೊಳ್ಳಿ.

  ದೈನಂದಿನ ಆಹಾರ ಕ್ರಮದಲ್ಲಿ ಬಾದಾಮಿಯ ಅಗತ್ಯ

  ಆಧುನಿಕ ಜಗತ್ತಿನಲ್ಲಿ ತುಂಬಾ ಶಿಸ್ತಿನ ಮತ್ತು ಕಠಿಣ ಆಹಾರ ಕ್ರಮದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವುದು. ಇದರೊಂದಿಗೆ ತೂಕ ಕಳೆದುಕೊಳ್ಳಲು ನಿಯಮಿತ ವ್ಯಾಯಾಮ ಮಾಡಬೇಕು. ಇಂತಹವರು ಕೆಲವೊಂದು ಒಳ್ಳೆಯ ಆಹಾರಗಳಾದ ಕ್ಯಾರೆಟ್, ಬಾಳೆಹಣ್ಣು ಇತ್ಯಾದಿಗಳ ಕಡೆ ಗಮನಹರಿಸಬೇಕು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ. ಆದರೆ ಬೀಜಗಳು ನಿಮ್ಮ ದೇಹತೂಕ ಕಡಿಮೆ ಮಾಡಲು ನೆರವಾಗುತ್ತದೆ ಎಂದು ತಿಳಿದಿದೆಯಾ? ಬೀಜಗಳಲ್ಲಿ ಹೆಚ್ಚಿನ ಕೊಬ್ಬಿನಾಮ್ಲಗಳು ಇರುವ ಕಾರಣದಿಂದ ಇದನ್ನು ಸೇವಿಸಲು ಹಿಂಜರಿಯುತ್ತೇವೆ. ಆದರೆ ಅಧ್ಯಯನಗಳು ಹೇಳಿರುವ ಪ್ರಕಾರ ಬಾದಾಮಿಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ.

  ಕೊಬ್ಬು ಮಾನವನ ದೇಹಕ್ಕೆ ಒಳ್ಳೆಯದು, ನಾರಿನಾಂಶವು ಒಂದು ಒಳ್ಳೆಯ ತಿಂಡಿ

  ಬಾದಾಮಿಯಲ್ಲಿ ಒಮೆಗಾ9, ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇವೆ. ಇದು ತುಂಬಾ ಆರೋಗ್ಯಕಾರಿ ಕೊಬ್ಬಿನಾಮ್ಲಗಳು ಮತ್ತು ದೇಹಕ್ಕೆ ತುಂಬಾ ಪರಿಣಾಮಕಾರಿ. ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರದಲ್ಲಿ ಕಂಡು ಬರುವಂತಹ ಪರಿಷ್ಕರಿಸಿದ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬುಗಳು ಹೃದಯಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳಿಗೆ ಕಾರಣವಾಗುವುದು. ಆದರೆ ಬಾದಾಮಿ ಅಪರಿಷ್ಕರಿಸಿದ ಕೊಬ್ಬು ಇದೆ. ಈ ಕೊಬ್ಬು ಹೃದಯಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು. ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ಬಾದಾಮಿಯ ಸಿಪ್ಪೆಯಲ್ಲಿ ಉನ್ನತ ಮಟ್ಟದ ಆಹಾರದ ನಾರಿನಾಂಶವಿದೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದು ಮತ್ತು ಕರುಳಿನ ಕ್ರಿಯೆ ಸರಾಗವಾಗುವುದು.

  Almonds

  ಆಹಾರವು ಸರಿಯಾಗಿ ಜೀರ್ಣವಾಗದ ಇರುವಂತಹ ಸಮಯದಲ್ಲಿ ಅಸಿಡಿಟಿ, ಹೊಟ್ಟೆ ಉಬ್ಬರ ಇತ್ಯಾದಿ ಉಂಟಾಗುವುದು. ಇದರಿಂದ ಎಲ್ಲಾ ಆಹಾರವು ಕೊಬ್ಬಾಗಿ ಪರಿವರ್ತಿತವಾಗುವುದು. ಇದು ನಮ್ಮ ದೇಹದಲ್ಲಿ ಹರಡಿಕೊಂಡು ಹೆಚ್ಚುವರಿ ತೂಕ ಮತ್ತು ಬೊಜ್ಜು ಶೇಖರಣೆಯಾಗುವಂತೆ ಮಾಡುವುದು.

  ಬಾದಾಮಿಯಿಂದ ಹೆಚ್ಚಿನ ಲಾಭ ಸಿಗಬೇಕಾದರೆ ಅದರ ಸಿಪ್ಪೆಯೊಂದಿಗೆ ಹಾಗೆ ಸೇವನೆ ಮಾಡಬೇಕು. ಎರಡು ಊಟದ ಮಧ್ಯೆ ಬಾದಾಮಿಯನ್ನು ತಿಂಡಿಯ ರೂಪದಲ್ಲಿ ಸೇವಿಸಿದರೆ ಹೆಚ್ಚು ಉತ್ತಮ. ಹಸಿ ಮತ್ತು ಇಡೀ ಬಾದಾಮಿ ಸೇವನೆ ಮಾಡಿದರೆ ಒಳ್ಳೆಯದು. ಹುರಿದಿರುವ ಮತ್ತು ಪರಿಷ್ಕರಿಸಿದ ಬಾದಾಮಿಗಿಂತ ಇದು ಒಳ್ಳೆಯದು. ಯಾಕೆಂದರೆ ಪರಿಷ್ಕರಿಸಿರುವ ಬಾದಾಮಿಯಲ್ಲಿ ಹೆಚ್ಚಿನ ಉಪ್ಪು ಇರುವುದು. ಇದು ದೇಹದಲ್ಲಿ ರಕ್ತದೊತ್ತಡ ಹೆಚ್ಚು ಮಾಡುವುದು.

  ಹೊಟ್ಟೆಯ ಕೊಬ್ಬು ಕರಗಿಸುವುದು

  ಬಾದಾಮಿ ಸೇವನೆಯ ಉಪಯೋಗವೆಂದರೆ ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದ್ದು. ಇದು ನೇರ ಸ್ನಾಯುವಿನ ಸಮೂಹದ ಬೆಳವಣಿಗೆಗೆ ನೆರವಾಗುವುದು. ಏಕಪರ್ಯಾಪ್ತ ಕೊಬ್ಬುಗಳು ನಮ್ಮ ದೇಹದ ದ್ರವ್ಯರಾಶಿಯನ್ನು ನಿಯಂತ್ರಿಸುವುದು ಮತ್ತು ತಗ್ಗಿಸುವುದು. ಇದು ಹೊಟ್ಟೆಯ ಭಾಗದಲ್ಲಿರುವಂತಹ ಕೊಬ್ಬನ್ನು ಕರಗಿಸುವುದು.

  ಸ್ವಾದಿಷ್ಟಕರ ಬಾದಾಮಿ ಜೇನಿನ ಹಾಲು

  ಬಾದಾಮಿಯು ಪೋಷಕಾಂಶಗಳ ಖಜಾನೆ

  ಬಾದಾಮಿಯಲ್ಲಿ ಮ್ಯಾಂಗನೀಸ್, ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಇ ಯಿದೆ. ಮ್ಯಾಂಗನೀಸ್ ಶಕ್ತಿಯ ಮೂಲ ಮತ್ತು ಸ್ನಾಯುಗಳ ಬೆಳವಣಿಗೆಗೆ ನೆರವಾಗುವುದು. ಆ್ಯಂಟಿಆಕ್ಸಿಡೆಂಟ್ ವಿಟಮಿನ್ ಇ ರಕ್ತ ಪರಿಚಲನೆ ಹೆಚ್ಚಿಸುವುದು ಮತ್ತು ಸ್ನಾಯುಗಳು ಇದನ್ನು ಸುಲಭವಾಗಿ ಪಡೆಯುವಂತೆ ಮಾಡುವುದು.

  ಪ್ರೋಟೀನ್‌ಗಳ ಆಗರ

  ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು. 

  ಬಾದಾಮಿಯಲ್ಲಿ ಒಳ್ಳೆಯ ಗುಣಮಟ್ಟದ ಸತು ಲಭ್ಯ

  ದೇಹದ ಬೆಳವಣಿಗೆಗೆ ಅದರಲ್ಲೂ ಮೆದುಳಿಗೆ ಖನಿಜಾಂಶವಾಗಿರುವ ಸತು ಅಗತ್ಯವಾಗಿ ಬೇಕೇಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಇದರಲ್ಲಿನ ಬಲಿಷ್ಠವಾಗಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಮಾನವನ ದೇಹದ ರಕ್ತದಲ್ಲಿರುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಫ್ರೀ ರ್ಯಾಡಿಕಲ್ ಮೆದುಳಿನ ಕೋಶಗಳಿಗೆ ಹಾನಿ ಮಾಡುವ ಕಾರಣ ಅವುಗಳನ್ನು ನಿಯಂತ್ರಣದಲ್ಲಿಟ್ಟು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದು. 

  ವಿಟಮಿನ್

  ಮೆದುಳಿನ ಕ್ರಿಯೆಗಳು ಆರೋಗ್ಯಕರವಾಗಿ ಸಾಗಲು ಬೇಕಾಗುವಂತಹ ವಿಟಮಿನ್ ಗಳು ಬಾದಾಮಿಯಲ್ಲಿ ಸಮೃದ್ಧವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು. ಬಾದಾಮಿಯನ್ನು ತಿನ್ನುವುದರಿಂದ ಮೆದುಳಿನ ಬೆಳವಣಿಗೆಯಾವುದು, ನೆನಪಿನ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಅದರಲ್ಲಿರುವ ವಿಟಮಿನ್ ಮೆದುಳಿಗೆ ವಯಸ್ಸಾಗದಂತೆ ನೋಡಿಕೊಳ್ಳುವುದು. ಈ ಕಾರಣದಿಂದಾಗಿ ಮನುಷ್ಯನ ದೇಹಕ್ಕೆ ವಯಸ್ಸಾದರೂ ಮೆದುಳಿಗೆ ವಯಸ್ಸಾಗುವುದಿಲ್ಲ. ವಿಟಮಿನ್ ಇ ಮೆದುಳಿನ ಜ್ಞಾನ ಶಕ್ತಿಯನ್ನು ಮತ್ತಷ್ಟು ವೃದ್ಧಿಸುತ್ತದೆ.

  Almonds

  ತೂಕ ಕಳೆದುಕೊಳ್ಳಲು ಬಾದಾಮಿ ಹೇಗೆ ಸೇವಿಸಬೇಕು?

  ಹುರಿದಿರುವಂತಹ ಬಾದಾಮಿಯ ಒಂದು ಪ್ಯಾಕೆಟ್ ಇಟ್ಟುಕೊಳ್ಳಿ. ನಿಮಗೆ ಹಸಿವಾದಾಗ ಇದನ್ನು ತಿನ್ನಿ.

  ತೂಕ ಕಳೆದುಕೊಳ್ಳಲು ಒಂದು ಔನ್ಸ್ ಬಾದಾಮಿ ತಿನ್ನಿ.

  ಬೆಳಗ್ಗೆ ಉಪಹಾರಕ್ಕೆ ಬಾದಾಮಿ ಕೂಡ ಜತೆಗಿರಲಿ. ಇದರಿಂದ ಮಧ್ಯಾಹ್ನ ತನಕ ಹೊಟ್ಟೆ ತುಂಬಿರುವುದು.

  ಓಟ್ಸ್ ಅಥವಾ ಸಿರೆಲ್ ಮೇಲೆ ಬಾದಾಮಿಯ ಹುಡಿ ಸಿಂಪಡಿಸಿ.

  ಮಧ್ಯಾಹ್ನ ಊಟಕ್ಕೆ ಬಾದಾಮಿ ರೈತಾ ಮಾಡಿಕೊಂಡು ಸೇವಿಸಿ. ತುಂಡು ಮಾಡಿಕೊಂಡಿರುವ ಬಾದಾಮಿಯನ್ನು ಮೊಸರಿಗೆ ಸೇರಿಸಿಕೊಂಡು ಅದಕ್ಕೆ ಬೇರೆ ಮಸಾಲೆಗಳನ್ನು ಸೇರಿಸಿ ಸೇವಿಸಿ. ಬಾದಾಮಿ ರೈತಾದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಒಳ್ಳೆಯ ಬ್ಯಾಕ್ಟೀರಿಯಾ ಇದೆ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಆರೋಗ್ಯವಾಗಿರುವುದು ಮತ್ತು ತೂಕ ಇಳಿಸಲು ನೆರವಾಗುವುದು.

  ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

  ತುಂಡು ಮಾಡಿರುವ ಬಾದಾಮಿಯನ್ನು ಪಾಸ್ತಾ ಅಥವಾ ಸಾಲಾಡ್ ಗೆ ಹಾಕಿಕೊಳ್ಳಬಹುದು. ಇದರಿಂದ ಹೊಟ್ಟೆ ತುಂಬಿದಂತೆ ಆಗಿ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗುವುದು. ಇದರಿಂದ ತೃಪ್ತಿ ಸಿಗುವುದು. ನಿತ್ಯದ ಆಹಾರ ಕ್ರಮದಲ್ಲಿ ಬಾದಾಮಿ ಸೇರಿಸಿಕೊಂಡು ಸರಿಯಾದ ವ್ಯಾಯಾಮ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಅಂತಿಮವಾಗಿ ಹೇಳುವುದಾದರೆ ಪೋಷಕಾಂಶಗಳು ಇರುವಂತಹ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ತಿಂಡಿ ಮತ್ತು ಉಪಹಾರದೊಂದಿಗೆ ಸರಿಯಾದ ಪ್ರಮಾಣದಲ್ಲಿ ಬಾದಾಮಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

  English summary

  Do Almonds Help You Lose Weight?

  Almonds are stuffed with vitamins, minerals, protein, and fibre, and are related to a lot of health benefits. Just one ounce of almonds contains one-eighth of an adult's daily protein necessities in his/her nutrition. Almonds may be eaten in any form you want. You may eat it in raw or roasted form. They are available in the severed forms, chips form, as a flour, oil, butter, or almond milk. Almonds are, in fact, seeds; they are a "grain" and are therefore not considered a true nut.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more