For Quick Alerts
ALLOW NOTIFICATIONS  
For Daily Alerts

ಪುರುಷರು ಹಾಗೂ ಮಹಿಳೆಯರಲ್ಲಿ ಕಂಡುಬರುವ ಬಂಜೆತನಕ್ಕೆ ಸಾಮಾನ್ಯ ಲಕ್ಷಣಗಳು

|

ಆಧುನಿಕ ಯುಗದಲ್ಲಿ ವಿವಾಹಿತ ಪುರುಷರು ಹಾಗೂ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಬಂಜೆತನ. ನಮ್ಮ ದೈನಂದಿನ ಚಟುವಟಿಕೆಗಳು, ಆಹಾರಕ್ರಮ ಹಾಗೂ ಸರಿಯಾದ ವ್ಯಾಯಾಮವಿಲ್ಲದೆ ಇರುವಂತಹ ಜೀವನಶೈಲಿಯಿಂದಾಗಿ ಬಂಜೆತನವು ಕಾಡುವುದು. ಇಷ್ಟು ಮಾತ್ರವಲ್ಲದೆ ಕೆಲವೊಂದು ಅಭ್ಯಾಸಗಳು ಕೂಡ ಇದಕ್ಕೆ ಕಾರಣವಾಗುತ್ತದೆ. ಅತಿಯಾದ ಧೂಮಪಾನ ಹಾಗೂ ಮದ್ಯಪಾನದಿಂದಲೂ ಬಂಜೆತನವು ಬರುವುದು. ಹೀಗಾಗಿ ವಿವಾಹಿತ ದಂಪತಿಗೆ ಸಂತಾನ ಭಾಗ್ಯವು ಕೈಗೆಟುಕದ ಹಣ್ಣಾಗಿರುವುದು. ಬಂಜೆತನ ಬರುವಂತಹ ಯಾವುದೇ ಲಕ್ಷಣಗಳು ಇಂತಹ ದಂಪತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ತಮಗೆ ಬಂಜೆತನ ಬರುವುದು ಎಂದು ಅವರು ಊಹಿಸಿಕೊಳ್ಳಲು ಆಗಲ್ಲ. ಯಾಕೆಂದರೆ ಗರ್ಭ ಧರಿಸಬೇಕೆಂದು ನಿರ್ಧರಿಸುವ ತನಕ ಅವರಿಗೆ ಇದು ಸಾಧ್ಯವಾಗಲ್ಲ. ಗರ್ಭ ಧರಿಸಬೇಕೆಂದು ಪ್ರಯತ್ನಿಸುತ್ತಾ ಇರುವಂತಹ ದಂಪತಿಯು ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯ. 35ರ ವರ್ಷ ದಾಟಿದ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುವುದು. ಈ ಲೇಖನದಲ್ಲಿ ಬಂಜೆತನದ ಕೆಲವೊಂದು ಲಕ್ಷಣಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ...

ಬಂಜೆತನದ ಲಕ್ಷಣಗಳು ಮತ್ತು ಚಿಹ್ನೆಗಳು

ಬಂಜೆತನದ ಲಕ್ಷಣಗಳು ಮತ್ತು ಚಿಹ್ನೆಗಳು

ಇತರ ಕೆಲವೊಂದು ಸಮಸ್ಯೆಗಳೊಂದಿಗೆ ಬಂಜೆತನದ ಲಕ್ಷಣಗಳು ಹಾಗೂ ಚಿಹ್ನೆಗಳು ಕಾಣಿಸಿಕೊಳ್ಳುವುದು. ಕ್ಲಮೈಡಿಯಾದಂತಹ ಸಮಸ್ಯೆಯು ಶ್ರೋಣಿಯ ಉರಿಯೂತ ಶಂಸ್ಯೆ(ಪಿಐಡಿ)ಗೆ ಕಾರಣವಾಗುವಂತಹ ಸಂಭವವು ಶೇ.10-15ರಷ್ಟಿದೆ. ಪಿಐಡಿಯಿಂದಾಗಿ ಪಾಲೋಪಿನ್ ಟ್ಯೂಬ್ ಗಳು ಬ್ಲಾಕ್ ಆಗುವುದು. ಇದರಿಂದಾಗಿ ಬಂಜೆತನ ಕಾಡುವುದು. ಹಲವಾರು ಪರಿಸ್ಥಿತಿಯಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನವು ಬರುವುದು. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಈ ಲಕ್ಷಣ ಹಾಗೂ ಚಿಹ್ನೆಗಳು ಭಿನ್ನವಾಗಿರುವುದು. ನಿಮಗೆ ಇದರ ಬಗ್ಗೆ ಚಿಂತೆಯಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತೀ ಅಗತ್ಯ. ಬಂಜೆತನದ ಸಾಮಾನ್ಯ ಲಕ್ಷಣಗಳು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ಲಕ್ಷಣಗಳು

 ಅನಿಯಮಿತ ಋತುಚಕ್ರ

ಅನಿಯಮಿತ ಋತುಚಕ್ರ

ಪ್ರತಿಯೊಬ್ಬ ಮಹಿಳೆಯ ಋತುಚಕ್ರದ ಆವರ್ತನವು 28 ದಿನಗಳಾಗಿರುವುದು. ಆದರೆ ಈ ಆವರ್ತನದ ಒಳಗಿನ ಕೆಲವು ದಿನಗಳ ಮೊದಲನ್ನು ಸಾಮಾನ್ಯವೆಂದು ಪರಿಗಣಿಸಲಾಗುವುದು. ಉದಾಹರಣೆಗೆ ಮಹಿಳೆಗೆ 33 ದಿನಗಳ ಆವರ್ತನ ಒಂದು ತಿಂಗಳು, 31 ದಿನಗಳ ಆವರ್ತನ ಮುಂದಿನ ತಿಂಗಳು ಮತ್ತು 35 ದಿನಗಳ ಆವರ್ತನ ಅದರ ಮುಂದಿನ ತಿಂಗಳು ಇದ್ದರೆ ಇದು ಸಾಮಾನ್ಯವೆಂದು ಪರಿಗಣಿಸಲಾಗುವುದು. ಆದರೆ ಕೆಲವು ಮಹಿಳೆಯರಲ್ಲಿ ಋತುಚಕ್ರದ ಆವರ್ತನವು ತುಂಬಾ ಭಿನ್ನವಾಗಿರುವುದು. ಯಾಕೆಂದರೆ ಅನಿಮಿತವಾಗಿರುವ ಋತುಚಕ್ರದಿಂದಾಗಿ ತನ್ನ ಋತುಚಕ್ರವು ಯಾವಾಗ ಬರುತ್ತದೆ ಎಂದು ಆಕೆಗೆ ತಿಳಿದಿರುವುದಿಲ್ಲ. ಇದು ಹಾರ್ಮೋನು ಸಮಸ್ಯೆ ಅಥವಾ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್(ಪಿಸಿಒಎಸ್) ನಿಂದ ಬರಬಹುದು. ಇವೆರಡರಿಂದ ಬಂಜೆತನವು ಬರುವುದು.

ನೋವಿನ ಋತುಚಕ್ರ

ನೋವಿನ ಋತುಚಕ್ರ

ಋತುಚಕ್ರದ ವೇಳೆ ಹೆಚ್ಚಿನ ಮಹಿಳೆಯರಲ್ಲಿ ಸ್ನಾಯು ಸೆಳೆತವು ಕಾಣಿಸುವುದು. ಆದರೆ ನೋವಿನ ಋತುಚಕ್ರವು ನಿಮ್ಮ ದೈನಂದಿಕ ಕೆಲಸಗಳಿಗೆ ಅಡ್ಡಿಯಾದರೆ ಇದನ್ನು ಎಂಡೋಮೆಟ್ರೋಸಿಸ್ ಲಕ್ಷಣವೆಂದು ಕರೆಯಲಾಗುವುದು.

ಋತುಚಕ್ರವಾಗದೆ ಇರುವುದು

ಋತುಚಕ್ರವಾಗದೆ ಇರುವುದು

ಮಹಿಳೆಯರಲ್ಲಿ ಕೆಲವೊಂದು ಸಲ ಋತುಚಕ್ರವಾಗದೆ ಇರುವುದು ಅಸಾಮಾನ್ಯವೇನಲ್ಲ. ಒತ್ತಡ ಅಥವಾ ಅತಿಯಾಗಿ ವ್ಯಾಯಾಮ ಮಾಡುವುದರಿಂದಲೂ ಕೆಲವೊಂದು ಸಲ ತಾತ್ಕಾಲಿಕವಾಗಿ ಋತುಚಕ್ರವು ಮಾಯವಾಗಬಹುದು. ಆದರೆ ತಿಂಗಳುಗಳ ಕಾಳ ನಿಮಗೆ ಋತುಚಕ್ರವು ಆಗದೆ ಇದ್ದರೆ ಆಗ ನೀವು ಫಲವತ್ತತೆ ಪರೀಕ್ಷಿಸಿಕೊಳ್ಳಿ.

Most Read:ಮೊದಲ ಸಲ ಸೆಕ್ಸ್ ನಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವೇ?

 ಹಾರ್ಮೋನು ವೈಪರಿತ್ಯ

ಹಾರ್ಮೋನು ವೈಪರಿತ್ಯ

ಹಾರ್ಮೋನು ವೈಪರಿತ್ಯದಿಂದಾಗಿ ಮಹಿಳೆಯರಲ್ಲಿ ಫಲವತ್ತತತೆ ಸಮಸ್ಯೆಯು ಕಾಣಿಸಿಕೊಳ್ಳುವುದು. ನಿಮಗೆ ಚರ್ಮದ ಸಮಸ್ಯೆ, ಲೈಂಗಿಕಾಸಕ್ತಿ ಕಡಿಮೆಯಾಗುವುದು, ಮುಖದಲ್ಲಿ ಕೂದಲಿನ ಬೆಳವಣಿಗೆ, ಕೂದಲು ತೆಳುವಾಗುವುದು, ತೂಕ ಹೆಚ್ಚಳದ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ.

ನೋವಿನ ಲೈಂಗಿಕ ಕ್ರಿಯೆ

ನೋವಿನ ಲೈಂಗಿಕ ಕ್ರಿಯೆ

ಕೆಲವು ಮಹಿಳೆಯರಿಗೆ ಲೈಂಗಿಕ ಕ್ರಿಯೆ ವೇಳೆ ನೋವು ಕಾಣಿಸಿಕೊಳ್ಳುವುದು. ಇದು ಸಾಮಾನ್ಯವೆಂದು ಅವರು ಭಾವಿಸಿರಬಹುದು. ಆದರೆ ಹಾಗಲ್ಲ, ಇದು ಹಾರ್ಮೋನು ಸಮಸ್ಯೆ, ಎಂಡೋಮೆಟ್ರೋಸಿಸ್ ಅಥವಾ ಇತರ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಿರಬಹುದು. ಪುರುಷರಲ್ಲಿ ಬಂಜೆತನ ಬರಲು ಸಾಮಾನ್ಯ ಕಾರಣಗಳು

Most Read:ಸೆಕ್ಸ್ ಬಳಿಕ ಪುರುಷರು ಧೂಮಪಾನ ಮಾಡುವುದು ಯಾಕೆ?

ಲೈಂಗಿಕಾಸ್ತಕ್ತಿ ಕುಗ್ಗುವುದು

ಲೈಂಗಿಕಾಸ್ತಕ್ತಿ ಕುಗ್ಗುವುದು

ಪುರುಷರ ಫಲವತ್ತತೆಯ ಮೇಲೆ ಹಾರ್ಮೋನು ಆರೋಗ್ಯವು ಪ್ರಮುಖ ಪಾತ್ರ ವಹಿಸುವುದು. ಹಾರ್ಮೋನುಗಳು ಫಲವತ್ತತೆ ಮೇಲೆ ಪ್ರಮುಖವಾಗಿ ಪರಿಣಾಮ ಬೀರುವುದು.

ವೃಷಣದ ನೋವು ಅಥವಾ ಊತ

ವೃಷಣದ ನೋವು ಅಥವಾ ಊತ

ಕೆಲವೊಂದು ರೀತಿಯ ಪರಿಸ್ಥಿತಿಯು ವೃಷಣದ ನೋವು ಅಥವಾ ಊತಕ್ಕೆ ಕಾರಣವಾಗಿರಬಹುದು. ಇದರಿಂದಾಗಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು.

ಉದ್ರೇಕದ ಸಮಸ್ಯೆ

ಉದ್ರೇಕದ ಸಮಸ್ಯೆ

ಹಾರ್ಮೋನುಗಳ ಮಟ್ಟದಿಂದಾಗಿ ಪುರುಷರಲ್ಲಿ ಉದ್ರೇಕದ ಗುಣಮಟ್ಟವನ್ನು ಕಾಪಾಡಲು ಸಾಧ್ಯವಾಗುವುದು. ಹಾರ್ಮೋನು ಕಡಿಮೆಯಾದರೆ ಅದರಿಂದ ಫಲವತ್ತತೆ ಮೇಲೆ ಪರಿಣಾಮ ಬೀರುವುದು.

Most Read:ಸೆಕ್ಸ್ ಬಗ್ಗೆ ಇರುವ ಇಂತಹ ವಿಚಿತ್ರ ಸತ್ಯಗಳು ನಿಮಗೆ ಗೊತ್ತಿರಲಾರವು !

ಸ್ಖಲನದ ಸಮಸ್ಯೆ

ಸ್ಖಲನದ ಸಮಸ್ಯೆ

ಸ್ಖಲನದ ಸಮಸ್ಯೆಯಿದ್ದರೆ ಆಗ ನೀವು ಹೋಗಿ ವೈದ್ಯರನ್ನು ಭೇಟಿಯಾಗಿ.

ಸಣ್ಣ, ಗಡುಸಾದ ವೃಷಣ

ಸಣ್ಣ, ಗಡುಸಾದ ವೃಷಣ

ವೃಷಣವು ಪುರುಷರಲ್ಲಿ ವೀರ್ಯವನ್ನು ಉತ್ಪತ್ತಿ ಮಾಡುವುದು. ಇದರಿಂದ ಪುರುಷರ ಫಲವತ್ತತೆ ಮೇಲೆ ವೃಷಣದ ಆರೋಗ್ಯವು ಪ್ರಮುಖ ಪಾತ್ರ ವಹಿಸುವುದು. ಸಣ್ಣ ಅಥವಾ ಗಡುಸಾದ ವೃಷಣವು ಫಲವತ್ತತೆ ಮೇಲೆ ಪರಿಣಾಮ ಬೀರಬಹುದು. ಇದರ ಬಗ್ಗೆ ವೈದ್ಯರಲ್ಲಿ ಮಾತನಾಡಿ.

ಕೊನೆಯ ಮಾತು

ಕೊನೆಯ ಮಾತು

ಮಗು ಪಡೆಯಲು ಬಯಸುವಂತಹ ಶೇ.15-20ರಷ್ಟು ದಂಪತಿಗೆ ಫಲವತ್ತತೆ ಸಮಸ್ಯೆಯು ಕಾಣಿಸುವುದು. ಹೆಚ್ಚಾಗಿ ಇದಕ್ಕೆ ಮಹಿಳೆಯರನ್ನೇ ದೂರಲಾಗುತ್ತದೆ. ಶೇ.40ರಷ್ಟು ಮಹಿಳೆಯರು ಮತ್ತು ಶೇ.30-40ರಷ್ಟು ಪುರುಷರು ಇದಕ್ಕೆ ಕಾರಣವಾಗುತ್ತಾರೆ. ಈ ಎರಡು ಜತೆಯಾಗಿಸಿಕೊಂಡು ಶೇ.20-30ರಷ್ಟು ಬಂಜೆತನವು ಕಾಣಿಸುವುದು. ನಿಮಗೆ ಬಂಜೆತನವು ಕಾಡುತ್ತಲಿದ್ದರೆ ಅಥವಾ ಭವಿಷ್ಯದಲ್ಲಿ ಬಂಜೆತನವು ಬರುವ ಭೀತಿಯಿದ್ದರೆ, ಆಗ ನೀವು ವೈದ್ಯರ ಸಲಹೆ ಪಡೆದುಕೊಳ್ಳುವುದು ಒಲಿತು. ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು. ನಿಮಗೆ ಬಂಜೆತನದ ಸಮಸ್ಯೆಯಿದ್ದರೂ ಗರ್ಭಧರಿಸುವ ಸಾಧ್ಯತೆಗಳು ಇರುವುದು.

English summary

Common Signs of Infertility in Men and Women

Like many people facing infertility, I was heartbroken by the news. I’d always believed I’d have a large family. The choices I found myself having to make in the years that followed, and the mounting agony of repeat in vitro fertilization (IVF) cycles, left me devastated. It’s common for couples to experience issues with infertility. Many of these couples have no symptoms. They don’t have any reason to suspect they may have infertility until they start trying to conceive.
X
Desktop Bottom Promotion