For Quick Alerts
ALLOW NOTIFICATIONS  
For Daily Alerts

ಕೃತಕ ಕುಂಕುಮ, ಇದು ಬಹಳ ಡೇಂಜರ್! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..

|

ಭಾರತೀಯ ಸಂಸ್ಕೃತಿಯಲ್ಲಿ ಹಣೆಯ ಮೇಲೆ ಕೆಂಪು ಕುಂಕುಮವನ್ನು ಧರಿಸಿಕೊಳ್ಳುವುದು ಭವ್ಯ ಪರಂಪರೆಯ ಒಂದು ಭಾಗವಾಗಿದ್ದು ಧಾರ್ಮಿಕ ಮಹತ್ವವನ್ನೂ ಪಡೆದಿದೆ. ಕುಂಕುಮದ ಬೊಟ್ಟು ಮಹಿಳೆಯರ ವೈವಾಹಿಕ ಸ್ಥಾನಮಾನವನ್ನೂ ಧಾರ್ಮಿಕ ಕಟ್ಟಳೆಯ ಪರಿಪಾಲನೆಯನ್ನೂ ಸಾವಿರಾರು ವರ್ಷಗಳಿಂದ ಸಾರುತ್ತಾ ಬಂದಿದೆ.

ಹಿಂದೂ ಪುರಾಣಗಳ ಪ್ರಕಾರ ಪತಿಯ ಉತ್ತಮ ಆರೋಗ್ಯ ಹಾಗೂ ಆಯಸ್ಸಿಗಾಗಿ ಪತ್ನಿ ತನ್ನ ಹಣೆ ಮತ್ತು ಬೈತಲೆಯಲ್ಲಿ ಕುಂಕುಮವನ್ನು ಧರಿಸುತ್ತಾಳೆ. ಆದರೆ ಸಂಸ್ಕೃತಿಗೂ ಮಿಗಿಲಾಗಿ ಈ ಅಟ್ಟದ ಮೇಲಿನ ಪುಟ್ಟಲಕ್ಷ್ಮಿಗೆ ಬೇರೇನಾದರೂ ಮಹತ್ವವಿದೆಯೇ? ಕುಂಕುಮದಿಂದ ಧಾರ್ಮಿಕ ಕಾರಣದ ಹೊರತಾಗಿಯೂ ಆರೋಗ್ಯವರ್ಧಕ ಕಾರಣಗಳಿವೆ ಹಾಗೂ ಹಣೆಯ ಮಧ್ಯೆ, ಎರಡೂ ಕಣ್ಣುಗಳ ನಡುವಣ ಭಾಗದಲ್ಲಿರುವ ಅಜ್ಞಚಕ್ರದ ಭಾಗದಲ್ಲಿ ಕೆಂಪು ಕುಂಕುಮದ ಇರುವಿಕೆಯಿಂದ ಕೆಲವಾರು ವಿಘ್ನಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಆದರೆ ಈ ಕುಂಕುಮ ಕೃತಕವಾಗಿದ್ದರೆ ಇದರಿಂದ ಒಳ್ಳೆಯದಾಗುವ ಬದಲು ಮಹಿಳೆಯ ಆರೋಗ್ಯವೇ ಬಾಧೆಗೊಳಗಾಗಬಹುದು....

ಕುಂಕುಮದ ಪರಂಪರೆ

ಕುಂಕುಮದ ಪರಂಪರೆ

ಸುಮಾರು ಐದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಭಾರತಖಂಡದಾದ್ಯಂತ ಕುಂಕುಮದ ಬಳಕೆ ವ್ಯಾಪಕವಾಗಿತ್ತು ಹಾಗೂ ಪೂಜೆಗಳಲ್ಲಿಯೂ ಬಳಸಲಾಗುತ್ತಿತ್ತು. ಪುರಾಣಗಳಲ್ಲಿ, ಲಲಿತ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಗಳಲ್ಲಿಯೂ ಕುಂಕುಮದ ಉಲ್ಲೇಖವಿದ್ದು ಇಂದಿಗೂ ಈ ಪರಂಪರೆ ಮುಂದುವರೆಯುತ್ತಾ ಬಂದಿದೆ.

ಇದು ಕೇವಲ ಸಂಸ್ಕೃತಿ ಮಾತ್ರವೇ?

ಇದು ಕೇವಲ ಸಂಸ್ಕೃತಿ ಮಾತ್ರವೇ?

ಕುಂಕುಮವನ್ನು ಧರಿಸುವುದು ಕೇವಲ ಸಂಸ್ಕೃತಿ ಮಾತ್ರವೇ ಅಥವಾ ಇದಕ್ಕೆ ವೈಜ್ಞಾನಿಕವಾದ ಮಹತ್ವವೇನಾದರೂ ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಜ್ಞಾನಿಗಳ ಪ್ರಕಾರ ಕುಂಕುಮ ಮಹಿಳಾ ಶಕ್ತಿಯ ಸಂಕೇತವಾಗಿದ್ದು ಇದು ಕೇವರ ಸಂಸ್ಕೃತಿಯ ಭಾಗ ಮಾತ್ರವಲ್ಲದೇ ಉತ್ತಮ ಆರೋಗ್ಯವನ್ನು ಪ್ರಚೋದಿಸುವ ವಿಧಾನವೂ ಆಗಿದೆ.

ಕುಂಕುಮದ ಆರೋಗ್ಯಕರ ಪ್ರಯೋಜನಗಳು

ಕುಂಕುಮದ ಆರೋಗ್ಯಕರ ಪ್ರಯೋಜನಗಳು

ಕುಂಕುಮ ತಯಾರಿಸಬೇಕಾದರೆ ಅರಿಶಿನ ಮತ್ತು ಸುಣ್ಣ ಮುಖ್ಯವಾಗಿ ಅಗತ್ಯವಿದ್ದು ಇದರೊಂದಿಗೆ ಇತರ ಗಿಡಮೂಲಿಕೆಗಳನ್ನೂ ಬಳಸಲಾಗುತ್ತದೆ. ಅರಿಶಿನದ ಆರೋಗ್ಯಕರ ಗುಣಗಳು ಮಾನಸಿಕ ಒತ್ತಡದಿಂದ ಸಡಿಲಗೊಳ್ಳಲು ನೆರವಾಗುತ್ತವೆ. ಅಲ್ಲದೇ ಮೆದುಳನ್ನು ಸದಾ ಸಕ್ರಿಯ ಮತ್ತು ಜಾಗೃತ ಸ್ಥಿತಿಯಲ್ಲಿರಿಸಲೂ ನೆರವಾಗುತ್ತದೆ.

ಜ್ಯೋತಿಶಾಸ್ತ್ರಜ್ಞರ ಪ್ರಕಾರ ಕುಂಕುಮದ ಪ್ರಯೋಜನಗಳು

ಜ್ಯೋತಿಶಾಸ್ತ್ರಜ್ಞರ ಪ್ರಕಾರ ಕುಂಕುಮದ ಪ್ರಯೋಜನಗಳು

ನಮ್ಮ ದೇಹದ ಹಲವು ಭಾಗಗಳಲ್ಲಿ ವರ್ಷದ ಹನ್ನೆರಡು ರಾಶಿಗಳಿಗೆ ಪ್ರತೀಕವಾದ ಸ್ಥಾನಗಳಿದ್ದು ಇವುಗಳನ್ನು ಚಕ್ರಗಳೆಂದು ಕರೆಯುತ್ತಾರೆ. ಜ್ಯೋತಿಶಾಸ್ತ್ರಜ್ಞರ ಪ್ರಕಾರ ಮೇಶ ರಾಶಿಗೆ ಸಂಬಂಧಿಸಿದ ಚಕ್ರ ಹಣೆಯ ನಡುವಣ ಭಾಗದಲ್ಲಿದೆ. ಕೆಂಪು ಬಣ್ಣದ ಮಂಗಳ ಗ್ರಹ ಮೇಶರಾಶಿಯ ಅಧಿಪತಿಯಾಗಿದ್ದು ಈ ಭಾಗದಲ್ಲಿ ಕುಂಕುಮವನ್ನು ಧರಿಸುವುದು ಪವಿತ್ರವಾಗಿದೆ ಹಾಗೂ ಈ ಮೂಲಕ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಹಾಗೂ ಜೀವನ ಸುಖಕರವಾಗಿರುತ್ತದೆ.

ಕುಂಕುಮದ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

ಕುಂಕುಮದ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

ಕುಂಕುಮ ತಯಾರಿಸಬೇಕಾದರೆ ಅರಿಶಿನ ಮತ್ತು ಸುಣ್ಣ ಮುಖ್ಯವಾಗಿ ಅಗತ್ಯವಿದ್ದು ಇದರೊಂದಿಗೆ ಬೆರೆಸುವ ಇತರ ಗಿಡಮೂಲಿಕೆಗಳು ಆರೋಗ್ಯಕರ ಗುಣಗಳನ್ನು ಹೊಂದಿದ್ದು ಇವು ವಾಸ್ತವದಲ್ಲಿ ಆರೋಗ್ಯವನ್ನು ವೃದ್ದಿಸುತ್ತವೆ. ಆದರೆ ಇಂದು ಲಾಭವೇ ಮುಖ್ಯವಾಗಿರುವ ವ್ಯಾಪಾರಿಮಯ ಜಗತ್ತಿನಲ್ಲಿ ಕುಂಕುಮವನ್ನು ಕೃತಕವಾಗಿ ಸೀಸ, ಪಾದರಸಗಳನ್ನು ಬಳಸಿ ಇತರ ಕೃತಕ ರಾಸಾಯನಿಕಗಳೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಇವು ನೋಡಲು ಅಪ್ಪಟ ಹೊಳೆಹೊಳೆಯುವ ಕೆಂಪು ಬಂಗಾರದ ಪುಡಿಯಂತೆ ಕಂಗೊಳಿಸುತ್ತಿರುತ್ತದೆ. ಆದರೆ ಈ ಕುಂಕುಮ ನೋಡಲಷ್ಟೇ ಚೆನ್ನವೇ ಹೊರತು ಇದನ್ನು ಧರಿಸುವುದರಿಂದ ಕೆಲವಾರು ಅಪಾಯಗಳನ್ನು ಆಹ್ವಾನಿಸಿದಂತಾಗುತ್ತದೆ.

ಇದು ಅಲರ್ಜಿ ಮತ್ತು ಚರ್ಮದಲ್ಲಿ ಘಾಸಿಯುಂಟುಮಾಡಬಹುದು

ಇದು ಅಲರ್ಜಿ ಮತ್ತು ಚರ್ಮದಲ್ಲಿ ಘಾಸಿಯುಂಟುಮಾಡಬಹುದು

ಈ ಪುಡಿಯಲ್ಲಿರುವ ಕೆಲವು ರಾಸಾಯನಿಕಗಳು ಕೂದಲಿನ ಉದುರುವಿಕೆ, ಚರ್ಮ ದೊರಗಾಗುವುದು, ಕೆಂಪು ಗುಳ್ಳೆಗಳೇಳುವುದು ಮತ್ತು ತುರಿಕೆಯನ್ನುಂಟುಮಾಡಬಹುದು. ಅಲ್ಲದೇ ಇದರಲ್ಲಿರುವ ಪ್ರಮುಖ ರಾಸಾಯನಿಕವಾದ ಪಾದರಸದ ಸಲ್ಫೈಟ್ (mercury sulphite) ಚರ್ಮದ ಕ್ಯಾನ್ಸರ್ ಎದುರಾಗಲೂ ಕಾರಣವಾಗಬಹುದು.

ಮೂತ್ರಪಿಂಡ ಮತ್ತು ಮೆದುಳಿನ ಮೇಲಾಗುವ ಪ್ರಭಾವ

ಮೂತ್ರಪಿಂಡ ಮತ್ತು ಮೆದುಳಿನ ಮೇಲಾಗುವ ಪ್ರಭಾವ

ಒಂದು ವೇಳೆ ಊಟಮಾಡುವಾಗ ಅಥವಾ ನೀರು ಕುಡಿಯುವಾಗ ಚಿಟಿಕೆಯಷ್ಟು ಈ ಕುಂಕುಮದ ಪುಡಿಯೇನಾದರೂ ಬಿದ್ದು ಹೊಟ್ಟೆ ಸೇರಿದರೆ ಅಥವಾ ಇದರ ಸೂಕ್ಷ್ಮ ಪುಡಿ ಉದುರಿ ಉಸಿರಿನೊಂದಿಗೆ ಶ್ವಾಸಕೋಶಗಳನ್ನು ಸೇರಿದರೆ ಇದರ ಪ್ರಭಾವ ಜೀರ್ಣಕ್ರಿಯೆಯ ಮೇಲೆ ಆಗುವ ಹೊರತಾಗಿ ಮೂತ್ರಪಿಂಡಗಳು ಮತ್ತು ಮೆದುಳಿನ ಮೇಲೂ ಪ್ರಭಾವ ಉಂಟಾಗಬಹುದು.

ಅಧ್ಯಾಯನದ ಪ್ರಕಾರ

ಅಧ್ಯಾಯನದ ಪ್ರಕಾರ

American Journal of Public Health ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಂಶೋಧಕರು ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ಸಂಗ್ರಹಿಸಲಾದ ಕುಂಕುಮದ ಮಾದರಿಗಳಲ್ಲಿ 83 ಶೇಖಡಾ ಹಾಗೂ ಭಾರತದ ವಿವಿಧ ನಗರಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ 78 ಶೇಖಡಾದಷ್ಟು ಮಾದರಿಗಳಲ್ಲಿ ಪ್ರತಿ ಗ್ರಾಂ ಕುಂಕುಮದಲ್ಲಿ ಕನಿಷ್ಠ 1.0 ಮೈಕ್ರೋಗ್ರಾಂ ಸೀಸ ಕಂಡುಬಂದಿದೆ. ಇವುಗಳಲ್ಲಿ ಮೂರನೆಯ ಒಂದರದಷ್ಟು ಮಾದರಿಗಳಲ್ಲಂತೂ ಪ್ರತಿ ಗ್ರಾಂನಲ್ಲಿ ಇಪ್ಪತ್ತು ಮೈಕ್ರೋಗ್ರಾಂನಷ್ಟು ಆಗಾಧ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ವಿಪರ್ಯಾಸವೆಂದರೆ ಅಮೇರಿಕಾದ ಆಹಾರ ಮತ್ತು ಔಷಧಿ ನಿರ್ದೇಶನಾಯಲ US Food and Drug Administration (FDA) ನಿಗದಿಪಡಿಸಿರುವಂತೆ ಈ ಪ್ರಮಾಣ ಇಪ್ಪತ್ತು ಮೈಕ್ರೋಗ್ರಾಂ ಮೀರಬಾರದು. ಆ ಲೆಕ್ಕದಲ್ಲಿ ಈ ಕುಂಕುಮ ಸುರಕ್ಷಿತ.

ಇತರ ಆರೋಗ್ಯ ಸಂಬಂಧಿ ಅಪಾಯಗಳು

ಇತರ ಆರೋಗ್ಯ ಸಂಬಂಧಿ ಅಪಾಯಗಳು

ಕೃತಕ ಕುಂಕುಮ ತಯಾರಿಸುವಾಗ ಬೆರೆಸುವ ಇತರ ರಾಸಾಯನಿಕ ಪುಡಿಗಳಾದ ಸೀಸದ ಪುಡಿ, ಕೃತಕ ಬಣ್ಣ, ಇತರ ಬಣ್ಣನೀಡುವ ರಾಸಾಯನಿಕಗಳು, ಪಾದರಸದ ಸಲ್ಫೈಟ್, ಮತ್ತು ಕೆಂಪು ಬಣ್ಣ ಗಾಢವಾಗಿಸಲು ಬಳಸುವ rhodamine B ಎಂಬ ಕೃತಕ ಬಣ್ಣ ಅನುವಂಶಿಕ ಗುಣಗಳನ್ನೇ ಬದಲಿಸಿಬಿಡುವಷ್ಟು ಪ್ರಬಲವಾಗಿವೆ. ಈ ಕುಂಕುಮದ ಪುಡಿ ತಲೆಕೂದಲಿಗೆ ನವಿರಾಗಿ ತಗಲಿದರೂ ಸಾಕು, ನೆತ್ತಿಯ ಚರ್ಮದಲ್ಲಿ ತುರಿಕೆ, ತಲೆಹೊಟ್ಟು ಮೊದಲಾದವು ಎದುರಾಗಲು ಕಾರಣವಾಗುತ್ತವೆ. ಕೆಲವು ಧೂರ್ತ ಕುಂಕುಮ ಉತ್ಪಾದಕರಂತೂ ಈ ಬಣ್ಣ ಹೊಳೆಹೊಳೆಯುವಂತಾಗಲು ಸೀಸದ ಟೆಟ್ರಾಕ್ಸೈಡ್ (lead tetroxide) ಎಂಬ ಅಪಾಯಕಾರಿ ರಾಸಾಯನಿಕವನ್ನು ಬಳಸುತ್ತಾರೆ. ಸೀಸದ ಬಳಕೆ ಇರಲೇಕೂಡದು ಎಂಬ ಕಾನೂನಿನ ಪ್ರಕಾರ ಪೆಟ್ರೋಲನ್ನೂ ಸೀಸರಹಿತವಾಗಿ (unleaded) ಪೂರೈಸುತ್ತಿರುವಾಗ ಈ ಅಪಾಯಕಾರಿ ಸೀಸವನ್ನು ಬಳಸಿ ತಯಾರಿಸಿದ ಕುಂಕುಮವನ್ನು ನಾವೇ ಕೈಯಾರೆ ಹಣೆ ಮತ್ತು ತಲೆಗೆ ಹಚ್ಚಿಕೊಂಡರೆ? ಆದ್ದರಿಂದ ಕುಂಕುಮವನ್ನು ಖರೀದಿಸುವಾಗ ಇದರ ಬಣ್ಣಕ್ಕೆ ಮನಸೋಲದೇ ಕೇವಲ ಗ್ರಂಥಿಗೆ ಅಂಗಡಿಗಳಿಂದ ಅಪ್ಪಟವಾದ ಕುಂಕುಮವನ್ನು ಮಾತ್ರವೇ ಖರೀದಿಸಬೇಕು.

English summary

Commercial sindoor can put you risk of these health conditions!

Putting sindoor or vermilion by Indian women holds a great significance in Indian society. As it symbolizes a woman’s marital status, this auspicious tradition is being carried on since ages. According to Hindu mythology, sindoor must be applied by a married woman for her husband’s good health and longevity. But, is there anything more to this tradition? As is often the case, traditions root themselves in logic, and it appears that even the seemingly neutral sindoor can affect a woman's health.
Story first published: Friday, August 24, 2018, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more