For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ಸಮಸ್ಯೆ ಇದೆಯೇ? ಹಾಗಾದರೆ ಎರಡು ಲವಂಗಗಳನ್ನು ಚೆನ್ನಾಗಿ ಜಗಿಯಿರಿ!

|

ಎಂದಾದರೊಮ್ಮೆ ನೀವು ಖಾಲಿ ಹೊಟ್ಟೆಯಲ್ಲಿ ಟೀ ಕುಡಿದಿರಬಹುದು ಅಥವಾ ಸ್ವಾದಿಷ್ಟ ಊಟವೆಂದು ಕೊಂಚ ಹೆಚ್ಚೇ ಆಹಾರ ಸೇವಿಸಿರಬಹುದು, ಆದರೆ ಆ ಬಳಿಕ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡು ಇದು ಬೇಡವಿತ್ತು ಎಂದು ಮಾತ್ರ ಅನ್ನಿಸದೇ ಇದ್ದಿರಲಾರದು. ಈ ಉರಿ ಹೆಚ್ಚುತ್ತಾ ಹುಳಿತೇಗು ಮತ್ತು ಎದೆಯುರಿಗೂ ಕಾರಣವಾಗಬಹುದು. ಒಂದಲ್ಲಾ ಒಂದು ಬಾರಿ ಪ್ರತಿಯೊಬ್ಬರೂ ಈ ಉರಿಯನ್ನು ಅನುಭವಿಸಿಯೇ ಇದ್ದೇವೆ. ವಿಶೇಷವಾಗಿ ಖಾರವಾದ ಆಹಾರಗಳ ಸೇವನೆ, ಅನಿಯಮಿತ ಅಹಾರದ ಸೇವನೆಯ ಸಮಯ, ಮಾನಸಿಕ ಒತ್ತಡ, ಕಡಿಮೆ ದೈಹಿಕ ವ್ಯಾಯಾಮ, ಮದ್ಯಪಾನ ಮೊದಲಾದವು ಹೊಟ್ಟೆಯಲ್ಲಿ ಆಮ್ಲೀಯತೆ ಅಥವಾ ಅಸಿಡಿಟಿಯನ್ನುಂಟು ಮಾಡುತ್ತವೆ.

ಹೊಟ್ಟೆಯಲ್ಲಿರುವ ಜಠರರಸ ಅಥವಾ ಪಿತ್ತರಸ ಹಿಮ್ಮುಖವಾಗಿ, ಅಂದರೆ ಹೊಟ್ಟೆಯಿಂದ ಅನ್ನನಾಳದ ಮೂಲಕ ಬಾಯಿಯಿಂದ ಹೊರಬರಲು ಯತ್ನಿಸುವಾಗ ಅನ್ನನಾಳದ ಒಳಪದರದಲ್ಲಿ ಭಾರಿ ಉರಿಯುಂಟುಮಾಡುತ್ತದೆ. ಇದೇ ಹುಳಿತೇಗು ಅಥವಾ ಅಸಿಡಿಟಿ . ಈ ಉರಿಯನ್ನು ಕಡಿಮೆ ಮಾಡಲು ಕೆಲವಾರು ಔಷಧಿಗಳಿವೆ. ಇವುಗಳಲ್ಲಿ ಕೆಲವು ನೈಸರ್ಗಿಕವಾಗಿದ್ದು ಉರಿ ಪ್ರಾರಂಭವಾದ ತಕ್ಷಣವೇ ಸೇವಿಸುವ ಮೂಲಕ ಉರಿಯನ್ನು ತಕ್ಷಣವೇ ತಗ್ಗಿಸುತ್ತದೆ. ತುಳಸಿ ಎಲೆ, ದಾಲ್ಚಿನ್ನಿ, ಮಜ್ಜಿಗೆ, ಸೇಬಿನ ಶಿರ್ಕಾ, ಜೀರಿಗೆ ಹಾಗೂ ಲವಂಗದಲ್ಲಿ ಈ ಉರಿಯನ್ನು ತಗ್ಗಿಸುವ ಗುಣವಿದೆ. ಇವುಗಳಲ್ಲಿ ಲವಂಗ ಅತ್ಯುತ್ತಮ ಪರಿಹಾರ ಒದಗಿಸುವ ಮೂಲಕ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತದೆ. ಬನ್ನಿ, ಲವಂಗದ ಬಳಕೆ ಹೇಗೆ ಹಾಗೂ ಇತರ ಮಾಹಿತಿಗಳನ್ನು ನೋಡೋಣ....

Cloves

ಆಮ್ಲೀಯತೆ ಎಂದರೇನು? ಇದರ ಲಕ್ಷಣಗಳೇನು?

ನಾವು ಸೇವಿಸುವ ಅಹಾರ ಬಾಯಿಯಲ್ಲಿ ಲಾಲಾರಸದೊಡನೆ ಮೆದುಗೊಂಡು ಕೊಂಚ ಮಟ್ಟಿನ ಜೀರ್ಣವಾಗುತ್ತದೆ ಹಾಗೂ ಅರೆದು ನುಂಗುವ ಮೂಲಕ ಆಹಾರವನ್ನು ಚಿಕ್ಕ ಕಣಗಳಾಗಿ ಒಡೆದು ಅನ್ನನಾಳದ ಮೂಲಕ ಈ ಆಹಾರ ಹೊಟ್ಟೆಯನ್ನು ತಲುಪುತ್ತದೆ. ಹೊಟ್ಟೆಯಲ್ಲಿರುವ ಆಮ್ಲಗ್ರಂಥಿಗಳು ಅಗತ್ಯವಿರುವ ಆಮ್ಲವನ್ನು ಸ್ರವಿಸಿ ಆಮ್ಲೀಯ ಜಠರರಸವನ್ನು ಉತ್ಪಾದಿಸುತ್ತವೆ ಹಾಗೂ ಆಹಾರವನ್ನು ಕರಗಿಸಿಕೊಳ್ಳಲು ಪ್ರಾರಂಭಿಸುತ್ತದೆ. ಯಾವಾಗ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಮ್ಲ ಉತ್ಪಾದನೆಯಾಯ್ತೋ ಆಗ ಹೊಟ್ಟೆಯಲ್ಲಿರುವ ದ್ರವಾಹಾರ ಹೆಚ್ಚು ಆಮ್ಲೀಯವಾಗುತ್ತದೆ ಹಾಗೂ ಈ ಆಮ್ಲೀಯತೆ ಹೊಟ್ಟೆಯ ಒಳಪದರವನ್ನೇ ಸುಡುವ ಮೂಲಕ ಹೊಟ್ಟೆಯ ಕೊಂಚ ಮೇಲ್ಭಗದಲ್ಲಿ ಭಾರೀ ಉರಿಯನ್ನುಂಟುಮಾಡುತ್ತದೆ. ಭಾರತದಲ್ಲಿ ಹೆಚ್ಚಿನ ಜನರು ಮಸಾಲೆ ಹಾಗೂ ಎಣ್ಣೆಗಳನ್ನೊಳಗೊಂಡ ಆಹಾರವನ್ನು ಸೇವಿಸುವ ಕಾರಣ ಈ ಉರಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಹೊಟ್ಟೆಯುರಿ ಪ್ರಾರಂಭವಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಕ್ಷಣವೇ ಇದಕ್ಕೆ ಸೂಕ್ತ ಔಷಧಿಯನ್ನು ಸೇವಿಸುವ ಮೂಲಕ ಈ ಉರಿ ಉಲ್ಬಣಗೊಳ್ಳದಂತೆ ತಡೆಗಟ್ಟಬಹುದು.

*ಹೊಟ್ಟೆಯ ಮೇಲ್ಭಗದಲ್ಲಿ ಭಾರೀ ಉರಿ ಗಂಟಲು ಮತ್ತು ಹೃದಯದ ಭಾಗದಲ್ಲಿ ಉರಿ ಕಾಣಿಸಿಕೊಳ್ಳುವುದು

*ಉಸಿರು ದುರ್ವಾಸನೆಯಿಂದ ಕೂಡಿರುವುದು

*ಅಜೀರ್ಣತೆ ಬಾಯಿಯಲ್ಲಿ ಕಹಿಯಾದ ರುಚಿ ಇದ್ದಂತೆ ಆವರಿಸಿ ಹೆಚ್ಚು ಹೊತ್ತು ಕಹಿಭಾವನೆ ಇರುವುದು

*ವಾಕರಿಕೆ

*ಮಲಬದ್ದತೆ

ಆಮ್ಲೀಯತೆಯಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ?

ಆಹಾರ ಶಾಸ್ತ್ರಜ್ಞೆ ಹಾಗೂ ಆರೋಗ್ಯಕರ ಆಹಾರ ತಜ್ಞೆಯಾದ ಶಿಲ್ಪಾ ಅರೋರಾರವರ ಪ್ರಕಾರ "ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಸಾರು ಮತ್ತು ಪಲ್ಯಗಳಲ್ಲಿ ಲವಂಗವನ್ನು ಸೇರಿಸುವ ಮೂಲಕ ಹೊಟ್ಟೆಯಲ್ಲಿ ಉರಿಯಾಗುವುದರಿಂದ ತಡೆಯಬಹುದು. ಇನ್ನೂ ಉತ್ತಮವೆಂದರೆ ಸಮಪ್ರಮಾಣದಲ್ಲಿ ಲವಂಗ ಮತ್ತು ಏಲಕ್ಕಿಗಳನ್ನು ಸೇರಿಸುವುದರಿಂದ ಅತ್ಯುತ್ತಮ ರಕ್ಷಣೆ ಪಡೆಯಬಹುದು. ಇವುಗಳ ಸಾರಸಂಗ್ರಹಿ ಗುಣ ಆಮ್ಲೀಯತೆಯನ್ನು ಕಡಿಮೆಮಾಡಿ ವಾಯು ಉತ್ಪತ್ತಿಯಾಗುವುದರಿಂದ ತಡೆಯುತ್ತದೆ. ಅಲ್ಲದೇ ಲವಂಗ ಬಾಯಿಯಲ್ಲಿ ಹೆಚ್ಚಿನ ಪ್ರಮಾಣದ ಲಾಲಾರಸ ಉತ್ಪಾದನೆಯಾಗುವಂತೆ ಪ್ರಚೋದನೆ ನೀಡುತ್ತದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಎದುರಾಗುವ ಸ್ನಾಯುಗಳ ಸೆಡೆತವಾಗುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಲವಂಗವನ್ನು ಜಗಿದು ನುಂಗುವುದನ್ನು ಆಯುರ್ವೇದ ಹಾಗೂ ಸಿದ್ದ ಪದ್ದತಿಗಳಲ್ಲಿ ಚಿಕಿತ್ಸೆಯ ರೂಪದಲ್ಲಿ ಬಳಸಿಕೊಳ್ಳಲಾಗಿದೆ.

Cloves

ಆಮ್ಲೀಯತೆಯಿಂದ ತಡೆಗಟ್ಟಲು ಲವಂಗವನ್ನು ಹೇಗೆ ಬಳಸಬೇಕು?

ಹೊಟ್ಟೆಯಲ್ಲಿ ಕೊಂಚವೇ ಉರಿ ಪ್ರಾರಂಭವಾಗಿರುವುದು ಕಾಣಿಸಿಕೊಂಡಾಕ್ಷಣ ಎರಡು ಲವಂಗಗಳನ್ನು ಬಾಯಿಗೆ ಹಾಕಿ ಚೆನ್ನಾಗಿ ಅಗಿಯಬೇಕು. ಈಗ ಬಾಯಿಯಲ್ಲಿ ಹೆಚ್ಚಿದ ಲಾಲಾರಸವನ್ನು ಪೂರ್ಣವಾಗಿ ನುಂಗಬೇಕು. ಇದರಿಂದ ಉರಿ ತಕ್ಷಣವೇ ಕಡಿಮೆಯಾಗುತ್ತದೆ. ಇನ್ನೂ ಉತ್ತಮವೆಂದರೆ ಎರಡು ಲವಂಗ ಮತ್ತು ಎರಡು ಏಲಕ್ಕಿಗಳನ್ನು ಚೆನ್ನಾಗಿ ಜಗಿದು ನುಂಗುವ ಮೂಲಕ ಆಮ್ಲೀಯತೆ ಮಾತ್ರವಲ್ಲ, ಬಾಯಿಯಲ್ಲಿ ಎದುರಾಗಿದ್ದ ದುರ್ವಾಸನೆಯೂ ಇಲ್ಲವಾಗುತ್ತದೆ. ಹಾಗಾಗಿ ನಮ್ಮ ಅಡುಗೆಗಳಲ್ಲಿ ಒಂದೆರಡು ಲವಂಗ ಮತ್ತು ಏಲಕ್ಕಿಗಳನ್ನು ಸೇರಿಸುವುದರಿಂದ ಊಟದ ಬಳಿಕ ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ.

English summary

Cloves For Acidity: Try these for quick relief

There are times when you've had tea on an empty stomach or had a hearty meal and felt a burn in your tummy, which further results in heartburn and acid reflux - we all have faced the problem at some point. Eating spicy foods, irregular eating habits, stress, lesser physical activity and drinking alcohol may cause acidity. It happens when stomach acid or bile flows in your food pipe and irritates the lining, causing an irritating discomfort and pain.
Story first published: Friday, August 10, 2018, 21:18 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more