ಮನೆ ಔಷಧ: ಗಂಟಲ ಕಿರಿಕಿರಿ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಪರಿಹಾರ

Posted By: Arshad
Subscribe to Boldsky

ಸಾಮಾನ್ಯ ಶೀತ ಅಥವಾ ಫ್ಲೂ ಪರಿಣಾಮವಾಗಿ ಗಂಟಲಬೇನೆಯೂ ಆವರಿಸಿಕೊಳ್ಳುತ್ತದೆ. ಕೆಲವು ಇತರ ಅನಾರೋಗ್ಯಗಳಿಂದಲೂ ಗಂಟಲಬೇನೆ ಎದುರಾಗಬಹುದು. ಗಂಟಲ ಒಳಭಾಗದಲ್ಲಿರುವ ತೇವವಿರುವ ಅಂಗಗಳ ಮೇಲೆ ಬ್ಯಾಕ್ಟೀರಿಯಾ ಅಥವಾ ವೈರಸ್ಸು ಬೀಡು ಬಿಡುತ್ತದೆ ಹಾಗೂ ಈ ತೇವವಿರುವಲ್ಲಿ ತಮ್ಮ ಸಂಖ್ಯೆಯನ್ನು ಅಪಾರವಾಗಿ ವೃದ್ದಿಸಿಕೊಂಡು ಸೋಂಕು ಉಂಟುಮಾಡುತ್ತವೆ. ಗಂಟಲ ಒಳಭಾಗ, ಮೂಗಿನ ಮೇಲ್ಭಾಗ, ಶ್ವಾಸನಾಳ ಮೊದಲಾದ ತೇವವಿರುವ ಭಾಗವೆಲ್ಲಾ ಈ ಸೋಂಕಿನಿಂದ ಉರಿಯೂತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ತೇವವಾಗಿರಬೇಕಾಗಿದ್ದ ಗಂಟಲ ಒಣಭಾಗ ಶುಷ್ಕವಾಗುವುದು, ಗಂಟಲ ಕೆರೆತ, ನೋವು, ಉರಿ, ಆಹಾರ ನುಂಗಲು ಕಷ್ಟವಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಸಾಮಾನ್ಯವಾಗಿ ಜ್ವರ ಬಂದಾಗ ಗಂಟಲಬೇನೆ ಎದುರಾಗುತ್ತದೆಯೋ ಅಥವಾ ಇದಕ್ಕೆ ತದ್ವಿರುದ್ದವೋ ಹೇಳಲು ಬರುವುದಿಲ್ಲ. ಈ ಸೋಂಕು ವೈರಸ್ಸು ಗಳ ಹೊರತಾಗಿ ಸೂಕ್ಷ್ಮಜೀವಿಗಳಿಂದಲೂ ಆಗಮಿಸಬಹುದು. ಹಾಗಾಗಿ ವೈದ್ಯರು ಇವೆರಡಕ್ಕೂ ಮದ್ದು ನೀಡುತ್ತಾರೆ. ಒಂದು ವೇಳೆ ಈ ನೋವು ತುಂಬಾ ಕಾಲದಿಂದ ನಿಮಗೆ ಕಾಟ ಕೊಡುತ್ತಿದ್ದರೆ ಇದರ ಪರಿಣಾಮ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗೆ ಟಾನ್ಸಿಲೈಟಿಸ್, ಕೆಲವು ಲೈಂಗಿಕ ರೋಗಗಳು ಅಥವಾ ಕ್ಯಾನ್ಸರ್ ನ ಪ್ರಾರಂಭಕ್ಕೂ ಕಾರಣವಾಗಬಹುದು. ಹಾಗಾಗಿ ಈ ಪರಿಸ್ಥಿತಿಯನ್ನು ಇನ್ನೂ ಮುಂದುವರೆಸದೇ ತಕ್ಷಣವೇ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಔಷಧಿಗಳ ಜೊತೆಗೇ ಕೆಲವು ಗಂಟಲನ್ನು ಸ್ವಚ್ಛಗೊಳಿಸುವ ದ್ರವಗಳನ್ನು ಗಳಗಳ ಮಾಡುವ ಮೂಲಕವೂ ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಬಹುದು. ಒಂದು ವೇಳೆ ನಿಮಗೆ ಎದುರಾಗ ಗಂಟಲಬೇನೆ ಸೂಕ್ಷ್ಮಜೀವಿಗಳಿಂದ ಎಂದು ತಿಳಿದುಬಂದರೆ, ಇದನ್ನು ಪರಿಹರಿಸಲು ಕೆಳಗೆ ವಿವರಿಸಿರುವ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು:

೧) ಉಪ್ಪು ನೀರಿನ ಗಳಗಳ:

೧) ಉಪ್ಪು ನೀರಿನ ಗಳಗಳ:

ಗಂಟಲಬೇನೆ ಎದುರಾದ ಬಳಿಕ ತಕ್ಷಣವೇ ಅನುಸರಿಸಬೇಕಾದ ಈ ವಿಧಾನಕ್ಕಿಂತ ಸುಲಭವಾದದ್ದು ಇನ್ನಾವುದೂಇಲ್ಲ. ಈ ವಿಧಾನವನ್ನು ಬಲು ಪ್ರಾಚೀನ ಕಾಲದಿಂದಲೇ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಒಂದರಿಂದ ಎರಡು ದೊಡ್ಡ ಚಮಚ ಉಪ್ಪನ್ನು ಉಗುರುಬೆಚ್ಚನೆನ ನೀರಿನಲ್ಲಿ (ಅಥವಾ ನಿಮಗೆ ಸಹಿಸಲು ಸಾಧ್ಯವಾಗುವಷ್ಟು ಬಿಸಿಯಾಗಿರುವ ) ನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗಾದರೂ ಗಳಗಳ ಮಾಡುವ ಮೂಲಕ ಗಂಟಲ ಬೇನೆ ಕಡಿಮೆ ಮಾಡಬಹುದು. ಉಪ್ಪಿನ ಆವರಣದಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳು ಜೀವಂತ ಉಳಿಯುವುದಿರುವುದೇ ಇದರ ಗುಟ್ಟು.

ಹಸಿಶುಂಠಿಯ ನೀರು:

ಹಸಿಶುಂಠಿಯ ನೀರು:

ಈ ನೀರಿನಿಂದ ಗಳಗಳ ಮಾಡುವ ಮೂಲಕವೂ ಸೂಕ್ಷ್ಮಜೀವಿಗಳನ್ನು ಕೊಂದು ಉರಿಯೂತ ನಿವಾರಿಸಿ ಗಂಟಲಬೇನೆಯಿಂದ ಶಮನ ಪಡೆಯಬಹುದು. ಇದಕ್ಕಾಗಿ ಒಂದು ಚಿಕ್ಕ ಚಮಚ ಜೇನು, ಅರ್ಧ ಚಿಕ್ಕ ಚಮಚ ಬೆಲ್ಲ ಅಥವಾ ಸಕ್ಕರೆ ಹಾಗೂ ಒಂದು ದೊಡ್ಡ ಚಮಚ ಲಿಂಬೆರಸವನ್ನು ಒಂದು ಲೋಟ ಬಿಸಿನೀರಿನಲ್ಲಿ ಹಾಕಿ ಸುಮಾರು ಅರ್ಧ ಇಂಚಿನಷ್ಟು ಹಸಿಶುಂಠಿಯನ್ನು ಜಜ್ಜಿ ಬೆರೆಸಿ ಈ ನೀರಿನಿಂದ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಗಳಗಳ ಮಾಡಬೇಕು.

ಶಿರ್ಕಾ:

ಶಿರ್ಕಾ:

ಅಡುಗೆಮನೆಯಲ್ಲಿ ಲಭ್ಯವಿರುವ ಈ ಶಿರ್ಕಾ ಕ್ಷಾರೀಯವಾಗಿದ್ದು ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಈ ಗುಣ ಗಂಟಲಬೇನೆ ಕಡಿಮೆಗೊಳಿಸಲೂ ನೆರವಾಗುತ್ತದೆ. ಎರಡು ದೊಡ್ಡ ಚಮಚ ಶಿರ್ಕಾವನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಿ.

ಪುದಿನಾ ಎಣ್ಣೆ:

ಪುದಿನಾ ಎಣ್ಣೆ:

ಇದೊಂದು ಅವಶ್ಯಕ ತೈಲವಾಗಿದ್ದು ಗಂಟಲಬೇನೆಯನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾಗಿದೆ. ಒಂದು ಕಪ್ ಬಿಸಿನೀರಿನಲ್ಲಿ ನಾಲ್ಕೈದು ತೊಟ್ಟು ಈ ಎಣ್ಣೆಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸುಮಾರು ಐದು ನಿಮಿಷಗಳ ಕಾಲ ಗಳಗಳ ಮಾಡಿ.

ಅಡುಗೆ ಸೋಡಾ:

ಅಡುಗೆ ಸೋಡಾ:

ಇದರಲ್ಲಿರುವ ಸಂಯುಕ್ತಗಳು ಗಂಟಲಿನಲ್ಲಿರುವ ಸೋಂಕನ್ನು ಕಡಿಮೆ ಮಾಡಿ ಗಂಟಲಬೇನೆಯಿಂದ ಪರಿಹಾರ ಒದಗಿಸುತ್ತವೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿಗೆ ಕಾಲು ದೊಡ್ಡ ಚಮಚ ಅಡುಗೆ ಸೋಡಾ ಮತ್ತು ಕಾಲು ಚಿಕ್ಕ ಚಮಚ ಉಪ್ಪು ಬೆರೆಸಿ ನಿತ್ಯವೂ ಬೆಳಿಗ್ಗೆ ಐದು ನಿಮಿಷಗಳ ಕಾಲ ಗಳಗಳ ಮಾಡಿ. ಬೇನೆ ಇಲ್ಲವಾಗುವವರೆಗೂ ಮುಂದುವರೆಸಿ.

ಅರಿಶಿನದ ನೀರು:

ಅರಿಶಿನದ ನೀರು:

ಗಂಟಲಬೇನೆಗೆ ಆಯುರ್ವೇದ ಸೂಚಿಸುವ ಚಿಕಿತ್ಸೆ ಎಂದರೆ ಅರಿಶಿನದ ನೀರು. ಈಗ ಈ ವಿಧಾನವನ್ನು ಅಧುನಿಕ ವಿಜ್ಞಾನವೂ ಪುರಸ್ಕರಿಸಿದೆ. ಅರಿಶಿನ ಒಂದು ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಗಂಟಲ ತೇವಭಾಗದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಒಂದು ದೊಡ್ಡ ಚಮಚ ಅರಿಶಿನ ಪುಡಿಯನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಐದರಿಂದ ಹತ್ತು ನಿಮಿಷ ಗಳಗಳ ಮಾಡಿ.

ಮೆಂತೆ:

ಮೆಂತೆ:

ಮೆಂತೆಯಲ್ಲಿರುವ ಅಪಾರವಾದ ಗುಣಗಳಿಂದಾಗಿ ಇದಕ್ಕೆ ಸುಪರ್ ಫುಡ್ ಎಂಬ ಅನ್ವರ್ಥನಾಮವೂ ದಕ್ಕಿದೆ. ಗಂಟಲಬೇನೆ ನಿವಾರಿಸಲೂ ಮೆಂತೆ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಒಂದು ದೊಡ್ಡ ಚಮಚ ಮೆಂತೆಯನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಬೇಕು.

ಲವಂಗದ ಎಣ್ಣೆ:

ಲವಂಗದ ಎಣ್ಣೆ:

ಬ್ಯಾಕ್ಟೀರಿಯಾಗಳ ಮೂಲಕ ಎದುರಾಗಿದ್ದ ಸೋಂಕು ಮತ್ತು ಇದರ ನೋವನ್ನು ಇಲ್ಲವಾಗಿಸಲು ಲವಂಗದ ಎಣ್ಣೆಯೂ ಉತ್ತಮ ಆಯ್ಕೆಯಾಗಿದೆ. ಒಂದು ಕಪ್ ಬಿಸಿನೀರಿಗೆ ನಾಲ್ಕೈದು ತೊಟ್ಟು ಲವಂಗದ ಎಣ್ಣೆಯನ್ನು ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗೆ ಗಳಗಳ ಮಾಡುವ ಮೂಲಕ ಗಂಟಲಬೇನೆಯನ್ನು ಸುಲಭವಾಗಿ ನಿವಾರಿಸಬಹುದು.

ಟೊಮಾಟೋ ಜ್ಯೂಸ್:

ಟೊಮಾಟೋ ಜ್ಯೂಸ್:

ಟೊಮಾಟೋಗಳಲ್ಲಿ ವಿಟಮಿನ್ ಸಿ ಹಾಗೂ ಲೈಕೋಪೀನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕನ್ನು ಇಲ್ಲವಾಗಿಸುವ ಮೂಲಕ ಗಂಟಲಬೇನೆಯನ್ನು ನಿವಾರಿಸುತ್ತವೆ. ಇದಕ್ಕಾಗಿ ಅರ್ಧ ಕಪ್ ಟೊಮಾಟೋ ರಸವನ್ನು ಅರ್ಧ ಕಪ್ ನೀರಿಗೆ ಬೆರೆಸಿ ಈ ಮಿಶ್ರಣವನ್ನು ನೀವು ಸಹಿಸುವಷ್ಟು ಬಿಸಿಮಾಡಿ. ಈ ಮಿಶ್ರಣದಿಂದ ಐದು ನಿಮಿಷ ಗಳಗಳ ಮಾಡುವ ಮೂಲಕ ಗಂಟಲಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಸಲಹೆ: ಈ ಲೇಖನದಲ್ಲಿ ಮುಕ್ಕಳಿಸುವ ಬದಲು ಗಳಗಳ ಎಂಬ ಪದವನ್ನು ಉಪಯೋಗಿಸಲಾಗಿದೆ. ಏಕೆಂದರೆ ಮುಕ್ಕಳಿಸು ಎಂದರೆ ತಲೆ ಎತ್ತದೇ ಕೆನ್ನೆಗಳಿಂದ ಬಾಯಿಯಲ್ಲಿರುವ ದ್ರವವನ್ನು ಬಾಯಿಯ ತುಂಬಾ ಹೊರಳಾಡಿಸುವುದಾಗಿದೆ. ಆದರೆ ಗಳಗಳ ಎಂದರೆ ನೀರನ್ನು ಬಾಯಿಯಲ್ಲಿ ಹಾಕಿದ ಬಳಿಕ ಸಾಧ್ಯವಾದಷ್ಟು ತಲೆಯನ್ನು ಹಿಂದಕ್ಕೆ ಬಾಗಿಸಿ ಉಸಿರನ್ನು ನಿಧಾನವಾಗಿ ಬಾಯಿಯ ಮೂಲಕ ಹೊರಬಿಡುವಾಗ ಗಳಗಳ ಸದ್ದು ಬರಬೇಕು. ಈ ಸದ್ದಿನಿಂದಾಗಿಯೇ ಗಳಗಳ ಎಂದು ನಮ್ಮ ಹಿರಿಯರು ಕರೆದಿದ್ದಾರೆ.

ಒಂದು ವೇಳೆ ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ ಇದರ ಕೊಂಡಿಯನ್ನು ನಿಮ್ಮ ಪ್ರೀತಿಪಾತ್ರರು, ಆಪ್ತರಿಗೆ ಕಳುಹಿಸುವ ಮೂಲಕ ಅವರೂ ಇದರ ಪ್ರಯೋಜನಗಳನ್ನು ಪಡೆಯುವಂತಾಗಲಿ.

English summary

Best Natural Sore Throat Remedies

A sore throat can be described as a condition in which virus or bacteria build their colonies in the respiratory tract, which includes the throat. The above process results in infection and inflammation, which causes symptoms like dryness of the throat, itching sensation, pain, soreness, difficulty in swallowing food and water, etc. Normally, a sore throat is accompanied by other conditions like fever, cough, cold, etc., if it is also a symptom of flu or a microbial infection. However, if you are experiencing just sore throat, for a long period of time, then it could indicate bigger health complications such as tonsillitis, certain sexually transmitted diseases or even the presence of cancer.
Story first published: Saturday, January 20, 2018, 8:30 [IST]