For Quick Alerts
ALLOW NOTIFICATIONS  
For Daily Alerts

  ಯಾವ್ಯಾವ ಹಣ್ಣಿನ ಜ್ಯೂಸ್‌ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್

  By Arshad
  |

  ಜ್ಯೂಸ್ ಅಥವಾ ಹಣ್ಣಿನ ರಸವನ್ನು ಕುಡಿಯುವುದು ಎಲ್ಲರಿಗೆ ಇಷ್ಟವಾದರೂ ಇದನ್ನು ತಯಾರಿಸಲು, ತಯಾರಿಸಿದ ಬಳಿಕ ಮಿಕ್ಸಿ ಪಾತ್ರೆಗಳನ್ನು ತೊಳೆಯಲು ಸೋಮಾರಿತನವಾಗುವ ಕಾರಣ ಹೆಚ್ಚಿನವರು ಸಿದ್ದರೂಪದಲ್ಲಿ ಸಿಗುವ ಜ್ಯೂಸ್ ಗಳನ್ನೇ ಖರೀದಿಸಿ ಸೇವಿಸುತ್ತೇವೆ. ಕೆಲವರಿಗೆ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸವೇ ಇಷ್ಟವಾದರೆ ಉಳಿದವರಿಗೆ ಸಿದ್ಧ ರೂಪದಲ್ಲಿ ಸಿಗುವ ವೈವಿಧ್ಯಮಯ ರಸಗಳೇ ಇಷ್ಟ.

  ಹಣ್ಣಿನ ರಸದ ಸೇವನೆಯ ಮೂಲಕ ಲಭಿಸುವ ಶಕ್ತಿ, ಕ್ಷಾರೀಯತೆ, ದೇಹದಿಂದ ಕಲ್ಮಶಗಳ ನಿವಾರಣೆ ಹಾಗೂ ದೇಹದ ಹೊರಭಾಗ ಮತ್ತು ಒಳಭಾಗಗಳಿಗೂ ನೀಡುವ ಪುನಃಶ್ಚೇತನ ಮೊದಲಾದ ಪ್ರಯೋಜನಗಳಿವೆ. ಆದರೆ ಎಲ್ಲಾ ಹಣ್ಣಿನ ರಸಗಳು ಏಕಸಮಾನವಾಗಿ ಪ್ರಯೋಜನಕಾರಿಯಲ್ಲ. ಅಲ್ಲದೇ ಅಂಗಡಿಗಳಲ್ಲಿ ಸಿದ್ಧ ರೂಪದಲ್ಲಿ ಸಿಗುವ ಹಣ್ಣಿನ ಜ್ಯೂಸ್ ಗಳು ವಾಸ್ತವವಾಗಿ ಜ್ಯೂಸ್ ಅಲ್ಲವೇ ಅಲ್ಲ, ಬದಲ್ಲಿಗೆ ಕೃತಕ ರುಚಿಕಾರಕಗಳನ್ನು ಸೇರಿಸಿ ತಯಾರಿಸಿದ ಕೃತಕ ಪಾನೀಯ!

  ಕೆಲವರು ಎಲ್ಲ ಜ್ಯೂಸ್‌ಗಳೂ ಕಟ್ಟದ್ದಲ್ಲ, ನೋಡಿಕೊಂಡು ಕುಡಿಯಬೇಕು ಎಂಬ ಅಭಿಪ್ರಾಯ ಹೊಂದಿರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ರಸಗಳಲ್ಲಿ ರುಚಿಗಾಗಿ ಅಗತ್ಯಕ್ಕೂ ಹೆಚ್ಚು ಸಕ್ಕರೆ ಬೆರೆಸಿದ್ದು ಇದು ತೂಕದ ಹೆಚ್ಚಳಕ್ಕೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ದಿನದಲ್ಲಿ ಕೇವಲ ಎರಡರಿಂದ ಮೂರು ಕಪ್ ಕುಡಿದರೂ ಇದು ದೇಹಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳನ್ನು ಒದಗಿಸಿ ವ್ಯಸನಕ್ಕೆ ತಳ್ಳುತ್ತದೆ.

  'ತರಕಾರಿಗಳ ಜ್ಯೂಸ್‌' ಕುಡಿದರೆ ಸಾಕು, ಯಾವ ಕಾಯಿಲೆಯೂ ಬರಲ್ಲ

  2015 Dietary guidelines for Americans ಎಂಬ ಆರೋಗ್ಯಸಂಸ್ಥೆಯ ಪ್ರಕಾರ ಮನೆಯಲ್ಲಿಯೇ ತಯಾರಿಸಿದ 100% ಹಣ್ಣಿನ ರಸಗಳು ಆಯಾ ದಿನದ ಅಗತ್ಯತೆಯನ್ನು ಪೂರೈಸಲು ನಿಗದಿಪಡಿಸಿರುವ ಪ್ರಮಾಣವನ್ನು ಖಂಡಿತಾ ಒದಗಿಸುತ್ತವೆ. 19 ರಿಂದ 30 ರ ನಡುವಣ ವಯೋಮಾನದವರು ದಿನಕ್ಕೆ ಎರಡು ಕಪ್ ಜ್ಯೂಸ್ ಸೇವಿಸಬೇಕು. 31 ದಾಟಿದ ಮಹಿಳೆಯರು ಒಂದೂವರೆ ಕಪ್ ಸೇವಿಸಬೇಕು. ಕೇವಲ ಹಣ್ಣಿನಿಂದ ಹಿಂಡಿ ತೆಗೆದ, ಏನನ್ನೂ ಮಿಶ್ರಣ ಮಾಡದ ಒಂದ್ ಕಪ್ ರಸವನ್ನು ಒಂದು ಕಪ್ ಎಂಬ ಮಾನದಂಡವಾಗಿ ಉಪಯೋಗಿಸಲಾಗಿದೆ. ಬನ್ನಿ, ಈ ಪ್ರಕಾರ ಯಾವ ಜ್ಯೂಸ್ ಗಳು ಅತ್ಯುತ್ತಮ, ಯಾವುದು ಕೆಟ್ಟದ್ದು ಎಂಬುದನ್ನು ನೋಡೋಣ:

  ಅತ್ಯುತ್ತಮ: ತರಕಾರಿಗಳ ರಸ

  ಅತ್ಯುತ್ತಮ: ತರಕಾರಿಗಳ ರಸ

  ಉತ್ತಮ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿ ಸಾಕಷ್ಟು ತರಕಾರಿಗಳಿರಲೇಬೇಕು. ಪ್ರತಿ ತರಕಾರಿಯಲ್ಲಿಯೂ ಭಿನ್ನವಾದ ಪೋಷಕಾಂಶಗಳಿದ್ದು ಆರೋಗ್ಯವನ್ನು ಕಾಪಾಡುವಲ್ಲಿ ತಮ್ಮದೇ ಆದ ನೆರವನ್ನು ಒದಗಿಸುತ್ತವೆ. ಉದಾಹರಣೆಗೆ ಟೊಮಾಟೋಗಳಲ್ಲಿರುವ ಲೈಕೋಪೀನ್ ಎಂಬ ನೈಸರ್ಗಿಕ ರಾಸಾಯನಿಕವೇ ಟೊಮಾಟೋ ಹಣ್ಣಿನ ಕೆಂಪು ಬಣ್ಣಕ್ಕೆ ಕಾರಣವಾಗಿದೆ. ಈ ರಾಸಾಯನಿಕ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಕ್ಷಮತೆ ಹೊಂದಿದೆ. ಅಂತೆಯೇ ಬೀಟ್ರೂಟ್ ನಲ್ಲಿಯೂ ಲೈಕೋಪೀನ್ ಇದೆ ಹಾಗೂ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

  ಅತಿ ಕೆಟ್ಟದ್ದು: ವಿವಿಧ ಹಣ್ಣುಗಳ ರಸಗಳ ಮಿಶ್ರಣ (Juice Cocktails)

  ಅತಿ ಕೆಟ್ಟದ್ದು: ವಿವಿಧ ಹಣ್ಣುಗಳ ರಸಗಳ ಮಿಶ್ರಣ (Juice Cocktails)

  ವಿವಿಧ ಹಣ್ಣುಗಳ ರಸವನ್ನು ಬೆರೆಸಿ ತಯಾರಿಸಿದ ಕಾಕ್ಟೇಲ್, ಹಣ್ಣುಗಳ ರುಚಿಯನ್ನೇ ಹೋಲುವ ರಾಸಾಯನಿಕ ಜ್ಯೂಸ್ (juice-flavoured beverage) ಮತ್ತು ಕೇವಲ ಕೊಂಚವೇ ನೈಸರ್ಗಿಕ ರಸ ಮತ್ತು ಉಳಿದ ಅಷ್ಟೂ ಪ್ರಮಾಣವನ್ನು ಕೃತಕ ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಜ್ಯೂಸ್ (juice drink) ಗಳನ್ನು ಸರ್ವಥಾ ಸೇವಿಸದಿರಿ. ಇವುಗಳಲ್ಲಿ ಹೆಚ್ಚಿನಾಂಶ ನೀರು ಸಿಹಿಕಾರಕವಾಗಿ ಸಕ್ಕರೆಯ ಹೊರತಾಗಿ ಅತಿ ಹೆಚ್ಚಿನ ಫ್ರುಕ್ಟೋಸ್ ಇರುವ ಮೆಕ್ಕೆಜೋಳದ ಸಿರಪ್ ದ್ರಾವಣವನ್ನು ಬೆರೆಸಿರಲಾಗಿರುತ್ತದೆ. ಈ ಸಿರಪ್ ತೂಕದ ಹೆಚ್ಚಳಕ್ಕೆ, ಕೊಲೆಸ್ಟಾಲ್ ಮಟ್ಟ ಏರಲು, ಕೆಲವು ಬಗೆಯ ಕ್ಯಾನ್ಸರ್ ಆವರಿಸಲು, ಮಧುಮೇಹ, ಅಧಿಕರಕ್ತದೊತ್ತಡ, ಮಲವನ್ನು ಹಿಡಿದಿಡುವ ಸಾಮರ್ಥ ಕಳೆದುಕೊಳ್ಳಲು ಮೊದಲಾದ ಅನಾರೋಗ್ಯಗಳಿಗೆ ಕಾರಣವಾಗಬಹುದು.

  ಉತ್ತಮ: 100 % ನೈಸರ್ಗಿಕ ಹಣ್ಣುಗಳ ರಸಗಳು

  ಉತ್ತಮ: 100 % ನೈಸರ್ಗಿಕ ಹಣ್ಣುಗಳ ರಸಗಳು

  100 % ಹಣ್ಣಿನ ರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು ಹಾಗೂ ಖನಿಜಗಳಿರುತ್ತವೆ. ವಿಶೇಷವಾಗಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಇದರ ಒಂದು ತೊಂದರೆ ಎಂದರೆ ಹಣ್ಣಿನ ರಸದಲ್ಲಿ ಈ ಪ್ರಮಾಣ ಅತಿ ಹೆಚ್ಚು ಸಾಂದ್ರೀಕೃತವಾಗಿದ್ದು ದೇಹದ ಅಗತ್ಯಕ್ಕಿಂತಲೂ ಹೆಚ್ಚು ಸೇವಿಸುವ ಮೂಲಕ ಹೆಚ್ಚುವರಿ ಸಕ್ಕರೆ ಹಾಗೂ ಕ್ಯಾಲೋರಿಗಳನ್ನು ಒದಗಿಸುತ್ತದೆ. ಅಲ್ಲದೇ ಹಣ್ಣಿನ ತಿರುಳಿನಲ್ಲಿರುವ ಕರಗದ ನಾರು ಮತ್ತು ಫೈಟೋನ್ಯೂಟ್ರಿಯೆಂಟ್ ಗಳು ಈ ರಸದಲ್ಲಿ ಈಗ ಇಲ್ಲವಾಗಿದ್ದು ಇದರ ಕೊರತೆಯನ್ನು ದೇಹ ಸಹಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಆಹಾರತಜ್ಞರು ದಿನಕ್ಕೆ ಒಂದು ಕಪ್ ರಸ ಸೇವಿಸಿದರೆ ಸಾಕು ಎಂಬ ಸಲಹೆ ನೀಡುತ್ತಾರೆ.

  ಉತ್ತಮ: ದಾಳಿಂಬೆ ಹಣ್ಣಿನ ರಸ

  ಉತ್ತಮ: ದಾಳಿಂಬೆ ಹಣ್ಣಿನ ರಸ

  ಪ್ರತಿ ಗುಟುಕಿನ ಮೂಲಕ ಗರಿಷ್ಟ ಪ್ರಮಾಣದ ಪೌಷ್ಟಿಕತೆಯನ್ನು ಪಡೆಯಲು ದಾಳಿಂಬೆ ರಸದಿಂದ ಸಾಧ್ಯವಾಗುತ್ತದೆ. ಈ ಹಣ್ಣಿನ ರಸದಲ್ಲಿಯೂ ಸಕ್ಕರೆ ಮತ್ತು ಕ್ಯಾಲೋರಿಗಳು ಅಧಿಕವಾಗಿದ್ದರೂ ಇದರಲ್ಲಿರುವ ಅತ್ಯುತ್ತಮ ಪೋಷಕಾಂಶ ಹಾಗೂ ಆಂಟಿ ಆಕ್ಸಿಡೆಂಟುಗಳು ಆರೋಗ್ಯಕ್ಕೆ ಪೂರಕವಾಗಿರುವ ಕಾರಣ ಈ ಸಕ್ಕರೆಯನ್ನು ಸಹಿಸಿಕೊಳ್ಳಬಹುದು. ಇತರ ಹಣ್ಣಿನ ರಸಗಳಿಗೆ ಹೋಲಿಸಿದರೆ ದಾಳಿಂಬೆಯಲ್ಲಿ ಅತಿ ಹೆಚ್ಚು ಅಂದರೆ ಮೂರು ಪಟ್ಟು ಹೆಚ್ಚು ಆಂಟಿ ಆಕ್ಸಿಡೆಂಟುಗಳಿವೆ. ಅಂದರೆ ಕೆಂಪು ವೈನ್ ಅಥವಾ ಹಸಿರು ಟೀಯಲ್ಲಿ ಇರುವುದ್ದಕ್ಕಿಂತಲೂ ಹೆಚ್ಚು! ಈ ಹಣ್ಣಿನ ರಸದ ಸೇವನೆಯಿಂದ ದೇಹದಲ್ಲಿರುವ ಕ್ಯಾನ್ಸರ್ ಕಾರಕ ಹಾಗೂ ಜೀವಕೋಶಗಳನ್ನು ಘಾಸಿ ಮಾಡಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ರಕ್ಷಣೆ ದೊರಕುತ್ತದೆ ಹಾಗೂ ಉರಿಯೂತವೂ ಕಡಿಮೆಯಾಗುತ್ತದೆ.

  ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್

  ಉತ್ತಮ: ಕ್ರ್ಯಾನ್ಬೆರಿ ಹಣ್ಣಿನ ರಸ

  ಉತ್ತಮ: ಕ್ರ್ಯಾನ್ಬೆರಿ ಹಣ್ಣಿನ ರಸ

  ಈ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ವಿಟಮಿನ್ ಸಿ ಯನ್ನು ಅಸ್ಕೋರ್ಬಿಕ್ ಆಮ್ಲ ಎಂದೂ ಕರೆಯುತ್ತಾರೆ. ಇದು ದೇಹದ ಬೆಳವಣಿಗೆ, ಸವೆದ ಅಂಗಾಂಶಗಳನ್ನು ಸರಿಪಡಿಸಲು ಅಗತ್ಯವಾಗಿದೆ. ಹಾಗೂ ದೇಹದ ಹಲವಾರು ಇತರ ಕಾರ್ಯಗಳಲ್ಲಿಯೂ ಅಗತ್ಯವಾಗಿದೆ. ಉದಾಹರಣೆಗೆ ಕೊಲ್ಯಾಜೆನ್ ಉತ್ಪಾದನೆ, ಕಬ್ಬಿಣವನ್ನು ಹೀರಿಕೊಳ್ಳುವುದು, ಗಾಯಗಳನ್ನು ಮಾಗಿಸುವುದು, ಮೂಳೆ ಮತ್ತು ಹಲ್ಲುಗಳ ಸವೆತವನ್ನು ತಡೆದು ದೃಢವಾಗಿಟ್ಟುಕೊಳ್ಳುವುದು ಮೊದಲಾದ ಕಾರ್ಯಗಳಲ್ಲಿ ನೆರವಾಗುತ್ತದೆ.

  ಅತಿ ಕೆಟ್ಟದ್ದು: ಅಂಗಡಿಯಿಂದ ಕೊಳ್ಳುವ ಸಿದ್ಧರೂಪದ ಜ್ಯೂಸ್

  ಅತಿ ಕೆಟ್ಟದ್ದು: ಅಂಗಡಿಯಿಂದ ಕೊಳ್ಳುವ ಸಿದ್ಧರೂಪದ ಜ್ಯೂಸ್

  ಈ ಜ್ಯೂಸ್ ಗಳು ಕೃತಕವಾಗಿದ್ದು ಕೇವಲ ಇದರ ಮೇಲೆ ಇರುವ ಕಾಗದದಲ್ಲಿ ಆಕರ್ಷಕವಾದ ಹಣ್ಣಿನ ಚಿತ್ರಗಳಿರುತ್ತವೆಯೇ ಹೊರತು ಒಳಗೆ ನೈಸರ್ಗಿಕ ಹಣ್ಣಿನ ರಸ ಇರುವುದಿಲ್ಲ! ಕೆಲವು ಹಣ್ಣುಗಳ ರುಚಿಯನ್ನು ಯಥಾವತ್ತಾಗಿ ನಕಲು ಮಾಡಬೇಕಾದರೆ ಇದು ಕಹಿಯಾಗುವ ಕಾರಣ ಇದನ್ನು ಸರಿಪಡಿಸಲು ಹೆಚ್ಚೇ ಸಕ್ಕರೆಯನ್ನು ಇದರ ನಿರ್ಮಾಣಸಂಸ್ಥೆಗಳು ಬೆರೆಸುತ್ತವೆ. ಅಲ್ಲದೇ ಹಣ್ಣುಗಳ ಮಿಶ್ರಣವಿರುವ ಜ್ಯೂಸ್ ಗಳಲ್ಲಿ ಸಾಂದ್ರೀಕೃತ ಸಕ್ಕರೆ ಇರುತ್ತದೆ. ಇವು ದೇಹಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ, ಬದಲಿಗೆ ಅನಗತ್ಯವಾಗಿ ಆಗಾಧ ಪ್ರಮಾಣದ ಸಕ್ಕರೆಯನ್ನು ನೀಡಿ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತವೆ.

  ಉತ್ತಮ: ಕೆಂಪು ದ್ರಾಕ್ಷಿಯ ರಸ

  ಉತ್ತಮ: ಕೆಂಪು ದ್ರಾಕ್ಷಿಯ ರಸ

  ಈ ಹಣ್ಣಿನಲ್ಲಿ ಫ್ಲೇವನಾಯ್ದುಗಳು ಮತ್ತು ರೆಸ್ವರೆಟ್ರಾಲ್ ಎಂಬ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಅಲ್ಲದೇ ಇದರಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ ಮತ್ತು ಕ್ಯಾರೋಟಿನಾಯ್ಡ್ ಮತ್ತು ಪಾಲಿಫೆನಾಲ್ ಸಹಿತ ವಿವಿಧ ಬಗೆಗಳ ಫೈಟೋನ್ಯೂಟ್ರಿಯೆಂಟ್ ಗಳಿವೆ. ಇವು ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಕಣ್ಣುಗಳ ಆರೋಗ್ಯಕ್ಕೂ ಈ ಹಣ್ಣಿನ ರಸ ಉತ್ತಮವಾಗಿದೆ. ಅಲ್ಲದೇ ವಿಶೇಷವಾಗಿ ಮೊಣಕಾಲುಗಳ ಆರೋಗ್ಯ ವೃದ್ದಿಸಲು, ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಉರಿಯೂತ ನಿವಾರಕ ಗುಣವನ್ನೂ ಹೊಂದಿದೆ.

  ಇವುಗಳ ಸೇವನೆ ಬೇಡ: ಹಸಿ ಎಲೆಕೋಸು, ಕೇಲ್ ಮತ್ತು ಬ್ರೋಕೋಲಿ

  ಇವುಗಳ ಸೇವನೆ ಬೇಡ: ಹಸಿ ಎಲೆಕೋಸು, ಕೇಲ್ ಮತ್ತು ಬ್ರೋಕೋಲಿ

  ಎಲ್ಲಾ ಬಗೆಯ ಕೋಸುಗಳು, ಅಂದರೆ ಎಲೆಕೋಸು, ಹೂಕೋಸು, ಕೇಲ್ ಮತ್ತು ಬ್ರೋಕೋಲಿಗಳು goitrogenic ಅಥವಾ ಹಸಿಯಾಗಿ ಸೇವಿಸಿದರೆ ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನು ತಗ್ಗಿಸುವ ಗುಣ ಹೊಂದಿವೆ. ಒಂದು ವೇಳೆ ಇವುಗಳಿಂದ ತಯಾರಿಸಿದ ಹಸಿ ರಸವನ್ನು ಸೇವಿಸಿದರೆ ತಕ್ಷಣವೇ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಹೊಟ್ಟೆಯುಬ್ಬರಿಕೆ, ಹೊಟ್ಟೆ ನೋವು, ಎದೆಯುರಿ ಮೊದಲಾದವುಗಳನ್ನು ಕೆಲವರಲ್ಲಿ ಉಂಟು ಮಾಡಬಹುದು. ಈ ತರಕಾರಿಗಳನ್ನು ಬೇಯಿಸಿ ಸೇವಿಸಿದರೆ ಮಾತ್ರವೇ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದೇ ಹೊರತು ಹಸಿರಸ ಮಾರಕವಾಗಿದೆ. ಹಾಗಾಗಿ ಈ ರಸಗಳ ಸೇವನೆ ಬೇಡ.

  ಒಳ್ಳೆಯದು: ಅಕಾಯ್ ಬೆರ್ರಿ ಹಣ್ಣಿನ ರಸ (Acai Berries Juice)

  ನೋಡಲಿಕ್ಕೆ ನೇರಳೆ ಹಣ್ಣಿನಂತೆಯೇ ಇರುವ ಈ ಹಣ್ಣುಗಳಲ್ಲಿ ಹಲವಾರು ಆರೋಗ್ಯಕರ ಗುಣಗಳಿದ್ದು ಇವುಗಳ ಸೇವನೆಯಿಂದ ಸಂಧಿವಾತ, ಉರಿಯೂತ, ನಿಮಿರು ದೌರ್ಬಲ್ಯ, ಹೃದಯ ಸಂಬಂಧಿತ ತೊಂದರೆ, ಸ್ಥೂಲಕಾಯ ಹಾಗೂ ಕೊಲೆಸ್ಟ್ರಾಲ್ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಅಲ್ಲದೇ ಇದರಲ್ಲಿರುವ ವಿವಿಧ ವಿಟಮಿನ್ನುಗಳು ಮತ್ತು ಖನಿಜಗಳು ದೇಹದಿಂದ ಕಲ್ಮಶಗಳನ್ನು ಹೊರಹಾಕುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ಎದುರಾಗುವ ಉತ್ಕರ್ಷಣಶೀಲ ಘಾಸಿಯನ್ನೂ ಹಾಗೂ ಕೊಬ್ಬು ಸಂಗ್ರಹವಾಗುವುದನ್ನೂ ತಡೆಯುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹ ಕಡಿಮೆಗೊಳಿಸಿ ಒಳ್ಳೆಯ ಕೊಲೆಸ್ಟಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

  ಒಳ್ಳೆಯದು: ಪ್ರೂನ್ ಹಣ್ಣಿನ ರಸ

  ಈ ಹಣ್ಣಿನ ರಸ ಮಲಬದ್ಧತೆಯನ್ನು ನಿವರಿಸಲು ಅತ್ಯುತ್ತಮವಾಗಿದೆ. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ ಹಾಗೂ ಅತ್ಯುತ್ತಮವಾದ ನೈಸರ್ಗಿಕ ವಿರೇಚಕವಾದ ಸಾರ್ಬಿಟಾಲ್ ಅನ್ನೂ ಹೊಂದಿದೆ. ಈ ರಸದಲ್ಲಿ ಕಬ್ಬಿಣ, ಪೊಟ್ಯಾಶಿಯಂ ಹಾಗೂ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಇವುಗ ಕರುಳಿನ ಕ್ಯಾನ್ಸರ್, ಉತ್ಕರ್ಷಣಶೀಲ ಒತ್ತಡ, ಹೃದಯಸಂಬಂಧಿ ಕಾಯಿಲೆ, ಯಕೃತ್ ನ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ ಹಾಗೂ ಮೂಳೆಗಳನ್ನೂ ದೃಢವಾಗಿಸುತ್ತವೆ.

  English summary

  Best And Worst Foods To Juice For Your Health

  Do you prefer consuming homemade juices or packaged juices? Some might say yes and some might say no to the former or latter, or it just might be the opposite. Juicing has gained immense importance for its ability to energize, alkalise, detox and rejuvenate both inside and out of your body. So, here's a quick guide through about the best and worst foods to juice. Let us remind you that juices you buy from stores contain added amounts of sugar which can result in weight gain or high blood pressure.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more