For Quick Alerts
ALLOW NOTIFICATIONS  
For Daily Alerts

ಬೆಳಗ್ಗೆದ್ದ ತಕ್ಷಣ ಎರಡು ಲೋಟ ನೀರು ಕುಡಿಯುವುದರ ಆರೋಗ್ಯಕರ ಪ್ರಯೋಜನಗಳು

By Arshad
|

ನಮ್ಮ ದಿನದ ಅತ್ಯಂತ ಪ್ರಮುಖ ಸಮಯ ಯಾವುದು? ಉತ್ತರ ಮುಂಜಾನೆ. ಏಕೆಂದರೆ ಪ್ರತಿ ಮುಂಜಾನೆ ಎದ್ದಾಗಲೂ ನಮ್ಮ ದೇಹ ರಾತ್ರಿಯ ನಿದ್ದೆಯ ಸಮಯದಲ್ಲಿ ಹಲವಾರು ಅನೈಚ್ಛಿಕ ಕಾರ್ಯಗಳನ್ನು ನಡೆಸಿ ಈದಿನಕ್ಕಾಗಿ ಹೊಸದಾಗಿ ಎಲ್ಲವನ್ನೂ ಸಿದ್ಧವಾಗಿಸಿ ಕೊಳ್ಳುತ್ತದೆ. ಮುಂಜಾನೆಯ ಸ್ವಚ್ಛ ಹಾಗೂ ತಣ್ಣನೆಯ ಗಾಳಿ, ಸೂರ್ಯನ ಪ್ರಥಮ ಕಿರಣ ಹಾಗೂ ಸೇವಿಸುವ ಪ್ರಥಮ ಆಹಾರ ಎಲ್ಲವೂ ಅತ್ಯಂತ ಆರೋಗ್ಯಕರದ ಮೇಲೆ ಅಪಾರವಾದ ಪ್ರಭಾವ ಬೀರುತ್ತವೆ.

ಬೆಳಿಗ್ಗೆದ್ದ ತಕ್ಷಣ ಎರಡು ಲೋಟ ಅಥವಾ ಇದಕ್ಕೂ ಹೆಚ್ಚು ನೀರು ಕುಡಿಯುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ಇದೊಂದು ಮಿಥ್ಯೆ ಎಂದು ಇದುವರೆಗೆ ಭಾವಿಸಲಾಗಿತ್ತು. ಆದರೆ ಇದು ಸತ್ಯ ಎಂದು ಇತ್ತೀಚಿನ ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ. ಬನ್ನಿ, ಖಾಲಿಹೊಟ್ಟೆಯಲ್ಲಿ ಕನಿಷ್ಠ ಎರಡು ಲೋಟ ನೀರು ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನ ಲಭಿಸುತ್ತದೆ ಎಂದು ನೋಡೋಣ...

ಅಷ್ಟಕ್ಕೂ ಖಾಲಿಹೊಟ್ಟೆಯಲ್ಲಿ ಕನಿಷ್ಠ ಎರಡು ಲೋಟ ನೀರನ್ನೇಕೆ ಕುಡಿಯಬೇಕು?

ಅಷ್ಟಕ್ಕೂ ಖಾಲಿಹೊಟ್ಟೆಯಲ್ಲಿ ಕನಿಷ್ಠ ಎರಡು ಲೋಟ ನೀರನ್ನೇಕೆ ಕುಡಿಯಬೇಕು?

ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ ನೀರು ಕುಡಿಯುವ ಮಹತ್ವವನ್ನು ನಾವು ಅರಿತಿರಬೇಕಾಗುತ್ತದೆ. ನಮ್ಮ ದೇಹದ ಎಲ್ಲಾ ಕಾರ್ಯಗಳಿಗೂ ನೀರು ಅತ್ಯಗತ್ಯವಾಗಿ ಬೇಕಾಗಿದ್ದು ಚಯಾಪಚಯ, ರಕ್ತಪರಿಚಲನೆ, ಜೀವರಾಸಾಯನಿಕ ಕ್ರಿಯೆ ಎಲ್ಲವೂ ನೀರನ್ನು ಅವಲಂಬಿಸಿದೆ. ದೇಹದಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಲು ಆಗಾಗ ನೀರನ್ನು ಕುಡಿಯುತ್ತಲೇ ಇರಬೇಕಾಗುತ್ತದೆ. ನೀರಿನ ಕೊರತೆಯಿಂದ ನಿರ್ಜಲೀಕರಣದ ಸಹಿತ ಹಲವಾರು ತೊಂದರೆಗಳು ಎದುರಾಗುತ್ತವೆ. ಬೆಳಿಗ್ಗೆದ್ದ ತಕ್ಷಣ ಏಕೆ ನೀರು ಕುಡಿಯಬೇಕೆಂದರೆ ರಾತ್ರಿಯ ನಿದ್ದೆಯ ಸಮಯದಲ್ಲಿ ಜರುಗುವ ಹಲವಾರು ಅನೈಚ್ಛಿಕ ಕಾರ್ಯಗಳಿಗೆ ದೇಹ ನೀರನ್ನು ಈಗಾಗಲೇ ಬಳಸಿಕೊಂಡಿರುತ್ತದೆ. ಬೆಳಿಗ್ಗೆದ್ದಾಗ ನಮ್ಮ ದೇಹಕ್ಕೆ ಹೊಸ ನೀರಿನ ಪೂರೈಕೆ ಅಗತ್ಯ. ಎದ್ದ ತಕ್ಷಣ ನೀರನ್ನು ಕುಡಿಯುವ ಮೂಲಕ ಈ ಬೇಡಿಕೆಯನ್ನು ಪೂರೈಸಿ ಆ ಕ್ಷಣದಿಂದಲೇ ಪ್ರಾರಂಭವಾಗುವ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಮಾಡಬಹುದು. ಸಾಮಾನ್ಯ ಮೈಕಟ್ಟಿನ ವ್ಯಕ್ತಿಗಳಿಗೆ ಎರಡು ಲೋಟ ನೀರು ಬೇಕು. ದೇಹದ ತೂಕಕ್ಕನುಗುಣವಾಗಿ ಸ್ಥೂಲದೇಹಿಗಳಿಗೆ ಹೆಚ್ಚೇ ನೀರು ಬೇಕಾಗುತ್ತದೆ.

ಅಷ್ಟಕ್ಕೂ ಖಾಲಿಹೊಟ್ಟೆಯಲ್ಲಿ ಕನಿಷ್ಠ ಎರಡು ಲೋಟ ನೀರನ್ನೇಕೆ ಕುಡಿಯಬೇಕು?

ಅಷ್ಟಕ್ಕೂ ಖಾಲಿಹೊಟ್ಟೆಯಲ್ಲಿ ಕನಿಷ್ಠ ಎರಡು ಲೋಟ ನೀರನ್ನೇಕೆ ಕುಡಿಯಬೇಕು?

ಎರಡು ಲೋಟ ನೀರು ಕುಡಿಯುವುದರಿಂದ ಮೊದಲಿಗೆ ಎದ್ದ ತಕ್ಷಣ ಎದುರಾಗುವ ಬಾಯಾರಿಕೆಯನ್ನು ತಣಿಸಬಹುದು. ವಾಸ್ತವವಾಗಿ ದೇಹಕ್ಕೆ ನೀರು ಬೇಕು ಎಂದು ತಿಳಿಸುವ ಸೂಚನೆಯೇ ಈ ಬಾಯಾರಿಕೆಯಾಗಿದೆ. ಬನ್ನಿ, ಇದರ ನಿಜವಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ:

ಮನಸ್ಸನ್ನು ನಿರಾಳಗೊಳಿಸುತ್ತದೆ

ಮನಸ್ಸನ್ನು ನಿರಾಳಗೊಳಿಸುತ್ತದೆ

ಬೆಳಗ್ಗಿನ ಸಮಯ ಎಲ್ಲರಿಗೂ ತಾಜಾತನ ನೀಡುವ ಸಮಯವಾಗಿದೆ. ಕೆಲವರಿಗೆ ಈ ಸಮಯ ಅತಿ ಹೆಚ್ಚು ವ್ಯಸ್ತರಿರುವ ಸಮಯವೂ ಆಗಿರಬಹುದು. ಯಾವುದೇ ಹೊತ್ತಿನಲ್ಲಿ ಎಚ್ಚರಾಗಲಿ, ತಕ್ಷಣವೇ ಎರಡು ಲೋಟ ನೀರು ಕುಡಿಯುವ ಮೂಲಕ ಮೆದುಳಿಗೆ ತಾಜಾ ರಕ್ತ ಹಾಗೂ ಹೆಚ್ಚಿನ ಅಮ್ಲಜನಕದ ಪೂರೈಕೆಯಾಗುತ್ತದೆ ಇದು ನಿರಾಳವಾಗಲು ಹಾಗೂ ತಾಜಾತನವನ್ನು ಅನುಭವಿಸಲು ನೆರವಾಗುತ್ತದೆ. ಪರಿಣಾಮವಾಗಿ ದಿನದ ಇತರ ಕೆಲಸಗಳಲ್ಲಿ ಪೂರ್ಣವಾಗಿ ಮಗ್ನಗೊಳ್ಳಲು ಸಾಧ್ಯವಾಗುತ್ತದೆ.

ತ್ವಚೆ ಉತ್ತಮಗೊಳ್ಳುತ್ತದೆ

ತ್ವಚೆ ಉತ್ತಮಗೊಳ್ಳುತ್ತದೆ

ಆರೋಗ್ಯಕರ ಹಾಗೂ ತಾರುಣ್ಯದ ತ್ವಚೆಯ ರಹಸ್ಯವೆಂದರೆ ದೇಹದ ಜೀವರಾಸಾಯನಿಕ ಕ್ರಿಯೆ ಕ್ರಮಬದ್ದವಾಗಿ ಜರುಗುವುದು. ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಮೂಲಕ ದೇಹದ ತ್ಯಾಜ್ಯ ಹಾಗೂ ಕಲ್ಮಶಗಳನ್ನು ಹೊರಹಾಕುವ ಕ್ರಿಯೆ ಸುಲಭವಾಗುತ್ತದೆ. ಈ ಕಲ್ಮಶಗಳು ದೇಹದಲ್ಲಿ ಉಳಿದುಕೊಂಡಷ್ಟೂ ತ್ವಚೆಯ ಮೇಲೆ ವಿರುದ್ದವಾದ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಕಾಂತಿಯುಕ್ತ ತ್ವಚೆ ಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದನ್ನು ತಪ್ಪಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದನ್ನು ತಪ್ಪಿಸುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಮೂಲಕ ಮೂತ್ರವಿಸರ್ಜನೆಯ ಪ್ರಮಾಣ ಹೆಚ್ಚಲು ಪ್ರೇರಣೆ ದೊರಕುತ್ತದೆ. ಅಂದರೆ ಮೂತ್ರಕೋಶ ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ ರಾತ್ರಿಯ ಸಮಯದಲ್ಲಿ ಸಂಗ್ರಹಗೊಂಡಿದ್ದ ಎಲ್ಲಾ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಇವು ಉಳಿದುಕೊಂಡರೆ ಮೂತ್ರಕೋಶದಲ್ಲಿ ಸೋಂಕು ಹಾಗೂ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಂಭವ ಹೆಚ್ಚುತ್ತದೆ. ಆದ್ದರಿಂದ ಕಲ್ಲುಗಳಾದ ಬಳಿಕ ನೋವನ್ನನುಭವಿಸುವುದಕ್ಕಿಂತ ನೀರು ಕುಡಿದು ಇದು ಆಗದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಆದ್ದರಿಂದ ಆರೋಗ್ಯಕರ ಮೂತ್ರಪಿಂಡಗಳಿಗಾಗಿ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನೀರು ಕುಡಿಯುವುದಕ್ಕೂ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೂ ಏನು ಸಂಬಂಧ? ಇದೆ. ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕೆಂದರೆ ದೇಹದಲ್ಲಿನ ಕಲ್ಮಶಗಳು ಸಾಧ್ಯವಾದಷ್ಟೂ ಹೊರಹೋಗಬೇಕು. ಈ ಕೆಲಸ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಮೂಲಕ ಸಾಧ್ಯವಾಗಿಸಬಹುದು. ಕಲ್ಮಶಗಳಿಲ್ಲದ ದೇಹದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.

ಮೈಗ್ರೇನ್ ಹಾಗೂ ಇತರ ತಲೆನೋವುಗಳಿಂದ ರಕ್ಷಿಸುತ್ತದೆ

ಮೈಗ್ರೇನ್ ಹಾಗೂ ಇತರ ತಲೆನೋವುಗಳಿಂದ ರಕ್ಷಿಸುತ್ತದೆ

ಈ ನೋವುಗಳನ್ನು ಅನುಭವಿಸಿದವರಿಗೇ ಇದರ ಪ್ರತಾಪ ಏನೆಂಬ ಅರಿವಿರುತ್ತದೆ. ಹೆಚ್ಚಿನವರು ಈ ನೋವುಗಳಿಗೆ ನೋವು ನಿವಾರಕ ಗುಳಿಗೆಗಳ ಮೊರೆ ಹೋಗುತ್ತಾರೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಮೂಲಕ ಈ ನೋವುಗಳನ್ನು ದೂರವಿರಿಸಬಹುದು.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಬೆಳಿಗ್ಗೆದ್ದ ತಕ್ಷಣ ದೇಹ ನಿಧಾನವಾಗಿ ತನ್ನ ಶಕ್ತಿಯನ್ನು ಮರುಪಡೆಯುತ್ತಾ ಹೋಗುತ್ತದೆ. ಅಲ್ಲಿಯವರೆಗೂ ಆಲಸಿತನ, ಮೈಮುರಿಯುವುದು, ಆಕಳಿಕೆ ಮೊದಲಾದವೆಲ್ಲಾ ಜರುಗುತ್ತವೆ. ಕೆಲವರಂತೂ ಈ ಕಕಮಕ ತಾಳಲಾರದೇ ಮತ್ತೆ ನಿದ್ದೆಹೋಗಿಬಿಡುತ್ತಾರೆ. ಆದರೆ ಈ ಹೊತ್ತಿನಲ್ಲಿ ಎರಡು ಲೋಟ ನೀರು ಕುಡಿಯುವ ಮೂಲಕ ದೇಹ ಮರುಚೈತನ್ಯ ಪಡೆಯುವ ಗತಿ ಹೆಚ್ಚಿಸಿಕೊಳ್ಳುತ್ತದೆ. ಏಕೆಂದರೆ ಈ ನೀರು ಹೊಸ ಕೆಂಪುರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ನೀಡುವ ಮೂಲಕ ಹೊರರಕ್ತ ದೇಹದಲ್ಲಿ ಹರಿಯತೊಡಗುತ್ತದೆ ಹಾಗೂ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ದೇಹದೆಲ್ಲೆಡೆ ಒದಗಿಸುವ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆದರೆ ಎರಡು ಲೋಟ ನೀರು ಕುಡಿಯುವಾಗ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು

ಆದರೆ ಎರಡು ಲೋಟ ನೀರು ಕುಡಿಯುವಾಗ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು

ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯುವ ಅಭ್ಯಾಸದಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲ. ಆದರೂ, ಕೆಲವು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ಎರಡು ಲೋಟ ಕುಡಿಯಲು ಪ್ರಾರಂಭದಲ್ಲಿ ಕಷ್ಟವಾಗಬಹುದು ಹಾಗೂ ಇದು ಹೆಚ್ಚು ಎನಿಸಬಹುದು. ಆದರೆ ದಿನಗಳೆದಂತೆ ಇದು ಅಭ್ಯಾಸವಾಗುತ್ತದೆ.

* ಈ ಸಮಯದಲ್ಲಿ ತಣ್ಣಗಿನ ನೀರು ಕುಡಿಯುವ ಬದಲು ಉಗುರುಬೆಚ್ಚನೆಯ ನೀರು ಕುಡಿಯುವುದು ಹೆಚ್ಚು ಉತ್ತಮ.

* ಈ ನೀರಿಗೆ ಏನು ಬೆರೆಸುತ್ತೀರಿ ಎಂಬುದು ತುಂಬಾ ಮುಖ್ಯ. ಈ ನೀರಿನಲ್ಲಿ ಲಿಂಬೆ, ಜೇನು ಬೆರೆಸಿ ಕುಡಿಯುವುದು ಇನ್ನೂ ಉತ್ತಮ. ಒಂದು ವೇಳೆ ಇವುಗಳಿಂದ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದಾದರೆ ಕೇವಲ ನೀರು ಮಾತ್ರವೇ ಸಾಕು.

ಆದರೆ ಎರಡು ಲೋಟ ನೀರು ಕುಡಿಯುವಾಗ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು

ಆದರೆ ಎರಡು ಲೋಟ ನೀರು ಕುಡಿಯುವಾಗ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು

* ಬೆಳಿಗ್ಗೆದ್ದ ಬಳಿಕ ಬಾಯಾರಿಕೆಯಾಗುವವರೆಗೂ ಕಾಯಬಾರದು. ಬದಲಿಗೆ ಎದ್ದ ತಕ್ಷಣ ಮುಖ ಮಾರ್ಜನ ಮುಗಿಸಿ ನೀರು ಕುಡಿಯಬೇಕು.

* ಬೆಳಿಗ್ಗೆದ್ದ ತಕ್ಷಣವೇ ಬಾಯಾರಿಕೆಯಾಗದೇ ಇರುವುದು ಆರೋಗ್ಯದ ಲಕ್ಷಣ. ತಕ್ಷಣವೇ ಬಾಯಾರಿಕೆಯಾದರೆ ದೇಹ ತೀವ್ರ ನೀರಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ತಿಳಿದುಕೊಳ್ಳಬೇಕು ಹಾಗೂ ಇದನ್ನು ಆಪಾಯದ ಘಂಟೆ ಎಂದೇ ಪರಿಗಣಿಸಬೇಕು.

* ಬೆಳಿಗ್ಗೆದ್ದ ಬಳಿಕ ಮಾತ್ರವಲ್ಲ, ಇಲ್ಲಿಂದ ಪ್ರಾರಂಭಿಸಿ ಇಡಿಯ ದಿನ ನಿಯಮಿತವಾಗಿ ನೀರು ಕುಡಿಯಬೇಕು. ಸಾಧ್ಯವಾದರೆ ಪ್ರತಿ ಘಂಟೆಗೊಂದು ಲೋಟ ನೀರು ಕುಡಿಯಬೇಕು ಹಾಗೂ ಎರಡು ಘಂಟೆಗೊಮ್ಮೆ ಮೂತ್ರ ವಿಸರ್ಜಿಸಬೇಕು.

English summary

Benefits of Drinking 2 Glasses of Water in the Morning

When is the most important time in your life? The answer is in the morning. What you eat and what you drink in the morning is also the most important meal in your day. The suggestion of drinking 2 glasses or more water in the morning is not only myth but there are a lot of research studies that have proven the health benefits of drinking water on empty stomach.
X
Desktop Bottom Promotion