For Quick Alerts
ALLOW NOTIFICATIONS  
For Daily Alerts

ಆರೋಗ್ಯ ಸಲಹೆ : ಇನ್ನು ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಾಡಬೇಡಿ!

|

ಹೆಚ್ಚಾಗಿ ನಾವು ಹಣ್ಣುಗಳನ್ನು ತಿಂದು ಅದರ ಬೀಜ ಅಥವಾ ಸಿಪ್ಪೆಗಳನ್ನು ಬಿಸಾಡುತ್ತೇವೆ. ಅದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಬಗ್ಗೆ ತಿಳಿದೇ ಇರುವುದಿಲ್ಲ. ಕೆಲವೊಂದು ಹಣ್ಣುಗಳಲ್ಲಿ ಅವುಗಳ ಬೀಜ ಹಾಗೂ ಸಿಪ್ಪೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಅಡಗಿರುತ್ತದೆ. ಇಂತಹ ಒಂದು ಹಣ್ಣೆಂದರೆ ಕಲ್ಲಂಗಡಿ ಹಣ್ಣು.

ಈ ಹಣ್ಣು ಬೇಸಿಗೆಯಲ್ಲಿ ತುಂಬಾ ಉಪಯುಕ್ತ. ಇದರಲ್ಲಿ ಇರುವಂತಹ ಹೆಚ್ಚಿನ ನೀರಿನಾಂಶವು ದೇಹದ ಬಾಯಾರಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಹೊಟ್ಟೆಯನ್ನು ತುಂಬಿಸುವುದು. ಆದರೆ ಇದರಲ್ಲಿರುವ ಬೀಜಗಳನ್ನು ನಾವು ಉಗಿಯುತ್ತೇವೆ. ಆದರೆ ಈ ಬೀಜಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಎಂದು ನಮಗೆ ತಿಳಿದಿಲ್ಲ

ಕಲ್ಲಂಗಡಿ ಬೀಜದಲ್ಲಿ ವಿಟಮಿನ್ ಬಿ, ಥೈಮೈನ್, ನಿಯಾಸಿನ್, ಫೋಲಾಟೆ, ಮೆಗ್ನಿಶಿಯಂ, ಪೊಟಾಶಿಯಂ, ಕಬ್ಬಿಣ, ಸತು, ಪೋಸ್ಪರಸ್ ನಂತಹ ಪೋಷಕಾಂಶಗಳು ಇವೆ. ಕಲ್ಲಂಗಡಿ ಬೀಜದಲ್ಲಿ ಇರುವಂತಹ ಪೋಷಕಾಂಶ ಲಾಭ ಪಡೆಯಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸಿಕೊಡಲಿದೆ. ಈ ಲೇಖನವನ್ನು ಓದಿ ಇನ್ನು ಮುಂದೆ ಕಲ್ಲಂಗಡಿ ಹಣ್ಣು ತಿನ್ನುವಾಗ ಬೀಜಗಳನ್ನು ಜೋಪಾನವಾಗಿ ತೆಗೆದಿಡಿ....

ಕಲ್ಲಂಗಡಿ ಬೀಜಗಳನ್ನು ಹಾಕಿ ಬೇಯಿಸಿದ ನೀರು-ಆಯಸ್ಸು ನೂರು!

ಅಷ್ಟೇ ಅಲ್ಲದೆ ಕಲ್ಲಂಗಡಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬುಗಳಿವೆ, ಇವುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ, ಒಮೆಗಾ 6 ಕೊಬ್ಬಿನ ಆಮ್ಲಗಳು ಸೇರಿವೆ. ಈ ಪೋಷಕಾಂಶಗಳನ್ನು ನಿಮಗೆ ಇಷ್ಟಬಂದಂತೆ ಸೇವಿಸಬಹುದು. ನಿಮ್ಮ ನೆಚ್ಚಿನ ಸಲಾಡ್ ಅಥವಾ ಹಣ್ಣುಗಳ ರಸಗಳೊಡನೆ ಸೇವಿಸಬಹುದು. ಈ ಬೀಜಗಳು ಹಸಿಯಾಗಿದ್ದಾಗ ಮಾತ್ರವಲ್ಲ, ಒಣಗಿಸಿ ಹಿಂಡಿ ತೆಗೆದ ತೈಲವೂ ಆರೋಗ್ಯಕರವಾಗಿದೆ ಹಾಗೂ ವಿಶೇಷವಾಗಿ ಕೂದಲು ಮತ್ತು ತ್ವಚೆಯ ಆರೋಗ್ಯದ ಮೇಲೆ ಅದ್ಭುತಗಳನ್ನೇ ಸಾಧಿಸುತ್ತದೆ. ಬನ್ನಿ, ಈ ಬೀಜಗಳನ್ನು ಸೇವಿಸುವುದರಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ

ಈ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಹೃದಯದ ಒತ್ತಡ ಸಮತೋಲನದಲ್ಲಿರಲು ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಕಲ್ಲಂಗಡಿ ಬೀಜಗಳು ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣಗಳಿಂದ ಸಮೃದ್ದವಾಗಿವೆ.

ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಸತು ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ಪುರುಷರ ಜನನಾಂಗಗಳಿಗೆ ಪೂರಕವಾಗಿವೆ. ಫಲವತ್ತತೆಯ ಕೊರತೆ ಇರುವ ಪುರುಷರಿಗೆ ಈ ಬೀಜಗಳ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಮ್ಯಾಂಗನೀಸ್ ಸಹಾ ಪುರುಷರ ನಪುಂಸಕತ್ವವನ್ನು ನಿವಾರಿಸಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಕಬ್ಬಿಣ ಹಾಗೂ ವಿಟಮಿನ್ ಬಿ ಸಹಾ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ನಿರಂತರವಾಗಿ ಉತ್ತಮವಾಗಿರಲು ನಿಯಮಿತವಾಗಿ ಕಲ್ಲಂಗಡಿ ಬೀಜಗಳನ್ನು ಆಗಾಗ ಸೇವಿಸುತ್ತಿರಿ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಮಧುಮೇಹ ನಿಯಂತ್ರಕ ಗುಣವಿದ್ದು ದೇಹದಲ್ಲಿ ಗ್ಲೈಕೋಜೆನ್ ಸಂಗ್ರಹವದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. International Journal of Basic and Applied Sciences ಎಂಬ ಮಾಧ್ಯಮ ಪ್ರಕಟಿಸಿದ ವರದಿಯ ಪ್ರಕಾರ ಕಲ್ಲಂಗಡಿ ಬೀಜಗಳ ಸೇವನೆಯಿಂದ ಟೈಪ್ ೨ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿರುವ ಮೆಗ್ನೀಶಿಯಂ ದೇಹದಲ್ಲಿರುವ ಕಿಣ್ವಗಳನ್ನು ಪ್ರಚೋದಿಸಿ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದು ಜೀರ್ಣಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ ಹಾಗೂ ಜಠರದಲ್ಲಿ ಆಮ್ಲಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

ತ್ವಚೆಯ ಆರೋಗ್ಯ ಉತ್ತಮಗೊಳಿಸುತ್ತದೆ

ತ್ವಚೆಯ ಆರೋಗ್ಯ ಉತ್ತಮಗೊಳಿಸುತ್ತದೆ

ಕಲ್ಲಂಗಡಿ ಬೀಜಗಳು ತ್ವಚೆಯ ನೇಯ್ಗೆರಚನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಮೆಗ್ನೇಶಿಯಂ ಕಾರ್ಟಿಸೋಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ, ರಸದೂತಗಳ ಮಟ್ಟಗಳನ್ನು ಸಮತೋಲನದಲ್ಲಿರಿಸುತ್ತದೆ ಹಾಗೂ ಜೀವಕೋಶಗಳ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ. ತನ್ಮೂಲಕ ತ್ವಚೆಯಲ್ಲಿ ನೆರಿಗೆಗಳು ಮೂಡದಿರಲು ಹಾಗೂ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಕವಚದಂತೆ ಕಾರ್ಯನಿರ್ವಹಿಸುತ್ತದೆ.

ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ

ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ

ಕಲ್ಲಗಂಡಿ ಬೀಜದಲ್ಲಿರುವ ಮೆಗ್ನೇಶಿಯಂ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ಸ್ಮರಣಶಕ್ತಿ ಹೆಚ್ಚಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನೂ ವೃದ್ಧಿಸುತ್ತದೆ. ಅಮೇರಿಕಾದ ಒಂದು ಖ್ಯಾತ ಸಂಶೋಧನೆಯಲ್ಲಿ ವಿವರಿಸಿದ ಪ್ರಕಾರ ಮೆಗ್ನೇಶಿಯಂ ಸ್ಮರಣಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಅಲ್ಝೀಮರ್ಸ್ ಕಾಯಿಲೆಯನ್ನು ಗುಣಪಡಿಸಲೂ ನೆರವಾಗುತ್ತದೆ.

ಬೆಳವಣಿಗೆ ಮತ್ತು ಅಭಿವೃದ್ಧಿ

ಬೆಳವಣಿಗೆ ಮತ್ತು ಅಭಿವೃದ್ಧಿ

ಕಲ್ಲಗಂಡಿ ಬೀಜಗಳಲ್ಲಿ ಆರ್ಜಿನೈನ್ ಎಂಬ ಪೋಷಕಾಂಶವೂ ಹೆಚ್ಚಿನ ಪ್ರಮಾಣದಲ್ಲಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ನಾಳಗಳ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ಮತ್ತು ಪ್ರೋಟೀನುಗಳು ಸಾಮಾನ್ಯ ಬೆಳವಣಿಗೆ ಮತ್ತು ದೈಹಿಕ ಅಭಿವೃದ್ದಿಯಲ್ಲಿ ನೆರವಾಗುತ್ತವೆ.

ಮೂಳೆಗಳು ಟೊಳ್ಳಾಗುವುದರಿಂದ ರಕ್ಷಿಸುತ್ತದೆ

ಮೂಳೆಗಳು ಟೊಳ್ಳಾಗುವುದರಿಂದ ರಕ್ಷಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಅವಶ್ಯಕ ಖನಿಜಗಳಿವೆ. ಇವು ಮೂಳೆಗಳು ದೃಢಗೊಳ್ಳಲು ನೆರವಾಗುತ್ತವೆ ಹಾಗೂ ಮೂಳೆಗಳ ಸಾಂದ್ರತೆ ಹೆಚ್ಚಲು ನೆರವಾಗುತ್ತವೆ. ತನ್ಮೂಲಕ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ osteoporosis ಎಂಬ ಸ್ಥಿತಿಯಿಂದ ರಕ್ಷಿಸುತ್ತದೆ ಹಾಗೂ ವಯಸ್ಸಾದಂತೆ ಮೂಳೆಗಳು ಶಿಥಿಲವಾಗದಂತೆ ತಡೆಯುತ್ತದೆ.

 ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕಲ್ಲಂಗಡಿ ಬೀಜಗಳಲ್ಲಿ ಉತ್ತಮ ಪ್ರಮಾಣದ ಕೊಬ್ಬಿನ ಅಮ್ಲಗಳಿವೆ. ಇವು ಕೆಟ್ಟ ಕೊಲೆಸ್ಟಾಲ್ ಅಥವಾ (LDL) ನ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಉಪಸ್ಥಿತಿಯಿಂದ ಹೃದಯದ ತೊಂದರೆ, ನರಗಳ ಒಳಗೆ ಜಿಡ್ದು ತುಂಬಿಕೊಳ್ಳುವುದು, ಹೃದಯ ಸ್ತಂಭನ ಹಾಗೂ ಆಘಾತ ಮೊದಲಾದ ತೊಂದರೆಗಳು ಎದುರಾಗುತ್ತವೆ. ಕಲ್ಲಂಗಡಿ ಬೀಜಗಳನ್ನು ಸೇವಿಸುವ ಮೂಲಕ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Awesome Health Benefits Of Watermelon Seeds

The watermelon seeds also consist of healthy fats which are omega 3 fatty acids and omega 6 fatty acids. They are versatile and can be consumed in whichever way you like. You can add the seeds in your protein shakes or in your salads. Not only the seeds are good for your health, the oil extracted from the seeds work wonders for your skin and hair. Have a look at the health benefits of watermelon seeds.
X
Desktop Bottom Promotion