For Quick Alerts
ALLOW NOTIFICATIONS  
For Daily Alerts

ಮೀನು ತಿಂದ ಬಳಿಕ ಹಾಲು ಕುಡಿಯಬಾರದೇ? ಇದೆಲ್ಲಾ ನಿಜವೇ?

By Hemanth
|

ಕೆಲವು ಆಹಾರಗಳು ದೇಹದೊಳಗೆ ಹೋದ ಕೂಡಲೇ ನಮಗೆ ಅಲರ್ಜಿಯಾಗುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಆಹಾರವನ್ನು ದೇಹದ ಜೀರ್ಣಾಂಗ ವ್ಯವಸ್ಥೆಯು ಒಪ್ಪಿಕೊಳ್ಳದೆ ಇರುವುದು ಇದಕ್ಕೆ ಪ್ರಮುಖ ಕಾರಣ. ಕೆಲವು ಸಲ ನಾವು ಒಂದು ಆಹಾರ ತಿಂದ ಬೆನ್ನಿಗೆ ಮತ್ತೊಂದು ಆಹಾರ ಸೇವಿಸಿದರೆ ಅದರಿಂದಲೂ ಅಲರ್ಜಿ ಉಂಟಾಗುವುದು. ಇದರಲ್ಲಿ ಪ್ರಮುಖವಾಗಿ ಮೀನು ತಿಂದ ಬಳಿಕ ಹಾಲು ಕುಡಿಯಬಾರದು ಎನ್ನುವ ಬಗ್ಗೆ. ಇದರ ಬಗ್ಗೆ ಹಲವಾರು ರೀತಿಯ ವಾದಗಳು ಇವೆ.

fish

ಆದರೆ ಹಿಂದಿನಿಂದಲೂ ನಮ್ಮ ಹಿರಿಯರು ಹಾಲು ಸೇವಿಸುವ ಮೊದಲು ಅಥವಾ ಬಳಿಕ ಮೀನಿನಂತಹ ಆಹಾರ ಸೇವಿಸಬಾರದು ಎಂದು ಹೇಳುತ್ತಾ ಬಂದಿದ್ದಾರೆ. ಹಿರಿಯರು ಹೇಳಿಕೊಂಡು ಬಂದಿರುವ ಕೆಲವೊಂದು ಸಲಹೆಗಳು ವೈದ್ಯಕೀಯವಾಗಿಯು ಉತ್ತಮವೆಂದು ಸಾಬೀತಾಗಿದೆ. ಆದರೆ ಇಲ್ಲಿ ನಮ್ಮ ದೇಹವು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ಹಾಲು ಮತ್ತು ಮೀನು ಜತೆಯಾಗಿ ಯಾಕೆ ಸೇವನೆ ಮಾಡಬಾರದು ಎಂದು ನಿಮಗೆ ತಿಳಿದುಬರುವುದು. ನಿಮ್ಮ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದು. ಸ್ಕ್ರೋಲ್ ಡೌನ್ ಮಾಡಿ.

ಆಯುರ್ವೇದದ ದೃಷ್ಟಿಕೋನ
ಆಯುರ್ವೇದದ ಪ್ರಕಾರ ಮೀನು ಮಾಂಸಾಹಾರಿಯಾಗಿದೆ, ಹಾಲು ಕೂಡ ಪ್ರಾಣಿ ಉತ್ಪನ್ನವಾದರೂ ಇದನ್ನು ಸಸ್ಯಾಹಾರವೆಂದು ಪರಿಗಣಿಸಲಾಗಿದೆ. ತತ್ವಶಾಸ್ತ್ರದ ಪ್ರಕಾರವು ಈ ಸಂಯೋಜನೆಯು ಹೊಂದಾಣಿಯಾವುದಿಲ್ಲವೆಂದು ಪರಿಗಣಿಸುತ್ತದೆ. ಇವೆರಡನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆ ಉಂಟಾಗಬಹುದು. ಇದರಿಂದಾಗಿ ಚರ್ಮದ ವರ್ಣದ್ರವ್ಯವು ಬದಲಾಗಬಹುದು ಅಥವಾ ಲ್ಯುಕೋಡರ್ಮಾ ಎನ್ನುವ ಕಾಯಿಲೆ ಬರಬಹುದು. ಹಾಲು ತಂಪನ್ನು ಉಂಟುಮಾಡಿದರೆ ಮೀನು ಉಷ್ಣವನ್ನು ಉಂಟು ಮಾಡುವುದು. ಇದನ್ನು ಜತೆಯಾಗಿ ಸೇವಿಸಿದರೆ ಅದರಿಂದ ದೇಹವು ಶಕ್ತಿಯ ಬಿಡುಗಡೆ ಮಾಡುವುದು. ಇದು ದೇಹಕ್ಕೆ ಹಾನಿಕಾರ ಮತ್ತು ಅಲರ್ಜಿ ಉಂಟು ಮಾಡಬಹುದು.

ವೈಜ್ಞಾನಿಕ ದೃಷ್ಟಿಕೋನ
ವೈಜ್ಞಾನಿಕ ತತ್ವಶಾಸ್ತ್ರದ ಪ್ರಕಾರ ಇಂದಿನ ತನಕ ಹಾಲು ಮತ್ತು ಮೀನು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಾಬೀತಾಗಿಲ್ಲ. ಕೆಲವೊಂದು ಆಹಾರಗಳನ್ನು ತಯಾರಿಸುವಂತಹ ವಿಧಾನಗಳು ಕೂಡ ಬದಲಾಗಿದೆ. ಅದರಲ್ಲೂ ಮೆಡಿಟೇರಿಯನ್ ಆಹಾರದಲ್ಲಿ ಮೊಸರು, ಮೀನು ಮತ್ತು ಹಾಲನ್ನು ಬಳಸಲಾಗುವುದು ಮತ್ತು ಪೋಷಕಾಂಶ ತಜ್ಞರ ಪ್ರಕಾರ ಇದು ಆರೋಗ್ಯಕ್ಕೆ ತುಂಬಾ ಲಾಭಕರ. ಹೃದಯ ಮತ್ತು ಮೆದುಳಿನ ಕಾಯಿಲೆಗೆ ಇದು ತುಂಬಾ ಲಾಭಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary

Is it healthy to drink milk after having fish?

When we tried to explore that whether the above-mentioned statement had a unanimous answer, we actually failed! Well, to be frank, the failure was enlightening and helped us analyse the agenda on three parameters that are-Ayurveda, science and human body immunity. This also reminded us of our grandmothers and mothers who usually guide us not to consume any savoury food before and after consuming milk.
Story first published: Friday, September 22, 2017, 20:19 [IST]
X
Desktop Bottom Promotion