ಒಂದೆರಡು ದಿನಗಳಲ್ಲಿಯೇ ಜ್ವರ ಕಡಿಮೆ ಮಾಡುವ ಪವರ್ ಫುಲ್ ಮನೆಮದ್ದುಗಳು

Posted By: Lekhaka
Subscribe to Boldsky

ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಸಲ ಜ್ವರ ಕಾಣಿಸಿಕೊಳ್ಳುವುದು. ಆದರೆ ಈ ಜ್ವರ ಹೇಗೆ ಬರುತ್ತದೆ? ನಮ್ಮ ದೇಹದ ಮೇಲೆ ಹೊರಗಿನ ಬ್ಯಾಕ್ಟೀರಿಯಾ ಅಥವಾ ವೈರಸ್ ದಾಳಿ ಮಾಡಿದಾಗ ಅದಕ್ಕೆ ದೇಹವು ಪ್ರತಿಕ್ರಿಯಿಸುವಂತಹ ರೀತಿಯೇ ಜ್ವರ. ಬೇರೆ ಯಾವುದೇ ರೀತಿಯ ರೋಗದ ಲಕ್ಷಣಗಳನ್ನು ತೋರಿಸಲು ಜ್ವರ ಬರಬಹುದು. ಶೀತ ಮತ್ತು ಫ್ಲೂನಿಂದ ಉಂಟಾಗಿರುವ ಸೋಂಕಿನ ವಿರುದ್ಧ ದೇಹವು ಹೋರಾಡುವಾಗ ಜ್ವರ ಬರಬಹುದು.

ಇದಕ್ಕೆ ಹಲವಾರು ಕಾರಣಗಳು ಇದರಬಹುದು. ಕಿವಿಯ ಸೋಂಕು, ಇತರ ಕಾಯಿಲೆ, ಉರಿಯೂತದ ರೋಗಗಳು ಅಥವಾ ಹವಾಮಾನದಲ್ಲಿ ಹಠಾತ್ ಬದಲಾವಣೆ ಆಗುವುದರಿಂದ ಮತ್ತು ಸ್ವಚ್ಛತೆಯಿಲ್ಲದ ಜೀವನಶೈಲಿಯಿಂದಾಗಿ ಜ್ವರ ಬರಬಹುದು. ದೇಹದ ಉಷ್ಣಾಂಶವು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಆಗ ಅದನ್ನು ಜ್ವರ ಎಂದು ಕರೆಯಲಾಗುವುದು. ವಯಸ್ಕರದಲ್ಲಿ ದೇಹದ ಉಷ್ಣತೆಯು 99 ರಿಂದ 99.5 ಡಿಗ್ರಿ ಎಫ್ ಇರುವುದು.

ಡೆಂಗ್ಯೂ ಜ್ವರಕ್ಕೆ 9 ಬಗೆಯ ಮನೆಮದ್ದು

37.2ರಿಂದ 37.5 ಸಿ ಇದು ಜ್ವರದ ಲಕ್ಷಣವಾಗಿದೆ. ಜ್ವರದ ಕೆಲವೊಂದು ಸಾಮಾನ್ಯ ಲಕ್ಷಣಗಳೆಂದರೆ ನಿಶ್ಯಕ್ತಿ, ಬೆವರುವುದು, ತಲೆನೋವು, ಸ್ನಾಯು ಸೆಳೆತ, ನಿರ್ಜಲೀಕರಣ, ಹಸಿವಾಗದೆ ಇರುವುದು ಇತ್ಯಾದಿ. ಜ್ವರ ನಿಮಗೆ ತೊಂದರೆ ನೀಡುತ್ತಿದೆ ಮತ್ತು ಅದರಿಂದ ನೀವು ಮುಕ್ತಿ ಪಡೆಯಬೇಕೆಂದು ಬಯಸಿದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ....  

ತುಳಸಿ ಎಲೆಗಳು

ತುಳಸಿ ಎಲೆಗಳು

ಜ್ವರ ಕಡಿಮೆ ಮಾಡಲು ತುಳಸಿ ಒಳ್ಳೆಯ ಮನೆಮದ್ದು. ಇದರಲ್ಲಿ ಆ್ಯಂಟಿಬಯೋಟಿಕ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿಗುಣಗಳು ಇವೆ. ಇದು ಜ್ವರ ನಿವಾರಣೆ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

*1 ಚಮಚ ತುಳಸಿ ಮತ್ತು ¼ ಚಮಚ ಕರಿಮೆಣಸಿನ ಹುಡಿಯನ್ನು ಒಂದು ಕಪ್ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ.

*ಐದು ನಿಮಿಷ ಕುದಿಯಲು ಬಿಡಿ. ಸೋಸಿಕೊಂಡ ಬಳಿಕ ಈ ನೀರನ್ನು ಕುಡಿಯುತ್ತಾ ಇರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಇದು ಜ್ವರ ಬಂದಾಗ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ಇದರಲ್ಲಿರುವ ಅಲಿಸಿನ್ ಎನ್ನುವ ಅಂಶವು ಕೀಟಾಣುಗಳನ್ನು ಕೊಂಡು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು.

*ಒಂದು ಬೆಳ್ಳುಳ್ಳಿ ಎಸಲನ್ನು ಜಜ್ಜಿಕೊಂಡು ಅದನ್ನು ಅರ್ಧ ಕಪ್ ಬಿಸಿ ನೀರಿಗೆ ಹಾಕಿ ಕುದಿಸಿ. ಸೋಸಿಕೊಂಡ ಬಳಿಕ ದಿನದಲ್ಲಿ ಎರಡು ಸಲ ಕುಡಿಯಿರಿ.

ಶುಂಠಿ

ಶುಂಠಿ

ಜ್ವರಕ್ಕೆ ಶುಂಠಿಯು ಹೇಳಿ ಮಾಡಿಸಿದಂತಹ ಅದ್ಭುತ ಔಷಧಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಅಜೋನೆ ಎನ್ನುವ ಅಂಶವು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕನ್ನು ತಡೆಯುವುದು.

*ಒಂದು ಇಂಚಿನಷ್ಟು ದೊಡ್ಡ ಶುಂಠಿ ತುರಿಯಿರಿ ಮತ್ತು ಇದನ್ನು ಕುದಿಯುತ್ತಿರುವ ಅರ್ಧಕಪ್ ನೀರಿಗೆ ಹಾಕಿ.

*ಇದಕ್ಕೆ ಎರಡು ಚಮಚ ಲಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಕುಡಿಯಿರಿ.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಜ್ವರಕ್ಕೆ ಆ್ಯಪಲ್ ಸೀಡರ್ ವಿನೇಗರ್ ಮತ್ತೊಂದು ಒಳ್ಳೆಯ ಮನೆಮದ್ದು. ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಅಲ್ಕಲೈನ್ ದೇಹದಲ್ಲಿ ಪಿಎಚ್ ಮಟ್ಟವನ್ನು ಕಾಪಾಡಿ ಜ್ವರದ ವಿರುದ್ಧ ಹೋರಾಡುವುದು. ಇದು ಖನಿಜಾಂಶಗಳಿಂದಲೂ ಸಮೃದ್ಧವಾಗಿದೆ. ಜ್ವರದ ವೇಳೆ ಕಳೆದುಕೊಂಡಿರುವ ಖನಿಜಾಂಶಗಳನ್ನು ಇದರಿಂದ ಪಡೆಯಬಹುದು.

*ಎರಡು ಚಮಚ ಆ್ಯಪಲ್ ಸೀಡರ್ ವಿನೇಗರ್ ಅನ್ನು ಒಂದು ಚಮಚ ಜೇನುತುಪ್ಪದ ಜತೆಗೆ ಬೆರೆಸಿಕೊಳ್ಳಿ. ಇದನ್ನು ಒಂದು ಲೋಟ ನೀರಿಗೆ ಹಾಕಿ ದಿನದಲ್ಲಿ ಎರಡು ಸಲ ಸೇವಿಸಿ.

ದಾಲ್ಚಿನಿ

ದಾಲ್ಚಿನಿ

ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಫಂಗಲ್ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಇದರಿಂದ ಜ್ವರ, ಕಫ ಮತ್ತು ಶೀತವು ಕಡಿಮೆಯಾಗುವುದು.

*ಒಂದು ಚಮಚ ಜೇನುತುಪ್ಪದ ಜತೆಗೆ ½ ಚಮಚ ದಾಲ್ಚಿನಿ ಹುಡಿ ಬೆರೆಸಿಕೊಂಡು ದಿನದಲ್ಲಿ ಮೂರು ಸಲ ಸೇವಿಸಿ.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವು ಪ್ರಕೃತಿ ಮಾತೆಯ ಉಡುಗೊರೆಯಾಗಿದೆ. ಇದು ಜ್ವರ ಸಹಿತ ವಿವಿಧ ರೀತಿಯ ಕಾಯಿಲೆಗಳ ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಜ್ವರಕ್ಕೆ ಚಿಕಿತ್ಸೆ ನೀಡಲು ಸಹಕಾರಿ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಲಿಂಬೆರಸ ಬೆರೆಸಿಕೊಂಡು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ನಿಧಾನವಾಗಿ ಕುಡಿಯುತ್ತಿರಿ.

ಒಣದ್ರಾಕ್ಷಿ

ಒಣದ್ರಾಕ್ಷಿ

ಒಣದ್ರಾಕ್ಷಿಯು ತುಂಬಾ ರುಚಿ ಮತ್ತು ಆರೋಗ್ಯಕಾರಿಯಾಗಿರುವ ಕಾರಣದಿಂದ ಇದನ್ನು ಹಸಿಯಾಗಿ ಅಥವಾ ಯಾವುದಾದರೂ ಪದಾರ್ಥಕ್ಕೆ ಹಾಕಿಕೊಂಡು ತಿನ್ನಬಹುದು. ಒಣದ್ರಾಕ್ಷಿಯಲ್ಲಿ ಫೆನೊಲಿಕ್ ಪೈಥೋನ್ಯೂಟ್ರಿಯಂಟ್ಸ್ ಗಳಿವೆ. ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿಯಾಗಿ ಕೆಲಸ ಮಾಡುವುದು.

*20-25 ಒಣದ್ರಾಕ್ಷಿಯನ್ನು ಅರ್ಧ ಕಪ್ ನೀರಿನಲ್ಲಿ ನೆನೆಯಲು ಹಾಕಿ. ದ್ರಾಕ್ಷಿ ಮೆತ್ತಗಾಗಲಿ.

*ನೆನೆಸಿದ ದ್ರಾಕ್ಷಿಗಳನ್ನು ಹಿಚುಕಿಕೊಂಡು ನೀರನ್ನು ತೆಗೆಯಿರಿ.

*ಇದಕ್ಕೆ ಒಂದು ಲಿಂಬೆಯ ರಸ ಹಾಕಿಕೊಂಡು ದಿನದಲ್ಲಿ ಎರಡು ಸಲ ಸೇವಿಸಿ.

ಅರಿಶಿನ

ಅರಿಶಿನ

ಅರಿಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಎನ್ನುವ ಅಂಶವು ಉರಿಯೂತ ಶಮನಕಾರಿಯಾಗಿ ಕೆಲಸ ಮಾಡುವುದು. ಇದು ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿಯಾಗಿ ಕೆಲಸ ಮಾಡಿ ಜ್ವರದ ವಿರುದ್ಧ ಹೋರಾಡುವುದು.

*ಎರಡು ಚಮಚ ಅರಶಿನ ಹುಡಿಯನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ಕುಡಿಯಿರಿ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಕೆಲವೊಂದು ಅದ್ಭುತವಾದ ಆರೋಗ್ಯ ಲಾಭಗಳು ಇವೆ. ಪಾಲಿಫೆನಾಲ್ಸ್ ಮತ್ತು ಫ್ಲಾವನಾಯ್ಡ್ ಗಳು ಪ್ರತಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು.

*ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಗ್ರೀನ್ ಟೀ ಬ್ಯಾಗ್ ಮುಳುಗಿಸಿ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ.

ಮಲ್ಲಿಗೆ ಹೂವು

ಮಲ್ಲಿಗೆ ಹೂವು

ಜ್ವರ ನಿವಾರಣೆ ಮಾಡಲು ರಾತ್ರಿ ಮಲ್ಲಿಗೆ ಒಂದು ಪರಿಣಾಮಕಾರಿ ಮನೆಮದ್ದಾಗಿದೆ. ಇದರ ಎಲೆಗಳಲ್ಲಿ ಇರುವಂತಹ ಪ್ರಬಲ ವೈರಲ್ ವಿರೋಧಿ ಗುಣಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ವಿರುದ್ಧ ಹೋರಾಡುವುದು.

*5-8 ಎಲೆಗಳನ್ನು ಜಜ್ಜಿಕೊಂಡು ಅದರ ಜ್ಯೂಸ್ ತೆಗೆಯಿರಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ.

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.

ಸಾಸಿವೆ ಕುದಿಸಿದ ನೀರು ಕುಡಿಸಿ

ಸಾಸಿವೆ ಕುದಿಸಿದ ನೀರು ಕುಡಿಸಿ

ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚ ಸಾಸಿವೆ ಸೇರಿಸಿ ಐದು ನಿಮಿಷ ಹಾಗೇ ಬಿಡಿ. ಬಳಿಕ ಸೋಸಿದ ನೀರನ್ನು ಸಾಧ್ಯವಿದ್ದಷ್ಟು ಬಿಸಿಯಾಗಿಯೇ ಕುಡಿಸಿ.

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಒಂದು ಲಿಂಬೆಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಪ್ರತಿ ಅರ್ಧಹಣ್ಣನ್ನು ಪಾದದಡಿ ಇಟ್ಟು ಒದ್ದೆಯಾದ ಹತ್ತಿಯ ಕಾಲುಚೀಲಗಳನ್ನು ಧರಿಸಿ. ಇದರ ಮೇಲೆ ಒಣಗಿದ ಉಣ್ಣೆಯ ಬಟ್ಟೆ ಅಥವಾ ಕಾಲುಚೀಲ ಧರಿಸಿ. ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಒಂದು ಒದ್ದೆಬಟ್ಟೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಸವರಿ ಮೊಟ್ಟೆ ಸವರಿದ ಭಾಗ ಪಾದಗಳಿಗೆ ತಾಕುವಂತಿಟ್ಟು ಅದರ ಮೇಲೆ ಉಣ್ಣೆಯ ಕಾಲುಚೀಲ ಧರಿಸಿ. ರಾತ್ರಿ ಧರಿಸಿ ಮಲಗಿದ್ದು ಬೆಳಿಗ್ಗೆದ್ದಾಗ ಜ್ವರ ಕಡಿಮೆಯಾಗುತ್ತದೆ.

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಜ್ವರ ಹೆಚ್ಚಿದ್ದರೆ ಅರ್ಧ ಕಪ್ ನೀರಿಗೆ ಸುಮಾರು ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಹಾಕಿ ಕೊಂಚಕಾಲ ನೆನೆಸಿ. ಬಳಿಕ ಈ ದ್ರಾಕ್ಷಿಗಳನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ.

English summary

Indian Home Remedies For Fever

Fever is a natural response to any pathogenic bacteria and viruses that attack the body. Fever is a symptom of another condition or illness. It occurs when your body is fighting an infection caused by a cold or flu. If a fever is making you uncomfortable and you want to get rid of it, you can try out these simple and easy Indian home remedies for fever.