ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ನೈಸರ್ಗಿಕ ಆಹಾರಗಳು

By: Arshad
Subscribe to Boldsky

ನೀವು ಆರೋಗ್ಯಕರ ಜೀವನ ಕ್ರಮ ಅನುಸರಿಸುತ್ತಿರಬಹುದು ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿಯನ್ನೂ ವಹಿಸುತ್ತಿದ್ದಿರಬಹುದು. ಆದರೆ ನಿಮ್ಮ ಲೈಂಗಿಕ ಜೀವನ. ದೇಹ ಹಾಗೂ ವಿಶೇಷವಾಗಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಆಹಾರ ಹಾಗೂ ಸೂಕ್ತ ವ್ಯಾಯಾಮಗಳನ್ನು ಅನುಸರಿಸಿ ಯಾವುದೇ ದೌರ್ಬಲ್ಯವಿಲ್ಲದಂತೆ ದೇಹವನ್ನು ಸಿದ್ಧಪಡಿಸಿರಬಹುದು. ಆದರೆ ಸಂತಾನ ಫಲ ಪಡೆಯಲು ಇಷ್ಟಿದ್ದರೆ ಸಾಲದು, ವೀರ್ಯಾಣುಗಳ ಸಂಖ್ಯೆಯೂ ಸಾಕಷ್ಟಿರಬೇಕು.

ಗರ್ಭಾಂಕುರಗೊಳ್ಳಲು ಕೇವಲ ಒಂದು ವೀರ್ಯಾಣುವಿನ ಅಗತ್ಯವಿದ್ದರೂ ಕನಿಷ್ಠ ಹದಿನಾಲ್ಕು ಹದಿನೈದು ಮಿಲಿಯನ್ ನಷ್ಟು ಪ್ರತಿ ಸಿಸಿ ಯಲ್ಲಿ ಸಾಂದ್ರತೆ ಇರಬೇಕು ಎಂದು ನಿಸರ್ಗ ಏಕಾಗಿ ನಿಯಮ ಮಾಡಿದೆಯೋ ಅರ್ಥವಾಗಿಲ್ಲ. ವಾಸ್ತವವಾಗಿ ಇದರಿಂದ ಅತ್ಯುತ್ತಮವಾದ ಆರೋಗ್ಯವುಳ್ಳ ವೀರ್ಯಾಣುವಿನಿಂದ ಆರೋಗ್ಯವಂತ ಸಂತಾನ ಪ್ರಾಪ್ತವಾಗಲು ಸಾಧ್ಯವಾಗುತ್ತದೆ.

ಈ ಅಭ್ಯಾಸಗಳು ವೀರ್ಯಾಣು ಸಂಖ್ಯೆ ಕಮ್ಮಿ ಮಾಡುವುದು!

ಗರ್ಭಾಂಕುರಗೊಳ್ಳಲು ಪ್ರತಿ ಸಿಸಿ ವೀರ್ಯಯದಲ್ಲಿ ಎಷ್ಟು ಮಿಲಿಯನ್ ಆರೋಗ್ಯಕರ ವೀರ್ಯಾಣುಗಳಿವೆ, ಎಷ್ಟು ಚಲನಶೀಲವಾಗಿಲ್ಲ, ಹಾಗೂ ದ್ರವದ ಆಮ್ಲೀಯತೆ ಮೊದಲಾದ ಅಂಶಗಳು ಪ್ರಾಮುಖ್ಯತೆ ಪಡೆದಿವೆ. ನಿಸರ್ಗದ ಅಚ್ಚರಿ ಎಂದರೆ ಪ್ರತಿ ವೀರ್ಯಾಣುವಿನಲ್ಲಿ ಜೀವವೊಂದು ರೂಪುಗೊಳ್ಳಲು ಅರ್ಧದಷ್ಟು ವಂಶವಾಹಿನಿಗಳಿರುತ್ತವೆ ಹಾಗೂ ಉಳಿದರ್ಧ ತಾಯಿಯ ಅಂಡಾಣುವಿನಲ್ಲಿರುತ್ತವೆ. ಇವೆರಡರ ಮಿಲನದಿಂದ ತಂದೆತಾಯಿಯರ ವಂಶವಾಹಿನಿಯನ್ನು ಹೊತ್ತ ಸಂತಾನ ಸೃಷ್ಟಿಯಾಗುತ್ತದೆ. ಆದ್ದರಿಂದ ತಂದೆಯಾಗಬಯಸುವವರು ತಮ್ಮ ಆರೋಗ್ಯದ ಜೊತೆಗೇ ತಮ್ಮ ವೀರ್ಯಾಣುಗಳು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಒಂದು ವೇಳೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಅಗತ್ಯಕ್ಕೂ ಕಡಿಮೆ ಇದ್ದರೆ ಇದನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಆಹಾರಗಳ ಬಗ್ಗೆ ಅರಿಯೋಣ....  

ಬಾಳೆಹಣ್ಣು

ಬಾಳೆಹಣ್ಣು

ನಮಗೆ ನಿಸರ್ಗ ನೀಡಿರುವ ಹಲವಾರು ಆಹಾರಗಳ ಆಕಾರ ಆ ಆಕಾರ ಪಡೆದಿರುವ ಅಂಗಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಉದಾಹರಣೆಗೆ ಅಕ್ರೋಟು ಮೆದುಳಿಗೆ, ಬೀನ್ಸ್ ಕಾಳುಗಳು ಮೂತ್ರಪಿಂಡಗಳಿಗೆ ಇತ್ಯಾದಿ. ಅಂತೆಯೇ ಬಾಳೆಹಣ್ಣು ಪುರುಷಾಂಗದ ಆಕಾರವನ್ನು ಹೆಚ್ಚು ಹೋಲುತ್ತದೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ವಿಟಮಿನ್ ಬಿ1, ಸಿ ಹಾಗೂ ಮೆಗ್ನೀಶಿಯಂ ವೀರ್ಯಾಣುಗಳ ಸಂಖ್ಯೆ ಹಾಗೂ ಹೆಚ್ಚು ಕಾರ್ಯಶೀಲತೆ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ಬ್ರೋಮೆಲಿಯಾಡ್ ಎಂಬ ಪೋಷಕಾಂಶವಿದೆ, ಇದು ಒಂದು ಅಪರೂಪದ ಕಿಣ್ವವಾಗಿದ್ದು ಲೈಂಗಿಕ ರಸದೂತಗಳನ್ನು ನಿಯಂತ್ರಿಸುವ ಗುಣ ಹೊಂದಿದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಇದೊಂದು ಉತ್ತಮ ಕಾಮೋತ್ತೇಜಕವಾಗಿದ್ದು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಎಲ್-ಆರ್ಜಿನೈನ್ ಎಂಬ ಆಮೈನೋ ಆಮ್ಲ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವುದು ಮಾತ್ರವಲ್ಲ, ಇದು ಕಾಮೋತ್ತೇಜನವನ್ನೂ ಉತ್ತಮಗೊಳಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಸಹಾ ಉತ್ತಮ ಪ್ರಮಾಣದಲ್ಲಿವೆ. ಆದರೆ ಇದು ಪ್ರಬಲ ಅಹಾರವಾದ ಕಾರಣ ಇದರ ಪ್ರಮಾಣ ಮಿತವಾಗಿರಬೇಕು.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಹೆಚ್ಚು ತಿನ್ನಿ ಎಂದು ನಮಗೆಲ್ಲಾ ವೈದ್ಯರು ತಿಳಿಸುತ್ತಲೇ ಇರುತ್ತಾರೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದೆ. ಇದು ವೀರ್ಯಾಣುಗಳಿಗೆ ಅಗತ್ಯವಿರುವ ಅವಶ್ಯಕ ಪೋಷಕಾಂಶವಾಗಿದೆ. ಪರಿಣಾಮವಾಗಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ. ಒಂದು ವೇಳೆ ದೇಹದಲ್ಲಿ ಫೋಲಿಕ್ ಆಮ್ಲದ ಪ್ರಮಾಣ ಕಡಿಮೆಯಾದರೆ ವೀರ್ಯಾಣುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಇರು ವೀರ್ಯಾಣುಗಳು ಅಂಡಾಣುವಿನೊಡನೆ ಸಂಯೋಜನೆಗೊಳ್ಳಲು ಕಷ್ಟವಾಗಿಸುತ್ತದೆ. ಅಲ್ಲದೇ ಒಂದು ವೇಳೆ ಗರ್ಭಾಂಕುರವಾದರೂ ಹುಟ್ಟುವ ಮಗು ವೈಕಲ್ಯವಿಲ್ಲದೇ ಇರುವ ಖಾತ್ರಿಯಿಲ್ಲ.

ಮೊಟ್ಟೆ

ಮೊಟ್ಟೆ

ಮೊಟ್ಟೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಹಾಗೂ ಪ್ರೋಟೀನ್ ಇವೆ. ಇವು ಸಹಾ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಹಾಗೂ ಹೆಚ್ಚು ಚಲನಶೀಲವಾಗಿರಲು ನೆರವಾಗುತ್ತವೆ. ಅಲ್ಲದೇ ವೀರ್ಯಾಣುಗಳ ಜೀವಕೋಶಗಳನ್ನು ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದಲೂ ರಕ್ಶಿಸುತ್ತದೆ. ಪರಿಣಾಮವಾಗಿ ಉತ್ತಮ ಗುಣಮಟ್ಟದ ಹಾಗೂ ಉತ್ತಮ ಸಂಖ್ಯೆಯಲ್ಲಿರುವ ವೀರ್ಯಾಣುಗಳು ಫಲಿತಗೊಳ್ಳುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.

ಗೋಜಿ ಬೆರ್ರಿಗಳು

ಗೋಜಿ ಬೆರ್ರಿಗಳು

ಚೀನಾದಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ನಲವತ್ತೆರಡು ಪುರುಷರಿಗೆ ಗೋಜಿ ಬೆರ್ರಿ ಹಣ್ಣುಗಳನ್ನು ನಿತ್ಯವೂ ತಿನ್ನಲು ನೀಡಲಾಗಿತ್ತು. ಬಳಿಕ ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರ ವೀರ್ಯಾಣುಗಳ ಸಂಖ್ಯೆ ಒಂದೇ ತಿಂಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಾಗಿದ್ದುದು ಕಂಡುಬಂದಿದೆ. ಈ ಬೆರ್ರಿಗಳು ಕೇವಲ ವೀರ್ಯಾಣುಗಳ ಸಂಖ್ಯೆ ಮಾತ್ರವಲ್ಲ, ಮನೋಭಾವವನ್ನೂ ಉತ್ತಮಗೊಳಿಸುತ್ತವೆ ಹಾಗೋ ವಿಶೇಷವಾಗಿ ವೀರ್ಯಾಣುಗಳ ಉತ್ಪಾದನೆಗೆ ವೃಷಣಗಳು ಕಾಪಾಡಿಕೊಳ್ಳಬೇಕಾದ ತಾಪಮಾನವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ ಹಾಗೂ ಹಾನಿಕಾರಕ ಫ್ರೀ ರ್‍ಯಾಡಿಕಲ್ ಕಣಗಳಿಂದಲೂ ರಕ್ಷಿಸುತ್ತವೆ. ಈ ಹಣ್ಣುಗಳನ್ನು ಭಾರತದಲ್ಲಿ ಬೆಳೆಯುವುದಿಲ್ಲವಾದರೂ ಆನ್ಲೈನ್ ಮೂಲಕ ತರಿಸಿಕೊಳ್ಳಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದೊಂದು ಅದ್ಭುತ ಆಹಾರವಾಗಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೂ ಇನ್ನೂ ಹಲವಾರು ರೀತಿಯಲ್ಲಿ ಆರೋಗ್ಯವನ್ನು ವೃದ್ದಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ ಬಿ೬ ಆರೋಗ್ಯವಂತ ವೀರ್ಯಾಣುಗಳನ್ನು ಉತ್ಪಾದಿಸಲು ನೆರವಾಗುತ್ತದೆ. ಅಲ್ಲದೇ ವೃಷಣಗಳಿಗೆ ರಕ್ತಸಂಚಾರ ಹೆಚ್ಚಿಸಲೂ ನೆರವಾಗುತ್ತದೆ.

ಅಕ್ರೋಟು

ಅಕ್ರೋಟು

2012 ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಪ್ರಕಟಿಸಿದ ವರದಿಯೊಂದರ ಪ್ರಕಾರ ಪ್ರತಿದಿನ ಸುಮಾರು 75ಗ್ರಾಂ ನಷ್ಟು ಅಕ್ರೋಟು ಸೇವಿಸುವ ಪುರುಷರ ವೀರ್ಯಾಣುಗಳ ಗುಣಮಟ್ಟ, ಕಾರ್ಯಶೀಲತೆ ಹಾಗೂ ಜೀವಶಕ್ತಿ ಹೆಚ್ಚುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಎಲ್-ಆರ್ಜಿನೈನ್ ಎಂಬ ಪೋಷಕಾಂಶಕ್ಕೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣವಿದೆ.

ದಾಳಿಂಬೆ

ದಾಳಿಂಬೆ

ಸ್ವರ್ಗದ ಫಲ ಎಂದೇ ಪರಿಗಣಿಸಲಾಗುವ ದಾಳಿಂಬೆ ಸಹಾ ಇನ್ನೊಂದು ಅದ್ಭುತ ಆಹಾರವಾಗಿದ್ದು ವೀರ್ಯಾಣುಗಳಿಗೂ ಉತ್ತಮವಾಗಿದೆ. ಇದರ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಉತ್ತಮಗೊಳ್ಳುತ್ತದೆ.

ದಾಳಿಂಬೆ

ದಾಳಿಂಬೆ

ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ವೀರ್ಯಾಣುಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ವೀರ್ಯಾಣುಗಳ ಆರೋಗ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ. ದಾಳಿಂಬೆ ರಸದ ನಿಯಮಿತ ಸೇವನೆಯಿಂದ ಫಲವತ್ತತೆಯೂ ಹೆಚ್ಚುತ್ತದೆ.

ಅಶ್ವಗಂಧ (ಭಾರತೀಯ ಜಿನ್ ಸೆಂಗ್)

ಅಶ್ವಗಂಧ (ಭಾರತೀಯ ಜಿನ್ ಸೆಂಗ್)

ಇದೊಂದು ಉತ್ತಮವಾದ ಕಾಮೋತ್ತೇಜನಕವಾಗಿದ್ದು ವೀರ್ಯಾಣುಗಳಿಗೂ ಉತ್ತಮವಾಗಿದೆ. 2013ರಲ್ಲಿ ನಡೆಸಿದ ಅಧ್ಯಯನವೊಂದರೆ ಪ್ರಕಾರ ಅಶ್ವಗಂಧದ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ, ಕಾರ್ಯಶೀಲತೆ ಹಾಗೂ ಜೀವಶಕ್ತಿ ಹೆಚ್ಚುತ್ತದೆ. ಅಶ್ವಗಂಧದ ಪುಡಿಯನ್ನು ನಿತ್ಯವೂ ಹಾಲಿನಲ್ಲಿ ಬೆರೆಸಿ ಅಥವಾ ಕ್ಯಾಪ್ಸೂಲ್ ರೂಪದಲ್ಲಿ ಸೇಇಸಬಹುದು.

English summary

How to increase sperm count naturally: Eat these food items

You might be leading a healthy lifestyle and taking care of your body but what about your sexual life? There are several exercises you can do and food you can eat to improve the health of your penis. These foods and nutrients will have a positive effect on the penile performance. However, if you are planning to have a baby, the first thing you should check is the health of your sperm. The sperm count, its motility and volume have a direct connection to your chances of having a baby. The sperms, tiny male reproductive cells, are necessary to make baby along with the egg.
Please Wait while comments are loading...
Subscribe Newsletter