Latest Updates
-
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್
ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಇಲ್ಲಿದೆ ನೋಡಿ ಮನೆಮದ್ದುಗಳು
ಎಷ್ಟೋ ಕುಟುಂಬಗಳ ಹಿರಿಯರಿಗೆ ಪ್ರಯಾಣದ ವಿಷಯ ಬಂದ ಕೂಡಲೇ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡುತ್ತವೆ. ಏಕೆಂದರೆ ಕುಟುಂಬದಲ್ಲಿ ಒಂದಿಬ್ಬರಿಗಾಗರೂ ಇರುವ ಪ್ರಯಾಣದ ವಾಕರಿಕೆ. ಚಿಕ್ಕವರಿದ್ದಾಗ ಹೆಚ್ಚಿರುವ ಈ ತೊಂದರೆ ವಯಸ್ಸಾಗುತ್ತಿದ್ದಂತೆ ತನ್ನಿಂತಾನೇ ಕಡಿಮೆಯಾಗುತ್ತಾ ಹೋಗುತ್ತದೆ.
ಆದರೆ ಕೆಲವರಿಗೆ ಮಾತ್ರ ಎಷ್ಟೇ ಪ್ರಯತ್ನಪಟ್ಟರೂ ಬಸ್ಸಿನ ಅಥವಾ ಕಾರಿನ ಕುಲುಕಾಟ ಪ್ರಾರಂಭವಾದ ತಕ್ಷಣ ವಾಕರಿಕೆ ಕಡ್ಡಾಯ ಎಂಬಂತೆ ಪ್ರಾರಂಭವಾಗಿಬಿಡುತ್ತದೆ. ಕೆಲವರಿಗಂತೂ ವಾಕರಿಕೆ ಪ್ರಾರಂಭವಾದ ಬಳಿಕ ಸಾಮಾನ್ಯ ಸ್ಥಿತಿಗೆ ಬರಲು ಹಲವಾರು ದಿನಗಳೇ ಬೇಕಾಗುತ್ತವೆ. ಆದರೆ ಇದೇನೂ ನಿಯಂತ್ರಣಕ್ಕೆ ಬಾರದೇ ಇರುವ ತೊಂದರೆಯಂತೂ ಅಲ್ಲ. ಇಂದು ಈ ತೊಂದರೆಗೆ ಸಿಲುಕದಿರಲು ಸಹಾಯ ಮಾಡುವ ಹಲವರು ಮನೆ ಔಷಧಿಗಳಿವೆ...ಬನ್ನಿ ಅವು ಯಾವುದು ಎಂಬುದನ್ನು ನೋಡೋಣ....

ಕಾಳುಮೆಣಸು
ಒಂದು ಕಪ್ ಲಿಂಬೆ ರಸ ಬೆರೆಸಿದ ನೀರಿಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಕುಡಿದ ಬಳಿಕ ಪ್ರಯಾಣ ಆರಂಭಿಸಿ. ಈ ಮಿಶ್ರಣ ಪ್ರಯಾಣದ ಅವಧಿಯಲ್ಲಿ ಎದುರಾಗುವ ತಲೆನೋವು, ವಾಕರಿಕೆ ಮೊದಲಾದವುಗಳಿಂದಲೂ ರಕ್ಷಿಸುತ್ತದೆ.

ಪುದೀನಾ ಟೀ
ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಿ. ಇನ್ನೂ ಉತ್ತಮವೆಂದರೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೈಯಲ್ಲಿಯೇ ಹಿಡಿದಿರಿ. ವಾಹನ ಪ್ರಯಾಣ ಆರಂಭಿಸಿದ ತಕ್ಷಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಪೂರ್ಣವಾಗಿ ನೀರಾಗಿಸಿ ನುಂಗಿ. ಇದರಿಂದ ವಾಕರಿಕೆ ಬರುವುದಿಲ್ಲ.

ಶುಂಠಿಯ ಟೀ
ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣಿಸುತ್ತಿದ್ದರೆ ಪ್ರಯಾಣಕ್ಕೂ ಮುನ್ನ ಒಂದು ಲೋಟ ಹಸಿಶುಂಠಿಯ ಟೀ ಕುಡಿದು ಹೊರಡಿ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.

ದಾಲ್ಚಿನ್ನಿ(ಚಕ್ಕೆ)
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಒಂದು ಚಿಕ್ಕಚಮಚ ಚೆಕ್ಕಪುಡಿ ಹಾಗೂ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ. ಪ್ರಯಾಣಕ್ಕೂ ಮುನ್ನ ಈ ನೀರನ್ನು ಬಿಸಿಬಿಸಿಯಾಗಿ ಸೇವಿಸಿ ಹೊರಡಿ. ಇದರಿಂದಲೂ ವಾಕರಿಕೆಯಾಗುವುದಿಲ್ಲ.

ಲವಂಗ
ವಿಶೇಷವಾಗಿ ಬಸ್ ಪ್ರಯಾಣದ ಅವಧಿಗೂ ಮುನ್ನ ಒಂದೆರಡು ಲವಂಗಗಳನ್ನು ಬಾಯಿಗೆ ಹಾಕಿ ಜಗಿಯುತ್ತಿರಿ. ಪೂರ್ಣ ನೀರಾದ ಬಳಿಕ ನುಂಗಿ. ಆದರೆ ಲವಂಗ ಕೊಂಚ ಖಾರವಾಗಿರುವ ಕಾರಣ ಕೊಂಚ ಜೇನನ್ನೂ ಕೊಂಡು ಹೋಗಿ ಲವಂಗವನ್ನು ಜೇನಿನಲ್ಲಿ ಅದ್ದಿ ಸೇವಿಸಿ. ಇದರಿಂದ ವಾಕರಿಕೆ ಇಲ್ಲವಾಗುತ್ತದೆ.

ಏಲಕ್ಕಿ
ಒಂದು ವೇಳೆ ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ತಕ್ಷಣ ಏಲಕ್ಕಿಯೊಂದನ್ನು ಬಾಯಿಗೆ ಹಾಕಿ ಜಗಿಯಲು ಪ್ರಾರಂಭಿಸಿ.

ಕಾಳುಮೆಣಸು ಮತ್ತು ಲಿಂಬೆ
ಇದು ತಲೆನೋವು, ಪಿತ್ತೋದ್ರೇಕ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ. ಉಪ್ಪು ಅಥವಾ ಕರಿಮೆಣಸನ್ನು ಬಿಸಿಯಾದ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ ಮತ್ತು ಪ್ರಯಾಣಕ್ಕೆ ಮೊದಲು ಇದನ್ನು ಕುಡಿಯಿರಿ. ಇದು ಪಿತ್ತೋದ್ರೇಕ ಮತ್ತು ವಾಂತಿಯನ್ನು ತಡೆಯುತ್ತದೆ.

ಈರುಳ್ಳಿ ರಸ
ಇದು ವಾಂತಿ ಮತ್ತು ಪಿತ್ತೋದ್ರೇಕವನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತದೆ. ಮಿಕ್ಸಿಗೆ ಹಾಕಿ ಕೆಲವು ಈರುಳ್ಳಿಗಳನ್ನು ಪುಡಿಮಾಡಿ ಮತ್ತು ಅದರಿಂದ ರಸ ತೆಗೆಯಿರಿ. ಇದಕ್ಕೆ ನೀವು ಪುದೀನಾ ಸಾರವನ್ನು ಸೇರಿಸಬಹುದು. ಈ ಮಿಶ್ರಣವು ಪಿತ್ತೋದ್ರೇಕ ಮತ್ತು ವಾಂತಿಯನ್ನು ನಿಲ್ಲಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡಲಿದೆ.



Click it and Unblock the Notifications
