ಹೊಟ್ಟೆಯಲ್ಲಿ ಕಾಡುವ ಗ್ಯಾಸ್ ಅಬ್ಬರ-ಇಲ್ಲಿದೆ ನೋಡಿ ಪರಿಹಾರ

By: Deepak
Subscribe to Boldsky

ಊಟದ ನಂತರ ಹೊಟ್ಟೆ ಉಬ್ಬಿಕೊಳ್ಳುವ ಸಮಸ್ಯೆಯು ಹಲವರನ್ನು ಕಾಡುತ್ತದೆ. ಇದರಿಂದ ಆ ವ್ಯಕ್ತಿಗೆ ಊಟದ ಮೇಲೆ ಆಸೆ ಹೊಟ್ಟೆಯ ಮೇಲೆ ಕೋಪ ಎಂಬಂತಹ ಸ್ಥಿತಿ ಬರುತ್ತದೆ. ಹೊಟ್ಟೆ ಉಬ್ಬಿಕೊಳ್ಳುವ ಸಮಸ್ಯೆ ಅಥವಾ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದನ್ನು ಮೊದಲು ನಿವಾರಿಸಿಕೊಳ್ಳಬೇಕು ಎಂದು ನೀವು ಪರಿಹಾರಕ್ಕಾಗಿ ಹುಡುಕಾಡುತ್ತಿದ್ದೀರಲ್ಲವೇ?  ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು 7 ಉಪಾಯ

ಹಲವಾರು ಸಂದರ್ಭಗಳಲ್ಲಿ ಹೊಟ್ಟೆ ಉಬ್ಬಿಕೊಳ್ಳುವಿಕೆಯು ಅತಿಯಾದ ತಿನ್ನುವಿಕೆಯಿಂದ ಉಂಟಾಗುತ್ತದೆ. ಜೊತೆಗೆ ಮಲಬದ್ಧತೆ ಮತ್ತು ಕೆಲವೊಂದು ಆಹಾರಗಳ ಅಲರ್ಜಿಯಿಂದಾಗಿ, ಕಲುಷಿತ ಆಹಾರ ಸೇವನೆ ಹಾಗು ಹವಾಮಾನ ಸಮಸ್ಯೆಯಿಂದಾಗಿ ಸಹ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.   ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಲು ಟಿಪ್ಸ್

ಹಾಗಾದರೆ ಹೊಟ್ಟೆ ಉಬ್ಬಿಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಳ್ಳಬೇಕು? ಒಂದು ವೇಳೆ ನೀವು ಪದೇ ಪದೇ ಹೊಟ್ಟೆ ಉಬ್ಬಿಕೊಳ್ಳುವ ಸಮಸ್ಯೆಗೆ ತುತ್ತಾಗುತ್ತಿದ್ದಲ್ಲಿ ಬಹುಶಃ ನೀವು ಕೆಲವೊಂದು ಮಾತ್ರೆಗಳನ್ನು ಸೇವಿಸಲು ಆರಂಭಿಸಬಹುದು. ಮಾತ್ರೆಗಳು ನಿಮಗೆ ತತ್‌ಕ್ಷಣಕ್ಕೆ ಉಪಶಮನವನ್ನು ನೀಡಿದರೂ, ಮುಂದೆ ಅದರಿಂದ ಅಷ್ಟೇನೂ ಪ್ರಯೋಜನವಾಗದೆ ಆ ಮಾತ್ರೆಗಳು ಸಹ ನಿಮ್ಮ ದೇಹದ ಮೇಲೆ ಅಡ್ಡಪರಿಣಾಮವನ್ನು ತೋರಿಸಬಹುದು.   ಹೊಟ್ಟೆ ನೋವನ್ನು ಶಮನಗೊಳಿಸುವ ಮದ್ದು ಇಲ್ಲಿದೆ ನೋಡಿ!

ಅದಕ್ಕಾಗಿ ಕೆಲವೊಂದು ಸುಲಭವಾದ ಪರಿಹಾರೋಪಾಯಗಳನ್ನು ನಾವು ಇಂದು ನಿಮಗೆ ಸೂಚಿಸುತ್ತೇವೆ. ಇವುಗಳನ್ನು ಪಾಲಿಸಿ ನಿಮ್ಮ ಹೊಟ್ಟೆ ಉಬ್ಬುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಇದಕ್ಕೂ ಮೇಲಾಗಿ ಸಮಸ್ಯೆ ಇನ್ನೂ ಪರಿಹಾರವಾಗದಿದ್ದಲ್ಲಿ ತಪ್ಪದೆ ವೈದ್ಯರನ್ನು ಕಂಡು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳಿ. ಬನ್ನಿ ಆ ಪರಿಹಾರಗಳು ಯಾವುವು ಎಂದು ಒಮ್ಮೆ ನೋಡೋಣ....  

ಪಾನೀಯ ಸೇವನೆ ಮತ್ತು ಊಟದ ನಡುವಿನ ಅಂತರ

ಪಾನೀಯ ಸೇವನೆ ಮತ್ತು ಊಟದ ನಡುವಿನ ಅಂತರ

ಯಾವುದೇ ಪಾನೀಯ ಮತ್ತು ಊಟದ ಸೇವನೆಯ ನಡುವೆ 15 ನಿಮಿಷಗಳ ಅಂತರವಿರಲಿ. ಇದರಿಂದ ಹೊಟ್ಟೆ ಉಬ್ಬುವಿಕೆ ಹಾಗು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ತಪ್ಪುತ್ತದೆ.

ವ್ಯಾಯಾಮ

ವ್ಯಾಯಾಮ

ಸ್ವಲ್ಪ ದೂರ ನಡೆಯಿರಿ, ಊಟದ ನಂತರ ಕನಿಷ್ಠ 5 ನಿಮಿಷಗಳ ಕಾಲ ನಡೆಯಿರಿ. ಉಪಾಹಾರಕ್ಕೆ ಮೊದಲು ವ್ಯಾಯಾಮ ಮಾಡಿ ಹೊಟ್ಟೆ ಉಬ್ಬುವುದನ್ನು ತಡೆಯಿರಿ.

ಹೈನು ಉತ್ಪನ್ನಗಳನ್ನು ಸೇವಿಸಬೇಡಿ

ಹೈನು ಉತ್ಪನ್ನಗಳನ್ನು ಸೇವಿಸಬೇಡಿ

ಲ್ಯಾಕ್ಟೋಸ್ ಅಲರ್ಜಿ ಇರುವವರು ಆ ಆಹಾರವನ್ನು ಸೇವಿಸದೆ ಇದ್ದಲ್ಲಿ ಒಳ್ಳೆಯದು. ಇದರಿಂದ ಹೊಟ್ಟೆ ಉಬ್ಬಿಕೊಳ್ಳುವುದನ್ನು ತಪ್ಪಿಸಬಹುದು.

ಆಹಾರವನ್ನು ಸರಿಯಾಗಿ ಅಗಿಯಿರಿ

ಆಹಾರವನ್ನು ಸರಿಯಾಗಿ ಅಗಿಯಿರಿ

ಯಾವಾಗ ನೀವು ಆಹಾರವನ್ನು ಬೇಗ ಸೇವಿಸಲು ಆರಂಭಿಸುತ್ತೀರೋ, ಆಗ ಆಹಾರವನ್ನು ಸರಿಯಾಗಿ ಅಗಿಯುವುದಿಲ್ಲ, ಸುಮ್ಮನೆ ಆಹಾರವನ್ನು ನುಂಗಿ ಬಿಡುತ್ತೀರಿ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಧಾರಣೆ ಉಂಟಾಗುತ್ತದೆ ಮತ್ತು ಹೊಟ್ಟೆ ಉಬ್ಬಿಕೊಳ್ಳುತ್ತದೆ.

ಉಪ್ಪನ್ನು ಕಡಿಮೆ ಸೇವಿಸಿ

ಉಪ್ಪನ್ನು ಕಡಿಮೆ ಸೇವಿಸಿ

ಉಪ್ಪನ್ನು ಅಧಿಕವಾಗಿ ಸೇವಿಸಿದರೆ ಅದು ನೀರಿನ ಧಾರಣೆಯನ್ನು ಅಧಿಕಗೊಳಿಸುತ್ತದೆ. ಆದ್ದರಿಂದ ಉಪ್ಪು ತಿನ್ನಬೇಡಿ, ತಿಂದು ನೀರು ಕುಡಿಯಬೇಡಿ. ಆ ಮೂಲಕ ಹೊಟ್ಟೆ ಉಬ್ಬುವಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ಸೋಡಾವನ್ನು ಸೇವಿಸಬೇಡಿ

ಸೋಡಾವನ್ನು ಸೇವಿಸಬೇಡಿ

ಸೋಡಾ ಮತ್ತು ಕಾರ್ಬೋನೇಟ್ ಪಾನೀಯಗಳನ್ನು ಸೇವಿಸಬೇಡಿ. ಇದು ಹೊಟ್ಟೆ ಉಬ್ಬಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಯಾವಾಗ ಹೊಟ್ಟೆಯಲ್ಲಿ ಗ್ಯಾಸ್ ಅಧಿಕವಾಗುತ್ತದೆಯೋ, ಆಗ ಹೊಟ್ಟೆ ಊದಿಕೊಂಡು ನಿಮಗೆ ಅಸೌಖ್ಯವನ್ನುಂಟು ಮಾಡುತ್ತದೆ.

ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವಿಸಬೇಡಿ

ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವಿಸಬೇಡಿ

ನಿಮ್ಮ ನೆಚ್ಚಿನ ರಾಜ್ಮ, ಪೀಸ್ ಮತ್ತು ಮಸೂರ್ ದಾಲ್ ತಿಂದ ಮೇಲೆ ಹೊಟ್ಟೆ ಊದಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಈ ದ್ವಿದಳ ಧಾನ್ಯಗಳಲ್ಲಿ ನಾರಿನಂಶ ಮತ್ತು ಸಕ್ಕರೆ ಅಂಶ ಹೆಚ್ಚಾಗಿ ಇರುತ್ತದೆ. ಇದನ್ನು ದೇಹ ಹೀರಿಕೊಳ್ಳಲು ಕಷ್ಟಪಡುತ್ತದೆ. ಹಾಗಾಗಿ ನಿಮಗೆ ಹೊಟ್ಟೆ ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇದನ್ನು ಹೆಚ್ಚಾಗಿ ಸೇವಿಸಬೇಡಿ.

 
English summary

How To Avoid stomach-gas-bloating After Eating

How to cure stomach bloating? If you have been a constant victim of stomach bloating then you might be depending on certain tablets to release the gas and avoid stomach bloating. But, there are a few easy preventive steps that can help one to get rid of stomach bloating without much effort. However, if the problem persists for long then it is always better to get it checked with a doctor in order to avoid any complications. Listed here are a few of the best tested ways to avoid stomach bloating after eating. Take a look.
Subscribe Newsletter