Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಲು ಟಿಪ್ಸ್
ಹೊಟ್ಟೆ ಗ್ಯಾಸ್ ಸಮಸ್ಯೆ ಬಂದರೆ ಒಂಥರಾ ಹಿಂಸೆ, ಹಿಂಸೆಗಿಂತ ಮಿಗಿಲಾಗಿ ಮುಜುಗರ. ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾದರೆ ಗ್ಯಾಸ್ ಸಮಸ್ಯೆ ಉಂಟಾಗುವುದು. ಗ್ಯಾಸ್ ಸಮಸ್ಯೆ ಉಂಟಾಗಲು ನಮ್ಮ ಜೀವನ ಶೈಲಿ ಮತ್ತು ಆಹಾರಕ್ರಮ ಪ್ರಮುಖ ಕಾರಣ.
ಜೀರ್ಣಕ್ರಿಯೆಯಲ್ಲಿ ಆಹಾರ ಕಣಗಳನ್ನು ವಿಭಿಜಿಸುವ ಬ್ಯಾಕ್ಟೀರಿಯಾ ಗ್ಯಾಸ್ ಉತ್ಪತ್ತಿ ಮಾಡುವುದು ಸಹಜ. ಆದರೆ ಹೊತ್ತಿಗೆ ಸರಿಯಾಗಿ ಊಟ ಮಾಡದಿದ್ದರೆ, ಗ್ಯಾಸ್ ಉತ್ಪತ್ತಿ ಮಾಡುವ ಆಹಾರ ತಿಂದರೆ ಈ ಬ್ಯಾಕ್ಟೀರಿಯಾ ರಂಜಕವನ್ನು ಉತ್ಪತ್ತಿ ಮಾಡುತ್ತದೆ. ಆಗ ಹೊರಬರುವ ಗ್ಯಾಸ್ ತುಂಬಾ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.
ನಮ್ಮ ಜೀವನ ಶೈಲಿ ಮತ್ತು ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ತಂದರೆ ಮುಜುಗರ ತರುವ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ನೀವೇನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ:

ಡಯಟ್ ನಲ್ಲಿ ಸ್ವಲ್ಪ ಬದಲಾವಣೆಯಿರಲಿ
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಎಲೆಕೋಸು, ಈರುಳ್ಳಿ, ಹಾಲು, ಬೀನ್ಸ್, ಕಡಲೆ ಇವುಗಳನ್ನು ತಮ್ಮ ಆಹಾರಕ್ರಮದಲ್ಲಿ ಕಡಿಮೆ ಮಾಡುವುದು ಒಳ್ಳೆಯದು. ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದವರು ಇದನ್ನು ತಿಂದರೆ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ.

ಯಾವ ಆಹಾರ ತಿಂದರೆ ಗ್ಯಾಸ್ ಉತ್ಪತ್ತಿಯಾಗುತ್ತದೆ ಎಂದು ತಿಳಿಯಿರಿ
ಕೆಲವರಿಗೆ ಬೀನ್ಸ್ ತಿಂದರೆ ಗ್ಯಾಸ್ ಉತ್ಪತ್ತಿಯಾದರೆ ಮತ್ತೆ ಕೆಲವರಿಗೆ ಪಾಸ್ಟ್ ಫುಡ್ಸ್ ತಿಂದರೆ ಆಗುತ್ತದೆ. ಆದ್ದರಿಂದ ಗ್ಯಾಸ್ ಸಮಸ್ಯೆ ಉಂಟಾದಾಗ ಯಾವ ಆಹಾರ ನಿಮ್ಮಲ್ಲಿ ಈ ಸಮಸ್ಯೆ ಉಂಟು ಮಾಡುತ್ತದೆ ಎಂದು ತಿಳಿದುಕೊಂಡರೆ ಗ್ಯಾಸ್ ಸಮಸ್ಯೆ ಉಂಟಾಗದಂತೆ ತಡೆಯಬಹುದು.

ಗ್ಯಾಸ್ ಉತ್ಪತ್ತಿ ಮಾಡುವ ಆಹಾರವನ್ನು ದೂರ ಮಾಡಬೇಕೆಂದಿಲ್ಲ
ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳು ಆರೋಗ್ಯಕರ ಗುಣವನ್ನೂ ಹೊಂದಿರುತ್ತದೆ. ಆದದ್ದರಿಂದ ಅಂತಹ ಪದಾರ್ಥಗಳನ್ನು ಮಿತಿಯಲ್ಲಿ ತಿಂದು, ನಾರಿನಂಶ ಅಧಿಕವಿರುವ ಆಹಾರಗಳನ್ನು ತಿಂದರೆ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.

ತಿನ್ನುವ ಸ್ಟೈಲ್ ನಲ್ಲಿ ಬದಲಾವಣೆ ಮಾಡಿ
ಕೆಲವರಿಗೆ ಬೇಗನೆ ತಿನ್ನುವ ಅಭ್ಯಾಸವಿರುತ್ತದೆ. ಮೆಲ್ಲನೆ ಜಗಿದು ತಿಂದರೆ ಆಹಾರ ಜೀರ್ಣಕ್ರಿಯೆಗೆ ಒಳ್ಳೆಯದು. ಊಟವನ್ನು ಸರಿಯಾದ ಸಮಯಕ್ಕೆ ಮಾಡುವುದು ಕೂಡ ಗ್ಯಾಸ್ ಉತ್ಪತ್ತಿಯನ್ನು ತಡೆಯಲು ಒಂದು ಮಾರ್ಗ.

ಮಿತಿ ಮೀರಿ ತಿನ್ನಬೇಡಿ
ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಮತಿ ಮೀರಿ ಊಟ ಮಾಡುವುದು ಈ ರೀತಿಯ ಅಭ್ಯಾಸಗಳು ಹೊಟ್ಟೆ ಗ್ಯಾಸ್ ಉತ್ಪತ್ತಿ ಮಾಡಲು ಪ್ರಮುಖ ಕಾರಣಗಳಾಗಿವೆ.

ವ್ಯಾಯಾಮ
ಪ್ರತೀದಿನ ವ್ಯಾಯಾಮ ಮಾಡುವುದರಿಂದ ಹೊಟ್ಟೆಯಲ್ಲಿ ಅಧಿಕ ಗ್ಯಾಸ್ ಉಂಟಾಗುವುದನ್ನು ತಡೆಯಬಹುದು.

ಮಾನಸಿಕ ಒತ್ತಡ ಕಡಿಮೆ ಮಾಡುವುದು ಒಳ್ಳೆಯದು
ನೀವು ಗಮನಿಸಿ ನೋಡಿ, ಮಾನಸಿಕ ಒತ್ತಡ ಹೆಚ್ಚಾದರೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುವುದು. ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಒಟ್ಟು ಮೊತ್ತ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಬಿಗಿಯಾದ ಉಡುಪು ಧರಿಸಬೇಡಿ
ತುಂಬಾ ಬಿಗಿಯಾದ ಉಡುಪು ಧರಿಸುವುದಕ್ಕಿಂತ ಸ್ವಲ್ಪ ಸಡಿಲವಾದ ಡ್ರೆಸ್ ಧರಿಸಿದರೆ ಹೊಟ್ಟೆಯಲ್ಲಿ ಗ್ಯಾಸ್ ನ ಸಂಚಲನಕ್ಕೆ ಸಹಾಯವಾಗುವುದು.



Click it and Unblock the Notifications
